ಭಾರತದಲ್ಲಿ ಹಲವಾರು ಟೆಲಿಕಾಂ ಕಂಪೆನಿಗಳಿವೆ (Telecom Company). ಅದರಲ್ಲಿ ಜಿಯೋ, ಏರ್‌ಟೆಲ್, ವೊಡಫೋನ್ ಐಡಿಯಾ (Vodafone Idea) ಕಂಪೆನಿಗಳಿ ಭಾರೀ ಮುಂಚೂಣಿಯಲ್ಲಿವೆ. ಜಿಯೋ ಅತೀ ಹೆಚ್ಚು ಗ್ರಾಹಕರನ್ನು ಹೊಂದಿಕೊಂಡು ಭಾರತದ ಟೆಲಿಕಾಂ ಕಂಪೆನಿಗಳಲ್ಲಿ ಮೊದಲ ಸ್ಥಾನದಲ್ಲಿದೆ. ಅದೇ ರೀತಿ ಇದಕ್ಕೆ ಪ್ರಬಲ ಪೈಪೋಟಿ ನೀಡುವ ನಿಟ್ಟಿನಲ್ಲಿ ಉಳಿದ ಕಂಪೆನಿಗಳು ಹೊಸ ಹೊಸ ರೀಚಾರ್ಜ್ ಪ್ಲ್ಯಾನ್ಗಳನ್ನು ಪರಿಚಯಿಸುತ್ತಲೇ ಇದೆ. ಜಿಯೋ (Jio) ತನ್ನ ಕಂಪೆನಿಯ ಅಡಿಯಲ್ಲಿ ಭಾರೀ ಅಗ್ಗದ ಬೆಲೆಯ ರೀಚಾರ್ಜ್ ಯೋಜನೆಗಳನ್ನು (Recharge Plans) ತನ್ನ ಗ್ರಾಹಕರಿಗೆ ಪರಿಚಯಿಸುವ ಮೂಲಕ ಎಲ್ಲರ ಗಮನಸೆಳೆದಿದೆ ಎಂದು ಹೇಳ್ಬಹುದು. ಇದೀಗ ಏರ್‌ಟೆಲ್, ವಿಐ ಸಹಿದೇ ರೀತಿಯ ಹಲವು ಯೋಜನೆಗಳನ್ನು ಪರಿಚಯಿಸಿದೆ.
ಜಿಯೋ, ಏರ್‌ಟೆಲ್, ವೊಡಫೋನ್ಐಡಿಯಾ ಟೆಲಿಕಾಂ ಕಂಪೆನಿಗಳು ಬಜೆಟ್ ಬೆಲೆಯಲ್ಲಿ ರೀಚಾರ್ಜ್ ಪ್ಲ್ಯಾನ್ಗಳನ್ನು ಪರಿಚಯಿಸುವಲ್ಲಿ ಭಾರತದಲ್ಲಿ ಯಶಸ್ವಿಯನ್ನು ಕಂಡಿದೆ. ಇದೀಗ ಲಭ್ಯವಿರುವಂತಹ 200 ರೂಪಾಯಿ ಒಳಗಿನ ರೀಚಾರ್ಜ್ ಪ್ಲ್ಯಾನ್ಗಳು ಯಾವುದೆಲ್ಲಾಶ ಎಂಬುದನ್ನು ಈ ಲೇಖನದ ಮೂಲಕ ತಿಳಿಯೋಣ.
ಜಿಯೋ ಕಂಪೆನಿಯ 200 ರೂ. ಒಳಗಿನ ರೀಚಾರ್ಜ್ ಯೋಜನೆಗಳು
ಜಿಯೋ ಟೆಲಿಕಾಂ ನೀಡುತ್ತಿರುವ ಅಗ್ಗದ ಬೆಲೆಯ ಪ್ರಿಪೇಯ್ಡ್ ಪ್ಲಾನ್ ಅಂದರೆ ಅದು 149 ರೂಪಾಯಿ ಬೆಲೆಯ ಪ್ರಿಪೇಯ್ಡ್ ಪ್ಲಾನ್. ಈ ಪ್ಲಾನ್ ಒಟ್ಟು 20 ದಿನಗಳ ವ್ಯಾಲಿಡಿಟಿ ಅಔಧಿಯನ್ನು ಹೊಂದಿದೆ. ಈ ಸಮಯದಲ್ಲಿ ಗ್ರಾಹಕರು ಪ್ರತಿದಿನ 100 ಎಸ್ಎಮ್ಎಸ್ ಅನ್ನು ಉಚಿತವಾಗಿ ಮಾಡಬಹುದು ಮತ್ತು ದೈನಂದಿನ 1ಜಿಬಿ ಮೊಬೈಲ್ ಡೇಟಾ ಸೌಲಭ್ಯ ನೀಡಲಿದೆ. ಇದಲ್ಲದೆ. ಅನ್ಲಿಮಿಟೆಡ್ ವಾಯ್ಸ್ ಕಾಲ್ ಸೌಲಭ್ಯವೂ ದೊರೆಯುತ್ತದೆ.
ಜಿಯೋನ 179 ರೂ.ಪ್ರಿಪೇಯ್ಡ್ ಪ್ಲ್ಯಾನ್:
ಜಿಯೋ ಕಂಪೆನಿಯ ಈ ಪ್ಲ್ಯಾನ್ ಒಟ್ಟು 24 ದಿನಗಳ ವ್ಯಾಲಿಡಿಟಿ ಅವಧಿಯನ್ನು ನೀಡಲಿದೆ. ಈ ಅವಧಿಯಲ್ಲಿ ದೈನಂದಿನ 100 ಎಸ್ಎಮ್ಎಸ್ ಉಚಿತವಾಗಿ ಮಾಡುವ ಸೌಲಭ್ಯ ಮತ್ತು 1ಜಿಬಿ ಡೇಟಾ ಪ್ರಯೋಜನ ದೊರೆಯಲಿದೆ. ಜೊತೆಗೆ ಅನ್ಲಿಮಿಟೆಡ್ ವಾಯ್ಸ್ ಕಾಲ್ ಸೌಲಭ್ಯ ಕೂಡ ಲಭ್ಯವಾಗಲಿದೆ.
ಏರ್ಟೆಲ್ನ 200 ರೂಪಾಯಿ ಒಳಗಿನ ರೀಚಾರ್ಜ್ ಪ್ಲ್ಯಾನ್
ಏರ್‌ಟೆಲ್ 155 ರೂ.ಪ್ರಿಪೇಯ್ಡ್ ಪ್ಲ್ಯಾನ್:
ಏರ್‌ಟೆಲ್ ಟೆಲಿಕಾಂನ ಈ ಪ್ಲಾನ್ ನಿಮಗೆ 24 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಇನ್ನು ಇದರಲ್ಲಿ 1ಜಿಬಿ ಡೇಟಾದ ಜೊತೆಗೆ ಉಚಿತವಾಗಿ 300 ಎಸ್ಎಮ್ಎಸ್ ಅನ್ನು ಮಾಡಬಹುದಾಗಿದೆ.
ಏರ್‌ಟೆಲ್ 179 ರೂ. ಪ್ರಿಪೇಯ್ಡ್ ಪ್ಲ್ಯಾನ್:
ಏರ್‌ಟೆಲ್ ಟೆಲಿಕಾಂ ನೀಡುತ್ತಿರುವ ಅಗ್ಗದ ಪ್ರಿಪೇಯ್ಡ್ ಪ್ಲ್ಯಾನ್ಗಳಲ್ಲಿ ಇದು ಕೂಡ ಒಂದು. ಈ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುತ್ತದೆ. ಈ ಅವಧಿಯಲ್ಲಿ ಅನ್ಲಿಮಿಟೆಡ್ ವಾಯ್ಸ್ ಕಾಲ್ ಪ್ರಯೋಜನ ದೊರೆಯಲಿದೆ. ಇನ್ನು ಈ ಯೋಜನೆಯಲ್ಲಿ 300 ಎಸ್ಎಮ್ಎಸ್ ಸೌಲಭ್ಯ ಮತ್ತು 2ಜಿಬಿ ಡೇಟಾ ಸೌಲಭ್ಯ ಸಿಗಲಿದೆ.
ಏರ್‌ಟೆಲ್ 199 ರೂ.ಪ್ರಿಪೇಯ್ಡ್ ಪ್ಲಾನ್:
ಏರ್ಟೆಲ್ನ ಈ ಪ್ಲ್ಯಾನ್ನಲ್ಲಿ ಗ್ರಾಹಕರಿಗೆ ಒಟ್ಟು 30 ದಿನಗಳ ವ್ಯಾಲಿಡಿಟಿ ಅವಧಿ ಸಿಗಲಿದೆ. ಇನ್ನು ಈ ಪ್ಲ್ಯಾನ್ ಮೂಲಕ ಗ್ರಾಹಕರು ಅನ್ಲಿಮಿಟೆಡ್ ವಾಯ್ಸ್ ಕಾಲ್ ಸೌಲಭ್ಯ ಸಿಗಲಿದೆ. ಈ ಯೋಜನೆಯ ಮಾನ್ಯತೆಯ ಅವಧಿಯಲ್ಲಿ 300 ಎಸ್ಎಮ್ಎಸ್ ಮತ್ತು 3ಜಿಬಿ ಡೇಟಾ ಲಭ್ಯವಾಗುತ್ತದೆ.
ವೊಡಫೋನ್ ಐಡಿಯಾ 200 ರೂಪಾಯಿ ಒಳಗಿನ ರೀಚಾರ್ಜ್ ಯೋಜನೆಗಳು
ವೊಡಾಫೋನ್ ಐಡಿಯಾ 149 ರೂ.ಪ್ರಿಪೇಯ್ಡ್ ಪ್ಲ್ಯಾನ್:
ವೊಡಫೋನ್ ಐಡಿಯಾದ ಈ ಪ್ಲ್ಯಾನ್ ಒಟ್ಟು 21 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಇದರಲ್ಲಿ ಒಟ್ಟು 300 ಎಸ್ಎಮ್ಎಸ್ ಸೌಲಭ್ಯ ಮತ್ತು 1ಜಿಬಿ ಡೇಟಾ ಸೌಲಭ್ಯ ದೊರೆಯಲಿದೆ. ಅಲ್ಲದೆ ಅನ್ಲಿಮಿಟೆಡ್ ವಾಯ್ಸ್ ಕಾಲ್ ಮಾಡುವ ಪ್ರಯೋಜನ ಕೂಡ ಲಭ್ಯವಾಗಲಿದೆ.
ವೊಡಾಫೋನ್ ಐಡಿಯಾ 179ರೂ.ಪ್ರಿಪೇಯ್ಡ್ ಪ್ಲ್ಯಾನ್:
ವಿಐ ಟೆಲಿಕಾಂನ ಈ ಪ್ರಿಪೇಯ್ಡ್ ಪ್ಲ್ಯಾನ್ನಲ್ಲಿ ಗ್ರಾಹಕರು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ನೀಡಲಿದೆ. ಇನ್ನು ಈ ಯೋಜನೆಯಲ್ಲಿ ಅನ್ಲಿಮಿಟೆಡ್ ವಾಯ್ಸ್ ಕಾಲ್ ಪ್ರಯೋಜನ ಹಾಗೂ 300 ಎಸ್ಎಮ್ಎಸ್ ಸೌಲಭ್ಯ ದೊರೆಯಲಿದೆ. ಜೊತೆಗೆ ಈ ಯೋಜನೆಯಲ್ಲಿ ಹೆಚ್ಚುವರಿಯಾಗಿ 2ಜಿಬಿ ಡೇಟಾ ಪ್ರಯೋಜನ ಸಹ ಲಭ್ಯವಾಗಲಿದೆ.
ಇದನ್ನೂ ಓದಿ: ಸ್ಯಾಮ್ಸಂಗ್ನ ಈ ಸ್ಮಾರ್ಟ್ಫೋನ್ ಮೇಲೆ ಭಾರೀ ಡಿಸ್ಕೌಂಟ್! ಕೇವಲ 44 ರೂಪಾಯಿಗೆ ಖರೀದಿಸಿ
ವೊಡಾಫೋನ್ ಐಡಿಯಾ 195ರೂ.ಪ್ರಿಪೇಯ್ಡ್ ಪ್ಲಾನ್:
ವೊಡಫೋನ್ ಐಡಿಯಾ ಪರಿಚಯಿಸುವ ಅಗ್ಗದ ಪ್ಲ್ಯಾನ್ಗಳಲ್ಲಿ ಇದೂ ಸಹ ಒಂದಾಗಿದೆ. ಈ ಪ್ಲಾನ್ ಒಂದು ತಿಂಗಳ ವ್ಯಾಲಿಡಿಟಿಯನ್ನು ಹೊಂದಿದೆ. ಈ ಅವಧಿಯಲ್ಲಿ ದೈನಂದಿನ ಅನಿಯಮಿತ ಕರೆ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ. ಜೊತೆಗೆ 300 ಎಸ್ಎಮ್ಎಸ್ ಮತ್ತು ಒಟ್ಟು ಅವಧಿಗೆ 2ಜಿಬಿ ಡೇಟಾ ಸೌಲಭ್ಯ ದೊರೆಯಲಿದೆ. ಈ ಪ್ಲ್ಯಾನ್ ಅನ್ನು ನೀವು ವಿಐ ಅಪ್ಲಿಕೇಶನ್ ಮೂಲಕ ರೀಚಾರ್ಜ್ ಮಾಡಿದರೆ 2ಜಿಬಿ ಹೆಚ್ಚುವರಿ ಡೇಟಾ ಪ್ರಯೋಜನ ಸಿಗಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ