ಇಂದಿನ ಯುಗದಲ್ಲಿ, ಸ್ಮಾರ್ಟ್‌ಫೋನ್ (Smartphone) ಬಹಳ ಮುಖ್ಯವಾದ ಸಾಧನವಾಗಿದೆ. ಸದ್ಯ ಮಾರುಕಟ್ಟೆಯಲ್ಲಿ ಒಂದಕ್ಕಿಂತ ಹೆಚ್ಚು ಸ್ಮಾರ್ಟ್‌ಫೋನ್‌ಗಳಿವೆ, ಆದರೆ ಉತ್ತಮ ಸ್ಮಾರ್ಟ್‌ಫೋನ್ ಪಡೆಯಲು ಭಾರಿ ಮೊತ್ತವನ್ನು ನೀಡಬೇಕಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಅನೇಕ ಬಳಕೆದಾರರು ಅಗ್ಗದ ಫೋನ್ ಅಥವಾ ಸೆಕೆಂಡ್ ಹ್ಯಾಂಡ್ ಮೊಬೈಲ್ಗಳನ್ನು (Second Hand Mobile) ಖರೀದಿಸಲು ಮುಂದಾಗುತ್ತಾರೆ. ಈ ಸಮಯದಲ್ಲಿ ಸೆಕೆಂಡ್ ಹ್ಯಾಂಡ್ ಮೊಬೈಲ್‌ನ ಮಾರುಕಟ್ಟೆಯೂ ತುಂಬಾ ದೊಡ್ಡದಾಗಿದೆ. ಇದಲ್ಲದೆ ಜನರು ಹಳೆಯ ಫೋನ್‌ಗಳನ್ನು ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ (Online And Offline) ಖರೀದಿಸಬಹುದು. ಸಾಮಾನ್ಯವಾಗಿ ಉತ್ತಮ ಫೀಚರ್ ಗಳಿರುವ ಸೆಕೆಂಡ್ ಹ್ಯಾಂಡ್ ಮೊಬೈಲ್ ಗಳು ಕಡಿಮೆ ಬೆಲೆಗೆ ಲಭ್ಯವಿದ್ದರೂ ಅವುಗಳನ್ನು ತೆಗೆದುಕೊಳ್ಳುವುದು ದೊಡ್ಡ ಅಪಾಯ. ಇಂತಹ ಪರಿಸ್ಥಿತಿಯಲ್ಲಿ ಸೆಕೆಂಡ್ ಹ್ಯಾಂಡ್ ಫೋನ್ ಕೊಳ್ಳುವಾಗ ಎಚ್ಚರಿಕೆಯಿಂದಿರುವುದು ಸಹ ಅಗತ್ಯ.
ಯಾರೇ ಆಗಲಿ ಕಡಿಮೆ ಬೆಲೆಗೆ ಸ್ಮಾರ್ಟ್ಫೋನ್ಗಳು ಸಿಗುತ್ತದೆ ಎಂದರೆ ತಕ್ಷಣ ಖರೀದಿಸುತ್ತಾರೆ. ಆದರೆ ಸೆಕೆಂಡ್ ಹ್ಯಾಂಡ್ ಸ್ಮಾರ್ಟ್ಫೋನ್ಗಳನ್ನು ಖರೀದಿಸುವಾಗ ತುಂಬಾ ಎಚ್ಚರಿಕೆಯಿಂದಿರಬೇಕು. ಇಲ್ಲವಾದಲ್ಲಿ ನಿಮ್ಮ ಕೈಯಲ್ಲಿ ಮೊಬೈಲ್ ಸಹ ಇರುವುದಿಲ್ಲ, ಹಣವೂ ಇರುವುದಿಲ್ಲ. ಹಾಗಿದ್ರೆ ಸೆಕೆಂಡ್ ಹ್ಯಾಂಡ್ ಸ್ಮಾರ್ಟ್ಫೋನ್ಗಳನ್ನು ಖರೀದಿಸುವಾಗ ಗಮನದಲ್ಲಿಟ್ಟುಕೊಳ್ಳಬೇಕಾದ ವಿಷಯಗಳೇನು ಎಂಬುದನ್ನು ಈ ಲೇಖನದಲ್ಲಿದೆ ಓದಿ.
ಬಿಲ್ ಮತ್ತು ಮೊಬೈಲ್ ಪಾರ್ಟ್ಸ್
ಸೆಕೆಂಡ್ ಹ್ಯಾಂಡ್ ಫೋನ್ ಖರೀದಿಸುವಾಗ, ಫೋನ್‌ನ ಬಿಲ್ ಅನ್ನು ನೀವು ಅದರ ಓನರ್ ಬಳಿ ಕೇಳಬೇಕು ಎಂಬುದು ಅತ್ಯಂತ ಮುಖ್ಯವಾದ ವಿಷಯ. ಇದು ಫೋನ್ ಬಗ್ಗೆ ಮಾಹಿತಿಯನ್ನು ಪರಿಶೀಲಿಸಲು ಸಹಕಾರಿಯಾಗುತ್ತದೆ. ಫೋನ್‌ನ ಬಿಲ್‌ನೊಂದಿಗೆ IMEI ಸಂಖ್ಯೆಯನ್ನು ಚೆಕ್ ಮಾಡಬಹುದು. ಇದಕ್ಕಾಗಿ ನೀವು ನಿಮ್ಮ ಡಯಲ್ ಪ್ಯಾಡ್ನಲ್ಲಿ *#06# ಅನ್ನು ಡಯಲ್ ಮಾಡಿ ನೋಡಬಹುದು. ಫೋನ್ ಮಾರಾಟಗಾರನು ಫೋನ್ ಬಿಲ್ ಎಲ್ಲೋ ಕಳೆದುಹೋಗಿದೆ ಎಂದು ಹೇಳಿದರೆ, ಖಂಡಿತವಾಗಿಯೂ ಅದನ್ನು ಅವನಿಂದ ಬರವಣಿಗೆಯ ಮೂಲಕ ತೆಗೆದುಕೊಳ್ಳಿ.
ಇದನ್ನೂ ಓದಿ: ರೀಚಾರ್ಜ್ ಮಾಡದೆಯೂ ಈಗ ಫ್ರೀಯಾಗಿ ಕರೆ ಮಾಡಬಹುದು, ಹೇಗಂತೀರಾ? ಇಲ್ಲಿದೆ ವಿವರ
ವೆಬ್‌ಸೈಟ್ ಮೂಲಕ ಖರೀದಿಸಲು ಮುಂದಾಗ್ಬೇಡಿ
ನೀವು ವೆಬ್‌ಸೈಟ್ ಮೂಲಕ ಸೆಕೆಂಡ್ ಹ್ಯಾಂಡ್ ಫೋನ್ ಖರೀದಿಸುತ್ತಿದ್ದರೆ, ನೀವು ಫೋನ್ ಮಾರಾಟ ಮಾಡುವ ವ್ಯಕ್ತಿಯನ್ನು ಮುಖಾಮುಖಿ ಭೇಟಿಯಾಗಿ ಮಾತನಾಡಬೇಕು. ಮುಖಾಮುಖಿಯಾಗಿ ಕುಳಿತು ಫೋನ್ ಡೀಲ್ ಮಾಡಲು ಪ್ರಯತ್ನಿಸಿ. ಅಂತಹ ಪರಿಸ್ಥಿತಿಯಲ್ಲಿ, ಯಾವುದೇ ರೀತಿಯ ವಂಚನೆಯಾಗುವುದಿಲ್ಲ.
ಫೋನ್ ಬಳಸಿ ನೋಡಿ
ಸೆಕೆಂಡ್ ಹ್ಯಾಂಡ್ ಸ್ಮಾರ್ಟ್ ಫೋನ್ ಕೊಳ್ಳುವಾಗ ಫೋನ್ ಅನ್ನು 15 ನಿಮಿಷಗಳ ಕಾಲ ನೀವು ಬಳಸಿ ನೋಡಿ. ಈ ಮೂಲಕ ನೀವು ಸ್ಮಾರ್ಟ್ಫೋನ್ನ ಪ್ರೊಸೆಸರ್, ಬ್ಯಾಟರಿ ಮತ್ತು ಫೋನ್ ಸರಿಯಾಗಿ ವರ್ಕ್ ಆಗುತ್ತಾ ಎಂಬುದನ್ನು ನೋಡಬಹುದು.
ಫೋನ್‌ನ ಹೊರ ಭಾಗಗಳನ್ನು ಸರಿಯಾಗಿ ಚೆಕ್ ಮಾಡಿಕೊಳ್ಳಿ
ಇನ್ನು ನೀವು ಖರೀದಿ ಮಾಡುವಂತಹ ಸೆಕೆಂಡ್ ಹ್ಯಾಂಡ್ ಸ್ಮಾರ್ಟ್‌ಫೋನ್ ಅನ್ನುಖರೀದಿಸುವ ಮುನ್ನ ಆ ಫೋನ್‌ನ ಹೊರಗಿನ ಭಾಗಗಳನ್ನು ಅಂದರೆ, ಚಾರ್ಜಿಂಗ್ ಪೋರ್ಟ್, ಹೆಡ್ಫೋನ್ ಜ್ಯಾಕ್ ಅನ್ನು ಸರಿಯಾಗಿ ಚೆಕ್ ಮಾಡಿಕೊಳ್ಳಿ. ಏಕೆಂದರೆ ಇದು ಕೆಲವೊಮ್ಮೆ ತುಕ್ಕು ಹಿಡಿಯುವ ಸಾಧ್ಯತೆಗಳಿರುತ್ತದೆ.
ಡಿಸ್ಪ್ಲೇ, ಟಚ್‌ಸ್ಕ್ರೀನ್ ಚೆಕ್ ಮಾಡಿ
ಸೆಕೆಂಡ್ ಹ್ಯಾಂಡ್ ಸ್ಮಾರ್ಟ್‌ಫೋನ್ ಖರೀದಿಸುವಾಗ, ಟಚ್‌ಸ್ಕ್ರೀನ್ ಕಾರ್ಯನಿರ್ವಹಿಸುತ್ತಿದೆಯೇ ಅಥವಾ ಇಲ್ಲವೇ ಎಂಬುದನ್ನು ಸರಿಯಾಗಿ ಚೆಕ್ ಮಾಡಿಕೊಳ್ಳಿ. ಕೆಲವೊಮ್ಮೆ ಟಚ್‌ಸ್ಕ್ರೀನ್ ಹೊಸದಾಗಿ ಕಾಣುತ್ತದೆ. ಆದರೆ ಅದರಲ್ಲೂ ಏನಾದರೊಂದು ಸಮಸ್ಯೆಗಳಿರುತ್ತದೆ. ಅದಕ್ಕಾಗಿ ನೀವು ಖರೀದಿಸುವ ಮೊಬೈಲ್‌ನ ಸ್ಕ್ರೀನ್ನ ಪ್ರತಿಯೊಂದು ಮೂಲೆ ಮೂಲೆಯಲ್ಲೂ ಚೆಕ್ ಮಾಡಿ. ಜೊತೆಗೆ ಕೀಬೋರ್ಡ್ಗಳನ್ನು ಓಪನ್ ಮಾಡುವ ಮೂಲಕ ಅಲ್ಲಿಯೂ ಡಿಸ್ಪ್ಲೇಯನ್ನು ಚೆಕ್ ಮಾಡಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ