ಭಾರತೀಯ ಟೆಲಿಕಾಂ ಕಂಪೆನಿಗಳಲ್ಲಿ (Indian Telecom Company) ಬಹಳಷ್ಟು ಗ್ರಾಹಕರನ್ನು ಹೊಂದಿಕೊಂಡು ಜಿಯೋ ಅಗ್ರಸ್ಥಾನವನ್ನು ಪಡೆದುಕೊಂಡಿದೆ. ಇದಕ್ಕೆ ಪ್ರಬಲ ಪೈಪೋಟಿ ನೀಡುತ್ತಿರುವ ಒಂದು ಕಂಪೆನಿ ಇದ್ದರೆ ಅದು ಏರ್ಟೆಲ್ (Airtel). ಈ ಕಂಪೆನಿ ತನ್ನ ಗ್ರಾಹಕರನ್ನು ತನ್ನತ್ತ ಆಕರ್ಷಿಸುವ ಉದ್ದೇಶದಿಂದ ಅಗ್ಗದ ಬೆಲೆಯ ರೀಚಾರ್ಜ್ ಯೋಜನೆಗಳನ್ನು ಬಿಡುಗಡೆ ಮಾಡುತ್ತಲೇ ಇದೆ. ಈ ಮಧ್ಯೆ ಇದೀಗ ಏರ್ಟೆಲ್ ಈ ಬಾರಿ ತನ್ನ ರೀಚಾರ್ಜ್ ದರವನ್ನು (Recharge Plan) ಏರಿಕೆ ಮಾಡಿದ್ದು, ಗ್ರಾಹಕರಿಗೆ ಶಾಕಿಂಗ್ ನ್ಯೂಸ್ ಅನ್ನು ನೀಡಿತ್ತು. ಆದರೆ ಈಗ ಮತ್ತೆ ಗುಡ್ನ್ಯೂಸ್ ಅನ್ನು ನೀಡಿದೆ. ಈ ಯೋಜನೆ ಅಗ್ಗದ ಬೆಲೆಯನ್ನು ಹೊಂದಿದ್ದು, ಇದು ಒಂದು ತಿಂಗಳ ವ್ಯಾಲಿಡಿಟಿಯನ್ನು ಹೊಂದಿರುತ್ತದೆ.
ಏರ್ಟೆಲ್ ಇದೀಗ ತನ್ನ ಗ್ರಾಹಕರಿಗಾಗಿ 359 ರೂಪಾಯಿಯ ಹೊಸ ಯೋಜನೆಯನ್ನು ಪರಿಚಯಿಸಿದ್ದು, ಈ ಯೋಜನೆಯನ್ನು ರೀಚಾರ್ಜ್ ಮಾಡಿಕೊಂಡವರಿಗೆ 1 ತಿಂಗಳ ವ್ಯಾಲಿಡಿಟಿ ಅವಧಿಯನ್ನು ಪಡೆಯಬಹುದಾಗಿದೆ. ಈ ಪ್ಲ್ಯಾನ್ ಹೆಚ್ಚು ಡೇಟಾ ಬಯಸುವವರಿಗೆ, ಅಧಿಕ ಎಸ್‌ಎಮ್‌ಎಸ್ ಮಾಡುವವರಿಗೆ ಉತ್ತಮ ಆಯ್ಕೆಯಾಗಿದೆ.
28 ದಿನಗಳಿಂದ 1 ತಿಂಗಳಿಗೆ ವ್ಯಾಲಿಡಿಟಿ ವಿಸ್ತರಣೆ
ಏರ್ಟೆಲ್ ಕೆಲದಿನಗಳ ಹಿಂದೆ ಪರಿಚಯಿಸಿದ 359 ರೂಪಾಯಿಗಳ ರೀಚಾರ್ಜ್ ಪ್ಲ್ಯಾನ್ ಕೇವಲ 28 ದಿನಗಳಿಗೆ ಮಾತ್ರ ಮಾನ್ಯತೆಯನ್ನು ಹೊಂದಿತ್ತು. ಆದರೆ ಈ ಯೋಜನೆಯಲ್ಲಿ ಮಹತ್ವದ ಬದಲಾವಣೆಯಾಗಿದ್ದು, ಇದೀಗ ಈ ಯೋಜನೆಯನ್ನು ರೀಚಾರ್ಜ್ ಮಾಡಿಕೊಂಡವರಿಗೆ ಬರೋಬ್ಬರಿ 1 ತಿಂಗಳ ವ್ಯಾಲಿಡಿಟಿಯನ್ನು ಪಡೆಯಬಹುದು. ಹಾಗೆಯೇ ಇನ್ನೂ ಹಲವಾರು ಪ್ರಯೋಜನಗಳು ಇದರಲ್ಲಿ ಲಭ್ಯವಿದೆ.
ಏನೆಲ್ಲಾ ಪ್ರಯೋಜನಗಳಿವೆ?
ಏರ್ಟೆಲ್ ಪರಿಚಯಿಸಿದ 359 ರೂಪಾಯಿಗಳ ರೀಚಾರ್ಜ್ ಪ್ಲ್ಯಾನ್‌ನಲ್ಲಿ ಗ್ರಾಹಕರು ದಿನವೂ 2ಜಿಬಿ ಡೇಟಾ ಸೌಲಭ್ಯವನ್ನು ಪಡೆಯಬಹುದಾಗಿದ್ದು, ಇದರೊಂದಿಗೆ 100 ಎಸ್‌ಎಮ್‌ಎಸ್ ಸೌಲಭ್ಯ ಸಹ ಲಭ್ಯವಿದೆ. ಹಾಗೆಯೇ ಈ ಯೋಜನೆಯಲ್ಲಿ ಗ್ರಾಹಕರು ಯಾವುದೇ ನೆಟ್ವರ್ಕ್ಗೆ ಅನ್ಲಿಮಿಟೆಡ್ ಕಾಲ್ ಮಾಡುವ ಸೌಲಭ್ಯ ಸಹ ದೊರೆಯುತ್ತದೆ. ಇನ್ಮುಂದೆ ಬಳಕೆದಾರರು ಈ ಯೋಜನೆಯಲ್ಲಿ ಒಟ್ಟಾರೆಯಾಗಿ 60ಜಿಬಿ ಡೇಟಾ ಬಳಕೆ ಮಾಡಿಕೊಳ್ಳಬಹುದು. ಹಾಗೆಯೇ 31 ದಿನಗಳಿರುವ ತಿಂಗಳಲ್ಲಿ 62ಜಿಬಿ ಡೇಟಾ ಸೌಲಭ್ಯ ಲಭ್ಯವಾಗಲಿದೆ.
ಇದರೊಂದಿಗೆ ಎಕ್ಸ್‌ಸ್ಟ್ರೀಮ್ ಆ್ಯಪ್, ಅಪೋಲೋ 24/7 ಸರ್ಕಲ್, ಫಾಸ್ಟ್ಯಾಗ್ನಲ್ಲೊ 100 ರೂಪಾಯಿ ಕ್ಯಾಶ್‌ಬ್ಯಾಕ್, ಉಚಿತ ಹೆಲೋಟ್ಯೂನ್ಸ್ ಮತ್ತು ಉಚಿತ ವಿಂಕ್ ಮ್ಯೂಸಿಕ್ ಚಂದಾದಾರಿಕೆಯೊಂದಿಗೆ ಇನ್ನೂ ಹಲವಾರು ಪ್ರಯೋಜನಗಳು ಇದರಲ್ಲಿ ಪಡೆಯಬಹುದಾಗಿದೆ.
ಟ್ರಾಯ್ ಸಂಸ್ಥೆಯಿಂದ ಆದೇಶ
ಏರ್ಟೆಲ್ನ 359 ರೂಪಾಯಿ ರೀಚಾರ್ಜ್ ಪ್ಲ್ಯಾನ್‌ನಲ್ಲಿ ಗ್ರಾಹಕರು ಹೆಚ್ಚಿನ ಡೇಟಾ ಪಡೆಯಬಹುದು. ಆದರೆ ಇದು ಒಂದು ತಿಂಗಳಿಗೆ ಉತ್ತಮವಾದ ಆಯ್ಕೆಯಾಗಿದೆ. ಈ ರೀತಿಯ ಒಂದು ತಿಂಗಳ ವ್ಯಾಲಿಡಿಟಿ ಹೊಂದಿರುವ ಯೋಜನೆಗಳನ್ನೇ ಗ್ರಾಹಕರು ಬಯಸುತ್ತಿದ್ದು, ಇದನ್ನು ಏರ್ಟೆಲ್ ವರದಿ ಮಾಡಿದೆ. ಇದಕ್ಕಾಗಿ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ ಹೊಸ ಆದೇಶವನ್ನು ಹೊರಡಿಸಿದ್ದು, ಇದರಲ್ಲಿ 28 ದಿನಗಳ ಬದಲಾಗಿ 30 ದಿನಗಳು ಅಥವಾ 1 ತಿಂಗಳ ವ್ಯಾಲಿಡಿಟಿಯೊಂದಿಗೆ ಯೋಜನೆಗಳನ್ನು ಪರಿಚಯಿಸಬೇಕೆಂದು ತಿಳಿಸಿದೆ. ಈ ಹೇಳಿಕೆಗಾಗಿಯೇ ಏರ್ಟೆಲ್ ಈ ಬದಲಾವಣೆಯನ್ನು ಮಾಡಿರಬಹುದು ಎಂದು ಹೇಳಲಾಗಿದೆ.
ಏರ್ಟೆಲ್ನ 549 ರೂಪಾಯಿ ರೀಚಾರ್ಜ್ ಪ್ಲ್ಯಾನ್
ಇನ್ನು ಏರ್ಟೆಲ್ನ ಈ 359 ರೂಪಾಯಿಗಳ ರೀಚಾರ್ಜ್ ಪ್ಲ್ಯಾನ್ ಬೇಡ ಎಂದವರು ಇದರ ಬದಲಾಗಿ 549 ರೂಪಾಯಿಗಳ ರೀಚಾರ್ಜ್ ಅನ್ನು ಮಾಡಿಕೊಳ್ಳಬಹುದಾಗಿದೆ. ಇದರಲ್ಲಿ ಗ್ರಾಹಕರು 359 ರೂಪಾಯಿಯಂತೇಯೇ ದೈನಂದಿನ 2ಜಿಬಿ ಡೇಟಾವನ್ನು ಪಡೆಯಬಹುದು. ಆದರೆ ವಿಶೇಷ ಏನೆಂದರೆ ಇದರಲ್ಲಿ ವ್ಯಾಲಿಡಿಟಿ ಅವಧಿಯು ಒಟ್ಟು 2 ತಿಂಗಳುವರೆಗೆ ಇರುತ್ತದೆ.
ಇದನ್ನೂ ಓದಿ: ಬಿಡುಗಡೆಗೂ ಮೊದಲೇ ಲೀಕ್ ಆಯ್ತು ಕೋಕಾ ಕೋಲಾ ಮೊಬೈಲ್ ಫೀಚರ್ಸ್! ಹೀಗಿದೆ ನೋಡಿ
ಇನ್ನು 359 ರಂತೆ 2 ತಿಂಗಳು ರೀಚಾರ್ಜ್ ಮಾಡಿದರೆ ಒಟ್ಟು 718 ರೂಪಾಯಿ ಹಣವನ್ನು ಪಾವತಿಸಬೇಕು. ಆದರೆ 549 ರೂಪಾಯಿ ರೀಚಾರ್ಜ್ ಮೂಲಕ 169 ರೂಪಾಯಿಯನ್ನು ಉಳಿಸಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ