ದೇಶದ ಟೆಲಿಕಾಂ ಕಂಪೆನಿಗಳಲ್ಲಿ (Telecom Companies) ಎರಡನೇ ಸ್ಥಾನದಲ್ಲಿರುವ ಕಂಪೆನಿಯೆಂದರೆ ಏರ್‌ಟೆಲ್. ಈ ಕಂಪೆನಿ ತನ್ನ ಗ್ರಾಹಕರಿಗಾಗಿ ನಿರಂತರವಾಗಿ ಹೊಸ ಹೊಸ ರೀಚಾರ್ಜ್ ಯೋಜನೆಗಳನ್ನು (Recharge Plans) ಪರಿಚಯಿಸುತ್ತಾ ಬಂದಿದೆ. ದೇಶದ ನಂಬರ್ ಒನ್ ಕಂಪೆನಿಯಾಗಿರುವ ಜಿಯೋಗೆ ಪ್ರಬಲ ಪೈಪೋಟಿ ನೀಡುತ್ತಿರುವ ಕಂಪೆನಿಯೆಂದರೆ ಏರ್‌ಟೆಲ್. ಬಹಳ ಹಿಂದಿನಿಂದ ಈ ಕಂಪೆನಿ ಅಸ್ತಿತ್ವದಲ್ಲಿದ್ದು, ಸಾಕಷ್ಟು ಗ್ರಾಹಕರನ್ನು ಇದು ಹೊಂದಿದೆ. ಏರ್‌ಟೆಲ್ (Airtel) ಟೆಲಿಕಾಂನ ಬಹುತೇಕ ಯೋಜನೆಗಳು ಅಧಿಕ ಡೇಟಾ, ಆಕರ್ಷಕ ವ್ಯಾಲಿಡಿಟಿ ಪ್ರಯೋಜನಗಳನ್ನು ಒಳಗೊಂಡಿವೆ. ಇತ್ತೀಚೆಗೆ ಏರ್ಟೆಲ್ನಿಂದ ಬಿಡುಗಡೆಯಾದ ಕೆಲವು ಪ್ಲ್ಯಾನ್‌ಗಳಲ್ಲಿ ಲೈವ್ ಕ್ರಿಕೆಟ್ ಮ್ಯಾಚ್ ವೀಕ್ಷಿಸಬಹುದು.
ಜನಪ್ರಿಯ ಟೆಲಿಕಾಂ ಕಂಪೆನಿಗಳಲ್ಲಿ ಒಂದಾಗಿರುವ ಏರ್‌ಟೆಲ್ ಕ್ರಿಕೆಟ್ ಪ್ರಿಯರಿಗಾಗಿಯೇ ಹೊಸ ಹೊಸ ಪ್ಲ್ಯಾನ್ಗಳನ್ನು ಬಿಡುಗಡೆ ಮಾಡಿದೆ. ಈ ಮೂಲಕ ಈ ಬಾರಿಯ ಟೆಸ್ಟ್ ಕ್ರಿಕೆಟ್ ಪಂದ್ಯಾಟವನ್ನು ಉಚಿತವಾಗಿ ನೋಡ್ಬಹುದು. ಹಾಗಿದ್ರೆ ಆ ರೀಚಾರ್ಜ್ ಯೋಜನೆಗಳು ಯಾವುದೆಂದು ಈ ಲೇಖನದಲ್ಲಿ ಓದಿ.
ಏರ್‌ಟೆಲ್‌ನ 3359 ರೂಪಾಯಿ ಪ್ರೀಪೇಯ್ಡ್ ಯೋಜನೆ
ಏರ್‌ಟೆಲ್ ಟೆಲಿಕಾಂನ ಈ ಪ್ರೀಪೇಯ್ಡ್ ಪ್ಲ್ಯಾನ್ ವಾರ್ಷಿಕ ಅವಧಿಯ ಯೋಜನೆ ಇದಾಗಿದ್ದು, ಈ ಯೋಜನೆಯು ಒಟ್ಟು 365 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಪಡೆದಿದೆ. ಪ್ರತಿದಿನ 2.5 ಜಿಬಿ ಡೇಟಾ ಪ್ರಯೋಜನಗಳು ಗ್ರಾಹಕರಿಗೆ ಇದರಲ್ಲಿ ಲಭ್ಯ ವಾಗಲಿವೆ. ಏರ್‌ಟೆಲ್ ಸೇರಿದಂತೆ ಇತರೆ ನೆಟವರ್ಕ್ ಗಳಿಗೂ ಅನಿಯಮಿತ ಉಚಿತ ವಾಯ್ಸ್ ಕರೆಗಳ ಸೌಲಭ್ಯ ಸಹ ಸಿಗುತ್ತದೆ.
ಇದನ್ನೂ ಓದಿ: ವಾಟ್ಸಾಪ್ನಿಂದ ಹೊಸ ಫೀಚರ್ ಬಿಡುಗಡೆ! ಬಳಕೆದಾರರಿಗೆ ಚಾಟ್ ಮಾಡಲು ಇನ್ನಷ್ಟು ಸುಲಭ
ಹಾಗೆಯೇ ಈ ಯೋಜನೆಯಲ್ಲಿ ಗ್ರಾಹಕರಿಗೆ ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ. ಇದರೊಂದಿಗೆ ಈ ಪ್ರೀಪೇಯ್ಡ್ ಪ್ಲ್ಯಾನಿನಲ್ಲಿ ಹೆಚ್ಚುವರಿ ಯಾಗಿ ಮೂರು ತಿಂಗಳ ಡಿಸ್ನಿ+ ಹಾಟ್‌ಸ್ಟಾರ್ (disney+ hotstar) ಚಂದಾದಾರಿಕೆ ಹಾಗೂ ಏರ್‌ಟೆಲ್ ಆ್ಯಪ್ಗಳ ಸೌಲಭ್ಯ ಸಹ ದೊರೆಯುತ್ತದೆ.
ಏರ್‌ಟೆಲ್‌ನ 839 ರೂಪಾಯಿ ಪ್ರೀಪೇಯ್ಡ್ ಯೋಜನೆ
ಏರ್‌ಟೆಲ್ ಟೆಲಿಕಾಂ ನ 839 ರೂಪಾಯಿ ಪ್ಲ್ಯಾನ್ನಲ್ಲಿ ಪ್ರತಿದಿನ 2ಜಿಬಿ ಡೇಟಾ ಪ್ರಯೋಜನ ಒಳಗೊಂಡಿದೆ. ಇದರೊಂದಿಗೆ ಯಾವುದೇ ನೆಟವರ್ಕ್ಗೆ ಅನಿಯಮಿತ ಉಚಿತ ವಾಯ್ಸ್ ಕರೆ ಮಾಡುವ ಪ್ರಯೋಜನ ಸಿಗಲಿದೆ. ಇದರೊಂದಿಗೆ ಈ ಯೋಜನೆ ಯಲ್ಲಿ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸೌಲಭ್ಯ ಸಹ ದೊರೆಯುತ್ತದೆ.
ಇನ್ನು ಈ ಪ್ರೀಪೇಯ್ಡ್ ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಹೆಚ್ಚುವರಿಯಾಗಿ ಡಿಸ್ನಿ+ ಹಾಟ್‌ಸ್ಟಾರ್ ಚಂದಾದಾರಿಕೆ ಸೌಲಭ್ಯ ಲಭ್ಯ ಇದ್ದು, ಜೊತೆಗೆ ಏರ್‌ಟೆಲ್ ಆ್ಯಪ್ಗಳ ಸೇವೆಗಳು ದೊರೆಯಲಿದೆ. ಹಾಗೆಯೇ ಫಾಸ್ಟ್‌ಟ್ಯಾಗ್ ಕ್ಯಾಶ್‌ಬ್ಯಾಕ್, ವಿಂಕ್ ಮ್ಯೂಸಿಕ್ ಲಭ್ಯವಿರುತ್ತದೆ.
ಏರ್‌ಟೆಲ್ ಟೆಲಿಕಾಂನ 499 ರೂಪಾಯಿ ಪ್ರೀಪೇಯ್ಡ್ ಪ್ಲ್ಯಾನ್
ಏರ್‌ಟೆಲ್ ಟೆಲಿಕಾಂನ 499 ರೂಪಾಯಿ ಪ್ರಿಪೇಯ್ಡ್ ಪ್ಲ್ಯಾನ್ನಲ್ಲಿ ಗ್ರಾಹಕರು ಪ್ರತಿದಿನ 3ಜಿಬಿ ಡೇಟಾ ಪ್ರಯೋಜನವನ್ನು ಪಡೆಯಬಹುದಾಗಿದೆ. ಇದರೊಂದಿಗೆ ಯಾವುದೇ ನೆಟವರ್ಕ್ಗೆ ಅನ್ಲಿಮಿಟೆಡ್ ಉಚಿತ ವಾಯ್ಸ್ ಕರೆಗಳ ಪ್ರಯೋಜನ ಸಹ ಸಿಗಲಿದೆ. ಹಾಗೆಯೇ ಇದರೊಂದಿಗೆ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಅನ್ನು ಮಾಡುವ ಸೌಲಭ್ಯ ಸಹ ಹೊಂದಿದೆ. ಇನ್ನು ಈ ಪ್ರೀಪೇಯ್ಡ್ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದ್ದು, ಹೆಚ್ಚುವರಿಯಾಗಿ ಡಿಸ್ನಿ+ ಹಾಟ್‌ಸ್ಟಾರ್ ಚಂದಾದಾರಿಕೆ ಸೌಲಭ್ಯ ಲಭ್ಯ ಇದ್ದು, ಜೊತೆಗೆ ಏರ್‌ಟೆಲ್ ಆ್ಯಪ್ಗಳ ಸೇವೆಗಳು ಲಭ್ಯ ಆಗಲಿವೆ. ಹಾಗೆಯೇ ಫಾಸ್ಟ್‌ಟ್ಯಾಗ್ ಕ್ಯಾಶ್‌ಬ್ಯಾಕ್, ವಿಂಕ್ ಮ್ಯೂಸಿಕ್ ಲಭ್ಯವಿದೆ.
ಏರ್‌ಟೆಲ್ ಟೆಲಿಕಾಂನ 399 ರೂಪಾಯಿ ಪ್ರೀಪೇಯ್ಡ್ ಪ್ಲ್ಯಾನ್
ಏರ್‌ಟೆಲ್ ಟೆಲಿಕಾಂನ ಈ ಪ್ರೀಪೇಯ್ಡ್ ಪ್ಲ್ಯಾನ್ನಲ್ಲಿ ಪ್ರತಿದಿನ 2.5ಜಿಬಿ ಡೇಟಾ ಪ್ರಯೋಜನ ಲಭ್ಯವಾಗಲಿದೆ. ಇದರೊಂದಿಗೆ ಯಾವುದೇ ನೆಟವರ್ಕ್ಗೆ ಅನಿಯಮಿತ ಉಚಿತ ವಾಯ್ಸ್ ಕರೆ ಮಾಡುವ ಪ್ರಯೋಜನ ಸಿಗುತ್ತದೆ. ಹಾಗೆಯೇ ಇದರೊಂದಿಗೆ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸೌಲಭ್ಯ ಸಹ ಹೊಂದಿದೆ. ಇನ್ನು ಈ ಪ್ರೀಪೇಯ್ಡ್ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದ್ದು, ಹೆಚ್ಚುವರಿಯಾಗಿ ಇದರಲ್ಲಿ ಡಿಸ್ನಿ+ ಹಾಟ್‌ಸ್ಟಾರ್ ಚಂದಾದಾರಿಕೆ ಸೌಲಭ್ಯ ಲಭ್ಯ ಇದ್ದು, ಜೊತೆಗೆ ಏರ್‌ಟೆಲ್ ಆ್ಯಪ್ಗಳ ಸೇವೆಗಳು ಲಭ್ಯವಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ