ಮನಸ್ಸಿಗೆ ಕಿರಿಕಿರಿ ನೀಡುವ ಮತ್ತು ತಮ್ಮ ಕೆಲಸದ ವೇಳೆಯಲ್ಲಿ ಅಡಚಣೆ ಉಂಟು ಮಾಡುವ ಇಂತಹ ಸ್ಪ್ಯಾಮ್ ಕರೆಗಳನ್ನು (Spam call) ತಡೆಯುವುದು ಹೇಗೆ? ಅದಕ್ಕೆ ಅತ್ಯುತ್ತಮ ಆಯ್ಕೆ, ಸ್ಪ್ಯಾಮ್ ಕರೆಗಳನ್ನು ನೇರವಾಗಿ ನಿಮ್ಮ ವಾಯ್ಸ್ಮೇಲ್ಗೆ (Voice Mail) ಕಳುಹಿಸುವುದು.
ನಮ್ಮೆಲ್ಲರ ವ್ಯಸ್ಥ ಬದುಕಿನಲ್ಲಿ, ಎಷ್ಟೋ ಬಾರಿ ಸ್ನೇಹಿತರ ಅಥವಾ ಆಪ್ತರ ಫೋನ್ಗಳಿಗೆ ಉತ್ತರಿಸಲು ಸಮಯ ಸಿಗುವುದಿಲ್ಲ, ಕೆಲವೊಮ್ಮೆ ಮಾನಸಿಕ ಒತ್ತಡಗಳ ಕಾರಣದಿಂದ ಯಾರದ್ದೇ ಫೋನ್ ಕರೆ ಬಂದರೂ ಉತ್ತರಿಸುವ ಆಸಕ್ತಿ ಅಥವಾ ಮನಸ್ಸು ಉಂಟಾಗದೇ ಇರುವುದುಂಟು. ಹಾಗಿರುವಾಗ, ನಮಗೆ ಸಂಬಂಧವೇ ಇಲ್ಲದ ಅನಗತ್ಯ ಕರೆಗಳು ಬಂದು ಕಿರಿಕಿರಿ ಉಂಟು ಮಾಡಿದರೆ ಹೇಗಿರುತ್ತದೆ? ಖಂಡಿತಾ ಸಹಿಸುವುದು ಅಸಾಧ್ಯ.
ಪ್ರತಿಯೊಬ್ಬರಿಗೂ ತಿಂಗಳಲ್ಲಿ ಬಹಳಷ್ಟು ಬಾರಿ ಇಂತಹ ಹಲವಾರು ಸ್ಪ್ಯಾಮ್ ಕರೆಗಳು ಬಂದೇ ಬರುತ್ತವೆ. ಮನಸ್ಸಿಗೆ ಕಿರಿಕಿರಿ ನೀಡುವ ಮತ್ತು ತಮ್ಮ ಕೆಲಸದ ವೇಳೆಯಲ್ಲಿ ಅಡಚಣೆ ಉಂಟು ಮಾಡುವ ಇಂತಹ ಸ್ಪ್ಯಾಮ್ ಕರೆಗಳನ್ನು ತಡೆಯುವುದು ಹೇಗೆ? ಅದಕ್ಕೆ ಅತ್ಯುತ್ತಮ ಆಯ್ಕೆ, ಸ್ಪ್ಯಾಮ್ ಕರೆಗಳನ್ನು ನೇರವಾಗಿ ನಿಮ್ಮ ವಾಯ್ಸ್ಮೇಲ್ಗೆ ಕಳುಹಿಸುವುದು.
ಒಂದು ವೇಳೆ ನೀವು ಐಫೋನ್ ಅನ್ನು ಬಳಸುತ್ತಿದ್ದರೆ, ಅನಗತ್ಯ ಕರೆಗಳಿಂದ ಮುಕ್ತಿ ಹೊಂದಲು ಖಂಡಿತಾ ಸಾಧ್ಯವಿದೆ. ಅಂದರೆ, ಅನಗತ್ಯ ಕರೆಗಳನ್ನು ಫಿಲ್ಟರ್ ಮಾಡುವುದು ಮತ್ತು ಅವುಗಳನ್ನು ನೇರವಾಗಿ ನಿಮ್ಮ ವಾಯ್ಸ್ ಮೇಲ್ಗೆ ಕಳುಹಿಸುವುದು ಸಾಧ್ಯವಿದೆ.
ಐಫೋನ್ನಲ್ಲಿ ನಿಮ್ಮ ವಾಯ್ಸ್ ಮೇಲ್ಗೆ ಸ್ಪ್ಯಾಮ್ ಕರೆಗಳನ್ನು ಹೇಗೆ ಕಳುಹಿಸುವುದು ಎಂಬುದನ್ನು ಇಲ್ಲಿ ತಿಳಿಯಿರಿ:
1. ನಿಮ್ಮ ಫೋನ್ನಲ್ಲಿ ಸೆಟ್ಟಿಂಗ್ ಆ್ಯಪ್ ಮೇಲೆ ಕ್ಲಿಕ್ ಮಾಡಿ.
2. ಸೆಟ್ಟಿಂಗ್ ಆ್ಯಪ್ನ ಮೇಲಿನ ಭಾಗದಲ್ಲಿ ಸುಮಾರು ಅರ್ಧದಷ್ಟು, ಹಸಿರು “ಫೋನ್” ಐಕಾನ್ ಮೇಲೆ ಕ್ಲಿಕ್ ಮಾಡಿ.
3. “ಸೈಲೆನ್ಸ್ ಅನ್ನೋನ್ ಕಾಲರ್ಸ್” ಅನ್ನು ಆಯ್ಕೆ ಮಾಡಿಕೊಳ್ಳಿ.
4. “ಸೈಲೆನ್ಸ್ ಅನ್ನೋನ್ ಕಾಲರ್ಸ್” ಆಯ್ಕೆಯನ್ನು “ಆನ್” ಗೆ ಟಾಗಲ್ ಮಾಡಿ.
ನೀವು ಐಫೋನ್ ಬಳಸುತ್ತಿಲ್ಲವಾದಲ್ಲಿ, ಆ್ಯಂಡ್ರಾಯ್ಡ್ ಫೋನ್ನಲ್ಲಿ ಕೂಡ ಸರಳ ವಿಧಾನಗಳನ್ನು ಅನುಸರಿಸುವ ಮೂಲಕ, ನಿಮ್ಮ ವಾಯ್ಸ್ ಮೇಲ್ಗೆ ಸ್ಪ್ಯಾಮ್ ಕರೆಗಳನ್ನು ಕಳುಹಿಸಲು ಸಾಧ್ಯವಿದೆ.
ಇದನ್ನು ಓದಿ: Wi-Fi Router: ನಿಮ್ಮ ಈ ತಪ್ಪಿನಿಂದಾಗಿ Wi-Fi ರೂಟರ್ ಸಿಗ್ನಲ್ ನಿಧಾನವಾಗಿದೆ! ವೇಗಗೊಳಿಸಲು ಹೀಗೆ ಮಾಡಿ
ಆ್ಯಂಡ್ರಾಯ್ಡ್ ಫೋನ್ನಲ್ಲಿ , ನಿಮ್ಮ ವಾಯ್ಸ್ ಮೇಲ್ಗೆ ಸ್ಪ್ಯಾಮ್ ಕರೆಗಳನ್ನು ಕಳುಹಿಸುವು ವಿಧಾನ ಈ ಕೆಳಗಿನಂತಿದೆ:
1. ಗೂಗಲ್ನ ಹೊಚ್ಚ ಹೊಸ ಫೋನ್ ಆ್ಯಪ್ (Phone app) ಅನ್ನು ಡೌನ್ಲೋಡ್ ಮಾಡಿ.
2. “ಸೆಟ್ಟಿಂಗ್ಗಳು” ಆಯ್ಕೆಯ ಮೇಲೆ ಕ್ಲಿಕ್ ಮಾಡುವ ಮತ್ತು ನಂತರ “ಕಾಲರ್ ಐಡಿ ಮತ್ತು ಸ್ಪ್ಯಾಮ್” ಮೇಲೆ ಕ್ಲಿಕ್ ಮಾಡುವ ಮೊದಲು , ಮೇಲಿನ ಭಾಗದ ಬಲ ಮೂಲೆಯಲ್ಲಿರುವ ಮೂರು ಚುಕ್ಕೆಗಳ ಮೇಲೆ ಕ್ಲಿಕ್ ಮಾಡಿ.
3. “ಟರ್ನ್ ಕಾಲರ್ ಐಡಿ ಮತ್ತು ಸ್ಪ್ಯಾಮ್” ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಮತ್ತು ಅದನ್ನು ಆನ್ ಮಾಡಿ.
4. ಆ ಕರೆಗಳನ್ನು ನೇರವಾಗಿ ನಿಮ್ಮ ವಾಯ್ಸ್ ಮೇಲ್ಗೆ ಕಳುಹಿಸಲು “ಫಿಲ್ಟರ್ ಸಸ್ಪೆಕ್ಟೆಡ್ ಸ್ಪ್ಯಾಮ್ ಕಾಲ್ಸ್” ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಇದನ್ನು ಓದಿ: Facebook: ಬಳಕೆದಾರರ ಡಾಟಾ ಕದಿಯುತ್ತಿರುವ ಫೇಸ್ಬುಕ್, ಇದು ಗೊತ್ತಾಗಿದ್ದಕ್ಕೇ ಅನೇಕರು ಅಕೌಂಟ್ ಕ್ಲೋಸ್ ಮಾಡಿದ್ದಾರಂತೆ!
ಸ್ಪ್ಯಾಮ್ ಕರೆಗಳ ಕಿರಿಕಿರಿಯನ್ನು ತಡೆಯಲು ಇನ್ನೂ ಅನೇಕ ವಿಧಾನಗಳಿವೆ. ಅವುಗಳೆಂದರೆ, ಥರ್ಡ್ ಪಾರ್ಟಿ ರೋಬೋಕಾಲ್ ಬ್ಲಾಕರ್ಸ್ಗಳನ್ನು ಡೌನ್ಲೋಡ್ ಮಾಡುವುದು, ಡು ನಾಟ್ ಕಾಲ್ ರಿಜಿಸ್ಟ್ರಿಗೆ ಸೇರುವುದು, ಅನಗತ್ಯ ಕರೆಗಳನ್ನು ನಿರ್ಭಂಧಿಸಲು ನಿಮ್ಮ ಫೋನ್ ವಾಹಕದ ಸಾಧನಗಳನ್ನು ಬಳಸುವುದು ಅಥವಾ ಐಫೋನ್ಗಳಲ್ಲಿ “ಡು ನಾಟ್ ಡಿಸ್ಟರ್ಬ್” ಆಯ್ಕೆಯನ್ನು ಬಳಸುವುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ