HOME » NEWS » Tech » HERES HOW LATE NIGHT SNACKS MAY AFFECT WORKPLACE PERFORMANCE STG HG

ಎಚ್ಚರ! ತಡರಾತ್ರಿ ನೀವು ತಿನ್ನುವ ಆಹಾರ ನಿಮ್ಮ ಉದ್ಯೋಗದ ಮೇಲೆ ಪರಿಣಾಮ ಬೀರಬಹುದು: ಸಂಶೋಧನೆಯಲ್ಲಿ ಬಹಿರಂಗ

ನೀವು ಕೂಡ ತಡರಾತ್ರಿಯ ನಂತರ ಆಹಾರ ಸೇವಿಸುತ್ತೀರಾ? ಹಾಗಾದರೆ ನೀವು ನಿಮ್ಮ ಕೆಲಸದಲ್ಲಿ ಉನ್ನತಿಯನ್ನು ಸಾಧಿಸಲು ಸಾಧ್ಯವಿಲ್ಲ ಎನ್ನುತ್ತಿದೆ ಸಂಶೋಧನೆ. ಹೌದು ತಡ ರಾತ್ರಿ ಆಹಾರ ಸೇವಿಸುವ ವ್ಯಕ್ತಿಗಳು ಮಾರನೇ ದಿನ ಕಚೇರಿಯಲ್ಲಿ ಸರಿಯಾಗಿ ಕೆಲಸ ನಿರ್ವಹಿಸಲು ಸಾಧ್ಯವಿಲ್ಲ ಎನ್ನವ ಅಂಶ ಬಹಿರಂಗವಾಗಿದೆ.

news18-kannada
Updated:April 14, 2021, 3:16 PM IST
ಎಚ್ಚರ! ತಡರಾತ್ರಿ ನೀವು ತಿನ್ನುವ ಆಹಾರ ನಿಮ್ಮ ಉದ್ಯೋಗದ ಮೇಲೆ ಪರಿಣಾಮ ಬೀರಬಹುದು: ಸಂಶೋಧನೆಯಲ್ಲಿ ಬಹಿರಂಗ
ಪ್ರಾತಿನಿಧಿಕ ಚಿತ್ರ
  • Share this:
ನಾವು ತಿನ್ನುವ ಆಹಾರವೇ ನಮ್ಮ ನಡವಳಿಕೆಯಾಗಿ ಮಾರ್ಪಾಡಾಗುತ್ತದೆ ಎನ್ನುವುದನ್ನು ಸಾವಿರಾರೂ ವರ್ಷಗಳಿಂದಲೂ ನಮ್ಮ ಪೂರ್ವಿಕರು ತಿಳಿಸುತ್ತಾ ಬಂದಿದ್ದಾರೆ. ಇದರ ಜೊತೆಗೆ ಸೂರ್ಯಾಸ್ತದ ನಂತರ ಆಹಾರ ಸೇವಿಸುವುದು ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎನ್ನುವುದನ್ನು ಸಾಂಪ್ರದಾಯಿಕ ಆರೋಗ್ಯ ಪದ್ಧತಿಗಳು ಉಲ್ಲೇಖ ಮಾಡಿವೆ. ಆದರೂ ಇಂದಿನ ಯುಗದಲ್ಲಿ ಹೆಚ್ಚುತ್ತಿರುವ ಉದ್ಯೋಗದ ಒತ್ತಡ, ಸಾಮಾಜಿಕ ಅಸಮರ್ಥತೆ, ಆರ್ಥಿಕ ಸಮಸ್ಯೆಗಳು ಹೀಗೆ ಒಂದಲ್ಲ ಒಂದು ಕಾರಣಗಳು ಹೊತ್ತಲ್ಲದ ಹೊತ್ತಿನಲ್ಲಿ ಅತಿ ಹೆಚ್ಚು ತಿನ್ನುವ ನಡವಳಿಕೆಯನ್ನು ರೂಢಿಸಿವೆ. ಈ ನಿಟ್ಟಿನಲ್ಲಿ ಇಂದು ಬಹುತೇಕರು ಮಧ್ಯರಾತ್ರಿಯ ನಂತರ ಆಹಾರ ಸೇವಿಸುವ ಜೀವನ ಶೈಲಿಗೆ ಒಗ್ಗಿಕೊಂಡಿದ್ದಾರೆ.

ನೀವು ಕೂಡ ತಡರಾತ್ರಿಯ ನಂತರ ಆಹಾರ ಸೇವಿಸುತ್ತೀರಾ? ಹಾಗಾದರೆ ನೀವು ನಿಮ್ಮ ಕೆಲಸದಲ್ಲಿ ಉನ್ನತಿಯನ್ನು ಸಾಧಿಸಲು ಸಾಧ್ಯವಿಲ್ಲ ಎನ್ನುತ್ತಿದೆ ಸಂಶೋಧನೆ. ಹೌದು ತಡ ರಾತ್ರಿ ಆಹಾರ ಸೇವಿಸುವ ವ್ಯಕ್ತಿಗಳು ಮಾರನೇ ದಿನ ಕಚೇರಿಯಲ್ಲಿ ಸರಿಯಾಗಿ ಕೆಲಸ ನಿರ್ವಹಿಸಲು ಸಾಧ್ಯವಿಲ್ಲ ಎನ್ನವ ಅಂಶ ಬಹಿರಂಗವಾಗಿದೆ.

ಜರ್ನಲ್ ಆಫ್ ಅಪ್ಲೈಡ್ ಸೈಕಾಲಜಿಯಲ್ಲಿ ಆರೋಗ್ಯಕರ ಆಹಾರವು ನಮ್ಮ ಕೆಲಸದ ನಡವಳಿಕೆಗಳು ಮತ್ತು ಕಾರ್ಯಕ್ಷಮತೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಲೇಖಕ ಮತ್ತು ಉತ್ತರ ಕೆರೊಲಿನಾ ರಾಜ್ಯ ವಿಶ್ವವಿದ್ಯಾಲಯದ ಮನೋವಿಜ್ಞಾನದ ಸಹಾಯಕ ಪ್ರಾಧ್ಯಾಪಕ ಸಿಯೊಂಗ್ಹೀ "ಸೋಫಿಯಾ" ಚೋ ಹೇಳಿದ್ದಾರೆ. ಈ ಅಧ್ಯಯನಕ್ಕಾಗಿ ಸಂಶೋಧಕರು ಅಮೆರಿಕದಲ್ಲಿ 97 ಜನ ಉದ್ಯೋಗಿಗಳನ್ನು ಸತತ 10 ದಿನಗಳ ಪ್ರಯೋಗಕ್ಕಾಗಿ ಬಳಸಿಕೊಂಡರು. ಪ್ರತಿದಿನ ಮೂರು ಬಾರಿ ಈ ಉದ್ಯೋಗಿಗಳು ಸಂಶೋಧಕರ ಪ್ರಶ್ನೆಗೆ ಉತ್ತರಿಸಿದ್ದಾರೆ.

ಪ್ರತಿ ದಿನ ಕೆಲಸ ಮಾಡುವ ಮೊದಲು, ಅಧ್ಯಯನದಲ್ಲಿ ಭಾಗವಹಿಸುವವರು ತಮ್ಮ ದೈಹಿಕ ಮತ್ತು ಭಾವನಾತ್ಮಕ ಯೋಗಕ್ಷೇಮಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಅಲ್ಲದೇ ಪ್ರತಿದಿನ ಕೆಲಸದಲ್ಲಿ ಹೇಗೆ ತೊಡಗಿಕೊಂಡರು? ಏನೆಲ್ಲಾ ದೈಹಿಕ ಮತ್ತು ಮಾನಸಿಕ ಒತ್ತಡ ಕೆಲಸದಲ್ಲಿ ಅನುಭವಿಸಿದರು ಎನ್ನವ ಅಂಶವನ್ನು ತಿಳಿಸಿದ್ದಾರೆ. ಅಲ್ಲದೇ ರಾತ್ರಿ ಮಲಗುವ ಮುನ್ನ ಯಾವ ರೀತಿಯ ಆಹಾರ ಸೇವನೆ ಮಾಡಲಾಗುತ್ತಿತ್ತು ಎನ್ನುವುದನ್ನು ಈ ಸಂಶೋಧನೆಯಲ್ಲಿ ಉತ್ತರಿಸಲಾಗಿದೆ.

ಜೊತೆಗೆ ಸಂಶೋಧನೆಯಲ್ಲಿ ಭಾಗಿಯಾಗಿದ್ದ ಉದ್ಯೋಗಿಗಳು ಪ್ರತಿದಿನ ಸ್ನ್ಯಾಕ್‌ಗಳನ್ನು ಸೇವಿಸುತ್ತಿದ್ದರು. ಅತಿ ಹೆಚ್ಚು ಜಂಕ್‌ನಿಂದ ಕೂಡಿದ ಆಹಾರ ಸೇವನೆಗೆ ಮುಂದಾಗಿದ್ದರು. ಈ ಕಾರಣದಿಂದಾಗಿ ಬೆಳಗ್ಗೆ ಅಜೀರ್ಣ, ಬೇಧಿ, ಸುಸ್ತು, ವಾಕರಿಕೆಯಂತಹ ಸಮಸ್ಯೆಯನ್ನು ಎದುರಿಸಿದ್ದಾರೆ ಎನ್ನುವುದನ್ನು ಸಹ ಸಂಶೋಧನೆ ತಿಳಿಸಿದೆ. ಅಲ್ಲದೇ ಬೆಳಗ್ಗೆ ಎದ್ದಾಗ ಈ ರೀತಿಯಾದ ಆಹಾರ ಸೇವನೆ ಪದ್ಧತಿಯನ್ನು ಅಳವಡಿಸಿಕೊಂಡಿರುವುದು ಅವರಲ್ಲಿ ಪಶ್ಚಾತಾಪವನ್ನು ಉಂಟು ಮಾಡಿದೆ. ಜೊತೆಗೆ ಸರಿಯಾದ ಆಹಾರ ಕ್ರಮವನ್ನು ಅಳವಡಿಸಿಕೊಳ್ಳುವಲ್ಲಿ ಪ್ರತಿಬಾರಿ ವಿಫಲತೆಯನ್ನು ಕಾಣುತ್ತಿರುವುದರ ಬಗ್ಗೆ ಅವರಿಗೆ ಬೇಸರವಿದೆ ಎಂದು ಸಹ ಚೋ ತಿಳಿಸಿದ್ದಾರೆ.
ಇನ್ನು ರಾತ್ರಿಯ ಜಂಕ್ ಆಹಾರದಿಂದ ದೈಹಿಕ ಮತ್ತು ಮಾನಸಿಕ ಅಸಮತೋಲನ ಉಂಟಾಗುವ ಕಾರಣ ಉದ್ಯೋಗಿಗಳು ತಮ್ಮ ಕೆಲಸದಿಂದ ಸಾಕಷ್ಟು ಹಿಂದೆ ಸರಿಯುತ್ತಾರೆ. ಕೆಲಸದ ಮೇಲೆ ನಿರ್ಲಕ್ಷ್ಯವೂ ಉಂಟಾಗುವಂತೆ ಮಾಡಿದೆ. ಇದಿಷ್ಟೇ ಅಲ್ಲದೇ ತಮ್ಮ ಸಹೋದ್ಯೋಗಿಗಳಿಗೆ ನೆರವಾಗುವುದು ಕೂಡ ಕಷ್ಟವಾಗುತ್ತದೆ ಎನ್ನುವ ಅಂಶ ತಿಳಿದು ಬಂದಿದೆ.
ಇನ್ನು, ಒತ್ತಡವನ್ನು ನಿಭಾಯಿಸುವ ಮನಸ್ಥಿತಿಯುಳ್ಳ ಉದ್ಯೋಗಿಗಳು ಒಳ್ಳೆಯ ಜೀವನ ಶೈಲಿ, ಆಹಾರ ಶೈಲಿಯನ್ನು ಅಳವಡಿಸಿಕೊಳ್ಳುವ ಮೂಲಕ ಎಲ್ಲದರಲ್ಲೂ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ ಎನ್ನುವುದನ್ನು ಸಹ ಈ ಸಂಶೋಧನೆ ತಿಳಿಸಿದೆ. ಚೋ ಅವರ ಮಾತಿನ ಪ್ರಕಾರ ನಮ್ಮ ಆಹಾರ ಸೇವನೆಯೂ ರುಚಿಗಿಂತಲೂ ಹೆಚ್ಚಾಗಿ ಅಗತ್ಯ ಪೌಷ್ಠಿಕಾಂಶಗಳಿಂದ ಕೂಡಿರಬೇಕು. ಈ ನಿಟ್ಟಿನಲ್ಲಿ ಸರಿಯಾದ ಆಹಾರ ಕ್ರಮ ಅಳವಡಿಸಿಕೊಳ್ಳುವ ಮೂಲಕ ಕೆಲಸದಲ್ಲಿ ಮತ್ತು ವೈಯಕ್ತಿಕ ಜೀವನದಲ್ಲಿ ಸಮತೋಲನ ಕಾಯ್ದುಕೊಳ್ಳಬಹುದು ಎಂದಿದ್ದಾರೆ.
First published: April 14, 2021, 2:39 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories