Hacking Alert: ನಿಮ್ಮ ಸ್ಮಾರ್ಟ್​ಫೋನ್​ನಲ್ಲಿ ಈ 7 ಆ್ಯಪ್​ಗಳು​​ ಇದ್ದರೆ ಕೂಡಲೇ ಡಿಲೀಟ್​ ಮಾಡಿ!

ಇತ್ತೀಚೆಗೆ, ಸೈಬರ್‌ ಸೆಕ್ಯುರಿಟಿ ಸಂಸ್ಥೆಯ ಕ್ಯಾಸ್ಪರ್‌ಸ್ಕಿಯ ವಿಶ್ಲೇಷಕರಾದ ಟಟಯಾನಾ ಶಿಶ್ಕೋವಾ ಎಂಬುವವರು, ಕನಿಷ್ಠ 14 ಆಂಡ್ರಾಯ್ಡ್ ಅಪ್ಲಿಕೇಶನ್‌ಗಳಲ್ಲಿ ಜೋಕರ್ ಮಾಲ್‌ವೇರ್ ಸೋಂಕು ಕಾಣಿಸಿಕೊಂಡಿರುವ ಬಗ್ಗೆ ತಿಳಿಸಿದ್ದಾರೆ.

Joker Malware /  ಜೋಕರ್ ಮಾಲ್‌ವೇರ್

Joker Malware / ಜೋಕರ್ ಮಾಲ್‌ವೇರ್

  • Share this:
    ಮೊಬೈಲ್ ಸೆಕ್ಯುರಿಟಿ ಸೊಲ್ಯೂಶನ್ಸ್ ಸಂಸ್ಥೆಯಾದ ಪ್ರಡಿಯೊ ಜನಪ್ರಿಯ ಗೂಗಲ್ ಪ್ಲೇ ಸ್ಟೋರ್‌ನಲ್ಲಿ (Google Play Store) ಅಡಗಿರುವ ಜೋಕರ್ ಮಾಲ್ವೇರ್‌ (Joker Malware) ಬಗ್ಗೆ ಎಚ್ಚರಿಕೆ ಸಂದೇಶ ತಿಳಿಸಿದೆ. ಗೂಗಲ್​ ಪ್ಲೇ ಸ್ಟೋರ್​ನಲ್ಲಿರುವ ಹೊಸ ಆ್ಯಪ್‌ಗಳಿಗೆ ಸೋಂಕು ತಗುಲಿಸುವ ಕುರಿತಾಗಿ ತಿಳಿಸಿದೆ. ಜೋಕರ್ ಮಾಲ್ವೇರ್ ಈಗಾಗಲೇ 15 ಜನಪ್ರಿಯ ಅಪ್ಲಿಕೇಶನ್‌ಗಳಿಗೆ ಸೋಂಕು ತಗುಲಿಸುವ ಮೂಲಕ Google Play ನಲ್ಲಿ ಕಾಣಿಸಿಕೊಂಡಿದೆ. ಈ ಮಾಲ್‌ವೇರ್ ಕಳೆದ ವರ್ಷ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳಿಗೆ ಸೋಂಕು ತಗುಲಿದ ಕಾರಣ ಮೊಬೈಲ್ ಸುರಕ್ಷತೆಯ ಅಪಾಯವನ್ನು ಸೃಷ್ಟಿಸಿತ್ತು. ಕಳೆದ ವರ್ಷ Google ನ ಹಸ್ತಕ್ಷೇಪದ ಹೊರತಾಗಿಯೂ, Google ನ ಭದ್ರತೆಯನ್ನು ಬೈಪಾಸ್ ಮಾಡಲು ಅದರ ಕೋಡ್‌ಗೆ ಸಣ್ಣ ಬದಲಾವಣೆಗಳನ್ನು ಮಾಡುವ ಮೂಲಕ ಜೋಕರ್ ಮಾಲ್‌ವೇರ್ ಯಶಸ್ವಿಯಾಗಿ ಮತ್ತೆ ಕಾಣಿಸಿಕೊಂಡಿದೆ.

    ಇತ್ತೀಚೆಗೆ, ಸೈಬರ್‌ ಸೆಕ್ಯುರಿಟಿ ಸಂಸ್ಥೆಯ ಕ್ಯಾಸ್ಪರ್‌ಸ್ಕಿಯ ವಿಶ್ಲೇಷಕರಾದ ಟಟಯಾನಾ ಶಿಶ್ಕೋವಾ ಎಂಬುವವರು, ಕನಿಷ್ಠ 14 ಆಂಡ್ರಾಯ್ಡ್ ಅಪ್ಲಿಕೇಶನ್‌ಗಳಲ್ಲಿ ಜೋಕರ್ ಮಾಲ್‌ವೇರ್ ಸೋಂಕು ಕಾಣಿಸಿಕೊಂಡಿರುವ ಬಗ್ಗೆ ತಿಳಿಸಿದ್ದಾರೆ. ಈ ಮಾಲ್‌ವೇರ್ ಅನ್ನು ಮೊದಲು 2017 ರಲ್ಲಿ ಕಂಡುಹಿಡಿಯಲಾಯಿತು. ಈ ಮಾಲ್ವೇರ್​​ ಅನ್ನು ನಿಭಾಯಿಸಲು Google ಗೆ ದೊಡ್ಡ ಸವಾಲಾಗಿದೆ.

    Pradeo ನ ವರದಿಯ ಪ್ರಕಾರ, 5 ಲಕ್ಷ ಬಳಕೆದಾರರು ಬಳಸುತ್ತಿರುವ ಕಲರ್ ಮೆಸೇಜ್ (Color message) ಎಂಬ ಜನಪ್ರಿಯ ಅಪ್ಲಿಕೇಶನ್ ಜೋಕರ್ ಮಾಲ್‌ವೇರ್‌ನಿಂದ ಸೋಂಕಿಗೆ ಒಳಗಾಗಿದೆ. "ಅಪ್ಲಿಕೇಶನ್ ರಷ್ಯಾದ ಸರ್ವರ್‌ಗಳಿಗೆ ಸಂಪರ್ಕವನ್ನು ಮಾಡುತ್ತಿರುವಂತೆ ತೋರುತ್ತಿದೆ" ಎಂದು ವರದಿ ಹೇಳಿದೆ.

    ನಿಮ್ಮ ಬ್ಯಾಂಕ್​ ಖಾತೆ ಖಾಲಿ

    ಜೋಕರ್ ಮಾಲ್‌ವೇರ್ "ಫ್ಲೀಸ್‌ವೇರ್" ವರ್ಗಕ್ಕೆ ಸೇರುತ್ತದೆ, ಇದು ಅಂತಿಮವಾಗಿ ಬಳಕೆದಾರ ಹಣವನ್ನು ಕದಿಯುತ್ತದೆ. ಅಂದಹಾಗೆಯೇ ಈ ಮಾಲ್‌ವೇರ್ ಕ್ಲಿಕ್‌ಗಳನ್ನು ಅನುಕರಿಸುತ್ತದೆ ಮತ್ತು ಬಳಕೆದಾರರಿಗೆ ತಿಳಿಯದಂತೆ ಅನಗತ್ಯ ಪಾವತಿಸಿದ ಪ್ರೀಮಿಯಂ ಸೇವೆಗಳಿಗೆ ಚಂದಾದಾರರಾಗಲು SMS ಅನ್ನು ಪ್ರತಿಬಂಧಿಸುತ್ತದೆ.

    ಇದನ್ನು ಓದಿ: Xiaomi Christmas Sale: ಸ್ಮಾರ್ಟ್​ಫೋನ್, ಟಿವಿ, ಲ್ಯಾಪ್​ಟಾಪ್​ಗಳ ಮೇಲೆ ಆಕರ್ಷಕ ರಿಯಾಯಿತಿ

    ಜೋಕಲ್​ ಮಾಲ್ವೇರ್​ ಬಳಕೆದಾರನ ಯಾವುದೇ ಅನುಮತಿಗಳನ್ನು ತೆಗೆದುಕೊಳ್ಳದೆ ಆನ್‌ಲೈನ್‌ನಲ್ಲಿ ಪಾವತಿ ಸೇವೆ ಮೂಲಕ ಸಂಕಷ್ಟಕ್ಕೆ ಗುರಿ ಮಾಡಬಹುದು. ಜೊತೆಗೆ ಆನ್‌ಲೈನ್ ಜಾಹೀರಾತುಗಳ ಮೇಲೆ ಸ್ವಯಂಚಾಲಿತವಾಗಿ ಕ್ಲಿಕ್ ಮಾಡಬಹುದು. ಈ ಮಾಲ್‌ವೇರ್ ಎಷ್ಟು ಅಪಾಯಕಾರಿಯಾಗಿದೆ ಎಂದರೆ ಪಾವತಿಗಳನ್ನು ರಹಸ್ಯವಾಗಿ ಅನುಮೋದಿಸಲು SMS ನಿಂದ OTP ಗಳನ್ನು ಸಹ ತೆಗೆದುಕೊಳ್ಳುತ್ತದೆ.

    ಇದನ್ನು ಓದಿ: Iphone 12 ಖರೀದಿಸಲು ಇಲ್ಲಿದೆ ಉತ್ತಮ ಅವಕಾಶ..ಇಷ್ಟೊಂದು ಕಡಿಮೆ ಬೆಲೆಗೆ ಮತ್ತೆಂದೂ ಸಿಗದು!

    ಅಷ್ಟು ಮಾತ್ರವಲ್ಲದೆ ಬಳಕೆದಾರನ ಬ್ಯಾಂಕ್ ಸ್ಟೇಟ್‌ಮೆಂಟ್‌ಗಳನ್ನು(Bank statement) ಪರಿಶೀಲಿಸುತ್ತದೆ. ಹೆಚ್ಚಾಗಿ ಆನ್​ಲೈನ್​ ಪಾವತಿಗಳ ಮೇಲೆ ಕಣ್ಣಾಯಿಸಿ ಬ್ಯಾಂಕ್​ ಖಾತೆಯನ್ನು ಖಾಲಿ ಮಾಡಲು ನೋಡುತ್ತದೆ.

    ಜೋಕಲ್​ ಮಾಲ್ವೇರ್​ ಇರುವ 7 ಅಪ್ಲಿಕೇಶನ್​ಗಳು ಇಲ್ಲಿವೆ. ಸ್ಮಾರ್ಟ್​ಫೋನ್​ನಲ್ಲಿ ಈ ಅಪ್ಲಿಕೇಶನ್​ಗಳು ಇದ್ದರೆ ಕೂಡಲೇ ಡಿಲೀಟ್​ ಮಾಡಿ

    1. Color Message

    2. Safety AppLock

    3. Convenient Scanner 2

    4. Push Message-Texting&SMS

    5. Emoji Wallpaper

    6. Separate Doc Scanner

    7. Fingertip GameBox

    Published by:Harshith AS
    First published: