ಬಿಡುಗಡೆಗೆ ಸಿದ್ಧವಾಯಿತು ಜಗತ್ತಿನ ಅತ್ಯಂತ ಬಲಿಷ್ಠ ಮೊಬೈಲ್​, ಏನಿದೆ ಹೊಸತು?


Updated:July 15, 2018, 6:13 PM IST
ಬಿಡುಗಡೆಗೆ ಸಿದ್ಧವಾಯಿತು ಜಗತ್ತಿನ ಅತ್ಯಂತ ಬಲಿಷ್ಠ ಮೊಬೈಲ್​, ಏನಿದೆ ಹೊಸತು?
Sirinlabs

Updated: July 15, 2018, 6:13 PM IST
ಲಂಡನ್​: ವಿಶ್ವದ ಅತ್ಯಂತ ಭದ್ರತಾ ವ್ಯವಸ್ಥೆ ಹೊಂದಿರುವ ಮೊಬೈಲ್​ಗಳಲ್ಲಿ ಒಂದಾಗಿರುವ ಸಿರಿನ್ ಲ್ಯಾಬ್ಸ್​ನ ಸೊಲರಿನ್ ಮೊಬೈಲ್​ ವರ್ಷಗಳ ಹಿಂದೆ ಭಾರೀ ಸದ್ದು ಮಾಡಿತ್ತು, ಇದೀಗ ಇದೇ ಮಾದರಿ ಬ್ಲಾಕ್​ ಚೈನ್​ ವ್ಯವಸ್ಥೆ ಹೊಂದಿರುವ ಮತ್ತೊಂದು ಭಾರೀ ಮೊತ್ತದ ಫಿನ್ನೈ ಸ್ಮಾರ್ಟ್​ಫೋನ್​ ಶೀಘ್ರದಲ್ಲೇ ಮಾರುಕಟ್ಟೆ ಪ್ರವೇಶಿಸಲಿದೆ.

ಮೊಬೈಲ್​ ನಿರ್ಮಾಣ ಸಂಸ್ಥೆ ಫಾಕ್ಸ್​ಕೊನ್​ ಸಹಭಾಗಿತ್ವದಲ್ಲಿ ಸಿರಿನ್​ ಲ್ಯಾಬ್ಸ್ ಈ ಬಾರಿ ಅತ್ಯಂತ ಬಲಿಷ್ಟ ಭದ್ರತಾ ವ್ಯವಸ್ಥೆಯಾಗಿರುವ ಬ್ಲಾಕ್​ಚೈನ್​ (Blockchain) ವ್ಯವಸ್ಥೆಯಿರುವ ಎರಡು ಡಿಸ್​ಪ್ಲೇ ಹೊಂದಿದ ಮೊಬೈಲ್​ನ್ನು ಮಾರುಕಟ್ಟೆಗ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದೆ.

ಇದೇ ನವೆಂಬರ್​ನಲ್ಲಿ ಫಿನ್ನೈ ಮೊಬೈಲ್​ ಬಿಡುಗಡೆಯಾಗಬಹುದು ಎಂದು ಊಹಿಸಲಾಗಿದ್ದು, ವಿಶ್ವದ ಮೊದಲ ಬ್ಲಾಕ್​ಚೈನ್​ ವ್ಯವಸ್ಥೆಯಿರುವ ಮೊಬೈಲ್​ ಇದಾಗಲಿದೆ ಎಂದು ಸಂಸ್ಥೆ ಹೇಳಿಕೊಂಡಿದೆ. ಈ ಮೊಬೈಲ್​ಗೆ ಸುಮಾರು 999 ಡಾಲರ್​ ಬೆಲೆ ನಿಗದಿಪಡಿಸಲಾಗಿದೆ.

ಝೆಡ್​ನೆಟ್​ ವರದಿ ಪ್ರಕಾರ ಫಿನ್ನೈ ಸ್ಲೈಡಿಂಗ್​ ವ್ಯವಸ್ಥೆಯುಳ್ಳ ಎರಡು ಡಿಸ್​ಪ್ಲೇಯನ್ನು ಹೊಂದಿರುವ ಸಾಧ್ಯತೆಗಳಿದ್ದು, ಸಿರಿನ್​ ನಿರ್ಮಾಣದ Android 8.1 ಹೊಂದಿರುವ ಆಪರೇಟಿಂಗ್​ ಸಿಸ್ಟಂ ಮೂಲಕ ಈ ಮೊಬೈಲ್​ ಕಾರ್ಯ ನಿರ್ವಹಿಸಲಿದೆ.

ಯಾವುದೇ ಕಳ್ಳ ಜಾಲಗಳು ಈ ಮೊಬೈಲ್​ ಪ್ರವೇಶಿಸುವುದನ್ನು ನಿರ್ಬಂಧಿಸಲು Intrusion Prevention System ಎಂಬ ವ್ಯವಸ್ಥೆ, ಕೋಲ್ಡ್ ಸ್ಟೋರೇಜ್ ಕ್ರಿಪ್ಟೋವಾಲೆಟ್, ಸೇರಿದಂತೆ ನೆಟ್​ವರ್ಕ್​ ಭದ್ರತೆಯ ಡಿಆ್ಯಪ್​ನ್ನು ನೀಡಲಾಗುತ್ತದೆ. ಇದರೊಂದಿಗೆ ಗೂಗಲ್​ನ ಪ್ಲೇಸ್ಟೋರ್​ ಕೂಡಾ ದೊರಕುತ್ತದೆ.

ಫಾಕ್ಸ್​ಕಾನ್​ನ ಅಂಗಸಂಸ್ಥೆ ಎಫ್​ಐಹೆಚ್​ ಮೊಬೈಲ್ಸ್​ ಫಿನ್ನೈ ಮೊಬೈಲ್​ಗಳ ನಿರ್ಮಾಣಕ್ಕೆ ಸಹಾಯ ಮಾಡುತ್ತದೆ, ಫಿನೆರಿನ್​ ಲ್ಯಾಬ್ಸ್​ ಆಪರೇಟಿಂಗ್ ಸಿಸ್ಟಂ ಹಾಗೂ ಅಲ್ಲಿರುವ ಭದ್ರತಾ ಆ್ಯಪ್​ಗಳ ಕುರಿತು ಹೆಚ್ಚು ಗಮನ ಹರಿಸುವುದಾಗಿ ಸಂಸ್ಥೆ ಹೇಳಿಕೊಂಡಿದೆ.

ಏನಿದು ಬ್ಲಾಕ್​ಚೈನ್​?
Loading...

ವರ್ಚುವಲ್​ ಟ್ರಾನ್ಸಾಕ್ಷನ್​ ಅಥವಾ ಕ್ರಿಪ್ಟೋ ಕರೆನ್ಸಿ ವ್ಯವಹಾರ ನಡೆಸುವ ವ್ಯಕ್ತಿಗಳಿಗೆ ಭದ್ರತೆಯನ್ನು ಒದಗಿಸುವ ಕೆಲಸವನ್ನು ಬ್ಲಾಕ್​ಚೈನ್​ ಮಾಡುತ್ತದೆ. ಕ್ರಿಪ್ಟೋ ಕರೆನ್ಸಿಗಳನ್ನು ಬಳಸುವ ಡಿವೈಸ್​ಗಳಿಗೆ ಖಾಸಗಿ ನೆಟ್​ವರ್ಕ್​ ಮೂಲಕ ದಾಳಿ ನಡೆಸಿ ಹ್ಯಾಕ್​ ಮಾಡಬಹುದು. ಬಿಟ್​ಕಾಯ್ನ್​ ಸೇರಿದಂತೆ ಹಲವು ಬಗೆಯ ಡಿಜಿಟಲ್​ ಕರೆನ್ಸಿಯನ್ನು ಕ್ರಿಪ್ಟೋ ಕರೆನ್ಸಿ ಎನ್ನಬಹುದು. ಈ ಕರೆನ್ಸಿಗಳ ವ್ಯವಹಾರ ಕೋಟಿಗಟ್ಟಲೆಯಲ್ಲಿ ನಡೆಯುತ್ತಿರುತ್ತದೆ. ಹೀಗಾಗಿ ಹ್ಯಾಕರ್​ಗಳು ಈ ಕರೆನ್ಸಿಗಳನ್ನು ಬಳಸುವವರ ಮೊಬೈಲ್​ ಅಥವಾ ಖಾತೆಗಳ ಮೇಲೆ ಕಣ್ಣಿಡುವುದು ಮಾಮೂಲಿ.

ಇಂತಹ ಸಂದರ್ಭದಲ್ಲಿ ಯಾರಿಗೂ ಹ್ಯಾಕ್​ ಮಾಡಲು ಸಾಧ್ಯವಾಗದೇ ಇರುವ ಕೋಡಿಂಗ್​ ತಂತ್ರಜ್ಞಾನವನ್ನು ಬ್ಲಾಕ್​ಚೈನ್​ ಅಭಿವೃದ್ಧಿ ಪಡಿಸಿದೆ. ಈ ವ್ಯವಸ್ಥೆಯನ್ನು ಮುಂದಿನ ದಿನಗಳಲ್ಲಿ ಫೆನ್ನೈ ಮೊಬೈಲ್​ಗಳಲ್ಲಿ ಬಳಸುವುದಾಗಿ ಸಂಸ್ಥೆ ಹೇಳಿಕೊಂಡಿದೆ.

ಮೊಬೈಲ್​ ವಿಶೇಷತೆಗಳು
ಕ್ವಾಲ್ಕಾಮ್ ಸ್ನಾಪ್​ಡ್ರಾಗನ್​ 845 ಪ್ರೊಸೆಸರ್​
6 ಇಂಚ್​ಗಳ ಡಿಸ್​ಪ್ಲೇ
128GB ಮೆಮೊರಿ ವ್ಯವಸ್ಥೆ, 2 ಟಿಬಿವರೆಗೆ ಮೆಮೊರಿ ವೃದ್ಧಿಗೆ ಅವಕಾಶ
6 ಜಿಬಿ RAM
12MPx ಕ್ಯಾಮೆರಾ
8MPx ಸೆಲ್ಫಿ ಕ್ಯಾಮೆರಾ
3280mAh ಬ್ಯಾಟರಿ
ಫಿಂಗರ್​ ಪ್ರಿಂಟ್​ ಆಯ್ಕೆ

 
First published:July 15, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ