• Home
 • »
 • News
 • »
 • tech
 • »
 • Hygraphics Games: ಇಲ್ಲಿದೆ ನೋಡಿ ಹೈಗ್ರಾಫಿಕ್ಸ್​ ಹೊಂದಿದ 10MB ಒಳಗಿನ ಗೇಮ್ಸ್​ಗಳು! ಕಡಿಮೆ ರ್‍ಯಾಮ್​ನ ಮೊಬೈಲ್​ನಲ್ಲಿಯೂ ಆಡ್ಬಹುದು

Hygraphics Games: ಇಲ್ಲಿದೆ ನೋಡಿ ಹೈಗ್ರಾಫಿಕ್ಸ್​ ಹೊಂದಿದ 10MB ಒಳಗಿನ ಗೇಮ್ಸ್​ಗಳು! ಕಡಿಮೆ ರ್‍ಯಾಮ್​ನ ಮೊಬೈಲ್​ನಲ್ಲಿಯೂ ಆಡ್ಬಹುದು

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ನೀವು ಗೂಗಲ್​ನ ಪ್ಲೇ ಸ್ಟೋರ್​​ನಿಂದ ಡೌನ್‌ಲೋಡ್ ಮಾಡಬಹುದಾದ 10 ಎಮ್​ಬಿ ಗಿಂತ ಕಡಿಮೆ ಸ್ಟೋರೇಜ್​ ಹೊಂದಿದ ಹೆಚ್ಚಿನ ಗ್ರಾಫಿಕ್ಸ್ ಆಟಗಳಿವೆ. ಈ ಆಟಗಳು ಆಂಡ್ರಾಯ್ಡ್ ಬಳಕೆದಾರರಿಗೆ ಉಚಿತವಾಗಿ ಲಭ್ಯವಿದೆ. ಇದರ ಬಗ್ಗೆ ಕಂಪ್ಲೀಟ್ ಮಾಹಿತಿ ಇಲ್ಲಿದೆ

 • Share this:

  ಇತ್ತೀಚಿನ ದಿನಗಳಲ್ಲಿ ಉತ್ತಮ ಸ್ಟೋರೇಜ್​ನ (Storage) ಅನೇಕ ಸ್ಮಾರ್ಟ್‌ಫೋನ್‌ಗಳು (Smartphone) ಮೊಬೈಲ್​ ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ ಇಷ್ಟಿದ್ದರೂ ಕೆಲವರು ಹಿಂದಿನಿಂದ ಬಳಸುತ್ತಿದ್ದ ಸ್ಮಾರ್ಟ್‌ಫೋನ್ ಅನ್ನು ಬದಲಾಯಿಸಲು ಇಷ್ಟಪಡುವುದಿಲ್ಲ. ಅವರು ಇನ್ನೂ ಅದೇ ಸ್ಮಾರ್ಟ್‌ಫೋನ್ ಅನ್ನು ಬಳಸುತ್ತಿರುತ್ತಾರೆ. ಹಳೆಯ ಸ್ಮಾರ್ಟ್​ಫೋನ್​ನ ರ್‍ಯಾಮ್ (Ram) ಮತ್ತು ಸ್ಟೋರೇಜ್ (Storage) ಸಾಮಾನ್ಯವಾಗಿ ಇದರ ಕಡಿಮೆಯೇ ಇರುತ್ತದೆ. ಆದರೆ ರ್‍ಯಾಮ್  ಮತ್ತು ಸ್ಟೋರೇಜ್​ನ ಕೊರತೆಯಿಂದಾಗಿ ಹಳೆಯ ಸ್ಮಾರ್ಟ್​ಫೋನ್​ಗಳಲ್ಲಿ ಆಟಗಳನ್ನು ಆಡಲಾಗುವುದಿಲ್ಲ ಎಂದು ನಮಗೆಲ್ಲರಿಗೂ ತಿಳಿದಿದೆ. ಆದರೆ ಇದೀಗ ತಂತ್ರಜ್ಞಾನದ ಬೆಳವಣಿಗೆಯಿಂದ 10 ಎಮ್​ಬಿ ಗಿಂತಲೂ ಗೇಮ್​ಗಳು ಇತ್ತೀಚೆಗೆ ಬಂದಿದೆ. ಇದನ್ನು ಮೊಬೈಲ್ ಗೇಮ್ಸ್​ ಪ್ರಿಯರು ಯಾವುದೇ ಕಡಿಮೆ ರ್‍ಯಾಮ್ ಮತ್ತು ಸ್ಟೋರೇಜ್​ನ ಸ್ಮಾರ್ಟ್​ಫೋನಿನಲ್ಲಿ ಡೌನ್​ಲೋಡ್ (Download)​ ಮಾಡಿಕೊಂಡು ಆಡಬಹುದಾಗಿದೆ. 


  ಅನೇಕ ಮಂದಿಗೆ ಕೆಲವು ಗೇಮ್ಸ್​ಗಳನ್ನು ತಮ್ಮ ಮೊಬೈಲ್​ಗಳಲ್ಲಿ ಆಡಲು ಸಾಧ್ಯವಾಗುವುದಿಲ್ಲ. ಇದಕ್ಕೆ ಕಾರಣ ಆ ಮೊಬೈಲ್​ನ ರ್‍ಯಾಮ್ ಮತ್ತು ಸ್ಟೋರೇಜ್​ನ ಕೊರತೆಯಿಂದ ಹೇಳಬಹುದು. ಇದೀಗ ಹೈಗ್ರಾಫಿಕ್ಸ್​ ಹೊಂದಿದ ಮೊಬೈಲ್​ ಗೇಮ್ಸ್​ಗಳನ್ನು ನಿಮ್ಮ ಮೊಬೈಲ್​ನಲ್ಲಿ ಸುಲಭದಲ್ಲಿ ಡೌನ್​ಲೋಡ್​ ಮಾಡಿಕೊಂಡು ಆಡಬಹುದಾಗಿದೆ. ಹಾಗಿದ್ರೆ ಗೇಮ್ಸ್​ ಅಪ್ಲಿಕೇಶನ್​ಗಳು ಯಾವುದೆಲ್ಲಾ ಎಂಬುದಕ್ಕೆ ಉತ್ತರ ಇಲ್ಲಿದೆ.


  ಸ್ಟ್ರೀಟ್ ಫೈಟಿಂಗ್
  ನೀವು ಕೇವಲ 9.8 MB ಸ್ಟೋರೇಜ್​ನೊಂದಿಗೆ ಸ್ಟ್ರೀಟ್ ಫೈಟಿಂಗ್ ಗೇಮನ್ನು ಡೌನ್‌ಲೋಡ್ ಮಾಡಬಹುದು. ಬಾಲ್ಯದಲ್ಲಿ, ಅನೇಕ ಜನರು ಟೆಕ್ಕೆನ್ ಆಟವನ್ನು ಆಡಲು ಸೈಬರ್ ಕೆಫೆಗಳು ಅಥವಾ ಆಟದ ವಲಯಗಳಿಗೆ ಹೋಗುತ್ತಿದ್ದರು. ಆದರೆ ಈಗ ನೀವು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಟೆಕ್ಕೆನ್ ಅನ್ನು ಆನಂದಿಸಬಹುದು.


  ಇದನ್ನೂ ಓದಿ: ಕೇವಲ 21 ಸಾವಿರ ರೂಪಾಯಿಗೆ ಐಫೋನ್ 11 ಸ್ಮಾರ್ಟ್​ಫೋನ್​! ಫ್ಲಿಪ್​ಕಾರ್ಟ್​ ಗ್ರಾಹಕರಿಗಾಗಿ ಬಿಡುಗಡೆ ಮಾಡಿದೆ ವಿಶೇಷ ಆಫರ್


  ನಾವು ಗ್ರಾಫಿಕ್ಸ್ ಬಗ್ಗೆ ಮಾತನಾಡುವುದಾದರೆ, ಸ್ಟ್ರೀಟ್ ಫೈಟಿಂಗ್‌ನಲ್ಲಿ ನೀವು ಉತ್ತಮ ಗ್ರಾಫಿಕ್ಸ್ ಅನ್ನು ನೋಡಬಹುದು. ಇದರಲ್ಲಿರುವ ಗ್ರಾಫಿಕ್ಸ್​​ಗಳು ಸಾಮಾನ್ಯವಾಗಿ 1GB ಆಟಗಳಲ್ಲಿಯೂ ಸಹ ಕಂಡುಬರುವುದಿಲ್ಲ.


  ಅಮೇಜಿಂಗ್ ಥೀಫ್
  ನೀವು ಕೇವಲ 6.3 ಎಂಬಿಯಲ್ಲಿ ಅಮೇಜಿಂಗ್ ಥೀಫ್ ಆಟವನ್ನು ಡೌನ್‌ಲೋಡ್ ಮಾಡಬಹುದು. ಈ ಆಟವು ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿದೆ. ಇದರಲ್ಲಿ ನೀವು ಕಪ್ಪು ಮತ್ತು ಬಿಳಿ ಗ್ರಾಫಿಕ್ಸ್ ಅನ್ನು ನೋಡುತ್ತೀರಿ. ಹಿಂದಿನ ಕಾಲದಲ್ಲಿ, ಜನರು ಸಣ್ಣ ಸ್ಮಾರ್ಟ್‌ಫೋನ್‌ಗಳಲ್ಲಿ ಈ ಆಟವನ್ನು ಆಡುವ ಮೂಲಕ ಮನರಂಜನೆಯನ್ನು ಪಡೆಯುತ್ತಿದ್ದರು.


  ಈ ಆಟದಲ್ಲಿ ಒಬ್ಬ ಕಳ್ಳನನ್ನು ಪೊಲೀಸರು ಹಿಡಿಯಲು ಪ್ರಯತ್ನಿಸುತ್ತಾರೆ. ಈ ಗೇಮ್​ ಕಪ್ಪು ಮತ್ತು ಬಿಳಿ ಮಾತ್ರ ಗ್ರಾಫಿಕ್ಸ್ ಹೊಂದಿರುವ ಕಾರಣ, ಇದು ಹೆಚ್ಚಿನ ಸ್ಟೋರೇಜ್​ ಅನ್ನು ಹೊಂದಿರುವುದಿಲ್ಲ.


  ಕ್ರಿಕೆಟ್ ಬ್ಲ್ಯಾಕ್
  ಕ್ರಿಕೆಟ್ ಬ್ಲ್ಯಾಕ್ ಕೂಡ ಕಪ್ಪು ಮತ್ತು ಬಿಳಿ ಗ್ರಾಫಿಕ್ಸ್ ಅನ್ನು ಹೊಂದಿದೆ. ಅದರಲ್ಲಿ ಕೇವಲ 2 ಜನರಿರುತ್ತಾರೆ. ಒಂದು ಬ್ಯಾಟಿಂಗ್‌ಗೆ ಮತ್ತೊಂದು ಫೀಲ್ಡಿಂಗ್‌ಗೆ. ಇದು ಗೂಗಲ್​ ಪ್ಲೇ ಸ್ಟೋರ್​​ನಲ್ಲಿ 10MB ಗಿಂತ ಕಡಿಮೆ ಸ್ಟೋರೇಜ್​ನಲ್ಲಿ ಡೌನ್​ಲೋಡ್​ ಮಾಡಬಹುದಾಗಿದೆ.


  ಜನರು ಕೀಪ್ಯಾಡ್ ಫೋನ್‌ಗಳಲ್ಲಿ ಕ್ರಿಕೆಟ್ ಆಡುತ್ತಿದ್ದ ರೀತಿಯಲ್ಲೇ ಈಗ ನೀವು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿಯೂ ಆನಂದಿಸಬಹುದು. ಇದನ್ನು ಡೌನ್​ಲೋಡ್​ ಮಾಡಿ ಆಡಲು ನಿಮಗೆ ಹೆಚ್ಚಿನ ಸ್ಟೋರೇಜ್​ನ ಅಗತ್ಯವಿರುವುದಿಲ್ಲ.


  ಬ್ಲಾಕ್ ಪಜಲ್ ಕ್ಲಾಸಿಕ್
  ಬ್ಲಾಕ್ ಪಜಲ್ ಕ್ಲಾಸಿಕ್ ಅತಿ ಹೆಚ್ಚು ಗ್ರಾಫಿಕ್ಸ್ ಹೊಂದಿದ ಆಟವಾಗಿದೆ. ಅದರಲ್ಲಿ ಅನೇಕ ಸಣ್ಣ ಪೆಟ್ಟಿಗೆಗಳಿವೆ, ಅದು ಒಟ್ಟಾಗಿ ಸ್ಕೋರ್ ಮಾಡುತ್ತದೆ. ಅನೇಕ ಜನರು ತಮ್ಮ ಬಾಲ್ಯದಲ್ಲಿ ಕೀಪ್ಯಾಡ್ ಫೋನ್‌ಗಳಲ್ಲಿ ಈ ಆಟವನ್ನು ಆಡಿದ್ದಾರೆ.


  ಇದನ್ನು ಆಡುವ ಮೂಲಕ ನಿಮ್ಮ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಬಹುದು. ಇದನ್ನು ಡೌನ್‌ಲೋಡ್ ಮಾಡಲು ನಿಮಗೆ 10 MB ಗಿಂತ ಹೆಚ್ಚಿನ ಸ್ಟೋರೇಜ್​ನ ಅಗತ್ಯವಿರುವುದಿಲ್ಲ.

  Published by:Prajwal B
  First published: