Instagram: ಆ್ಯಂಡ್ರಾಯ್ಡ್ ಮತ್ತು ಐಫೋನ್​​ನಲ್ಲಿ ‘‘Dark Mode‘‘ ಸಕ್ರಿಯಗೊಳಿಸುವುದು ಹೇಗೆ? ಇಲ್ಲಿದೆ ಮಾಹಿತಿ

Instagram Dark Mode: ಇನ್​ಸ್ಟಾಗ್ರಾಂ ತನ್ನ ಬಳಕೆದಾರರಿಗೆ ಡಾರ್ಕ್​ ಮೋಡ್​ ಮತ್ತು ಬ್ಲೂ ಮೋಡ್​ ಆಯ್ಕೆಯನ್ನ ಪರಿಚಯಿಸಿದೆ. ಆ್ಯಂಡ್ರಾಯ್ಡ್​ ಮತ್ತು ಐಫೋನ್​ ಬಳಕೆದಾರರಿಗೆ ನೂತನ ಫೀಚರ್ಸ್​ ಬಳಕೆಗೆ ಸಿಗಲಿದೆ. ಸದಾ ಬಳಕೆಯಲ್ಲಿರುವ ಗ್ರಾಹಕರಿಗೆ ಇನ್​ಸ್ಟಾಗ್ರಾಂ ಪರಿಚಯಸಿರುವ ಹೊಸ ಥೀಮ್​ಗಳು ಸಹಾಯಕ್ಕೆ ಬರಲಿದೆ. ಮೊಬೈಲ್​ ಸ್ಕ್ರೀನ್ ಬೆಳಕಿನ ಸಮಸ್ಯೆಯಿಂದ ಕಣ್ಣಿನ ಆಗುವ ತೊಂದರೆ ದೂರವಾಗಲಿದೆ. ಮಾತ್ರವಲ್ಲದೆ ಸ್ಮಾರ್ಟ್​ಫೋನ್​ ಬ್ಯಾಟರಿಯೂ ಉಳಿಯಲಿದೆ.

Instagram

Instagram

  • Share this:
    Instagram Dark Mode Feature: ಇನ್​ಸ್ಟಾಗ್ರಾಂ ಬಹುತೇಕರ ನೆಚ್ಚಿನ ಜಾಲತಾಣವಾಗಿದೆ, ಫೇಸ್​ಬುಕ್​ (Facebook) ಒಡೆತನದ ಈ ತಾಣವು ಬಹುಸಂಖ್ಯಾ ಬಳಕೆದಾರರನ್ನು ಹೊಂದಿದೆ. ಹಾಗಾಗಿ ಇದರಲ್ಲಿ ಫೋಟೋ, ವಿಡಿಯೋ, ರೀಲ್ಸ್​ಗಳನ್ನು ಅಪ್ಲೋಡ್​ ಮಾಡುವುದರ ಜೊತೆಗೆ ಸ್ನೇಹಿತರಿಗೆ ಸಂದೇಶವನ್ನು ಕಳುಹಿಸಬಹುದಾಗಿದೆ. ಒಟ್ಟಿನಲ್ಲಿ ಸದಾ ಬಳಕೆಯಲ್ಲಿರುವ ಮತ್ತು ಅತಿ ಹೆಚ್ಚು ಬಳಕೆದಾರರನ್ನು ಫೇಸ್​ಬುಕ್​ ಒಡೆತನದ ಇನ್​ಸ್ಟಾಗ್ರಾಂ ಹೊಂದಿದೆ.

    ಅಂದಹಾಗೆಯೇ, ಇನ್​ಸ್ಟಾಗ್ರಾಂ ತನ್ನ ಬಳಕೆದಾರರಿಗೆ ಡಾರ್ಕ್​ ಮೋಡ್​ (Dark mode) ಮತ್ತು ಬ್ಲೂ ಮೋಡ್​ (Blue Mode)ಆಯ್ಕೆಯನ್ನ ಪರಿಚಯಿಸಿದೆ. ಆ್ಯಂಡ್ರಾಯ್ಡ್ (Android)​ ಮತ್ತು ಐಫೋನ್​ (Iphone) ಬಳಕೆದಾರರಿಗೆ ನೂತನ ಫೀಚರ್ಸ್​ ಬಳಕೆಗೆ ಸಿಗಲಿದೆ. ಸದಾ ಬಳಕೆಯಲ್ಲಿರುವ ಗ್ರಾಹಕರಿಗೆ ಇನ್​ಸ್ಟಾಗ್ರಾಂ ಪರಿಚಯಸಿರುವ ಹೊಸ ಥೀಮ್​ಗಳು ಸಹಾಯಕ್ಕೆ ಬರಲಿದೆ. ಮೊಬೈಲ್​ ಸ್ಕ್ರೀನ್ ಬೆಳಕಿನ ಸಮಸ್ಯೆಯಿಂದ ಕಣ್ಣಿನ ಆಗುವ ತೊಂದರೆ ದೂರವಾಗಲಿದೆ. ಮಾತ್ರವಲ್ಲದೆ ಸ್ಮಾರ್ಟ್​ಫೋನ್​ ಬ್ಯಾಟರಿಯೂ (Battery) ಉಳಿಯಲಿದೆ.

    ಹಾಗಿದ್ದರೆ ಇನ್​ಸ್ಟಾಗ್ರಾಂನಲ್ಲಿ ಡಾರ್ಕ್​ ಥೀಮ್​ ಅಳವಡಿಸಿಕೊಳ್ಳುವುದು ಹೇಗೆ? ಈ ಬಗ್ಗೆ ಮಾಹಿತಿ ಇಲ್ಲಿದೆ.

    ಆ್ಯಂಡ್ರಾಯ್ಡ್​ ಬಳಕೆದಾರರು (Android Users)

    ಹಂತ 1: ಸೆಟ್ಟಿಂಗ್‌ಗಳಿಗೆ ಹೋಗಿ

    ಹಂತ 2: ಸ್ಕ್ರಾಲ್ ಮಾಡಿ ಮತ್ತು ನಂತರ ಡಿಸ್​ಪ್ಲೇ ಆಯ್ಕೆ ಮಾಡಿ

    ಹಂತ 3: ಡಾರ್ಕ್ ಥೀಮ್ ಟಾಗಲ್ ಅನ್ನು ಹುಡುಕಿ ಮತ್ತು ಥೀಮ್ ಅನ್ನು ಸಕ್ರಿಯಗೊಳಿಸಿ

    ಹಂತ 4: Instagram ತೆರೆಯಿರಿ

    ಬಿಳಿ ಪಿಕ್ಸೆಲ್‌ಗಳು ಕಣ್ಮರೆಯಾಗಿರುವುದನ್ನು ನೀವು ಕಾಣುತ್ತೀರಿ ಮತ್ತು ನಿಮ್ಮ ಅಪ್ಲಿಕೇಶನ್‌ನಲ್ಲಿ ಡಾರ್ಕ್ ಮೋಡ್ ಸಕ್ರಿಯವಾಗಿರುತ್ತದೆ.

    ಇದನ್ನು ಓದಿ ⇒ Clubhouse New Features: ಇನ್ಮುಂದೆ ನಿಮ್ಮಿಷ್ಟದ ಸ್ನೇಹಿತನಿಗೆ ಖಾಸಗಿ ಸಂದೇಶ ಕಳುಹಿಸಬಹುದು! ಕ್ಲಬ್​ಹೌಸ್​ನಲ್ಲೊಂದು ಹೊಸ ಫೀಚರ್​

    ಐಒಎಸ್​ ಬಳಕೆದಾರರು (ios Users)

    ಹಂತ 1: ಸೆಟ್ಟಿಂಗ್‌ಗಳಿಗೆ ಹೋಗಿ

    ಹಂತ 2: ಡಿಸ್ಪ್ಲೇ ಮತ್ತು ಬ್ರೈಟ್ನೆಸ್ ಆಯ್ಕೆಯನ್ನು ಹುಡುಕಿ ಮತ್ತು ಅದರ ಮೇಲೆ ಟ್ಯಾಪ್ ಮಾಡಿ

    ಹಂತ 3: ಈಗ ಬಯಸಿದ ಥೀಮ್‌ಗೆ ಬದಲಾಯಿಸಲು ಡಾರ್ಕ್ ಅನ್ನು ಆಯ್ಕೆ ಮಾಡಿ

    ಹಂತ 4: Instagram ಅನ್ನು ತೆರೆಯಿರಿ

    ಸದ್ಯ ಸ್ಮಾರ್ಟ್​ಫೋನ್​ನಲ್ಲಿ ಅಮೋಲ್ಡ್​ ಡಿಸ್​ಪ್ಲೇ ಅಳವಡಿಸಲಾಗುತ್ತಿದೆ. ಇದು ಹೆಚ್ಚು ಪ್ರಕಶಮಾನವಾಗಿ ಕಾಣುತ್ತಿದೆ. ಜೊತೆಗೆ ಇದರಿಂದ ಹೆಚ್ಚಿನ ಬೆಳಕು ಹೊರಹೊಮ್ಮುತ್ತದೆ. ಸ್ಮಾರ್ಟ್​ಫೋನ್​ ಬಳಕೆದಾರರಿಗೆ ಅತಿ ಹೆಚ್ಚು ಬಳಕೆಯಿಂದ ಕಣ್ಣಿನ ಸಮಸ್ಯೆ ಉಂಟಾಗಬಹುದು. ಹಾಗಾಗಿ ಈ ವಿಚಾರವನ್ನು ಗಮನದಲ್ಲಿರಿಸಿಕೊಂಡು ಇನ್​ಸ್ಟಾಗ್ರಾಂ ಆ್ಯಂಡ್ರಾಯ್ಡ್​ ಮತ್ತು ಐಒಎಸ್ ಬಳಕೆದಾರರಿಗಾಗಿ  ಡಾರ್ಕ್​ ಥೀಮ್​ ಪರಿಚಯಿಸಿದೆ. ಇದರಿಂದ ಬೆಳಕಿನ ಪ್ರಕಾಶಮಾನ ಕಡಿಮೆಯಾಗಲಿದೆ ಮತ್ತು ನಿರರ್ಗಳವಾಗಿ ಬಳಸಬಹುದಾಗಿದೆ.

    ಇದನ್ನು ಓದಿ ⇒ Google features: ನಿಮ್ಮ ಮುಖದಿಂದಲೇ ಸ್ಮಾರ್ಟ್​​ಫೋನನ್ನು ನಿಯಂತ್ರಿಸಬಹುದು!

    ಇನ್​​ಸ್ಟಾಗ್ರಾಂನಲ್ಲಿ ಪೋಸ್ಟ್​ ಶೆಡ್ಯೂಲ್​ ಮಾಡುವುದು ಹೇಗೆ?


    ಹೊಸ ಪೋಸ್ಟ್‌ಗಳನ್ನು ನೀವು ಶೇರ್ ಮಾಡುತ್ತೀರಿ ಎಂದಾದಲ್ಲಿ ನೀವು ನಿರ್ದಿಷ್ಟ ಸಮಯ ಅನುಸರಿಸಬೇಕಾಗುತ್ತದೆ. ಅದೇ ರೀತಿ ಸಮಯಕ್ಕೆ ಸರಿಯಾಗಿ ಪೋಸ್ಟ್ ಶೆಡ್ಯೂಲ್‌ ಮಾಡುವ ಚಾಕಚಕ್ಯತೆಯನ್ನು ನೀವು ಅಳವಡಿಸಿಕೊಂಡಿರಬೇಕು. ಇದರಿಂದ ನೀವು ಬೇರೆ ಕೆಲಸದಲ್ಲಿ ವ್ಯಸ್ಥರಾಗಿದ್ದರೂ ಇಲ್ಲದಿದ್ದರೆ ಸಾಮಾಜಿಕ ತಾಣದಲ್ಲಿ ಸಮಯ ವಿನಿಯೋಗಿಸದಷ್ಟು ಸಮಯಾವಕಾಶ ಕಡಿಮೆ ಇದೆ ಎಂದಾದಲ್ಲಿ ಈ ವಿಧಾನಗಳು ನಿಮಗೆ ಸಹಕಾರಿಯಾಗಿವೆ.


     ನಮಗೆಲ್ಲಾ ತಿಳಿದಿರುವಂತೆ ಇನ್‌ಸ್ಟಾಗ್ರಾಮ್ ಆ್ಯಪ್ ನಿಗದಿಗೊಳಿಸುವ (ಸ್ಕೆಡ್ಯೂಲಿಂಗ್ ಫೀಚರ್‌ಗಳು) ಒದಗಿಸದೇ ಇರುವುದರಿಂದ ಫೇಸ್‌ಬುಕ್ ಕ್ರಿಯೇಟರ್ ಸ್ಟುಡಿಯೋ ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತದೆ. ಅದೇ ರೀತಿ ಕೆಲವೊಂದಿಷ್ಟು ಮೂರನೇ ವ್ಯಕ್ತಿ ಆ್ಯಪ್‌ಗಳಿದ್ದು (Third party Apps) ಇದೇ ರೀತಿಯ ಸಲಹೆಗಳನ್ನು ನಿಮಗೆ ಒದಗಿಸುತ್ತವೆ. ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಅನ್ನು ಶೆಡ್ಯೂಲ್ (ಯೋಜಿಸುವುದು) ಹೇಗೆ ಎಂಬುದನ್ನು ತಿಳಿದುಕೊಳ್ಳೋಣ

    ಕ್ರಿಯೇಟರ್ ಸ್ಟುಡಿಯೋ (Creator Studio) ಬಳಸಿಕೊಂಡು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ನಿಗದಿಪಡಿಸುವುದು ಹೇಗೆ:

    ಇದಕ್ಕಾಗಿ ನಿಮಗೆ ವೃತ್ತಿಪರ ಇನ್‌ಸ್ಟಾಗ್ರಾಮ್ ಖಾತೆಯ ಅಗತ್ಯವಿದೆ. ಇದು ಬಿಸ್‌ನೆಸ್ ಖಾತೆ ಹಾಗೂ 10,000 ಫಾಲೋವರ್ಸ್‌ಗಳನ್ನೊಳಗೊಂಡ ಕ್ರಿಯೇಟರ್ ಖಾತೆ ಒಳಗೊಂಡಿದೆ. ಇಲ್ಲಿ ಗಮನಿಸಬೇಕಾದ ಒಂದು ಅಂಶವೆಂದರೆ ಕ್ರಿಯೇಟರ್ ಸ್ಟುಡಿಯೋ ಸ್ಕೆಡ್ಯೂಲಿಂಗ್ ಫೀಚರ್, ವೈಯಕ್ತಿಕ ಇನ್‌ಸ್ಟಾಗ್ರಾಮ್ ಖಾತೆಗಳಿಗೆ ಕಾರ್ಯನಿರ್ವಹಿಸುವುದಿಲ್ಲ.

    1. ನಿಮ್ಮ ಲ್ಯಾಪ್‌ಟಾಪ್‌ನಲ್ಲಿ ಕ್ರಿಯೇಟರ್ ಸ್ಟುಡಿಯೋ ತೆರೆಯಿರಿ ಹಾಗೂ ಇನ್‌ಸ್ಟಾಗ್ರಾಮ್ ಖಾತೆಗೆ ಲಿಂಕ್ ಮಾಡಿ

    ಇದನ್ನು ಮಾಡಲು, ಸರಳವಾಗಿ ಕ್ರಿಯೇಟರ್ ಸ್ಟುಡಿಯೋ ತೆರೆಯಿರಿ ಹಾಗೂ ಫೇಸ್‌ಬುಕ್ ಖಾತೆ ಬಳಸಿಕೊಂಡು ಲಾಗಿನ್ ಮಾಡಿ. ಇದೀಗ, ಮೇಲ್ಭಾಗದಲ್ಲಿರುವ ಇನ್‌ಸ್ಟಾ ಐಕಾನ್ ಸ್ಪರ್ಶಿಸಿ ನಂತರ ನಿಮ್ಮ ಖಾತೆ ಬಟನ್ ಕನೆಕ್ಟ್ ಮಾಡಿ ಕ್ಲಿಕ್ ಮಾಡಿ.

    2. ಒಮ್ಮೆ ಕನೆಕ್ಟ್ ಆದ ನಂತರ, ಎಡಸೈಡ್‌ಬಾರ್‌ನಿಂದ ಕ್ರಿಯೇಟ್ ಪೋಸ್ಟ್ ಬಟನ್ ಕ್ಲಿಕ್ ಮಾಡಿ. ಇನ್‌ಸ್ಟಾಗ್ರಾಮ್ ಫೀಡ್ ಹಾಗೂ ಐಜಿಟಿವಿ ನಡುವೆ ಆಯ್ಕೆಮಾಡಿ

    3. ಇದೀಗ ಮೀಡಿಯಾ, ಕ್ಯಾಪ್ಶನ್, ಹ್ಯಾಶ್‌ಟ್ಯಾಗ್‌ಗಳು ಮೊದಲಾದ ಮಾಹಿತಿಗಳನ್ನೊಳಗೊಂಡ ನೀವು ನಿಗದಿಪಡಿಸಲು ಬಯಸುವ ಕಂಟೆಂಟ್ ಅಪ್‌ಲೋಡ್ ಮಾಡಿ ಹಾಗೂ ಕೆಳಗಿನ ಬಲಮೂಲೆಯಲ್ಲಿರುವ ಪಬ್ಲಿಶ್ ಬಟನ್ ಪಕ್ಕದ ಕೆಳಮುಖವಾಗಿರುವ ಬಾಣದ ಗುರುತನ್ನು ಕ್ಲಿಕ್ ಮಾಡಿ

    4. ಇಲ್ಲಿ ನಿಗದಿಪಡಿಸುವ (ಶೆಡ್ಯೂಲ್) ಆಯ್ಕೆಯನ್ನು ಆರಿಸಿ, ಪೋಸ್ಟ್ ಅನ್ನು ಕ್ಲಿಕ್ ಮಾಡಲು ಬಯಸುವ ನಿಮ್ಮ ಇಷ್ಟದ ದಿನಾಂಕ ಹಾಗೂ ಸಮಯ ಆರಿಸಿ ನಂತರ ಶೆಡ್ಯೂಲ್ ಬಟನ್ ಕ್ಲಿಕ್ ಮಾಡಿ.

    ವೈಯಕ್ತಿಕ ಖಾತೆಗಳಿಗಾಗಿ ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳನ್ನು ನಿಗದಿಪಡಿಸುವುದು ಹೇಗೆ:

    ಇದಕ್ಕಾಗಿ ನೀವು ಥರ್ಡ್ ಪಾರ್ಟಿ ಟೂಲ್‌ಗಳಾದ ಬಫರ್, ಹೂಟ್‌ಸೂಟ್, ಸ್ಕೆಡ್ ಸೋಶಿಯಲ್ ಇತ್ಯಾದಿಗಳನ್ನು ಹೊಂದಿರಬೇಕು. ಈ ಟೂಲ್‌ಗಳೊಂದಿಗೆ ನಿಮ್ಮ ಇನ್‌ಸ್ಟಾಗ್ರಾಮ್ ಖಾತೆಯನ್ನು ಲಿಂಕ್ ಮಾಡಿ ಹಾಗೂ ಪೋಸ್ಟ್‌ಗಳನ್ನು ಶೆಡ್ಯೂಲ್ ಮಾಡಿ.

    Published by:Harshith AS
    First published: