ಮೈಕ್ರೋಸಾಫ್ಟ್ ಈಗಾಗಲೇ ಜನಪ್ರಿಯ ಆಪರೇಟಿಂಗ್ ಸಿಸ್ಟಮ್ ವಿಂಡೋಸ್ 11 ಅನ್ನು ವಿಶ್ವದಾದ್ಯಂತ ಬಿಡುಗಡೆ ಮಾಡಲು ಆರಂಭಿಸಿವೆ. ಮೈಕ್ರೋಸಾಫ್ಟ್ ತನ್ನ ಇತ್ತೀಚಿನ ಮೈಕ್ರೋಸಾಫ್ಟ್ 365 ಮತ್ತು ಆಫೀಸ್ 2021 ಸೂಟ್ಗಳ ಗ್ರಾಹಕ ಆವೃತ್ತಿಗಳ ಜೊತೆಗೆ ವಿಂಡೋಸ್ 11-ಚಾಲಿತ ಹಾರ್ಡ್ವೇರ್ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡುತ್ತಿರುವಾಗ, ಆಪರೇಟಿಂಗ್ ಸಿಸ್ಟಂನ ಅಪೇಕ್ಷಿತ ಪುನರಾವರ್ತನೆಯು ಕೆಲವೇ ಗಂಟೆಗಳಲ್ಲಿ ಬಿಡುಗಡೆಗೊಂಡಿತು. ಇದರಿಂದಾಗಿ ಕೆಲವು ಬಳಕೆದಾರರು ವಿಂಡೋಸ್ 11 ಗೆ ಅಪ್ಗ್ರೇಡ್ ಮಾಡುವ ಆಯ್ಕೆಯನ್ನು ಹೊಂದಿರಬಹುದು. ವಿಶ್ವದಾದ್ಯಂತವಿರುವ ಬಳಕೆದಾರರಿಗೆ ವಿಂಡೋಸ್ 11 ಬಿಡುಗಡೆ ಸಾಮಾನ್ಯವಾಗಿರುತ್ತದೆ. ಎಲ್ಲಾ ಅರ್ಹ್ ವಿಂಡೋಸ್ 10 ಸಾಧನಗಳು 2022 ರ ಮಧ್ಯದಲ್ಲಿ ವಿಂಡೋಸ್ 11 ಅಪ್ಡೇಟ್ ಅನ್ನು ಸ್ವೀಕರಿಸುವಂತಾಗಬೇಕು ಎಂದು ಮೈಕ್ರೋಸಾಫ್ಟ್ ಮೊದಲೇ ತಿಳಿಸಿದೆ. ಆದರೆ ಹೊಸ ಹಾರ್ಡ್ವೇರ್ (ಇತ್ತೀಚೆಗೆ ಖರೀದಿಸಿದ ಕಂಪ್ಯೂಟರ್ಗಳು) ಅಪ್ಡೇಟ್ ಅನ್ನು ತಕ್ಷಣವೇ ಸ್ವೀಕರಿಸಬಹುದು.
ವಿಂಡೋಸ್ 11 ಅಪ್ಗ್ರೇಡ್ ಮಾಡುವುದು ಹೇಗೆ?
ವಿಂಡೋಸ್ 11 ಹೊಸ ಮಾಡರ್ನ್ ಯೂಸರ್ ಇಂಟರ್ಫೇಸ್ (UI) ಮರುವಿನ್ಯಾಸಗೊಳಿಸಲಾದ ಸ್ಟಾರ್ಟ್ ಮೆನು, ಸ್ನ್ಯಾಪ್ ಅಸಿಸ್ಟ್ ಮಲ್ಟಿಟಾಸ್ಕಿಂಗ್ ಫೀಚರ್, ನಿರ್ವಹಿಸಲಾದ ಮೈಕ್ರೋಸಾಫ್ಟ್ ಸ್ಟೋರ್, ವಿಜೆಟ್ಗಳು, ಮೈಕ್ರೋಸಾಫ್ಟ್ ಟೀಮ್ಸ್ ಇಂಟಿಗ್ರೇಶನ್ ಹಾಗೂ ಸಾಕಷ್ಟು ಫೀಚರ್ಗಳನ್ನು ಒಳಗೊಂಡಿವೆ. The Verge ವಿಮರ್ಶೆಯ ಪ್ರಕಾರ ವಿಂಡೋಸ್ 11 ತುಂಬಾ ವೇಗವಾಗಿರುವ ಹಾಗೂ ಹೆಚ್ಚು ಪ್ರತಿಸ್ಪಂದಿಸುವ ಆಧುನಿಕ ಹಾರ್ಡ್ವೇರ್ ಅನ್ನು ಒಳಗೊಂಡಿದೆ. ಗ್ರಾಹಕರಿಗೆ ಅಗತ್ಯವಿದೆಯೋ ಇಲ್ಲವೋ ಒಟ್ಟಾರೆ ಕಂಪನಿಯು ವಿಂಡೋಸ್ ಬಳಕೆದಾರರಿಗೆ ಹೊಸ ಪಿಸಿ ಖರೀದಿ ಮಾಡುವಂತೆ ಪ್ರೇರೇಪಿಸುತ್ತಿದೆ ಎಂಬುದರಲ್ಲಿ ಎರಡು ಮಾತಿಲ್ಲ.
ಇದನ್ನೂ ಓದಿ: Realme GT Neo 2: ತ್ರಿವಳಿ ಕ್ಯಾಮೆರಾ, ಆಕರ್ಷಕ ಫೀಚರ್; ಭಾರತೀಯರಿಗೆ ಇಷ್ಟವಾಗುತ್ತಾ ಈ ನೂತನ ಫೋನ್?
ಇತ್ತೀಚೆಗೆ ನೀವು ವಿಂಡೋಸ್ 10 ಮೆಶೀನ್ ಅನ್ನು ಖರೀದಿಸಿದ್ದರೆ, ಇದೀಗ ವಿಂಡೋಸ್ 11 ಗೆ ಅಪ್ಗ್ರೇಡ್ ಮಾಡುವ ಅವಕಾಶವನ್ನು ನೀವು ಪಡೆದುಕೊಳ್ಳಬಹುದು. ಇದನ್ನು ಅಳವಡಿಸುವುದು ಹೇಗೆ ಎಂಬುದರ ಕುರಿತು ಮಾಹಿತಿ ಇಲ್ಲಿದೆ
1 ವಿಂಡೋಸ್ 11 ಅಪ್ಡೇಟ್ಗಾಗಿ ನಿಮ್ಮ ವೈಯಕ್ತಿಕ ಕಂಪ್ಯೂಟರ್ ಅಧಿಕೃತವಾಗಿ ಬೆಂಬಲ ಪಡೆದುಕೊಳ್ಳುತ್ತದೆಯೇ ಎಂಬುದನ್ನು ಪರಿಶೀಲಿಸಿ. ಅಧಿಕೃತ ಮೈಕ್ರೋಸಾಫ್ಟ್ ಪಿಸಿ ಅಪ್ಲಿಕೇಶನ್ ಮೂಲಕ ನೀವಿದನ್ನು ಮಾಡಬಹುದಾಗಿದೆ.
2.ಎಲ್ಲಾ ಪ್ರಮುಖ ಡೇಟಾ, ಡಾಕ್ಯುಮೆಂಟ್ಗಳು ಹಾಗೂ ಅಪ್ಲಿಕೇಶನ್ಗಳು ಇದ್ದಲ್ಲಿ ಮೊದಲಿಗೆ ಅವನ್ನು ಬ್ಯಾಕಪ್ ಮಾಡಿಕೊಳ್ಳಿ
3.ನಿಮ್ಮ ಕಂಪ್ಯೂಟರ್ನಲ್ಲಿ, ಸೆಟ್ಟಿಂಗ್ಗಳು → ಅಪ್ಡೇಟ್ ಮತ್ತು ಸೆಕ್ಯುರಿಟಿ → ವಿಂಡೋಸ್ ಅಪ್ಡೇಟ್ಗೆ ಬ್ರೌಸ್ ಮಾಡಿ
4.ಅಪ್ಡೇಟ್ಗಳಿಗಾಗಿ ಪರಿಶೀಲಿಸಿ' ಬಟನ್ ಮೇಲೆ ಕ್ಲಿಕ್ ಮಾಡಿ ಮತ್ತು ಸಂಭಾವ್ಯ ವಿಂಡೋಸ್ 11 ಅಪ್ಡೇಟ್ಗಾಗಿ ಸಿಸ್ಟಮ್ ಪರಿಶೀಲಿಸುವವರೆಗೆ ನೀವು ನಿರೀಕ್ಷಿಸಬೇಕಾಗುತ್ತದೆ.
5. ವಿಂಡೋಸ್ 11 ಅಪ್ಡೇಟ್ ಲಭ್ಯವಿದ್ದರೆ, ಅದನ್ನು ಉಚಿತವಾಗಿ ಡೌನ್ಲೋಡ್ ಮಾಡಲು ಮತ್ತು ಇನ್ಸ್ಟಾಲ್ ಮಾಡುವ ಆಯ್ಕೆ ನಿಮಗೆ ಈ ಸಮಯದಲ್ಲಿ ಕಂಡುಬರುತ್ತದೆ. ವಿಂಡೋಸ್ 11 ಅಪ್ಡೇಟ್ ಇದೀಗ ಕೆಲವು ಬಳಕೆದಾರರಿಗೆ ಉಚಿತವಾಗಿ ಡೌನ್ಲೋಡ್ ಮಾಡಲು ಲಭ್ಯವಿರಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ