• Home
 • »
 • News
 • »
 • tech
 • »
 • Top Smartphones: ಟಾಪ್ 5 ಬೆಸ್ಟ್ ಕ್ಯಾಮೆರಾ ಹೊಂದಿರುವ ಸ್ಮಾರ್ಟ್ ಫೋನ್‌ಗಳು ಇಲ್ಲಿವೆ!

Top Smartphones: ಟಾಪ್ 5 ಬೆಸ್ಟ್ ಕ್ಯಾಮೆರಾ ಹೊಂದಿರುವ ಸ್ಮಾರ್ಟ್ ಫೋನ್‌ಗಳು ಇಲ್ಲಿವೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಗ್ರಾಹಕರು ಸ್ಮಾರ್ಟ್‌ಫೋನ್‌ಗಳನ್ನು ಕೊಳ್ಳುವಾಗ ಅದರ ಕ್ಯಾಮೆರಾ, ಬ್ಯಾಟರಿ, ಸ್ಟೋರೇಜ್‌, ಕ್ವಾಲಿಟಿಗಳನ್ನೆಲ್ಲಾ ಗಮನಿಸುತ್ತಾರೆ. ದೀಪಾವಳಿ ಹಬ್ಬದಲ್ಲಿ ನೀವು ಖರೀದಿ ಮಾಡಬಹುದಾದ ಉತ್ತಮ ಸ್ಮಾರ್ಟ್‌ಫೋನ್‌ಗಳು ಇಲ್ಲಿವೆ

 • Share this:

  ಭಾರತದಲ್ಲಿ ಹಬ್ಬದ ಸಂದರ್ಭಗಳಲ್ಲಿ ಹಲವಾರು ಉತ್ಪನ್ನಗಳನ್ನು ಆಫರ್‌ನಲ್ಲಿ (Offer) ಮಾರಾಟ ಮಾಡುತ್ತಾರೆ. ಇದಕ್ಕಾಗಿಯೇ ಗ್ರಾಹಕರು (Customer) ಕಾಯುತ್ತಿರುತ್ತಾರೆ. ಈ ಹಬ್ಬದ ಸಂದರ್ಭದಲ್ಲಿ ಸ್ನೇಹಿತರು, ಫ್ಯಾಮಿಲಿಯನ್ನು ಭೇಟಿಯಾಗುವುದರ ಜೊತೆಗೆ ಹೊಸ ಐಟಮ್‌ಗಳನ್ನು (Item) ಮಾರುಕಟ್ಟೆಯಲ್ಲಿ ಕೊಳ್ಳಲು ರೆಡಿಯಾಗುತ್ತಿರುತ್ತಾರೆ. ಈ ಮಧ್ಯೆ ದೀಪಾವಳಿಯಲ್ಲಿ ಸ್ಮಾರ್ಟ್‌ ಫೋನ್‌ಗಳನ್ನು ಕೊಳ್ಳುವವರಾದರೆ ಟಾಪ್‌ 5 ‌ಕ್ಯಾಮೆರಾ (Top 5 Camera) ಹೊಂದಿದ ಸ್ಮಾರ್ಟ್‌ಫೋನ್ ಗಳನ್ನು (Smartphone) ಇಲ್ಲಿ ನೀಡಲಾಗಿದೆ. ಪ್ರತಿಯೊಬ್ಬರೂ ಗುಣಮಟ್ಟದ ಉತ್ಪನ್ನಗಳನ್ನು ಖರೀದಿಸಲು ಬಯಸುತ್ತಾರೆ.


  ಗ್ರಾಹಕರು ಮುಖ್ಯವಾಗಿ ಸ್ಮಾರ್ಟ್‌ಫೋನ್‌ಗಳನ್ನು ಕೊಳ್ಳುವಾಗ ಅದರ ಕ್ಯಾಮೆರಾ, ಬ್ಯಾಟರಿ, ಸ್ಟೋರೇಜ್‌, ಕ್ವಾಲಿಟಿ ಇವುಗಳನ್ನೆಲ್ಲಾ ಗಮನಿಸುತ್ತಾರೆ. ಹೆಚ್ಚಾಗಿ ಕಡಿಮೆ ಬೆಲೆ ಗುಣಮಟ್ಟದ ಉತ್ಪನ್ನಗಳನ್ನು ಹುಡುಕುತ್ತಿರುತ್ತಾರೆ. ನಿಮಗಾಗಿ ಇಲ್ಲಿ ಕೆಲವೊಂದು ಕ್ವಾಲಿಟಿ ಮೊಬೈಲ್‌ಗಳನ್ನು ತಿಳಿಸಿದ್ದೇವೆ.


  ಟಾಪ್‌ 5 ಬೆಸ್ಟ್‌ ಕ್ಯಾಮೆರಾ ಹೊಂದಿದ ಸ್ಮಾರ್ಟ್‌ಫೋನ್‌ಗಳು


  ಪಿಕ್ಸೆಲ್‌ 6 ಎ


  ಗೂಗಲ್‌ ಪಿಕ್ಸೆಲ್‌ ಫೋನ್‌ಗಳು ಕ್ಯಾಮೆರಾದ ವಿಷಯದಲ್ಲಿ ತುಂಬಾ ಜನಪ್ರಿಯವಾಗಿದೆ. ಗೂಗಲ್‌ ಪಿಕ್ಸೆಲ್‌ 6ಎ ಮೊಬೈಲ್‌ನ ಬ್ಯಾಕ್‌ ಕ್ಯಾಮೆರಾ ಡ್ಯುಯೆಲ್‌ ಕ್ಯಾಮೆರಾ ಸೆಟಪ್‌ ಅನ್ನು ನೀಡುತ್ತದೆ. 12.2 ಮೆಗಾಪಿಕ್ಸೆಲ್‌ ಕ್ಯಾಮೆರಾ ಮತ್ತು 12 ಮೆಗಾಪಿಕ್ಸೆಲ್‌ ಅಲ್ಟ್ರಾ ವೈಡ್‌ ಲೆನ್ಸ್ ಅನ್ನು ಹೊಂದಿದೆ. ಜೊತೆಗೆ 114 ಡಿಗ್ರಿ ಫೀಲ್ಡ್‌ ಆಫ್ ವೀವ್‌ ನೊಂದಿಗೆ 4Kನಲ್ಲಿ ವಿಡಿಯೋ ಮಾಡಬಹುದಾಗಿದೆ. ಅಲ್ಲದೇ 60fps, 24fps, 1080p, ಕ್ವಾಲಿಟಿಯಲ್ಲೂ ವಿಡಿಯೋ ಮಾಡುವ ಅವಕಾಶಗಳಿವೆ.


  ಇದನ್ನೂ ಓದಿ: ಇನ್ಮುಂದೆ ಸ್ಮಾರ್ಟ್‌ವಾಚ್‌ ಬದಲು ಸ್ಮಾರ್ಟ್‌ರಿಂಗ್!‌ ಅರೇ, ಇದೇನು ಅಂತೀರಾ? ಇಲ್ಲಿದೆ ನೋಡಿ


  ನೀವು SBI ಕ್ರೆಡಿಟ್‌ ಕಾರ್ಡ್‌ ಹೊಂದಿದ್ದರೆ ಪಿಕ್ಸೆಲ್‌ 6ಎ ಯನ್ನು ಫ್ಲಿಪ್‌ ಕಾರ್ಟ್‌ನಲ್ಲಿ 20,028 ರೂಪಾಯಿಗಳ ರಿಯಾಯಿತಿ ದರದಲ್ಲಿ ನೀಡುತ್ತಿದ್ದಾರೆ.


  Here are the top 5 best camera smartphones
  ಸಾಂದರ್ಭಿಕ ಚಿತ್ರ


  ಐಫೋನ್‌ 14 ಪ್ರೊ ಮತ್ತು 14 ಪ್ರೊ ಮ್ಯಾಕ್ಸ್‌


  ಇದು ಅತ್ಯಂತ ದುಬಾರಿಯ ಫೋನ್‌ಗಳಾದರು ಇದು ಉತ್ತಮ  ಕ್ಯಾಮೆರಾಗಳನ್ನು ಗ್ರಾಹಕರಿಗೆ ನೀಡುತ್ತದೆ. ಅದಲ್ಲದೆ ಇದರಲ್ಲಿ ವಿಡಿಯೋ, ಫೋಟೋ ಶೂಟ್‌ ಮಾಡಲು ಬಹಳ ಸುಲಭವಾಗುತ್ತದೆ. ಇದು 4K ಕ್ವಾಲಿಟಿಯಲ್ಲಿ ವಿಡಿಯೋವನ್ನು ಮತ್ತು 48 ಮೆಗಾಪಿಕ್ಸೆಲ್‌ ProRaw ಫೋಟೊವನ್ನು ನೀಡುತ್ತದೆ.


  ಐಫೋನ್‌ 14 ಪ್ರೊ ಮತ್ತು 14 ಪ್ರೊ ಮ್ಯಾಕ್ಸ್‌ ನ ಹಿಂಬದಿ ಕ್ಯಾಮರಾ ಟ್ರಿಪಲ್‌ ಕ್ಯಾಮೆರಾ‌ ಸೆಟಪ್‌ ಅನ್ನು ಹೊಂದಿದೆ. ಇದರ ಜೊತೆಗೆ 48 ಮೆಗಾಪಿಕ್ಸೆಲ್‌, 12 ಮೆಗಾಪಿಕ್ಸೆಲ್‌ ಅಲ್ಟ್ರಾ ವೈಡ್ ಮತ್ತು 3X ಟೆಲಿಫೋಟೋ ಲೆನ್ಸ್‌ ಅನ್ನು ಹೊಂದಿದೆ. ಇನ್ನು 12 ಮೆಗಾಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. 4Kನಲ್ಲಿ ವಿಡಿಯೋವನ್ನು ಶೂಟ್‌ ಮಾಡಬಹುದಾಗಿದೆ.


  ಸ್ಯಾಮ್‌ಸಂಗ್‌ ಗ್ಯಾಲಕ್ಸಿ S22 ಮತ್ತು S22+


  ಹಬ್ಬದ ಕಾರಣದಿಂದಾಗಿ ಫೋನ್ ಬೆಲೆ ಕಡಿಮೆ ಮಾಡಲಾಗಿದೆ ಮತ್ತು ಈಗ Galaxy S22 ಅನ್ನು ರೂ. 60,000 ಕ್ಕಿಂತ ಕಡಿಮೆ ಬೆಲೆಗೆ ಪಡೆಯಬಹುದು.ಈ ಮೊಬೈಲ್‌ ಟ್ರಿಪಲ್ ಕ್ಯಾಮೆರಾವನ್ನು ಹೊಂದಿದೆ. ಇದರಿಂದ ನೀವು ಉತ್ತಮ ವಿಡಿಯೋ ಮತ್ತು ಫೋಟೋವನ್ನು ನೀಡುತ್ತದೆ.


  Here are the top 5 best camera smartphones
  ಸಾಂದರ್ಭಿಕ ಚಿತ್ರ


  ಇದು 50 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿದೆ. 12 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಮತ್ತು 10 ಮೆಗಾಪಿಕ್ಸೆಲ್ 3X ಟೆಲಿಫೋಟೋ ಲೆನ್ಸ್ ಅನ್ನುನೀಡುತ್ತದೆ.


  ಇದನ್ನೂ ಓದಿ: ರಿಲಯನ್ಸ್‌ ಜಿಯೋದಿಂದ ಮೊದಲ ಲ್ಯಾಪ್​ಟಾಪ್​ ಬಿಡುಗಡೆ, ಅದು ಇಷ್ಟು ಕಡಿಮೆ ಬೆಲೆಗೆ!


  ಮೊಟೊರೊಲಾ ಎಡ್ಜ್ 20 ಫ್ಯೂಷನ್


  ಮೊಟೊರೊಲಾ ಎಡ್ಜ್ 20 ಫ್ಯೂಷನ್ 8 ಮೆಗಾಪಿಕ್ಸೆಲ್‌ ಅಲ್ಟ್ರಾವೈಡ್ ಕ್ಯಾಮೆರಾ ಮತ್ತು 108 ಮೆಗಾ ಪಿಕ್ಸೆಲ್‌ ಕ್ಯಾಮೆರಾವನ್ನು ಹೊಂದಿದೆ. ಇದಲ್ಲದೆ ಸೆಲ್ಫಿ ಕ್ಯಾಮೆರಾ 32 ಮೆಗಾಪಿಕ್ಸೆಲ್‌ ಅನ್ನು ಹೊಂದಿದೆ. ಇದು ಸುಂದರವಾಗಿ ವಿಡಿಯೋ ಅಥವಾ ಫೋಟೋವನ್ನು ತೆಗೆಯಲು ಸಹಾಯಮಾಡುತ್ತದೆ. ಹಾಗೇ ಮೊಟೊರೊಲಾ ಎಡ್ಜ್ 20 ಫ್ಯೂಷನ್ ಸ್ಮಾರ್ಟ್‌ಫೋನ್‌ ಅನ್ನು 20000 ರೂಪಾಯಿಗಿಂತ ಕಡಿಮೆ ಬೆಲೆಯಲ್ಲಿ ಪಡೆಯಬಹುದಾಗಿದೆ

  Published by:Harshith AS
  First published: