• Home
  • »
  • News
  • »
  • tech
  • »
  • Tech Tips: ಅಪರಿಚಿತರ ಕಾಲ್ ಕಿರಿಕಿರಿ! ತಪ್ಪಿಸಿಕ್ಕೊಳ್ಳೋಕೆ ಹೀಗೆ ಮಾಡಿ

Tech Tips: ಅಪರಿಚಿತರ ಕಾಲ್ ಕಿರಿಕಿರಿ! ತಪ್ಪಿಸಿಕ್ಕೊಳ್ಳೋಕೆ ಹೀಗೆ ಮಾಡಿ

 ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಪ್ರತಿದಿನ ಕೆಲವೊಂದು ಅಪರಿಚಿತ ಕಾಲ್ ಮೇಸೆಜ್ ಗಳು ಬರುತ್ತಿರುತ್ತದೆ. ಅದರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುತ್ತಾರೆ.ಇದೇ ಕಾರಣಕ್ಕೆ ಹೆಚ್ಚಿನ ಜನರು ಸ್ಪ್ಯಾಮ್‌ ಕರೆಗಳನ್ನು ಬ್ಲಾಕ್‌ ಮಾಡಲು ಬಯಸುತ್ತಾರೆ. ರೋಬೋ ಕಾಲ್‌ಗಳಿಂದ ತಪ್ಪಿಸಿಕ್ಕೊಳ್ಳುಲು ಇಲ್ಲಿದೆ ಟಿಪ್ಸ್. 

  • Share this:

    ಪ್ರತಿದಿನ ಕೆಲವೊಂದು ಅಪರಿಚಿತ ಕಾಲ್ ಮೇಸೆಜ್ ಗಳು ಬರುತ್ತಿರುತ್ತದೆ. ಜನ ಅದರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುತ್ತಾರೆ. ಕೆಲವೊಂದು ಕರೆಗಳನ್ನು (Calls) ನಿರಾಕರಿಸಲು ಸಾಧ್ಯವಾಗುದಿಲ್ಲಅಂತಹ ಸಂದರ್ಭದಲ್ಲಿ ನಾವು ಎನು ಮಾಡಬೇಕು ಎನ್ನುವುದು ತಿಳಿಯುವುದಿಲ್ಲ. ಕೆಲವೊಮ್ಮೆಮನಸ್ಸಿಗೆ ಕಿರಿಕಿರಿ ನೀಡುವ ಮತ್ತು ತಮ್ಮ ಕೆಲಸದ ವೇಳೆಯಲ್ಲಿ ಅಡಚಣೆ ಉಂಟು ಮಾಡುವ ಸ್ಪ್ಯಾಮ್ ಕರೆಗಳನ್ನು (Spam call) ತಡೆಯುವುದು ಇಂದು ದೊಡ್ಡ ಸವಾಲಾಗಿದೆ. ಬಳಕೆದಾರರಿಗೆ ಪ್ರತಿದಿನ ಹಲವಾರು ಸ್ಪ್ಯಾಮ್ ಕರೆಗಳು ಬರುತ್ತಲೇ ಇರುತ್ತವೆ. ಯಾರದ್ದೋ ಕರೆ ಎಂದು ಮಾಡುವ ಕೆಲಸ ಬಿಟ್ಟು ಹೋಗಿ ಫೋನ್ ಎತ್ತಿದರೆ ಅದು ಸ್ಪ್ಯಾಮ್ ಕರೆಯಾದಾಗ ಬರುವ ಕೋಪ ಅಷ್ಟಿಷ್ಟಲ್ಲ. ಇದೇ ಕಾರಣಕ್ಕೆ ಹೆಚ್ಚಿನ ಜನರು ಸ್ಪ್ಯಾಮ್‌ ಕರೆಗಳನ್ನು ಬ್ಲಾಕ್‌ ಮಾಡಲು ಬಯಸುತ್ತಾರೆ. ರೋಬೋ ಕಾಲ್‌ಗಳಿಂದ (Robo Call) ತಪ್ಪಿಸಿಕ್ಕೊಳ್ಳುಲು ಇಲ್ಲಿದೆ ಟಿಪ್ಸ್. 


    ಸ್ಮಾರ್ಟ್‌ಫೋನ್‌ ಬಳಕೆದಾರರು ಸ್ಪ್ಯಾಮ್‌ ಕಾಲ್‌ ಬ್ಲಾಕ್‌ ಮಾಡುವುದಕ್ಕೆ ಹೆಚ್ಚಿನ ಸಂದರ್ಭದಲ್ಲಿ ಟ್ರೂ ಕಾಲರ್‌ ಅಪ್ಲಿಕೇಶನ್‌ ಬಳಸುತ್ತಾರೆ. ಈ ಕಾರಣಕ್ಕೆ ಜಾಗತಿಕಮಟ್ಟದಲ್ಲಿ ಟ್ರೂ ಕಾಲರ್‌ ಅಪ್ಲಿಕೇಶನ್‌ 320 ಮಿಲಿಯನ್‌ಗಿಂತಲೂ ಹೆಚ್ಚಿನ ಡೌನ್‌ಲೋಡ್‌ ಹೊಂದಿದೆ. ಟ್ರೂ ಕಾಲರ್‌ ಆ್ಯಪ್ ಕಾಲರ್ ಐಡಿ ಡಿವೈಸ್‌ ಆಗಿದ್ದು, ಯಾವುದೇ ದೇಶೀಯ ಅಥವಾ ಅಂತಾರಾಷ್ಟ್ರೀಯ ಕರೆ ಮಾಡುವವರ ಹೆಸರನ್ನು ಮತ್ತು ಅವರ ವಿಷಯವನ್ನು ತಿಳಿಸುತ್ತದೆ. ಅಲ್ಲದೆ ಹೆಸರು ಅಥವಾ ಸಂಖ್ಯೆಯನ್ನು ಬಳಸಿಕೊಂಡು ವೈಯಕ್ತಿಕ ಬಳಕೆದಾರರ ಪ್ರೊಫೈಲ್‌ಗಳನ್ನು ಹುಡುಕುವುದಕ್ಕೆ ಇದನ್ನು ಬಳಸುತ್ತರೆ.


    ಸಾಂದರ್ಭಿಕ ಚಿತ್ರ


    Do-Not-Disturb ಮೋಡ್ ಆನ್ ಮಾಡಿ


    DND ನಲ್ಲಿ ನೋಂದಾಯಿಸುವ ಮೂಲಕ ಸ್ಪ್ಯಾಮ್ ಕರೆಗಳನ್ನು ಬ್ಲಾಕ್‌ ಮಾಡಬಹುದಾಗಿದೆ. ಈ ಮೊಬೈಲ್-ಆಪರೇಟರ್ ನಿರ್ದಿಷ್ಟ DND (Do-Not-Disturb) ನೋಂದಣಿ ವೆಬ್‌ಸೈಟ್‌ಗಳಲ್ಲಿ ನಿಮ್ಮ ಸಂಖ್ಯೆಯನ್ನು ನೀವು ನೋಂದಾಯಿಸಿಕೊಳ್ಳಬಹುದು. ಇದರ ಸಹಾಯದಿಂದ ನೀವು ಸ್ಪ್ಯಾಮ್ ಕರೆಗಳನ್ನು ಸ್ವೀಕರಿಸುದರಿಂದ ದೂರವಿರಬಹುದಾಗಿದೆ.  ನೀವು ಇದನ್ನು ಬಳಸಿ ಗಮನಿಸಬಹುದು.


    ಇದನ್ನೂ ಓದಿ: Mobile Bomb: ಮಕ್ಕಳ ಕೈಯಲ್ಲಿ ಬಾಂಬುಗಳಿವೆ! ಪೋಷಕರೇ ಎಚ್ಚರ ಎಚ್ಚರ


    ಇನ್ನು ಗೂಗಲ್‍ನ ಹೆಚ್ಚು  ಫೋನ್ ಆ್ಯಪ್ ಅನ್ನು ಡೌನ್‍ಲೋಡ್ ಮಾಡಿ ಸ್ಪ್ಯಾಮ್ ಕರೆಗಳನ್ನು ಬ್ಲಾಕ್ ಮಾಡಬಹುದು. ಇದಕ್ಕಾಗಿ ನೀವು ಫೋನ್ ಆ್ಯಪ್ ಸೆಟ್ಟಿಂಗ್ ಮೇಲೆ ಕ್ಲಿಕ್ ಮಾಡಿ. ನಂತರ ಆ್ಯಪ್‍ನ ಮೇಲಿನ ಭಾಗದಲ್ಲಿ ಸುಮಾರು ಅರ್ಧದಷ್ಟು, ಹಸಿರು ಫೋನ್ ಐಕಾನ್ ಮೇಲೆ ಕ್ಲಿಕ್ ಮಾಡಿ. ಸೈಲೆನ್ಸ್ ಅನ್‍ನೋನ್ ಕಾಲರ್ಸ್ ಆಯ್ಕೆಯನ್ನು ಆನ್ ಮಾಡಿ ನಂತರ ನಿಮಗೆ ಅನ್‍ನೋನ್ ಕಾಲ್ ಬರುವುದು ಕಡಿಮೆ ಆಗಬಹುದು.


    ಇದನ್ನೂ ಓದಿ: Smart Phone: ರಕ್ತ ಕೊಟ್ಟು ಮೊಬೈಲ್ ಖರೀದಿಸಲು ಬಂದ ಬಾಲಕಿ! ಸಿಕ್ತಾ ಸ್ಮಾರ್ಟ್ ಫೋನ್?


    ರೋಬೋಕಿಲ್ಲರ್‌ ಅಪ್ಲಿಕೇಶನ್‌ ನ ಡೌನ್ಲೋಡ್ ಮಾಡಿ


    ಇನ್ನು ರೋಬೋಕಾಲ್‌ಗಳನ್ನು ಬ್ಲಾಕ್‌ ಮಾಡುವುದಕ್ಕೆ ರೋಬೋಕಿಲ್ಲರ್‌ ಅಪ್ಲಿಕೇಶನ್‌ ಉತ್ತಮವಾಗಿದೆ. ಇದು ತನ್ನ ಸಾಮಥ್ಯವನ್ನು ಬಳಸಿಕೊಂಡು ಸ್ಪ್ಯಾಮ್‌ ಕಾಲ್‌ಗಳನ್ನು ಬ್ಲಾಕ್‌ ಮಾಡುತ್ತದೆ. “ಆಡಿಯೋ ಫಿಂಗರ್‌ಪ್ರಿಂಟಿಂಗ್” ಟೆಕ್ನಾಲಿಜಿಯನ್ನು ಈ ಅಪ್ಲಿಕೇಶನ್‌ ಹೊಂದಿದ್ದು, ನೈಜ ಸಮಯದಲ್ಲಿ ರೆಕಾರ್ಡಿಂಗ್‌ಗಳನ್ನು ಪರಿಶೀಲಿಸುತ್ತದೆ. ಅಲ್ಲದೆ ಸ್ಪ್ಯಾಮ್ ಕಾಲರ್ ಐಡಿ, ಐಚ್ಛಿಕ AI ಅಸಿಸ್ಟೆಂಟ್‌ ಕರೆಗಳನ್ನು ಕೂಡ ಇದರಲ್ಲಿ ಪ್ರಿ -ಸ್ಕ್ರೀನ್ ಮಾಡಬಹುದಾಗಿದೆ.


     ಸ್ಪ್ಯಾಮ್ ಕರೆಗಳು ಹೆಚ್ಚುತ್ತಿವೆ ಎಚ್ಚರವಾಗಿರಿ


    ಕೆಲವು ಕರೆಗಳು ಮೋಸದ ಕೂಪಕ್ಕೆ ಬೀಳಿಸುತ್ತವೆ. ಹಾಗಾಗಿ ಕರೆ ಸ್ವೀಕರಿಸುವಾಗ ಗಂಭೀರವಾಗಿ ಪರಿಗಣಿಸಿ. ಸ್ಪ್ಯಾಮ್ ಕರೆಗಳಿಂದ ಕೆಲವೊಮ್ಮೆ ಸಂಕಷ್ಟಕ್ಕೆ ಎದುರಾಗುವ ಪರಿಸ್ಥಿತಿಯೂ ಬರಬಹುದು. ಈ ಕಾರಣದಿಂದ ಎಚ್ಚರವಾಗಿರಿ.

    Published by:Harshith AS
    First published: