Whatsapp Web Screenshot: ವಾಟ್ಸಾಪ್​​​ ವೆಬ್ ಚಾಟ್​​​ನ ಫುಲ್‌ ಪೇಜ್ ಸ್ಕ್ರೀನ್‌ಶಾಟ್ ತೆಗೆಯುವುದು ಹೇಗೆ? ಇಲ್ಲಿದೆ ಸುಲಭ ವಿಧಾನ

ಮೈಕ್ರೋಸಾಫ್ಟ್ ಎಡ್ಜ್ (Microsoft Edge) ನಲ್ಲಿ ಪೂರ್ತಿ ಪುಟದ ಸ್ಕ್ರೀನ್‌ಶಾಟ್ ಅನ್ನು ನಾವು ತೆಗೆದು ಕೊಳ್ಳಬಹುದಾಗಿದೆ. Shift+Ctrl+S ಒತ್ತಿರಿ ಮತ್ತು ಅಲ್ಲಿ ಇರುವಂತಹ ಪೂರ್ತಿ ಪುಟದ ಸ್ಕ್ರೀನ್‌‌ಶಾಟ್ (Full Page screenshot option) ಆಯ್ಕೆಯನ್ನು ಒತ್ತಿರಿ.

WhatsApp

WhatsApp

  • Share this:

    ಇಂದಿನ ದಿನಗಳಲ್ಲಿ ಯಾರ ಮೊಬೈಲ್ ಫೋನ್‌ನಲ್ಲಿ ವಾಟ್ಸಾಪ್​​ ಇರುವುದಿಲ್ಲ ಹೇಳಿ? ವಾಟ್ಸಾಪ್ ಬಳಸದೇ ಇರುವವರ ಸಂಖ್ಯೆ ಬಹಳ ಕಮ್ಮಿ ಎಂದೇ ಹೇಳಬಹುದು. ಈ ವಾಟ್ಸಾಪ್ ನಮಗೆ ತುರ್ತು ಪರಿಸ್ಥಿತಿಯಲ್ಲಿ ಎಷ್ಟು ಮುಖ್ಯವೋ, ಅದೇ ರೀತಿ ನಾವು ಕೆಲಸ ಮಾಡುತ್ತಾ ಇದ್ದಾಗ ಸಂದೇಶಗಳಿಂದ ಉಂಟಾಗುವ ಕಿರಿಕಿರಿ ಕೆಲವೊಮ್ಮೆ ಸಹಿಸಲು ಅಸಾಧ್ಯವಾಗಿರುತ್ತದೆ ಎಂದು ಹೇಳಿದರೆ ತಪ್ಪಾಗಲಾರದು. ನೀವು ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ಇಲ್ಲವೇ ನೀವು ಬ್ಯುಸಿ ಇದ್ದಾಗ ನಿಮ್ಮ ಮೊಬೈಲ್ ಫೋನ್‌ಗೆ ಪದೇ ಪದೇ  ವಾಟ್ಸಾಪ್ ಸಂದೇಶಗಳು ಬಂದಾಗ, ಹಲವಾರು ಬಾರಿ ಫೋನ್ ಅನ್ನು ಪರಿಶೀಲನೆ ಮಾಡಬೇಕಾಗುತ್ತದೆ ಹಾಗೂ ಸಂದೇಶಗಳಿಗೆ ಪ್ರತ್ಯುತ್ತರಿಸುವ ತುರ್ತು ಸಂದರ್ಭ ಕೂಡ ಉಂಟಾಗುತ್ತದೆ.


    ಹಾಗಾದಾಗ ನಮ್ಮ ಕೆಲಸಕ್ಕೆ ತೊಂದರೆಯಾಗುವುದು ಸಹಜವಾಗಿರುತ್ತದೆ. ನಿಮ್ಮ ಕೆಲಸದ ನಡುವೆ ಸಂದೇಶ ಬಂದಾಗ ಫೋನ್ ಅನ್ನು ಕೈಗೆತ್ತಿಕೊಳ್ಳುವ ಪ್ರಮೇಯವನ್ನು ತಪ್ಪಿಸಲೆಂದೇ ನಾವು ಕೆಲಸ ಮಾಡುತ್ತಿರುವ ಲ್ಯಾಪ್‌ಟಾಪ್ ಅಥವಾ ಕಂಪ್ಯೂಟರ್ ನಲ್ಲಿ ವಾಟ್ಸಾಪ್ ಅನ್ನು ವಾಟ್ಸಾಆ್ಯಪ್ ವೆಬ್ (WhatsApp Web) ನಲ್ಲಿ ತೆರೆಯಬಹುದಾಗಿದೆ. ಅನೇಕರು ತಾವು ಕೆಲಸ ಮಾಡುತ್ತಿರುವಾಗ ವಾಟ್ಸಾಆ್ಯಪ್ ಅನ್ನು ವೆಬ್‌ನಲ್ಲಿಯೇ ತೆರೆದಿಟ್ಟುಕೊಳ್ಳುತ್ತಾರೆ.


    ಸ್ಕ್ರೀನ್​ಶಾಟ್​ ತೆಗೆಯಲು ಅವಕಾಶವಿಲ್ಲ..!

    ಯಾವುದಾದರೂ ಸಂದೇಶಗಳು ಬಂದರೂ ಕಂಪ್ಯೂಟರ್‌ನ ದೊಡ್ಡ ಪರದೆಯ ಮೇಲೆ ಅದನ್ನು ನೋಡಬಹುದು, ಓದಬಹುದು ಹಾಗೆಯೇ ಬೇರೆಯವರಿಗೆ ಸಂದೇಶವನ್ನು ಸಹ ಕಳುಹಿಸಬಹುದು. ಆದರೆ  ವಾಟ್ಸಾಪ್ ‌ನಲ್ಲಿರುವ ಸಂದೇಶಗಳ ಪೂರ್ತಿ ಪುಟವನ್ನು ನಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಸ್ಕ್ರೀನ್‌ಶಾಟ್ ತೆಗೆಯುವಂತೆ ವಾಟ್ಸಾಆ್ಯಪ್ ವೆಬ್‌ನಲ್ಲಿ ತೆಗೆದುಕೊಳ್ಳಲಾಗುವುದಿಲ್ಲ. ಏಕೆಂದರೆ ವಿಂಡೋಸ್ 10 (Windows 10) ರಲ್ಲಿ ನಮಗೆ ಸ್ಕ್ರೋಲ್ ಮಾಡುತ್ತಾ ಸ್ಕ್ರೀನ್‌ಶಾಟ್ ತೆಗೆದುಕೊಳ್ಳುವ ಅವಕಾಶವಿಲ್ಲ.


    ಇದನ್ನೂ ಓದಿ: Whatsapp Cashback: ವಾಟ್ಸಾಪ್ ಬಳಸೋರಿಗೆ ಸಿಗಲಿದೆ ಹಣ.. ಏನಿದು ಹೊಸ ಬಂಪರ್ ಆಫರ್ ತಿಳಿಯಿರಿ

    ವಿಂಡೋಸ್ 10 ರಲ್ಲಿ ಈ ಅವಕಾಶ ಇಲ್ಲದೆ ಹೋದರೂ ಬೇರೆ ವಿಧಾನಗಳಿವೆ. ಈ ವಿಧಾನಗಳನ್ನು ಅನುಸರಿಸುವುದರ ಮೂಲಕ ನಿಮ್ಮ  ವಾಟ್ಸಾಪ್ ‌ನಲ್ಲಿರುವ ಸಂದೇಶಗಳ ಪೂರ್ತಿ ಪುಟದ ಸ್ಕ್ರೀನ್‌ಶಾಟ್ ಅನ್ನು ವಾಟ್ಸಾಆ್ಯಪ್ ವೆಬ್‌ನಲ್ಲಿ ತೆಗೆದುಕೊಳ್ಳಬಹುದು. ಸ್ಕ್ರೀನ್‌ಶಾಟ್ ತೆಗೆಯುವುದು ಹೇಗೆ ಎಂಬುದನ್ನು ಈ ಕೆಳಗಿನ ವಿಧಾನಗಳ ಮೂಲಕ ತಿಳಿದುಕೊಳ್ಳೋಣ.


    ವಿಧಾನ 1: ಮೈಕ್ರೋಸಾಫ್ಟ್ ಎಡ್ಜ್ (Microsoft Edge) ಬಳಸಿ:


    ಮೈಕ್ರೋಸಾಫ್ಟ್ ಎಡ್ಜ್ (Microsoft Edge) ನಲ್ಲಿ ಪೂರ್ತಿ ಪುಟದ ಸ್ಕ್ರೀನ್‌ಶಾಟ್ ಅನ್ನು ನಾವು ತೆಗೆದು ಕೊಳ್ಳಬಹುದಾಗಿದೆ. Shift+Ctrl+S ಒತ್ತಿರಿ ಮತ್ತು ಅಲ್ಲಿ ಇರುವಂತಹ ಪೂರ್ತಿ ಪುಟದ ಸ್ಕ್ರೀನ್‌‌ಶಾಟ್ (Full Page screenshot option) ಆಯ್ಕೆಯನ್ನು ಒತ್ತಿರಿ. ವಾಟ್ಸಾಆ್ಯಪ್ ಸಂದೇಶಗಳ ಪೂರ್ತಿ ಪುಟವನ್ನು ಸ್ಕ್ರೋಲ್ ಮಾಡಿ ನಂತರ ಸೇವ್ (Save) ಮಾಡಿರಿ.


    ವಿಧಾನ 2: ಕ್ರೋಮ್ ಎಕ್ಸ್‌ಟೆನ್ಶನ್ (Chrome Extension) ಬಳಸಿ:


    ಕ್ರೋಮ್ (Chrome) ನಲ್ಲಿ ನೀವು ಈ ಸಂದೇಶದ ಪೂರ್ತಿ ಪುಟದ ಸ್ಕ್ರೀನ್‌ಶಾಟ್ ತೆಗೆದುಕೊಳ್ಳಲು ಅನೇಕ ರೀತಿಯ ಗೂಗಲ್ ಕ್ರೋಮ್ ಎಕ್ಸ್‌ಟೆನ್ಶನ್ (Google Chrome extensions) ಗಳನ್ನು ಹೊಂದಿದೆ. ಕ್ರೋಮ್ ವೆಬ್ ಸ್ಟೋರ್ (Chrome Web Store) ಗೆ ಹೋಗಿ ಪೂರ್ತಿ ಪುಟದ ಸ್ಕ್ರೀನ್‌ಶಾಟ್ ಪಡೆಯಲು ಸಹಾಯಕವಾಗುವ ಅನೇಕ ಎಕ್ಸ್‌ಟೆನ್ಶನ್ಗಳು ಲಭ್ಯವಿರುತ್ತವೆ.


    ಇದನ್ನೂ ಓದಿ: ನಿಮ್ಮ Facebookನಿಂದ ಒಳ್ಳೊಳ್ಳೆ ಫೋಟೋ ಕದಿಯದಂತೆ ಮಾಡಲು ಈ ರೀತಿ ಮಾಡಿ

    ‘ಗೋ ಫುಲ್ ಪೇಜ್’, ಸ್ಕ್ರೀನ್‌ಶಾಟ್ ಟೂಲ್ ಅಥವಾ ಸ್ಕ್ರೀನ್‌ಶಾಟ್ ಮಾಸ್ಟರ್ ಯಾವುದಾದರೂ ಒಂದನ್ನು ನಿಮ್ಮ ಕ್ರೋಮ್ ಗೆ ಸೇರಿಸಿಕೊಳ್ಳಿರಿ. ಆನಂತರ ವಾಟ್ಸಾಪ್ ವೆಬ್ ತೆರೆಯಿರಿ ಮತ್ತು ಸಂದೇಶಗಳ ಪೂರ್ತಿ ಪುಟದ ಸ್ಕ್ರೀನ್‌ಶಾಟ್ ಆಯ್ಕೆಯನ್ನು ಎಕ್ಸ್‌ಟೆನ್ಶನ್‌ನಲ್ಲಿ ಒತ್ತಿರಿ.

    Published by:Kavya V
    First published: