ಟಿಕ್​ಟಾಕ್​ನಲ್ಲಿ ಮೋಸದ ಜಾಲವೊಂದು ಪತ್ತೆ; ಆ ಒಂದು ಕ್ಲಿಕ್​ ನಿಮ್ಮ ಡೇಟಾ ಸೋರಿಕೆಗೆ ಕಾರಣವಾಗಬಹುದು!

ಟಿಕ್​ಟಾಕ್​ ನಕಲಿ ಫೋಟೋಗಳನ್ನು ಬಳಸಿ ಖಾತೆಗಳನ್ನು ತೆರೆಯಲಾಗುತ್ತದೆ. ಬಳಕೆದಾರರು ಈ ಖಾತೆಗಳ ಪ್ರೊಫೈಲ್​​ ಮೇಲೆ ಕ್ಲಿಕ್​ ಮಾಡಿದಂತೆ ವಯಸ್ಕರ ಡೇಟಿಂಗ್​, ಅಶ್ಮೀಲ ಡೇಟಿಂಗ್​ ಸೈಟ್​ಗೆ ಕರೆದೊಯ್ಯುತ್ತದೆ. ವೆಬ್​ಸೈಟ್​ನಲ್ಲಿ ಅಡಕವಾಗಿರುವ ಫೋಟೋ, ವಿಡೀಯೋವನ್ನು ನೋಡಲು ಮುಂದಾದಲ್ಲಿ, ಅದಕ್ಕೆ ಇಂತಿಷ್ಟು ಪಾವತಿ ಮಾಡಬೇಕಾಗುತ್ತದೆ.

news18
Updated:August 17, 2019, 5:23 PM IST
ಟಿಕ್​ಟಾಕ್​ನಲ್ಲಿ ಮೋಸದ ಜಾಲವೊಂದು ಪತ್ತೆ; ಆ ಒಂದು ಕ್ಲಿಕ್​ ನಿಮ್ಮ ಡೇಟಾ ಸೋರಿಕೆಗೆ ಕಾರಣವಾಗಬಹುದು!
ಟಿಕ್​-ಟಾಕ್
  • News18
  • Last Updated: August 17, 2019, 5:23 PM IST
  • Share this:
ಚೀನಾದ ಬೈಟೆ ಡ್ಯಾನ್ಸ್​ ಒಡೆತನದ ‘ಟಿಕ್​ ಟಾಕ್‘ ಆ್ಯಪ್​​ ತನ್ನ ಬಳಕೆದಾರರನ್ನು ಮೋಸದ ಕೂಪಕ್ಕೆ ತಳ್ಳುತ್ತಿದೆ ಎಂದರೆ ನಂಬುತ್ತೀರಾ?. ಜಗತ್ತಿನಾದ್ಯಂತ ಅನೇಕ ಬಳಕೆದಾರರನ್ನು ಹೊಂದಿರುವ ಟಿಕ್​ಟಾಕ್​ ವಿಡಿಯೋ ಶೇರಿಂಗ್​ ಆ್ಯಪ್​ನಲ್ಲಿ ಮೋಸದ ಜಾಲವೊಂದು ಪತ್ತೆಯಾಗಿದೆ. ಬಳಕೆದಾರರಿಗೆ ತಿಳಿಯದಂತೆ  ಡೇಟಾವನ್ನು ಕದಿಯುವ ಹೊಸ ಜಾಲವೊಂದು ಟಿಕ್​ಟಾಕ್​ನಲ್ಲಿ ಕಂಡು ಬಂದಿದೆ.

ಟಿಕ್​ಟಾಕ್​ ಬಳಕೆದಾರರ ಪ್ರೊಪೈಲ್​ ವೀಕ್ಷಿಸುತ್ತಾ ಹೋದರೆ ನಿಮಗೆ ಅಲ್ಲಿ ಅರೆಬೆತ್ತಲೆ ಮತ್ತು ನಗ್ನತೆ ಇರುವ ದೃಶ್ಯಗಳನ್ನು ಹೊಂದಿರುವ ಖಾತೆಗಳು ಕಾಣಸಿಸುತ್ತವೆ. ಅವುಗಳ ಮೇಲೆ ಕ್ಲಿಕ್​ ಮಾಡಿದಂತೆ, ನೇರವಾಗಿ ನಿಮ್ಮನ್ನು ವಯಸ್ಕರ ವಿಡಿಯೋ ಹಾಗೂ ದೃಶ್ಯಾವಳಿಗಳಿರುವ ವೆಬ್​ಸೈಟ್​ಗೆ ಕರೆದೊಯ್ಯುತ್ತದೆ. ಜೊತೆಗೆ ವಯಸ್ಕರ ಡೇಟಿಂಗ್​ ಸೈಟ್​ಗೂ ಪ್ರವೇಶ ನೀಡಲಿದೆ. ಅಲ್ಲಿ ಆಫರ್​ ಹೆಸರಿನಲ್ಲಿ ಸೈನ್​ ಆಪ್​ ಮಾಡಿಸಿಕೊಳ್ಳಲಾಗುತ್ತದೆ. ಸೈನ್​ ಅಪ್​ ಮಾಡಿಕೊಂಡ ಗ್ರಾಹಕರ ಪ್ಯಾಕೇಜ್​ ಹೆಸರಿನಲ್ಲಿ ಹಣ ಪೀಕಲಾಗುತ್ತದೆ.

ಇನ್ನು ಟಿಕ್​ ಟಾಕ್​ನಲ್ಲಿ ಅನೇಕ ನಕಲಿ ಖಾತೆಗಳಿದ್ದು, ಇನ್​ಸ್ಟಾಗ್ರಾಂ ಹಾಗೂ ಸ್ನಾಪ್​ ಚಾಟ್​ನಿಂದ ಕದ್ದಿರುವ ಫೋಟೋವನ್ನು ಬಳಸಿ, ಹೊಸ ಖಾತೆ ತೆರೆದು, ಅದರ ಮೂಲಕ ಬಳಕೆದಾರರನ್ನು ಸೆಳೆಯಲಾಗುತ್ತಿದೆ.

ಇದನ್ನೂ ಓದಿ: ಗೂಗಲ್​ ಮ್ಯಾಪ್​ಗೆ ಸೆಡ್ಡು ಹೊಡೆಯಲು ಸಿದ್ಧವಾದ ಹುವಾವೇ ‘ಮ್ಯಾಪ್​ ಕಿಟ್‘​; ಇದರಲ್ಲೇನಿದೆ ಗೊತ್ತಾ?

ಎಚ್ಚರಿಕೆ! ಹಗರಣ ಹೇಗೆ ನಡೆಯುತ್ತೆ ಗೊತ್ತಾ?

ಟಿಕ್​ಟಾಕ್​ ನಕಲಿ ಫೋಟೋಗಳನ್ನು ಬಳಸಿ ಖಾತೆಗಳನ್ನು ತೆರೆಯಲಾಗುತ್ತದೆ. ಬಳಕೆದಾರರು ಈ ಖಾತೆಗಳ ಪ್ರೊಫೈಲ್​​ ಮೇಲೆ ಕ್ಲಿಕ್​ ಮಾಡಿದಂತೆ ವಯಸ್ಕರ ಡೇಟಿಂಗ್​, ಅಶ್ಮೀಲ ಡೇಟಿಂಗ್​ ಸೈಟ್​ಗೆ ಕರೆದೊಯ್ಯುತ್ತದೆ. ವೆಬ್​ಸೈಟ್​ನಲ್ಲಿ ಅಡಕವಾಗಿರುವ ಫೋಟೋ, ವಿಡೀಯೋವನ್ನು ನೋಡಲು ಮುಂದಾದಲ್ಲಿ, ಅದಕ್ಕೆ ಇಂತಿಷ್ಟು ಪಾವತಿ ಮಾಡಬೇಕಾಗುತ್ತದೆ. ಬಳಕೆದಾರರಿಂದ 70 ರೂಪಾಯಿಯಷ್ಟು ಹಣ ಪೀಕಲಾಗುತ್ತದೆ.

ಇನ್ನು ವೆಬ್​  ಸೈಟ್​ ನೋಡುವ ಇಚ್ಚೆಯಿಂದ ನೋಂದಣಿ ಮಾಡಿಕೊಂಡ ಗ್ರಾಹಕರ ಮಾಹಿತಿಗಳು ಇಲ್ಲಿ ಸೋರಿಕೆಯಾಗುತ್ತದೆ. ಅಂತೆಯೇ, ನೋಂದಣಿ ಮಾಡಿಸುವಾಗ ಹಣ ಪಾವತಿಸಿದ ಡೆಬಿಟ್​ ಕಾರ್ಡ್​, ಕ್ರೆಡಿಟ್​ ಕಾರ್ಡ್​ಗಳ ಮಾಹಿತಿಗಳು ಹ್ಯಾಕರ್​ಗಳ ಪಾಲಾಗುತ್ತವೆ.
First published:August 17, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading