Iphone 13 series: ಆ್ಯಪಲ್ ಕಂಪನಿ ಸೆಪ್ಟೆಂಬರ್ 14ರಂದು ಐಫೊನ್ 13 ಸಿರೀಸ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಗ್ರಾಹಕರಿಗಾಗಿ ನೂತನ ಫೋನನ್ನು ಸೆಪ್ಟೆಂಬರ್ 17ರಿಂದ ಉಚಿತವಾಗಿ ಆರ್ಡರ್ ಮಾಡುವ ಅವಕಾಶ ನೀಡಿದೆ. ಸೆಪ್ಟೆಂಬರ್ 24ರಿಂದ ಆಫ್ಲೈನ್ ಮಾರುಕಟ್ಟೆಯಲ್ಲೂ ಖರೀದಿಗೆ ಸಿಗುತ್ತಿದೆ. ಹೀಗಿರುವಾಗ ಭಾರತೀಯ ಚಿಲ್ಲರೆ ವ್ಯಾಪಾರಿಗಳು ಹೊಸ ಐಫೋನ್ 13 ಸಿರೀಸ್ ಮೇಲೆ ಆಫರ್ ಘೋಷಿಸಿ ಪ್ರಚಾರ ಮಾಡುತ್ತಿದ್ದಾರೆ.
ಇಂಡಿಯಾ ಟುಡೇ ವರದಿಯ ಪ್ರಕಾರ, ಭಾರತದಲ್ಲಿ ಆ್ಯಪಲ್ ಅಧಿಕೃತ ಮರುಮಾರಾಟಗಾರ ಇನ್ಗ್ರಾಂ ಮೈಕ್ರೋ ನೂತನ ಐಫೊನ್ 13 ಸರಣಿಯ ಮೇಲೆ ಕೊಡುಗೆಯನ್ನು ಅನಾವರಣಗೊಳಿಸಿದೆ. ಸದ್ಯ ಆ್ಯಪಲ್ ಫೋನ್ಗಳು ದೇಶದ 3,200 ಚಿಲ್ಲರೆ ವ್ಯಾಪಾರಿಗಳಿಗೆ ಲಭ್ಯವಿದೆ.
ಐಫೋನ್ 13 ಮತ್ತು 13 ಮಿನಿ 79,990 ರೂ ಮತ್ತು 69,990 ರೂ.ಗಳಲ್ಲಿ ಲಭ್ಯವಿದೆ. ನೂತನ ಫೋನ್ಗಳು 128 ಜಿಬಿಯಿಂದ ಆರಂಭವಾಗಿ 256ಜಿಬಿ ಮತ್ತು 512ಜಿಬಿ ಗೆ ಐಚ್ಛಿಕ ಅಪ್ಗ್ರೇಡ್ಗಳೊಂದಿಗೆ ಮಾರಾಟ ಮಾಡುತ್ತಿದೆ. ಪ್ರಾರಂಭದಲ್ಲಿ ಐದು ಬಣ್ಣದ ಆಯ್ಕೆಗಳಲ್ಲಿ ಲಭ್ಯವಿರುತ್ತವೆ - ಪಿಂಕ್, ಬ್ಲೂ, ಮಿಡ್ನೈಟ್, ಸ್ಟಾರ್ಲೈಟ್ ಮತ್ತು ಪ್ರಾಡಕ್ಟ್ ರೆಡ್ ಖರೀದಿಗೆ ಸಿಗುತ್ತದೆ.
ಐಫೋನ್ 13 ಪ್ರೊ ಮತ್ತು ಪ್ರೊ ಮ್ಯಾಕ್ಸ್ 1,19,990 ರೂ ಮತ್ತು 1,29,990 ರೂ ಖರೀದಿಗೆ ಸಿಗುತ್ತಿದೆ. ನಾಲ್ಕು ಬಣ್ಣ ಆಯ್ಕೆಗಳಲ್ಲಿ ಖರೀದಿಸಬಹುದಾಗಿದೆ - ಸಿಯೆರಾ ಬ್ಲೂ, ಸಿಲ್ವರ್, ಗೋಲ್ಡ್ ಮತ್ತು ಗ್ರ್ಯಾಫೈಟ್ ಬಣ್ಣದಲ್ಲಿ ಮಾಋಆಟ ಮಾಡಯತ್ತಿದೆ.
ಇದನ್ನು ಓದಿ: TVS Raider | ಸಖತ್ ಫೀಚರ್ಸ್, ಆಕರ್ಷಕ ಲುಕ್; ಬಜೆಟ್ ಬೆಲೆಯ ಹೊಸ TVS Raider ಬೈಕ್ ಮಾರುಕಟ್ಟೆಗೆ
ಮೊದಲೇ ಹೇಳಿದಂತೆ ಐಫೋನ್ 13 ಮತ್ತು ಐಫೋನ್ 13 ಮಿನಿ ಮೇಲೆ ರೂ. 6,000 ವರೆಗಿನ ಕ್ಯಾಶ್ಬ್ಯಾಕ್ ಕೊಡುಗೆ ನೀಡುತ್ತಿದೆ. HDFC ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಬಳಕೆದಾರರಿಗೆ ಈ ಕೊಡುಗೆ ಅರ್ಹವಾಗಿದೆ. ಆಫರ್ ಸೆಪ್ಟೆಂಬರ್ 24 ರಂದು ಆರಂಭವಾಗಲಿದೆ. ಐಫೋನ್ 13 ಪ್ರೊ ಮತ್ತು ಪ್ರೊ ಮ್ಯಾಕ್ಸ್ ಸಹ HDFC ಬ್ಯಾಂಕ್ ಪ್ರಯೋಜನವನ್ನು ನೀಡುತ್ತಿದ್ದು, 5,000 ರೂ. ಕ್ಯಾಶ್ ಬ್ಯಾಕ್ ಆಫರ್ ನೀಡಿದೆ.
ಇನ್ಗ್ರಾಂ ಮೈಕ್ರೋ ಮೂಲಕ EMI ಅಥವಾ EMI ಅಲ್ಲದ ವಹಿವಾಟು ನಡೆಸಬಹುದಾಗಿದೆ. ತಿಂಗಳಿಗೆ 3,329 ರೂ. ನೀಡುವ ಮೂಲಕ ನೋ-ಕಾಸ್ಟ್ ಇಎಂಐ ಕೊಡುಗೆಗಳನ್ನು ಒದಗಿಸುತ್ತದೆ. 3,000 ರೂಪಾಯಿಗಳ ವಿನಿಮಯ ಬೋನಸ್ ನೀಡುವ ಟ್ರೇಡ್-ಇನ್ ಕೊಡುಗೆಗಳೂ ನೀಡುತ್ತಿದೆ.
ಸೆಪ್ಟೆಂಬರ್ 17 ರಿಂದ ಹೊಸ ಫೋನ್ಗಳ ಪ್ರಿ-ಆರ್ಡರ್ಗಳು ಆಯ್ಕೆ ಪ್ರಾರಂಭವಾಗಿದೆ. "ನೂತನ ಐಫೋನ್ 13 ಬುಕ್ ಮಾಡುವ ಗ್ರಾಹಕರಿಗೆ ಅದನ್ನು ಮನೆಗೆ ತಲುಪಿಸಲು ಆಯ್ಕೆಯು ಸಿಗಲಿದೆ " ಎಂದು ಇನ್ಗ್ರಾಮ್ ಮೈಕ್ರೋ ಪ್ರಕಟಣೆಯಲ್ಲಿ ತಿಳಿಸಿದೆ.
ಐಫೋನ್ 12 ಸಿರೀಸ್ ಮೇಲೆ ಬೆಲೆ ಕಡಿತ!
ಐಫೋನ್ 13 ಸಿರೀಸ್ ಬಿಡುಗಡೆಗೊಂಡ ನಂತರ ಹಲಚು ಆ್ಯಪಲ್ ಪ್ರಾಡೆಕ್ಟ್ಗಳನ್ನು ಮಾರಾಟ ಮಾಡುವ ಚಿಲ್ಲರೆ ವ್ಯಾಪಾರಿಗಳು ಐಫೊನ್ 12 ಮೇಲೆ ಬೆಲೆ ಕಡಿತಗೊಳಿಸಿದೆ.
ಕಡಿಮೆ ಬೆಲೆಗೆ ಐಫೊನ್ 12 ಸಿಗುತ್ತಿದ್ದು, 128ಜಿಬಿ ಮಾದರಿಯ ಸ್ಮಾರ್ಟ್ಫೋನ್ ಪ್ರಸ್ತುತ ಫ್ಲಿಪ್ಕಾರ್ಟ್ನಲ್ಲಿ 84,900 ರೂ ಬದಲಿದೆ 71,999 ರೂ.ಗೆ ಸಿಗುತ್ತಿದೆ. ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ 15 ಸಾವಿರವರೆಗಿನ ವಿನಿಮಯ ಕೊಡುಗೆ ಮತ್ತು ಶೇ.5ರಷ್ಟು ಕ್ಯಾಶ್ಬ್ಯಾಕ್ನಂತಹ ಡೀಲ್ ಪಡೆಯುವ ಮೂಲಕ ಮತ್ತಷ್ಟು ಕಡಿಮೆ ಬೆಲೆ ಸಿಗಲಿದೆ.
ಇದನ್ನು ಓದಿ: Health Tips: 40ರ ವಯಸ್ಸಿನ ಮಹಿಳೆಯರು ಅಗತ್ಯವಾಗಿ ಸೇವಿಸಬೇಕಾದ ಪೌಷ್ಟಿಕಾಂಶಗಳು
ಅಷ್ಟು ಮಾತ್ರವಲ್ಲದೆ, ಆಯ್ದ ಕಾರ್ಡ್ಗಳೊಂದಿಗೆ 12 ಸಾವಿರ ರೂ.ನಲ್ಲಿ ಯಾವುದೇ ವೆಚ್ಚವಿಲ್ಲದೆ ಇಎಂಐ ಆಯ್ಕೆಯಲ್ಲೂ ಲಭ್ಯವಿದೆ.. ಫ್ಲಿಪ್ಕಾರ್ಟ್ ತಾತ್ಕಾಲಿಕವಾಗಿ ಐಫೋನ್ 12 ಮೇಲೆ ರಿಯಾಯಿತಿ ನೀಡಿದ್ದು, ಇದರಿಂದ ಗ್ರಾಹಕರಿಗೆ ಕೊಂಡುಕೊಳ್ಳಲು ಅನುಕೂಲವಾಗಲಿದೆ.
ಐಫೋನ್ 12 ಕಪ್ಪು, ನೀಲಿ, ಹಸಿರು, ಕೆಂಪು ಮತ್ತು ಹಳದಿ ಬಣ್ಣದ ಐದು ಬಣ್ಣಗಳಲ್ಲಿ ಲಭ್ಯವಿದೆ. 64GB ಮಾದರಿಯು ಪ್ರಸ್ತುತ ರೂ. 66,999 ಕ್ಕೆ (79,900 ರಿಂದ ಕಡಿಮೆಯಾಗಿದೆ) ಮತ್ತು 256GB ಆಯ್ಕೆಯು ರೂ. 81,999 ಕ್ಕೆ ಲಭ್ಯವಿದೆ (ರೂ. 94,900 ರಿಂದ).
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ