iPhone price: ಐಫೋನ್​ ಹೊಸ ಸಿರೀಸ್ ಫೋನ್​ಗಳ ಬೆಲೆ ಪ್ರಕಟ​

ಐಫೋನ್​ 11 ಫೋನ್​ ಬೆಲೆಯನ್ನು 53,800 ರೂ.,  ಐಫೋನ್​ 11 ಪ್ರೊ ಫೋನ್​ ಬೆಲೆಯನ್ನು 72,000 ರೂ. ಹಾಗೂ ಐಪೋನ್​ 11 ಪ್ರೊ ಮ್ಯಾಕ್ಸ್​ ಫೋನ್​ ಬೆಲೆಯನ್ನು 79,000 ರೂ. ಇರಲಿದೆ ಎಂದು ಹೇಳಿದೆ.

news18-kannada
Updated:September 10, 2019, 6:02 PM IST
iPhone price: ಐಫೋನ್​ ಹೊಸ ಸಿರೀಸ್ ಫೋನ್​ಗಳ ಬೆಲೆ ಪ್ರಕಟ​
ಐಫೋನ್​
  • Share this:
ಆ್ಯಪಲ್​ ಕಂಪೆನಿಯ ಸಿರೀಸ್​ ಸ್ಮಾರ್ಟ್​ಫೋನ್​ಗಳಾದ ಐಫೋನ್​ 11, ಐಫೋನ್​ 11 ಪ್ರೊ, ಐಫೋನ್​ 11 ಪ್ರೊ ಮ್ಯಾಕ್ಸ್​ ಸ್ಮಾರ್ಟ್​ಫೋನ್​ ಇಂದು ಬಿಡುಗಡೆಯಾಗಲಿದೆ. ಕ್ಯಾಲಿಫೋರ್ನಿಯಾದ ಸ್ಟೀವ್​ ಜಾಬ್ಸ್​ ಥಿಯೇಟರ್​​ನಲ್ಲಿ ಭಾರತೀಯ ಕಾಲಮಾನ ಪ್ರಕಾರ ರಾತ್ರಿ 10:30ಕ್ಕೆ ರಿಲೀಸ್​ ಆಗಲಿದೆ.

ಆ್ಯಪಲ್​ ಸಿರೀಸ್​ ​ಫೋನ್​ಗಳು ಬಿಡುಗಡೆಗೂ ಮುನ್ನ ಚೀನಾದ ಸೋಷಿಯಲ್​ ಮೀಡಿಯಾ ನೆಟ್​ವರ್ಕ್​ ವೈಬೋ ಈ ನೂತನ​ ಫೋನ್​ಗಳ ಬೆಲೆಯನ್ನು ಲೀಕ್​​ ಮಾಡಿದೆ. ಐಫೋನ್​ 11 ಫೋನ್​ ಬೆಲೆಯನ್ನು 53,800 ರೂ.,  ಐಫೋನ್​ 11 ಪ್ರೊ ಫೋನ್​ ಬೆಲೆಯನ್ನು 72,000 ರೂ. ಹಾಗೂ ಐಪೋನ್​ 11 ಪ್ರೊ ಮ್ಯಾಕ್ಸ್​ ಫೋನ್​ ಬೆಲೆಯನ್ನು 79,000 ರೂ. ಇರಲಿದೆ ಎಂದು ಹೇಳಿದೆ.

ಮಾರುಕಟ್ಟೆಗೆ ಕಾಲಿರಿಸುತ್ತಿರುವ ಐಫೋನ್​ 11 ಪ್ರೊ 5.8 ಇಂಚಿನ ಒಎಲ್​ಇಡಿ ಸ್ಕ್ರೀನ್​ ಹೊಂದಿದೆ, ಐಫೋನ್​ ಪ್ರೊ ಮ್ಯಾಕ್​ 6.8 ಇಂಚಿನ ಒಎಲ್​ಇಡಿ ಸ್ಕ್ರೀನ್​ ಅಳವಡಿಸಲಾಗಿದೆ. ಇವೆರಡು​ ಫೋನ್​ಗಳಿಗೆ ಆ್ಯಪಲ್​ ಪೆನ್ಸಿಲ್​ ಸಪೋರ್ಟ್​ ನೀಡುವಂತೆ ತಯಾರಿಸಲಾಗಿದೆ. ಜೊತೆಗೆ ಮುಂಭಾಗದಲ್ಲಿ 12 ಮೆಗಾಫಿಕ್ಸೆಲ್​ ಕ್ಯಾಮೆರಾವನ್ನು ನೀಡಲಾಗಿದೆ. ಫೋನ್​ ಹಿಂಭಾಗದಲ್ಲಿ 12 ಮೆಗಾಫಿಕ್ಸೆಲ್​​​ ಟ್ರಿಪಲ್​​ ಕ್ಯಾಮೆರಾವನ್ನು ನೀಡಲಾಗಿದೆ. ಐಫೋನ್​ 11 ಪ್ರೊ ​ಫೋನ್​ನಲ್ಲಿ 3,190mAh ​ ಬ್ಯಾಟರಿ, ಐಫೋನ್​ 11 ಪ್ರೊ ಮ್ಯಾಕ್ಸ್​ ಫೋನ್​ 3,500mAh​ ಬ್ಯಾಟರಿಯನ್ನು ನೀಡಲಾಗಿದೆ.ಇದನ್ನೂ ಓದಿ: Swiggy Go: ಬೆಂಗಳೂರಿನಲ್ಲಿದ್ದಾರೆ ಆನ್​ಲೈನ್​ ಕಳ್ಳರು; ಸ್ವಲ್ಪ ಎಚ್ಚರ ತಪ್ಪಿದರೂ ಕಳೆದುಕೊಳ್ಳಬೇಕಾಗುತ್ತೆ ಲಕ್ಷಾಂತರ ರೂ!

ಐಫೋನ್​ 11 ಫೋನ್​ 6.1 ಇಂಚಿನ ಎಲ್​ಸಿಡಿ ಸ್ಕ್ರೀನ್​​ ಹೊಂದಿದ್ದು, 4​GB RAM ಅಳವಡಿಸಿಕೊಂಡಿದೆ. ಐಫೋನ್​ 11 ಹಿಂಭಾಗದಲ್ಲಿ ಡ್ಯುವೆಲ್​ ಕ್ಯಾಮೆರಾ ಸೆಟಪ್​ ನೀಡಲಾಗಿದೆ. ಧೀರ್ಘಕಾಲದ ಬಳಕೆಗಾಗಿ 3,110mAh​ ಬ್ಯಾಟರಿಯನ್ನು ನೀಡಲಾಗಿದೆ.

ಇನ್ನು ಗ್ರಾಹಕರಿಗಾಗಿ ಸೆ. 13 ರಿಂದ ಆ್ಯಪಲ್​ ಸಿರೀಸ್​ ಫೋನ್​ಗಳ ಫ್ರಿ ಆರ್ಡರ್​ ಆರಂಭವಾಗಲಿದೆ. ಅಂತೆಯೇ ಸೆ. 20 ರಂದು ಆ್ಯಪಲ್​ ಸ್ಟೋರ್​ ಮೂಲಕ ಲಭ್ಯವಾಗಲಿದೆ
First published:September 10, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ