• Home
  • »
  • News
  • »
  • tech
  • »
  • iPhone: ನಿಮ್ಮ ಐಫೋನ್‌ ಸ್ಲೋ ಆಗಿದ್ಯಾ? ಈ ಸೂಪರ್​ ಟ್ರಿಕ್​ ಫಾಲೋ ಮಾಡಿ, ಆಮೇಲೆ ಮ್ಯಾಜಿಕ್​ ನೋಡಿ!

iPhone: ನಿಮ್ಮ ಐಫೋನ್‌ ಸ್ಲೋ ಆಗಿದ್ಯಾ? ಈ ಸೂಪರ್​ ಟ್ರಿಕ್​ ಫಾಲೋ ಮಾಡಿ, ಆಮೇಲೆ ಮ್ಯಾಜಿಕ್​ ನೋಡಿ!

ಐಫೋನ್‌ ಸ್ಲೋ

ಐಫೋನ್‌ ಸ್ಲೋ

ಆ್ಯಪಲ್‌ ಕಂಪನಿ ದಿನದಿಂದ ದಿನಕ್ಕೆ ಹೊಸ ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಲೇ ಇದೆ. ಇದೀಗ ಈಗಿನ ಕೆಲವೊಂದು ಐಫೋನ್‌ಗಳೂ ಬಹಳ ಸ್ಲೋ ಅಗಿ ಕಾರ್ಯನಿರ್ವಹಿಸುತ್ತಿದೆ ಎಂಬ ವರದಿಗಳು ಕೇಳಿಬರುತ್ತಿದೆ

  • Share this:

    ತಂತ್ರಜ್ಞಾನ ಯುಗವಾದ ಇಂದಿನ ಜಗತ್ತಿನಲ್ಲಿ ಸ್ಮಾರ್ಟ್‌ಫೋನ್‌ (Smartphone) ಬಳಕೆದಾರರ ಸಂಖ್ಯೆ ಹೆಚ್ಚುತ್ತಲೇ ಇದೆ. ಅದೂ ಕೂಡ ಲಾಕ್‌ಡೌನ್‌ (Lockdown) ಬಂದನಂತರ ಎಲ್ಲರೂ ಯಾವುದೇ ಕೆಲಸಗಳನ್ನು ಮಾಡಬೇಕಾದರೂ, ಯಾವುದೇ ವ್ಯವಹಾರವನ್ನು ನಿರ್ವಹಿಸಬೇಕಾದರು ಈ ಸ್ಮಾರ್ಟ್‌ಫೋನ್‌ ಅನ್ನೇ ಬಳಸುತ್ತಾರೆ. ಈ ಮಧ್ಯೆ ಸ್ಮಾರ್ಟ್‌ಫೋನ್‌ ಬಳಕೆದಾರರ ಸಂಖ್ಯೆ ಹೆಚ್ಚಾಗಿರುವುದರಿಂದ ಈ ಆಂಡ್ರಾಯ್ಡ್‌ (Android) ಮತ್ತು ಐಫೋನ್‌ನಂತಹ (IPhone) ಮೊಬೈಲ್‌ಗಳು (Mobile) ಬಹಳಷ್ಟು ಸ್ಲೋ (Slow) ಅಗುತ್ತಿರುವ ಸಮಸ್ಯೆಗಳನ್ನು ಬಳಕೆದಾರರು ಎದುರಿಸುತ್ತಿದ್ದಾರೆ. ಇದನ್ನು ಅನುಭವವಿಸಿದ ಗ್ರಾಹಕರು ತಮ್ಮ ಸಮಸ್ಯೆಗಳನ್ನು ಕಂಪನಿಗಳಿಗೆ (Company) ವರದಿ (Report) ಮಾಡಿದ್ದಾರೆ. ಇದೀಗ ಆ್ಯಪಲ್‌ (Apple) ಕಂಪನಿಯ ಸ್ಮಾರ್ಟ್‌ಫೋನ್‌ ಬಳಕೆದಾರರು ಕೂಡ ಸಮಸ್ಯೆಗಳನ್ನಎದುರಿಸುತ್ತಿದ್ದಾರೆ ಎಂಬುದು ತಿಳಿದು ಬಂದಿದೆ. ಈ ಸಮಸ್ಯೆಗಳಿಗೆ ಏನು ಮಾಡ್ಬೇಕು ಎಂಬುದಕ್ಕೆ ಇಲ್ಲಿದೆ ಮಾಹಿತಿ.


    ಆ್ಯಪಲ್‌ ಕಂಪನಿ ದಿನದಿಂದ ದಿನಕ್ಕೆ ಹೊಸ ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಲೇ ಇದೆ. ಇದೀಗ ಈಗಿನ ಕೆಲವೊಂದು ಐಫೋನ್‌ಗಳೂ ಬಹಳ ಸ್ಲೋ ಅಗಿ ಕಾರ್ಯನಿರ್ವಹಿಸುತ್ತಿದೆ ಎಂಬ ವರದಿಗಳು ಕೇಳಿಬರುತ್ತಿದೆ. ಈ ಎಲ್ಲಾ ಸಮಸ್ಯೆಗಳನ್ನೂ ನೀವೂ ಕಂಡುಕೊಂಡಿದ್ದೀರ ಹಾಗಿದ್ದರೆ ಆದಷ್ಟು ಬೇಗ ಈ ಟ್ರಿಕ್ಸ್‌ ಅನ್ನು ಫಾಲೋ ಮಾಡಿ.


    ಡಿವೈಸ್‌ ಕ್ಯಾಶೆ ಕ್ಲಿಯರ್‌ ಮಾಡ್ಬೇಕು:


    ನೀವು ಐಫೋನ್‌ ಬಳಸುತ್ತಿದ್ದರೆ. ಅದರಲ್ಲಿರುವಂತಹ ಪ್ರತಿಯೊಂದು ಫೈಲ್‌ಗಳು ಕಕೂಡ ದೊಡ್ಡದಾಗಿರುತ್ತದೆ. ಕೆಲವೊಮ್ಮೆ ವೆಬ್‌ಸೈಟ್‌ಗಳಲ್ಲಿ ಸರ್ಚ್‌ ಮಾಡಿದ ಕೆಲವೊಂದು ಲಿಂಕ್‌ಗಳು ಹಾಗೇ ಇರುತ್ತದೆ. ಆದರೆ ಇದು ದೊಡ್ಡ ಮಟ್ಟದಲ್ಲಿ ನಿಮ್ಮ ಮೊಬೈಲ್‌ನಲ್ಲಿ ಕ್ಯಾಶೆ ಡಾಟಾವನ್ನು ಕ್ರಿಯೇಟ್‌ ಮಾಡುತ್ತದೆ. ಆದರೆ ಇದನ್ನು ನಿಮಗೆ ಸುಲಭದಲ್ಲಿ ಕ್ಲಿಯರ್‌ ಮಾಡುವ ಅವಕಾಶವಿದೆ.


    Here are super tricks to keep your iPhone from slowing down
    ಐಫೋನ್‌


    ಇಲ್ಲಿದೆ ಮಾಹಿತಿ: ಇಂಥ ಆಫರ್‌ ಹಿಂದೆಂದೂ ಕಂಡಿಲ್ಲ! ಜಸ್ಟ್ ‌3999 ರೂಪಾಯಿಗೆ ಈ ಮೊಬೈಲ್‌ ಖರೀದಿಸಿ


    ಹೇಗೆಂದರೆ ನೀವು ಮೊದಲು ಸೆಟ್ಟಿಂಗ್ಸ್‌ಗೆ ಹೋಗಿ ಸಫಾರಿ ಎಂಬ ಆಯ್ಕೆ ಸಿಗುತ್ತದೆ ಅದ್ರಲ್ಲಿ ನೀವು ಕ್ಲಿಯರ್‌ ಹಿಸ್ಟರಿಯನ್ನು ಆಯ್ಕೆ ಮಾಡಿ ವೆಬ್‌ಸೈಟ್‌ ಡಾಟಾ ವನ್ನು ಕ್ಲಿಕ್‌ ಮಾಡಿ ನಿಮ್ಮ ಮೊಬೈಲ್‌ನ ಕ್ಯಾಶೆ ಡಾಟಾವನ್ನು ಕ್ಲಿಯರ್‌ ಮಾಡಿಕೊಳ್ಳಬಹುದಾಗಿದೆ.


    ಸಾಫ್ಟ್‌ವೇರ್‌ ಅಪ್‌ಡೇಟ್‌ ಮಾಡಿ:


    ಐಫೋನ್‌ಗಳಲ್ಲಿ ದಿನದಿಂದ ದಿನಕ್ಕೆ ತನ್ನ ಮೊಬೈಲ್‌ನ ಸಾಫ್ಟ್‌ವೇರ್‌ ಅನ್ನು ಅಪ್‌ಡೇಟ್‌ ಮಾಡಲು ಜನರಿಗೆ ಆಯ್ಕೆಯನ್ನು ನೀಡುತ್ತಿರುತ್ತದೆ. ಈ ಸಾಫ್ಟ್‌ವೇರ್‌ ಅಪ್‌ಡೇಟ್‌ ಮಾಡಿದಾಗ ನಿಮಗೆ ವಿಶಾಲ ಸ್ಟೋರೇಜ್‌ನ ಬಗ್‌ಗಳನ್ನು ನೀಡುತ್ತದೆ. ಆಗ ಬಳಕೆದಾರರು ತಮಗೆ ಬೇಕಾದಷ್ಟು ಡಾಟಾ ಸೇವ್‌ ಮಾಡುವ ಸ್ಟೋರೇಜ್‌ ಅವಕಾಶವನ್ನು ನೀಡುತ್ತದೆ. ಇದಲ್ಲದೆ ಅಪ್‌ಡೇಟ್‌ ಮಾಡುವುದರಿಂದ ನಿಮ್ಮ ಸ್ಮಾರ್ಟ್‌ಫೋನ್‌ ಇನ್ನಷ್ಟು ವೇಗವನ್ನು ಹೊಂದುತ್ತದೆ.


    Here are super tricks to keep your iPhone from slowing down
    ಐಫೋನ್‌


    ನಿಮ್ಮ ಫೋನ್‌ನ ಬ್ಯಾಟರಿಯನ್ನು ಆಗಾಗ ಚೆಕ್‌ ಮಾಡಿ:


    ಐಫೋನ್‌ಗಳು ಸಾಮಾನ್ಯವಾಗಿ ಗುಣಮಟ್ಟದ ಸ್ಮಾರ್ಟ್‌ಫೋನ್‌ಗಳಾಗಿವೆ. ಜೊತೆಗೆ ಇದು ಹೊಂದಿರುವಂತಹ ಪ್ರೊಸೆಸರ್‌ನ ಕಾರ್ಯಗಳು ಕೂಡ ದೊಡ್ಡಮಟ್ಟದಲ್ಲಿರುತ್ತೆ. ಆದರೆ ಬಳಕೆದಾರರ ಅತಿಯಾದ ಬಳಕೆಯಿಂದ ಇದರ ಬ್ಯಾಟರಿ ಡ್ಯಾಮೇಜ್‌ ಆಗುವ ಸಂಭವಗಳಿರುತ್ತದೆ. ಇದರಿಂದ ಕೆಲವೊಮ್ಮೆ ನಿಮ್ಮ ಮೊಬೈಲ್‌ ತನ್ನಷ್ಟಕೇ ಆಫ್‌ ಆಗಬಹುದು ಮತ್ತು ಇನ್ನೂ ಕೆಲವೊಮ್ಮೆ ಸ್ಲೋ ಆಗಲೂಬಹುದು. ಅದಕ್ಕಾಗಿ ನಿಮ್ಮ ಬ್ಯಾಟರಿಯನ್ನು ಚೆಕ್‌ ಮಾಡ್ತಾ ಇರಬೇಕು ಅಥವಾ ನಿಮ್ಮ ಹತ್ತಿರದ ಐಫೋನ್‌ ಸರ್ವೀಸ್‌ ಸೆಂಟರ್‌ ಅನ್ನು ಭೇಟಿಯಾಗಿ.


    ನಿಮ್ಮ ಐಫೋನ್‌ ರಿಬೂಟ್‌ ಮಾಡಿ:


    ಫೋನ್‌ ರಿಬೂಟ್‌ ಮಾಡುವುದು ಒಮ್ಮೆ ಕೇಳುವಾಗ ಸರಳ ಮಾಹಿತಿ ಎಂದು ಆಗಬಹುದು. ಆದರೆ ಕೆಲವೊಂದು ಬಾರಿ ಈ ರಿಬೂಟ್‌ ಅನ್ನು ಬಳಕೆದಾರರು ಎಷ್ಟು ತಿಂಗಳಾದರೂ ಮಾಡೇ ಇರುವುದಿಲ್ಲ. ಆದ್ದರಿಂದ ಈ ರಿಬೂಟ್‌ ಮಾಡದೇ ಇರುವುದರಿಂದ ನೀವು ಬಳಸುವ ಐಫೋನ್‌ ಮತ್ತಷ್ಟು ಸ್ಲೋ ಅಗುವ ಸಾಧ್ಯತೆಗಳಿರುತ್ತವೆ. ಕೆಲವೊಮ್ಮೆ ಬಳಕೆದಾರರು ಅಪ್ಲಿಕೇಶನ್‌ಗಳನ್ನು ಬಳಸಿ ಬ್ಯಾಕ್‌ ಬಂದಿರುತ್ತಾರೆ.


    ಇಲ್ಲಿದೆ ಮಾಹಿತಿ: ನಿಮ್ಮ ಆಂಡ್ರಾಯ್ಡ್ ಸರಿಯಾಗಿ ಕೆಲಸ ಮಾಡುತ್ತಿಲ್ಲವೇ ? ಈ ತಂತ್ರಗಳನ್ನೊಮ್ಮೆ ಬಳಸಿ


    ಆದರೆ ಅದು ಬ್ಯಾಗ್‌ರೌಂಡ್‌ನಲ್ಲಿ ಕಾರ್ಯನಿರ್ವಹಿಸುತ್ತಿರುತ್ತದೆ. ಆದರೆ ಒಮ್ಮೆ ರಿಬೂಟ್‌ ಕೊಟ್ಟರೆ ಈ ರೀತಿ ಅಪ್ಲಿಕೇಶನ್‌ಗಳು ಒಮ್ಮೆಲೆ ಕ್ಲೋಸ್‌ ಆಗುವ ಸಾಧಯತೆಗಳಿರುತ್ತದೆ. ಜೊತೆಗೆ ನಿಮ್ಮ ಮೊಬೈಲ್‌ನ ಬ್ಯಾಟರಿ ಕೂಡ ಯಾವುದೇ ರೀತಿಯಲ್ಲಿ ಸಮಸ್ಯೆಗಳನ್ನು ಎದುರಿಸುವುದಿಲ್ಲ.

    Published by:Harshith AS
    First published: