• Home
  • »
  • News
  • »
  • tech
  • »
  • WhatsApp Ban: ವಾಟ್ಸಪ್ ಬಳಕೆದಾರರೇ ಎಚ್ಚರ? ಮಿತಿ ತಪ್ಪಿದ್ರೆ ಬ್ಯಾನ್ ಆಗುತ್ತೆ ಅಕೌಂಟ್!

WhatsApp Ban: ವಾಟ್ಸಪ್ ಬಳಕೆದಾರರೇ ಎಚ್ಚರ? ಮಿತಿ ತಪ್ಪಿದ್ರೆ ಬ್ಯಾನ್ ಆಗುತ್ತೆ ಅಕೌಂಟ್!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಒಂದು WhatsApp ಖಾತೆ ಬ್ಯಾನ್‌ ಆಗಬೇಕಾದರೆ ಅದಕ್ಕೆ ಮುಖ್ಯವಾಗಿ ಬಳಕೆದಾರರೆ ಕಾರಣ. ಇಲ್ಲಿ ಇವರ ಕೆಲವೊಂದು ನಡವಳಿಕೆಯಿಂದ ಈ ರೀತಿಯ ನಿರ್ಧಾರಗಳನ್ನು ಕೈಗೊಳಲಾಗುತ್ತದೆ. ಅತಿಯಾದ ಬಳಕೆಯಿಂದ ಕೂಡ ನಿಮ್ಮ ವಾಟ್ಸಪ್‌ ಬ್ಯಾನ್‌ ಆಗುವ ಸಾಧ್ಯತೆಗಳಿವೆ. ಅದಕ್ಕಾಗಿ ಈ ಕೆಳಗಿನ ಸಲಹೆಗಳನ್ನೊಮ್ಮೆ ಓದಿ

ಮುಂದೆ ಓದಿ ...
  • Share this:

    ವಾಟ್ಸಪ್‌ (WhatsApp) ಮೂಲಕ ಅನಗತ್ಯ ಸಂದೇಶಗಳು (Message), Fake newsಗಳ ಮತ್ತು ಕಾನೂನು ಬಾಹಿರ ಸಂದೇಶಗಳನ್ನು ಶೇರ್‌ ಮಾಡುವುದನ್ನು ತಡೆಗಟ್ಟುವ ಸಲುವಾಗಿ, ಮೆಟಾ-ಮಾಲೀಕತ್ವದ (Meta) ಮೆಸೇಜಿಂಗ್ ಪ್ಲಾಟ್‌ಫಾರ್ಮ್ (Platform) ಈ ರೀತಿಯ ಖಾತೆಗಳನ್ನು ನಿರ್ಬಂಧಿಸುತ್ತಿದೆ (Ban). WhatsApp ತನ್ನ "ಮಾಸಿಕ ಬಳಕೆದಾರರ ವರದಿಯನ್ನು" ಬಿಡುಗಡೆ ಮಾಡುತ್ತಿದೆ. ಇದರಲ್ಲಿ ಯಾವ ರೀತಿಯ ಖಾತೆಗಳನ್ನು (Account) ನಿರ್ಬಂಧಿಸಲಾಗಿದೆ ಮತ್ತು ಅವುಗಳಲ್ಲಿ ಎಷ್ಟು ಬ್ಯಾನ್ ಮಾಡಲಾಗಿದೆ ಎಂಬುದರ ಕುರಿತು ವಿವರಗಳನ್ನು ನೀಡುತ್ತದೆ. ಆಗಸ್ಟ್ 2022 ರಲ್ಲಿ, ಇದು 23 ಲಕ್ಷ ಭಾರತೀಯ ಖಾತೆಗಳನ್ನು ನಿಷೇಧಿಸಲಾಗಿದೆ. ಆಶ್ಚರ್ಯಕರ ಸಂಗತಿಯೆಂದರೆ ವಾಟ್ಸಾಪ್ ಪ್ರತಿ ತಿಂಗಳು ಸರಾಸರಿ 20 ಲಕ್ಷ ಖಾತೆಗಳನ್ನು ಕೆಲವು ಸಮಯದಿಂದ ನಿಷೇಧಿಸುತ್ತಿದೆ. ಈ ರೀತಿ ಮಾಡಿದ್ದರಿಂದ ಬಳಕೆದಾರರಿಗೆ ಎಚ್ಚರಿಕೆಯನ್ನು ನೀಡಿದಂತೆ ಆಗುತ್ತದೆ ಹಾಗೂ ಅನಗತ್ಯ ಸಂದೇಶಗಳನ್ನು ಕಳಿಸುವುದನ್ನು ನಿಲ್ಲಿಸಬಹುದೆಂದು ಇದರ ಮುಖ್ಯ ಉದ್ದೇಶ.


    WhatsApp ನಿಷೇಧಕ್ಕೆ ಒಳಗಾಗುವುದನ್ನು ತಡೆಯಲು  ಬಳಕೆದಾರರು ಅನುಸರಿಸಬೇಕಾದ ಕೆಲವು ಪ್ರೋಟೋಕಾಲ್‌ಗಳನ್ನು ಘೋಷಿಸಿದೆ. ಏಕೆಂದರೆ ಕೆಲವೊಮ್ಮೆ ತಪ್ಪಾಗಿ ಖಾತೆಗಳು ಬ್ಯಾನ್‌ ಆಗಬಹುದು ಎಂದು ವಾಟ್ಸಪ್‌ ಉಲ್ಲೇಖಿಸಿದೆ. ಆದರೆ ಕೆಲವೊಂದು ಖಾತೆಗಳು ಕಂಪನಿಯ ನಿಯಮಗಳನ್ನು ವಿರೋಧಿಸುವ ಚಟುವಟಿಕೆಗಳನ್ನು ನಡೆಸುತ್ತದೆ ಆಗ ನಿಮ್ಮ ಖಾತೆಗಳು ಬ್ಯಾನ್‌ ಆಗುವ ಸಾಧ್ಯತೆಗಳಿರುತ್ತದೆ. ಉದಾಹರಣೆಗೆ ನಿಮ್ಮ ಖಾತೆ Scamಗಳನ್ನು ಹೊಂದಿದ್ದರೆ, ಇದರಿಂದ ಬೇರೆ WhatsApp ಬಳಕೆದಾರಾರಿಗೆ ತೊಂದರೆಗಳಾದರೆ ಈ ರೀತಿ ಅಗುವ ಸಾಧ್ಯತೆಗಳಿವೆ ಎಂದು WhatsApp ಹೇಳಿಕೆಯಲ್ಲಿ ತಿಳಿಸಿದೆ.


    ನಿಮ್ಮ ಖಾತೆ ಬ್ಯಾನ್‌ ಅಗದಂತೆ WhatsApp ಕೆಲವು ಸಲಹೆಗಳನ್ನು ನೀಡಿದೆ


     ಸಂದೇಶಗಳನ್ನು ನೋಡಿ ಶೇರ್‌ ಮಾಡಿ


    WhatsApp ಖಾತೆಯಲ್ಲಿ ಬರುವಂತಹ ಎಲ್ಲಾ ಮೆಸೇಜ್‌ಗಳಿಗೆ ಒಂದು ಲೇಬಲ್‌ ಅನ್ನು ರಚಿಸಿರುತ್ತದೆ. ಆದ್ದರಿಂದ ಮೊದಲಿಗೆ ಬಂದಂತಹ ಮೆಸೇಜ್‌ ಅನ್ನು ಮಾರುಪರಿಶೀಲಿಸಬೇಕು. ಒಂದು ವೇಳೆ ಆ ಸಂದೇಶ ನಿಜವೋ, ಸುಳ್ಳೋ ಎಂಬುದರ ಮೂಲ ತಿಳಿಲಿಲ್ಲವೇ ಅದನ್ನು ಫಾರ್ವರ್ಡ್‌ ಮಾಡಬಾರದು.


    ಇದನ್ನೂ ಓದಿ: ಮಕ್ಕಳ ಮೇಲೆ ನಿಗಾ ಇಡುತ್ತಂತೆ Instagram! 18ಕ್ಕಿಂತ ಕಡಿಮೆ ವಯಸ್ಸಿನವರ ಅಕೌಂಟ್‌ ಮೇಲೆ ಹದ್ದಿನಕಣ್ಣು!


    ಅಟೋಮೆಟಿಕ್‌ ಮೆಸೇಜ್‌ಗಳನ್ನು ಫಾರ್ವರ್ಡ್‌ ಮಾಡಬಾರದು


    ಅಟೋಮೆಟಿಕ್‌ ಆಗಿ ವಾಟ್ಸಪ್‌ನಲ್ಲಿ ಬಂದಂತಹ ಮೆಸೇಜ್‌ಗಳನ್ನು ಇನ್ನೊಬ್ಬರಿಗೆ ಫಾರ್ವರ್ಡ್‌ ಮಾಡಬಾರದು. ಇದರಿಂದ ಬೇರೆಯವರಿಗೆ ಧಕ್ಕೆಯನ್ನುಂಟು ಮಾಡುತ್ತದೆ. ಇದರಿಂದ ನಿಮ್ಮ ಖಾತೆಯನ್ನು ನಿಷೇಧಿಸುವ ಚಾನ್ಸ್‌ ಇರುತ್ತದೆ.


    Here s the answer to why WhatsApp is banning you
    ಸಾಂದರ್ಭಿಕ ಚಿತ್ರ


    ಬ್ರಾಡ್‌ಕಾಸ್ಟ್‌ ಲೀಸ್ಟ್‌ ಹೆಚ್ಚು ಬಳಸಬೇಡಿ


    ಅತಿಯಾಗಿ WhatsAppನಲ್ಲಿ ರಚಿಸಲಾದ ಬ್ರಾಡ್‌ಕಾಸ್ಟಿಗೆ ಸಂದೇಶಗಳನ್ನು ಕಳುಹಿಸಬಾರದು. ಇದರಿಂದ ಕೆಲವೊಂದು ಬಳಕೆದಾರರು ನಿಮ್ಮ ಖಾತೆಯನ್ನು ರಿಪೋರ್ಟ್‌ ಮಾಡುವ ಸಾಧ್ಯತೆಗಳಿರುತ್ತವೆ. ಹೀಗೆ ನಿಮ್ಮ ಖಾತೆ ಬ್ಯಾನ್‌ ಆಗಬಹುದು.\


    ಪರಿಚಯದವರಿಗೆ ಮಾತ್ರ ಸಂದೇಶ ಕಳುಹಿಸಿ


    ಯಾವುದೇ ಸಂದೇಶಗಳನ್ನು ಫಾರ್ವರ್ಡ್‌ ಮಾಡಬೇಕಾದರೆ ತಮ್ಮ Contactನಲ್ಲಿರುವವರಿಗೆ ಮಾತ್ರ ಕಳುಹಿಸಿ. ಇಲ್ಲವಾದಲ್ಲಿ ಬೇರೆಯವರು ನಿಮ್ಮ ಖಾತೆಯನ್ನು ರಿಪೋರ್ಟ್‌ ಮಾಡುವ ಸಾಧ್ಯತೆಗಳಿರುತ್ತವೆ.


    ಇದನ್ನೂ ಓದಿ: ನಿಮ್ಮ ಆಂಡ್ರಾಯ್ಡ್ ಸರಿಯಾಗಿ ಕೆಲಸ ಮಾಡುತ್ತಿಲ್ಲವೇ ? ಈ ತಂತ್ರಗಳನ್ನೊಮ್ಮೆ ಬಳಸಿ


    ವಾಟ್ಸಪ್‌ನ ನಿಯಮಗಳನ್ನು ಪಾಲಿಸಿ


    WhatsApp ಖಾತೆ ಬ್ಯಾನ್‌ ಆಗಲು ಮುಖ್ಯ ಕಾರಣವೆಂದರೆ ಇದರ ನಿಯಮಗಳನ್ನು ಪಾಲಿಸಾದಿರುವುದು. ಅಂದರೆ ವಾಟ್ಸಪ್‌ನಲ್ಲಿ ಕಾನೂನು ಬಾಹಿರ, ಸುಳ್ಳು ಸುದ್ದಿಗಳನ್ನು ಪ್ರಕಟಿಸುವುದು, ಬೆದರಿಕೆಯಾ ಸಂದೇಶ, ಕಿರುಕುಳದ ಸಂದೇಶ ಈ ರೀತಿಯ ಸಂದೇಶಗಳನ್ನು ಫಾರ್ವರ್ಡ್‌ ಮಾಡುವುದರಿಂದ ನಿಮ್ಮ ಖಾತೆಯನ್ನು ನಿಷೇಧಿಸುತ್ತಾರೆ.


    ಒಂದು ಖಾತೆ ಬ್ಯಾನ್‌ ಆಗಬೇಕಾದರೆ ಅದಕ್ಕೆ ಮುಖ್ಯವಾಗಿ ಬಳಕೆದಾರರೆ ಕಾರಣ. ಇಲ್ಲಿ ಇವರ ಕೆಲವೊಂದು ನಡವಳಿಕೆಯಿಂದ ಈ ರೀತಿಯ ನಿರ್ಧಾರಗಳನ್ನು ಕೈಗೊಳಲಾಗುತ್ತದೆ. ಅತಿಯಾದ ಬಳಕೆಯಿಂದ ಕೂಡ ನಿಮ್ಮ ವಾಟ್ಸಪ್‌ ಬ್ಯಾನ್‌ ಆಗುವ ಸಾಧ್ಯತೆಗಳಿವೆ

    Published by:Harshith AS
    First published: