Best Smartphones: ಈ ಸ್ಮಾರ್ಟ್​​ಫೋನ್​ಗಳನ್ನು ಖರೀದಿಸಿ, ಡಿಸ್​ಪ್ಲೇ ಬಗ್ಗೆ ಟೆನ್ಷನ್ನೇ ಇರಲ್ಲ

ಬೆಸ್ಟ್​ ಸ್ಮಾರ್ಟ್​​ಫೋನ್ಸ್

ಬೆಸ್ಟ್​ ಸ್ಮಾರ್ಟ್​​ಫೋನ್ಸ್

ಯಾರೇ ಆಗಲಿ ಹೊಸ ಸ್ಮಾರ್ಟ್​​ಫೋನ್​ಗಳನ್ನು ಖರೀದಿಸುವ ಮೊದಲು ಅದರ ಫೀಚರ್ಸ್​ ಅನ್ನು ನೋಡುತ್ತಾರೆ. ನಂತರ ಅದರ ಬೆಲೆ ನೋಡಿ ಖರೀದಿ ಮಾಡುತ್ತಾರೆ. ಫೀಚರ್ಸ್​​ಗಳಲ್ಲಿ  ಮುಖ್ಯವಾಗಿ ಡಿಸ್​​ಪ್ಲೇಗಳ ವೈಶಿಷ್ಟ್ಯಗಳು ಸಹ ಮುಖ್ಯವಾಗುತ್ತದೆ. ಹಾಗಿದ್ರೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಉತ್ತಮ ಡಿಸ್​ಪ್ಲೇ ಹೊಂದಿದ ಸ್ಮಾರ್ಟ್​​ಫೋನ್​ಗಳು ಯಾವುದೆಲ್ಲಾ ಇದೆ ಎಂದು ಈ ಲೇಖನದಲ್ಲಿ ತಿಳಿಯಿರಿ.

ಮುಂದೆ ಓದಿ ...
  • Share this:

    ಸ್ಮಾರ್ಟ್​​ಫೋನ್​ಗಳ (Smartphones) ಬಳಕೆ ಇತ್ತೀಚೆಗೆ ವ್ಯಾಪಕವಾಗಿ ಬೆಳವಣಿಗೆಯಾಗಿದೆ. ಮೊಬೈಲ್​​ಗಳು ಮಾನವರ ಪ್ರಮುಖ ಅಂಶವಾಗಿಬಿಟ್ಟಿದೆ. ಇದನ್ನೇ ಗಮನಿಸಿದ ಟೆಕ್​ ಕಂಪೆನಿಗಳು (Tech Companies) ಮಾರುಕಟ್ಟೆಗೆ ಗುಣಮಟ್ಟದ ಸ್ಮಾರ್ಟ್​​ಫೋನ್​ಗಳನ್ನು ಪರಿಚಯಿಸುತ್ತಿರುತ್ತದೆ. ವಿಭಿನ್ನ ವಿನ್ಯಾಸಗಳನ್ನು, ಫೀಚರ್ಸ್​​ಗಳನ್ನು ಒಳಗೊಂಡು ಈ ಮೊಬೈಲ್​ಗಳು ಗ್ರಾಹಕರನ್ನು ಸೆಳೆಯುತ್ತದೆ. ಇನ್ನು ಇದರಲ್ಲಿ ಡಿಸ್​ಪ್ಲೇ ವಿಚಾರಕ್ಕೆ ಬರುವುದಾದರೆ ಈಗೆಲ್ಲಾ ಅಮೋಲ್ಡ್ (AMOLED Display)​ ಮಾದರಿಯ ಡಿಸ್​​ಪ್ಲೇಗಳನ್ನೇ ಕಾಣಬಹುದಾಗಿದೆ. ಇದು ಹೆಚ್ಚಿನ ರೆಸಲ್ಯೂಶನ್​, ಗುಣಮಟ್ಟದ್ದಾಗಿರುವುದರಿಂದ ಬಳಕೆದಾರರಿಗೂ ಬಹಳಷ್ಟು ಸಹಕಾರಿಯಾಗುತ್ತದೆ. 


    ಯಾರೇ ಆಗಲಿ ಹೊಸ ಸ್ಮಾರ್ಟ್​​ಫೋನ್​ಗಳನ್ನು ಖರೀದಿಸುವ ಮೊದಲು ಅದರ ಫೀಚರ್ಸ್​ ಅನ್ನು ನೋಡುತ್ತಾರೆ. ನಂತರ ಅದರ ಬೆಲೆ ನೋಡಿ ಖರೀದಿ ಮಾಡುತ್ತಾರೆ. ಫೀಚರ್ಸ್​​ಗಳಲ್ಲಿ  ಮುಖ್ಯವಾಗಿ ಡಿಸ್​​ಪ್ಲೇಗಳ ವೈಶಿಷ್ಟ್ಯಗಳು ಸಹ ಮುಖ್ಯವಾಗುತ್ತದೆ. ಹಾಗಿದ್ರೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಉತ್ತಮ ಡಿಸ್​ಪ್ಲೇ ಹೊಂದಿದ ಸ್ಮಾರ್ಟ್​​ಫೋನ್​ಗಳು ಯಾವುದೆಲ್ಲಾ ಇದೆ ಎಂದು ಈ ಲೇಖನದಲ್ಲಿ ತಿಳಿಯಿರಿ.


    ಸ್ಯಾಮ್​ಸಂಗ್ ಗ್ಯಾಲಕ್ಸಿ ಎಸ್


    ಸ್ಯಾಮ್​ಸಂಗ್​ ಕಂಪೆನಿಯಿಂದ ಬಿಡುಗಡೆಯಾದ ಈ ಭಾರೀ ನಿರೀಕ್ಷಿತ ಸ್ಮಾರ್ಟ್​​ಫೋನ್​ಗಳಲ್ಲಿ ಇದೂ ಸಹ ಒಂದು. ಈ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್​23 ಸ್ಮಾರ್ಟ್‌ಫೋನ್‌ 6.1 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡೈನಾಮಿಕ್‌ ಅಮೋಲ್ಡ್​ 2X ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 120Hz ರಿಫ್ರೆಶ್‌ ರೇಟ್‌ ಬೆಂಬಲಿಸಲಿದ್ದು, 48Hz ತನಕ ಇಳಿಸಬಹುದಾಗಿದೆ.


    ಇದನ್ನೂ ಓದಿ: ಲಾವಾ ಕಂಪೆನಿಯ ಹೊಸ ಸ್ಮಾರ್ಟ್​​ಫೋನ್​ ಲಾಂಚ್​! ಹೇಗಿದೆ ಫೀಚರ್ಸ್​?


    ಇನ್ನು ಡಿಸ್‌ಪ್ಲೇ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ಪ್ರೊಟೆಕ್ಷನ್‌ ಅನ್ನು ಪಡೆದುಕೊಂಡಿದೆ. ಇದು ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 8 Gen 2 SoC ಪ್ರೊಸೆಸರ್‌ ವೇಗವನ್ನು ಹೊಂದಿದ್ದು, ಆಂಡ್ರಾಯ್ಡ್‌ 13 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 8ಜಿಬಿ ರ್‍ಯಾಮ್ ಮತ್ತು 512ಜಿಬಿ ಇಂಟರ್ನಲ್​ ಸ್ಟೋರೇಜ್‌ ಆಯ್ಕೆಯನ್ನು ಹೊಂದಿದೆ.


    ರೆಡ್​​ಮಿ ನೋಟ್​​ 12 ಪ್ರೋ ಸ್ಮಾರ್ಟ್​​ಫೋನ್​


    ರೆಡ್​​ಮಿ ನೋಟ್​​ 12 ಪ್ರೋ ಸ್ಮಾರ್ಟ್​​ಫೋನ್​ 6.67 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 2,400 x 1,080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದಿದೆ. ಇದು 120Hz ರಿಫ್ರೆಶ್ ರೇಟ್ ಮತ್ತು 240Hz ಟಚ್ ಸ್ಯಾಂಪ್ಲಿಂಗ್ ರೇಟ್‌ ಅನ್ನು ಬೆಂಬಲಿಸಲಿದೆ. ಈ ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 1080 Sಎಸ್​ಓಸಿ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ.


    ಬೆಸ್ಟ್​ ಸ್ಮಾರ್ಟ್​​ಫೋನ್ಸ್


    ಹಾಗೆಯೇ 12ಜಿಬಿ ರ್‍ಯಾಮ್ ಮತ್ತು 256ಜಿಬಿ ಸ್ಟೊರೇಜ್‌ ಆಯ್ಕೆ ಹೊಂದಿದ್ದು, ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಒಳಗೊಂಡಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೆನ್ಸಾರ್​ ಸಾಮರ್ಥ್ಯದಲ್ಲಿದೆ. ಜೊತೆಗೆ ಈ ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯು 67W ವೇಗದ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ.


    ಒಪ್ಪೋ ರೆನೋ 8ಟಿ ಸ್ಮಾರ್ಟ್​​​ಫೋನ್​


    ಒಪ್ಪೋ ರೆನೋ 8ಟಿ ಸ್ಮಾರ್ಟ್​​​ಫೋನ್​ 6.7 ಇಂಚಿನ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ ಮೈಕ್ರೋ ಕರ್ವ್ಡ್ ಅಮೋಲ್ಡ್​​ ಡಿಸ್‌ಪ್ಲೇ ಆಗಿದೆ. ಇದು ಕ್ವಾಲ್ಕಾಮ್​​ ಸ್ನಾಪ್‌ಡ್ರಾಗನ್ 695 5ಜಿ ಎಸ್​​ಓಸಿ ಪ್ರೊಸೆಸರ್‌ ವೇಗವನ್ನು ಹೊಂದಿದ್ದು, ಇದು ಆಂಡ್ರಾಯ್ಡ್‌ 13 ಆಧಾರಿತ ಕಲರ್​​ಓಎಸ್​​ 13 ನಲ್ಲಿ ಕಾರ್ಯನಿರ್ವಹಿಸಲಿದೆ. ಜೊತೆಗೆ ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟಪ್​ ಅನ್ನು ಸಹ ಹೊಂದಿದ್ದು, ಇದರಲ್ಲಿ ಮುಖ್ಯ ಕ್ಯಾಮೆರಾ 108 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿದೆ. ಅಲ್ಲದೇ ಈ ಸ್ಮಾರ್ಟ್‌ಫೋನ್‌ 4,800mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಈ ಬ್ಯಾಟರಿಯು 67W ಸೂಪರ್‌ವೂಕ್‌ ವೇಗದ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ.




    ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್​23 ಅಲ್ಟ್ರಾ ಸ್ಮಾರ್ಟ್‌ಫೋನ್‌


    ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್​23 ಅಲ್ಟ್ರಾ ಸ್ಮಾರ್ಟ್‌ಫೋನ್‌ 6.8 ಇಂಚಿನ ಎಡ್ಜ್ ಕ್ಯೂಹೆಚ್​​ಡಿ+ ಡೈನಾಮಿಕ್ ಅಮೋಲ್ಡ್​ 2X ಡಿಸ್‌ಪ್ಲೇಯನ್ನು ಹೊಂದಿದೆ. ಹಾಗೆಯೇ ಇದು ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 8 ಜೆನ್‌ 2 ಎಸ್​ಓಸಿ ಪ್ರೊಸೆಸರ್​ ಸಾಮರ್ಥ್ಯದೊಂದಿಗೆ, ಇದು ಆಂಡ್ರಾಯ್ಡ್‌ 13 ಓಎಸ್‌ ಮೂಲಕ ಕಾರ್ಯನಿರ್ವಹಿಸುತ್ತದೆ. ಇದರೊಂದಿಗೆ ಕ್ವಾಡ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದ್ದು, ಮುಖ್ಯ ಕ್ಯಾಮೆರಾ 200 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಒಳಗೊಂಡಿದೆ. ಇನ್ನು ಈ ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 45W ವೈರ್ಡ್ ಚಾರ್ಜಿಂಗ್ ಸೌಲಭ್ಯ ಪಡೆದಿದೆ.

    Published by:Prajwal B
    First published: