WhatsApp tips: ವಾಟ್ಸಾಪ್​ ಡೇಟಾವನ್ನು ಶಾಶ್ವತವಾಗಿ ಅಳಿಸಬೇಕಾ; ಈ ಸರಳ ಕ್ರಮ ಅನುಸರಿಸಿ ಸಾಕು

ಬಹುತೇಕರು ವಾಟ್ಸಾಪ್​ ಅನ್ನು ಡಿಲೀಟ್ ​ ಮಾಡಿದಾಕ್ಷಣ ತಮ್ಮ ಡೇಟಾಗಳು ಸುರಕ್ಷಿತ ಎಂದು ಭಾವಿಸುತ್ತಾರೆ. ಆದರೆ, ಇದು ತಪ್ಪು ಕಲ್ಪನೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ವಾಟ್ಸಾಪ್ (whats App)​ ಅನ್ನು ಇಂದು ಬಳಕೆ ಮಾಡದವರೇ ಇಲ್ಲ. ಅತಿ ಹೆಚ್ಚು ಜನಪ್ರತಿಯ ಮೆಸೇಜಿಂಗ್ ಫ್ಲಾಟ್​ಫಾರ್ಮ್​ ಆದ ವಾಟ್ಸಾಪ್​ನ ಡೇಟಾಗಳು ನಾವು ಅಂದು ಕೊಂಡಷ್ಟು ಸುರಕ್ಷಿತವೂ ಅಲ್ಲ. ಈ ವಾಟ್ಸಾಪ್​ ಡೇಟಾವನ್ನು ಸುಲಭವಾಗಿ (Whats app date hack) ಕೂಡ ಹ್ಯಾಕ್ ಮಾಡಬಹುದು ಎಂಬುದು ಹೊಸ ವಿಷಯವೇನಲ್ಲ. ತಮ್ಮ ವಾಟ್ಸಾಪ್​ ಡೇಟಾ ಹ್ಯಾಕ್​ ಆಗುವ ಭಯದಿಂದಲೇ ಅನೇಕರು ಟೆಲಿಗ್ರಾಮ್ (telgram)​, ಸಿಗ್ನಲ್ (signal)​ ಅಂತ ಬೇರೆ ಮೇಸೇಜಿಂಗ್​​ ಅಪ್ಲಿಕೇಶನ್​ ಮೊರೆ ಹೋಗುತ್ತಾರೆ. ನಿಮ್ಮ ಈ ವಾಟ್ಸಾಪ್​ ಗೌಪತ್ಯೆಯನ್ನು ಕಾಪಾಡುವ ಮತ್ತೊಂದು ಮಾರ್ಗ ಎಂದರೆ ಆಗ್ಗಿಂದಾಗೆ ಅದರಲ್ಲಿನ ಮಾಹಿತಿಗಳನ್ನು ಶಾಶ್ವತವಾಗಿ ಅಳಿಸಿ ಹಾಕುವುದು. ಮೊಬೈಲ್​ ಬದಲು ಮಾಡುವಾಗ ಅಥವಾ ಕಳೆದುಕೊಂಡಾಗ ಈ ದತ್ತಾಂಶಗಳನ್ನು ಯಾರ ಕೈಗೆ ಸಿಗದಂತೆ ಕಾಪಾಡುವುದು ಅವಶ್ಯವಾಗಿದೆ.  ಇದೇ ಕಾರಣದಿಂದಾ ಹೇಗೆ ನಿಮ್ಮ ಈ ಡೇಟಾವನ್ನು ಶಾಶ್ವತವಾಗಿ ಅಳಿಸುವುದು  ಹೇಗೆ ಎಂಬುದಕ್ಕೆ ಇಲ್ಲಿದೆ ಸರಳ ಉಪಾಯ.

    ಇನ್ನು ಬಹುತೇಕರು ವಾಟ್ಸಾಪ್​ ಅನ್ನು ಡಿಲೀಟ್ (whats App Delete)​ ಮಾಡಿದಾಕ್ಷಣ ತಮ್ಮ ಡೇಟಾಗಳು ಸುರಕ್ಷಿತ ಎಂದು ಭಾವಿಸುತ್ತಾರೆ. ಆದರೆ, ಈ ರೀತಿ ನೀವು ಯೋಚಿಸಿದ್ದರೆ ಅದು ತಪ್ಪು ಕಲ್ಪನೆ. ವಾಟಾಪ್ಸ್​ ಅಪ್ಲಿಕೇಶ್​ ಅಳಿಸಿದರೂ ಅದರಲ್ಲಿನ ಡೇಟಾವನ್ನು ಪಡೆಯುವುದು ಸುಲಭ.  ಇದೇ ಕಾರಣಕ್ಕೆ ವಾಟ್ಸಾಪ್​ ನಿಂದ ಸಂಪೂರ್ಣವಾಗಿ ನೀವು ದೂರಾ ಆಗಬೇಕು ಎಂದರೆ, ಅದರ ಡೇಟಾವನ್ನು ಶಾಶ್ವತವಾಗಿ ಅಳಿಸಿ. ಇದರಿಂದ ನಿಮ್ಮ ಸಂಪೂರ್ಣ ದತ್ತಾಂಶ ಯಾವುದೇ ಕಾರಣಕ್ಕೂ ಯಾರಿಗೂ ಸಿಗುವುದಿಲ್ಲ.

    • ಡೇಟಾವನ್ನು ಶಾಶ್ವತವಾಗಿ ಅಳಿಸುವ ವಿಧಾನ  whats app Deta delete method
      ಮೊದಲು ಐಒಎಸ್ (IOS) ಅಥವಾ ಆಂಡ್ರಾಯ್ಡ್  (android )ಸ್ಮಾರ್ಟ್‌ಫೋನ್‌ನಲ್ಲಿ ವಾಟ್ಸಾಪ್ ಖಾತೆಯನ್ನು ತೆರೆಯಬೇಕು.

    • ಆಂಡ್ರಾಯ್ಡ್ ಬಳಕೆದಾರರು ವಾಟ್ಸಾಪ್ ಕನ್ಸೋಲ್‌ನ ಮೇಲಿನ ಬಲ ಮೂಲೆಯಲ್ಲಿ ಟ್ಯಾಪ್ ಮಾಡಬೇಕು

    • 'ಸೆಟ್ಟಿಂಗ್ಸ್' (Settings) ಆಯ್ಕೆಗೆ ಹೋಗಬೇಕು. ಬಳಿಕ ಅಲ್ಲಿ ಅಕೌಂಟ್​​ ('Account) ಆಯ್ಕೆಯನ್ನು ಕ್ಲಿಕ್​ ಮಾಡಬೇಕು.

    • ಬಳಿಕ ಅದರಲ್ಲಿ ನನ್ನ ಖಾತೆಯನ್ನು ಅಳಿಸಿ (Delete My Account) ಅನ್ನು ಕ್ಲಿಕ್​ ಮಾಡಬೇಕು.

    • ಈ ವೇಳೆ ಬಳಕೆದಾರರು ತಮ್ಮ ಫೋನ್ ಸಂಖ್ಯೆಯನ್ನು ಹೊಸ ಪುಟದಲ್ಲಿ ನಮೂದಿಸಿಬೇಕು, ಅಲಲಿ ನನ್ನ ಖಾತೆಯನ್ನು ಅಳಿಸಿ ಖಾತೆಯನ್ನು ಮತ್ತೊಮ್ಮೆ ಕ್ಲಿಕ್​ ಮಾಡಬೇಕು.

    • ನಿಮ್ಮ ವಾಟ್ಸಾಪ್​ ಖಾತೆ ಅಳಿಸುವ ಮೊಲದು ಯಾವ ಕಾರಣಕ್ಕಾಗಿ ನೀವು ವಾಟ್ಸಾಪ್​ ಬಿಡುತ್ತಿದ್ದೀರಾ ಎಂಬುದನ್ನು ಹೇಳಬೇಕು.

    • ಕಡೆಯದಾಗಿ ನನ್ನ ಖಾತೆಯನ್ನು ಅಳಿಸು ಎಂಬ ಆಯ್ಕೆಯನ್ನು ಮತ್ತೊಮ್ಮೆ ಕ್ಲಿಕ್​ ಮಾಡಬೇಕು.

    • ಈ ರೀತಿ ಕ್ರಮ ಅನುಸರಿಸಿದರೆ, ನಿಮ್ಮ ವಾಟ್ಸಾಪ್​ ಖಾತೆಯ ಡೇಟಾ ಶಾಶ್ವತವಾಗಿ ಅಳಿಸಿ ಹೋಗುತ್ತದೆ.

    • ಇದೇ ಲಕ್ಷಣಗಳನ್ನು ಕೂಡ ನಾವು ಮೆಸೆಂಜರ್ ಮತ್ತು ಪೋಸ್ಟ್‌ಗಳು, ಇನ್‌ಸ್ಟಾಗ್ರಾಮ್ ಡಿಎಮ್‌ಗಳು, ಟ್ವಿಟರ್ ಡಿಎಂಗಳು ಮತ್ತು ಐಮೆಸೇಜ್‌ಗಳಲ್ಲಿ ಕೂಡ ಕಾಣಬಹುದಾಗಿದೆ.



    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದು ಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
    Published by:Seema R
    First published: