ಇತ್ತೀಚಿನ ದಿನಗಳಲ್ಲಿ ಇಲೆಕ್ಟ್ರಾನಿಕ್ಸ್ ಸಾಧನಗಳಲ್ಲಿ ಮೊಬೈಲ್ (Mobile) ಮತ್ತು ಸ್ಮಾರ್ಟ್ವಾಚ್ಗಳು (Smartwatch) ಬಹಳಷ್ಟು ಬೇಡಿಕೆಯಲ್ಲಿವೆ. ಆದರೆ ಈಗ ಸ್ಮಾರ್ಟ್ಫೋನ್ಗಳ ನಂತರ ಬಿಡುಗಡೆಯಾಗುತ್ತಿರುವ ಹೆಚ್ಚು ಬಿಡುಗಡೆಯಾಗುವುದು ಸ್ಮಾರ್ಟ್ವಾಚ್ಗಳು. ಇನ್ನೇನು ಕೆಲವೇ ದಿನಗಳಲ್ಲಿ ಎಲ್ಲರೂ ಹೊಸ ವರ್ಷದ ಸಂಭ್ರಮದಲ್ಲಿರುತ್ತಾರೆ. ಆದರೆ ಈ ವರ್ಷ ಯಾವೆಲ್ಲಾ ಸ್ಮಾರ್ಟ್ವಾಚ್ಗಳು ಬಿಡುಗಡೆಯಾಗಿವೆ ಎಂಬುದು ಕೆಲವರಿಗೆ ಗೊತ್ತಿಲ್ಲ. ಈ ವರ್ಷದಲ್ಲಿ ದೇಶದಲ್ಲಿ ಹಲವಾರು ಸ್ಮಾರ್ಟ್ವಾಚ್ಗಳು ಬಿಡುಗಡೆಯಾಗಿದ್ದು ಪ್ರತಿಯೊಂದು ಬೇರೆ ಬೇರೆ ಕಂಪನಿಯದ್ದಾಗಿದೆ. ಆದರೆ ಸ್ಮಾರ್ಟ್ವಾಚ್ ಕಂಪನಿಗಳು ಒಂದಕ್ಕೊಂದು ಪೈಪೋಟಿಯನ್ನು ನೀಡುತ್ತಾ ತನ್ನದೇ ಆದ ಶೈಲಿಯಲ್ಲಿ ಮಾರುಕಟ್ಟೆಯಲ್ಲಿ ಸ್ಥಾನವನ್ನು ಪಡೆದುಕೊಂಡಿದೆ. ಹಾಗಿದ್ರೆ 2022ರಲ್ಲಿ ಬಿಡುಗಡೆಯಾದಂತಹ ಬೆಸ್ಟ್ ಸ್ಮಾರ್ಟ್ವಾಚ್ಗಳು (Best Smartwatches) ಯಾವುದೆಂದು ಇಲ್ಲಿ ತಿಳಿಯೋಣ.
ಸ್ಮಾರ್ಟ್ವಾಚ್ಗಳು, ಫಿಟ್ನೆಸ್ ಬ್ಯಾಂಡ್ಗಳು 2022 ರಲ್ಲಿ ಬಹಳಷ್ಟು ಪ್ರಚಾರವನ್ನು ಪಡೆದ ಸಾಧನವಾಗಿದೆ. ಇದು ಮೊಬೈಲ್ನಂತೆಯೇ ಫೀಚರ್ಸ್ಅನ್ನು ಹೊಂದಿರುವುದರಿಂದ ಗ್ರಾಹಕರನ್ನು ಆಕರ್ಷಿಸುವಲ್ಲಿ ಯಾವುದೇ ರೀತಿಯಲ್ಲೂ ವಿಫಲವಾಗಿಲ್ಲ. ಹಾಗಿದ್ರೆ 2022ರಲ್ಲಿ ಬಿಡುಗಡೆಯಾದ ಬೆಸ್ಟ್ ಸ್ಮಾರ್ಟ್ವಾಚ್ಗಳು ಯಾವುದೆಂದು ನಿಮಗೆ ಗೊತ್ತಾಗ್ಬೇಕಾದರೆ ಇದನ್ನು ಓದಿ.
ನಾಯ್ಸ್ ಕಲರ್ಫಿಟ್ ಪ್ರೋ 2:
ಈ ನಾಯ್ಸ್ ಕಲರ್ಫಿಟ್ ಪ್ರೋ 2 ಸ್ಮಾರ್ಟ್ಬ್ಯಾಂಡ್ 1.33-ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ. ನತ್ತು ಪಾಲಿಕಾರ್ಬೊನೇಟ್ನಿಂದ ಬಾಡಿಯನ್ನು ರಚಿಸಲಾಗಿದೆ. ಇನ್ನು ಈ ಸ್ಮಾರ್ಟ್ ಬ್ಯಾಂಡ್ 4 ಬಣ್ಣಗಳ ಆಯ್ಕೆಯಲ್ಲಿ ಮಾರುಕಟ್ಟೆಯಲ್ಲಿ ಖರೀದಿಸಬಹುದಾಗಿದೆ. ಇದು 24×7 ಹೃದಯ ಬಡಿತದ ಮೇಲ್ವಿಚಾರಣೆಯನ್ನು ಮಾಡುತ್ತದೆ. ಇದು 10 ದಿನಗಳ ಬ್ಯಾಟರಿ ಬ್ಯಾಕಪ್ ಅನ್ನು ಹೊಂದಿದೆ.
ಇದನ್ನೂ ಓದಿ: ಬಿಡುಗಡೆಯಾಗುವ ಮೊದಲೇ ಲೀಕ್ ಆಯ್ತು ಐಫೋನ್ 15 ಅಲ್ಟ್ರಾ ಫೀಚರ್ಸ್! ಬೆಲೆ ನೋಡಿ ಶಾಕ್ ಆಗ್ತೀರಾ!
ಇದನ್ನು ಮ್ಯಾಗ್ನೆಟಿಕ್ ಚಾರ್ಜರ್ ಮೂಲಕ ಈ ಸ್ಮಾರ್ಟ್ ಬ್ಯಾಂಡ್ ಅನ್ನು ಚಾರ್ಜ್ ಮಾಡಬಹುದು. ಇದು ವಾಕ್, ರನ್, ಹೈಕ್, ಬೈಕ್, ವರ್ಕ್-ಔಟ್, ಕ್ಲೈಮ್, ಸ್ಪಿನ್ ಅಥವಾ ಯೋಗವನ್ನು ಒಳಗೊಂಡಿರುವ 9 ಕ್ರೀಡಾ ವಿಧಾನಗಳನ್ನು ಹೊಂದಿದೆ. ನಾಯ್ಸ್ ಕಲರ್ಫಿಟ್ ಪ್ರೋ 2 IP68 ರೇಟಿಂಗ್ನೊಂದಿಗೆ ವಾಟರ್ಪ್ರೂಫ್ ಆಗಿದೆ.
ಫಾಸ್ಟ್ರ್ಯಾಕ್ ರಿಫ್ಲೆಕ್ಸ್ ಆ್ಯಕ್ಟಿವಿಟಿ ಟ್ರ್ಯಾಕರ್:
ಫಾಸ್ಟ್ರ್ಯಾಕ್ ರಿಫ್ಲೆಕ್ಸ್ ಆ್ಯಕ್ಟಿವಿಟಿ ಟ್ರ್ಯಾಕರ್ ಪ್ರಸ್ತುತ ಅಮೆಜಾನ್ನಲ್ಲಿ ಕೇವಲ 1,349 ರೂಪಾಯಿಗೆ ಲಭ್ಯವಿದೆ. ಈ ಸ್ಮಾರ್ಟ್ ಬ್ಯಾಂಡ್ ಕಾಲ್ ಮತ್ತು ಮೇಸೇಜ್ಗಳು ಬಂದರೆ ನಾಟಿಫಿಕೇಶನ್ ಅನ್ನು ನೀಡುತ್ತದೆ. ಸಾಧನವು ಸ್ಮಾರ್ಟ್ಫೋನ್ಗೆ ಕನೆಕ್ಟ್ ಆದರೆ ಮ್ಯೂಸಿಕ್ ಆನ್ ಆಫ್, ಕ್ಯಾಮೆರಾ ನಿಯಂತ್ರಣ, ವೈಬ್ರೇಶನ್ ಮತ್ತು ಫೋನ್ ಫೈಂಡರ್ನಂತಹ ಫೀಚರ್ಸ್ ಅನ್ನು ಸಹ ನೀಡುತ್ತದೆ. ಸ್ಮಾರ್ಟ್ ಬ್ಯಾಂಡ್ IPX6 ರೇಟಿಂಗ್ನೊಂದಿಗೆ ವಾಟರ್ಪ್ರೂಫ್ ಆಗಿದೆ. ಈ ಸ್ಮಾರ್ಟ್ ಬ್ಯಾಂಡ್ ಅನ್ನು ಒಮ್ಮೆ ಚಾರ್ಜ್ ಮಾಡಿದರೆ 7 ದಿನಗಳವರೆಗೆ ಬಳಕೆ ಮಾಡಬಹುದು.
ಹಾನರ್ ಬ್ಯಾಂಡ್ 6
ಹಾನರ್ ಬ್ಯಾಂಡ್ 6 1.47-ಇಂಚಿನ AMOLED ಟಚ್ ಡಿಸ್ಪ್ಲೇಯನ್ನು ಹೊಂದಿದೆ. ಈ ಫಿಟ್ನೆಸ್ ಬ್ಯಾಂಡ್ನ ಫೀಚರ್ಸ್ ಕುರಿತು ಹೇಳುವುದಾದರೆ, ಇದರಲ್ಲಿ SpO2 ಫೀಚರ್ಸ್ ಮೂಲಕ ಬಿಪಿ, 24×7 ಹೃದಯ ಬಡಿತ ಮಾನಿಟರ್ ಅನ್ನು ಟ್ರ್ಯಾಕ್ ಮಾಡುವ ಮೂಲಕ ಬಳಕೆದಾರರಿಗೆ ಮಾಹಿತಿಯನ್ನು ನೀಡುತ್ತದೆ. ಸ್ಮಾರ್ಟ್ ಬ್ಯಾಂಡ್ SMS, ಇಮೇಲ್, ಕಾಲ್, ಸೋಶಿಯಲ್ ಮೀಡಿಯಾ ಆ್ಯಪ್ಸ್ಗಳ ಇತ್ಯಾದಿ ನಾಟಿಫಿಕೇಶನ್ಗಳನ್ನು ಕೂಡ ತೋರಿಸುತ್ತದೆ. ಇದು ಆಂಡ್ರಾಯ್ಡ್ ವೇರ್ 2.9 ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುತ್ತದೆ.
ಶಿಯೋಮಿ ಎಮ್ಐ ಸ್ಮಾರ್ಟ್ಬ್ಯಾಂಡ್ 6:
ಶಿಯೋಮಿ ಎಮ್ಐ ಸ್ಮಾರ್ಟ್ ಬ್ಯಾಂಡ್ 6 ದೊಡ್ಡ 1.56-ಇಂಚಿನ AMOLED ಡಿಸ್ಪ್ಲೇಯನ್ನು ಒಳಗೊಂಡಿದೆ. ಇದರ ವಿಶೇಷತೆಯೆಂದರೆ ಇದನ್ನು ಒಮ್ಮೆ ಫುಲ್ ಚಾರ್ಜ್ ಮಾಡಿದರೆ ಇದನ್ನು 2 ವಾರಗಳ ಕಾಲ ನಿರಂತರವಾಗಿ ಬಳಸಬಹುದಾಗಿದೆ. ಸ್ಮಾರ್ಟ್ ಟ್ರ್ಯಾಕರ್ ಜೊತೆಗೆ ಇದು 30 ಫಿಟ್ನೆಸ್ ಮೋಡ್ಗಳೊಂದಿಗೆ ಬರುತ್ತದೆ ಮತ್ತು ಹೃದಯ ಬಡಿತ ಮಾನಿಟರಿಂಗ್, ನಿದ್ರೆಯ ಮೇಲ್ವಿಚಾರಣೆ, ಮಹಿಳೆಯರ ಆರೋಗ್ಯದ ಮೇಲ್ವಿಚಾರಣೆ ಮುಂತಾದ ಆರೋಗ್ಯದ ಬಗ್ಗೆ ಟ್ರ್ಯಾಕ್ ಮಾಡಿ ಮಾಹಿತಿಯನ್ನು ನೀಡುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ