Govt Jobs Websites: ಸರ್ಕಾರಿ ಉದ್ಯೋಗದ ಬಗ್ಗೆ ಪಕ್ಕಾ ಮಾಹಿತಿ ಬೇಕಾ? ಇಲ್ಲಿವೆ ನಾಲ್ಕು ಅತ್ಯುತ್ತಮ ವೆಬ್‌ಸೈಟ್‌ಗಳು

Government Jobs: ಸರಕಾರಿ ಉದ್ಯೋಗದ ಕುರಿತು ಮಾಹಿತಿ ನೀಡುವ ಹಾಗೂ ಉದ್ಯೋಗದ ಕುರಿತು ಅಪ್‌ಡೇಟ್‌ಗಳನ್ನು ತನ್ನ ಚಂದಾದಾರಿಗೆ ನೀಡುವ ಹಲವಾರು ವೆಬ್‌ಸೈಟ್‌ಗಳಿವೆ. ಒಂದೇ ವೆಬ್‌ಸೈಟ್‌ನಲ್ಲಿ ಸರಕಾರಿ ಉದ್ಯೋಗದ ಕುರಿತು ಎಲ್ಲಾ ಮಾಹಿತಿಗಳನ್ನು ಪಡೆದುಕೊಳ್ಳಬಹುದಾಗಿದೆ. ಹಾಗಿದ್ದರೆ ಆ ವೆಬ್‌ಸೈಟ್‌ಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ.

Jobs (Photo: Google)

Jobs (Photo: Google)

  • Share this:
    Best Websites for Government Jobs: ಸರಕಾರಿ ಕೆಲಸ ಪಡೆಯಬೇಕೆಂಬುದು ಹೆಚ್ಚಿನ ಉದ್ಯೋಗಿಗಳ ಕನಸಾಗಿರುತ್ತದೆ. ಸರಕಾರಿ ಉದ್ಯೋಗಗಳಿಗೆ ಅರ್ಜಿ ಹಾಕುವುದು, ಪರೀಕ್ಷೆಗಳನ್ನು ಬರೆಯುವುದು ಹೀಗೆ ಸರಕಾರಿ ಕೆಲಸ ಪಡೆಯಲು ನಾನಾ ರೀತಿಯ ಕಸರತ್ತುಗಳನ್ನು ಅಭ್ಯರ್ಥಿಗಳು ಮಾಡುತ್ತಲೇ ಇರುತ್ತಾರೆ. ಉದ್ಯೋಗ ಭದ್ರತೆ, ಉದ್ಯೋಗ ಪ್ರಯೋಜನಗಳು, ವೆಚ್ಚ ಮರಳಿಸುವಿಕೆ ಹಾಗೂ ಇತರ ಅನೇಕ ಸೌಲಭ್ಯಗಳಿಗಾಗಿ ಹೆಚ್ಚಿನವರಿಗೆ ಸರಕಾರಿ ಉದ್ಯೋಗ ಅಚ್ಚುಮೆಚ್ಚಿನದಾಗಿರುತ್ತದೆ. ಇದರಿಂದಾಗಿಯೇ ಹೆಚ್ಚಿನ ಉದ್ಯೋಗಾಂಕ್ಷಿಗಳು ಸರಕಾರಿ ಉದ್ಯೋಗಕ್ಕಾಗಿ ಹಾತೊರೆಯುತ್ತಾರೆ.

    ಭಾರತದಲ್ಲಿ ಸರಕಾರಿ ಉದ್ಯೋಗ ಪಡೆದುಕೊಳ್ಳುವುದು ಎಂದರೆ ತುಸು ಪ್ರಯಾಸದಾಯಕವಾಗಿರುತ್ತದೆ. ಏಕೆಂದರೆ ಇಲ್ಲಿ ಸ್ಪರ್ಧೆ ತೀವ್ರವಾಗಿರುತ್ತದೆ ಹಾಗೂ ಒಂದೇ ಹುದ್ದೆಗೆ ಹಲವಾರು ಜನರು ಪೈಪೋಟಿ ನಡೆಸುತ್ತಿರುತ್ತಾರೆ. ಸರಕಾರಿ ಉದ್ಯೋಗದ ಕುರಿತು ಮಾಹಿತಿ ನೀಡುವ ಹಾಗೂ ಉದ್ಯೋಗದ ಕುರಿತು ಅಪ್‌ಡೇಟ್‌ಗಳನ್ನು ತನ್ನ ಚಂದಾದಾರಿಗೆ ನೀಡುವ ಹಲವಾರು ವೆಬ್‌ಸೈಟ್‌ಗಳಿವೆ. ಒಂದೇ ವೆಬ್‌ಸೈಟ್‌ನಲ್ಲಿ ಸರಕಾರಿ ಉದ್ಯೋಗದ ಕುರಿತು ಎಲ್ಲಾ ಮಾಹಿತಿಗಳನ್ನು ಪಡೆದುಕೊಳ್ಳಬಹುದಾಗಿದೆ. ಹಾಗಿದ್ದರೆ ಆ ವೆಬ್‌ಸೈಟ್‌ಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ.

    ಸರಕಾರಿ ಉದ್ಯೋಗಗಳಿಗಾಗಿ ಉತ್ತಮವಾದ ವೆಬ್‌ಸೈಟ್‌ಗಳು

    ಫ್ರೀ ಜಾಬ್ ಅಲರ್ಟ್ (Free Job Alert):

    ಭಾರತದ ಸರಕಾರಿ ಉದ್ಯೋಗಗಳ ಕುರಿತಾದ ಇತ್ತೀಚಿನ ಜಾಹೀರಾತು, ಬೇರೆ ಬೇರೆ ಪರೀಕ್ಷೆಗಳ ವಿವರಗಳು ಈ ವೆಬ್‌ಸೈಟ್‌ನಲ್ಲಿ ನಿಮಗೆ ದೊರೆಯಲಿದೆ. ಒಂದೇ ಪ್ಲಾಟ್‌ಫಾರ್ಮ್‌ನಲ್ಲಿ ಉದ್ಯೋಗದ ಕುರಿತು ಎಲ್ಲಾ ಮಾಹಿತಿಗಳು ನಿಮಗೆ ಲಭ್ಯವಾಗಲಿದೆ. ಹೆಸರೇ ಸೂಚಿಸುವಂತೆ ಇದು ಉಚಿತ ವೆಬ್‌ಸೈಟ್ ಆಗಿದೆ. ಹಾಗಾಗಿ ನೀವು ಯಾವುದೇ ಫೀಚರ್ ಪಡೆಯಲು ಹೆಚ್ಚುವರಿ ಶುಲ್ಕ ಪಾವತಿಸಬೇಕಾಗಿಲ್ಲ. ಫ್ರೀ ಜಾಬ್ ಅಲರ್ಟ್ ಮೂಲಕ ಬೇರೆ ಬೇರೆ ರಾಜ್ಯಗಳು ಹಾಗೂ ನಗರಗಳಲ್ಲಿ ಸರಕಾರಿ ಉದ್ಯೋಗಳನ್ನು ಪಡೆಯಬಹುದಾಗಿದೆ.

    ಜಾಗರಣ್ ಜೋಶ್ (Jagran Josh):

    ಸರಕಾರಿ ಉದ್ಯೋಗದ ಕುರಿತಾದ ಎಲ್ಲಾ ಮಾಹಿತಿಗಳನ್ನು ಒದಗಿಸುವ ವಿಶ್ವಾಸಾರ್ಹ ಸೈಟ್ ಜಾಗರಣ್ ಜೋಶ್ ಆಗಿದೆ. ದೈನಿಕ್ ಭಾಸ್ಕರ್ ದಿನಪತ್ರಿಕೆಯ ವ್ಯಾಪ್ತಿಗೆ ಬರುವ ಈ ವೆಬ್‌ಸೈಟ್ ಆದ್ದರಿಂದ ನಾವು ಇದನ್ನು ನಂಬಬಹುದಾಗಿದೆ. ಈ ವೆಬ್‌ಸೈಟ್‌ನಲ್ಲಿರುವ ಬರುವ ಸರಕಾರಿ ಉದ್ಯೋಗದ ಕುರಿತಾಗಿರುವ ಎಲ್ಲಾ ಮಾಹಿತಿಗಳು ವಿಶ್ವಾಸಾರ್ಹವಾಗಿವೆ. ಸರಕಾರಿ ಉದ್ಯೋಗಗಳ ಕುರಿತು ಈ ವೆಬ್‌ಸೈಟ್ ಸೂಚನೆ ಒದಗಿಸುತ್ತವೆ ಹಾಗೂ ಬೇರೆ ಬೇರೆ ಸರಕಾರಿ ಪರೀಕ್ಷೆಗಳನ್ನು ಉತ್ತೀರ್ಣಗೊಳಿಸಲು ಸಲಹೆಗಳನ್ನು ನೀಡುತ್ತವೆ.

    ಸರಕಾರಿಕ್ಲಾಸ್‌.ಕಾಮ್ (Sarkariclss.room):

    ಸರಕಾರಿ ವಿಭಾಗಗಳಲ್ಲಿ ಇತ್ತೀಚಿನ ಉದ್ಯೋಗವಕಾಶಗಳ ಕುರಿತು ಈ ಸೈಟ್ ಮಾಹಿತಿಯನ್ನೊದಗಿಸುತ್ತದೆ. ಇದು ಭಾರತದ ಅತ್ಯಂತ ವಿಶ್ವಾಸಾರ್ಹ ಸೈಟ್ ಆಗಿದೆ. ಸರಕಾರಿಕ್ಲಾಸ್‌.ಕಾಮ್ ಬೇರೆ ಬೇರೆ ವಿಷಯಗಳ ಕುರಿತು ಲೇಖನಗಳನ್ನು ಹೊಂದಿದ್ದು ಹೆಚ್ಚು ಪಾವತಿಯ ಸರಕಾರಿ ಉದ್ಯೋಗ ಹಾಗೂ ಸರಕಾರಿ ಉದ್ಯೋಗದ ಪರೀಕ್ಷೆಗಳಿಗೆ ಸಿದ್ಧರಾಗುವ ಸಲಹೆಗಳು, ಮೊದಲಾದ ವಿವರಗಳನ್ನು ಒದಗಿಸುತ್ತದೆ. ವೆಬ್‌ಸೈಟ್ ಉದ್ಯೋಗ ವಿವರಗಳು, ಉದ್ಯೋಗ ಪ್ರಕಾರ, ನಿರ್ದಿಷ್ಟ ಹುದ್ದೆಗಾಗಿ ನಿಯಮಗಳು ಹಾಗೂ ನಿರ್ದಿಷ್ಟ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಲು ನೀವು ತಿಳಿದುಕೊಂಡಿರಬೇಕಾದ ವಿಷಯಗಳ ಬಗ್ಗೆ ಮಾಹಿತಿ ಒದಗಿಸುತ್ತದೆ.

    Read Also: WhatsApp‌ಗೆ ಶೀಘ್ರದಲ್ಲೇ ಬರಲಿದೆ ಈ ಹೊಸ ಫೀಚರ್‌ಗಳು..!

    ಸರಕಾರಿರಿಸಲ್ಟ್ಸ್.ಇನ್ಫೋ (SarkariResulifo):

    ಈ ವೆಬ್‌ಸೈಟ್ ಸುಧಾರಿತ ಫೀಚರ್‌ಗಳನ್ನೊಳಗೊಂಡಿದ್ದು ಭಾರತದಲ್ಲಿ ಸರಕಾರಿ ಉದ್ಯೋಗ ಪಡೆಯಲು ಸುಲಭ ಅವಕಾಶವನ್ನೊದಗಿಸುತ್ತದೆ. ಸರಕಾರಿ ರಿಸಲ್ಟ್ ಉತ್ತರಗಳ ವಿವರಗಳನ್ನು ಒದಗಿಸುತ್ತದೆ ಹಾಗೂ ಪ್ರವೇಶ ಪರೀಕ್ಷೆಗಳಿಗೆ ಲಿಂಕ್‌ಗಳನ್ನು ನೀಡುತ್ತದೆ. ಒಂದೇ ವೆಬ್‌ಸೈಟ್‌ನಲ್ಲಿ ಸರಕಾರಿ ಉದ್ಯೋಗಳಿಗೆ ಸಂಬಂಧಿತವಾಗಿರುವ ಎಲ್ಲಾ ಮಾಹಿತಿಗಳನ್ನು ಪಡೆದುಕೊಳ್ಳುವುದು ಸುಲಭವಾಗಿದೆ.

    Read Also: AAI Recruitment: ವಿಮಾನ ನಿಲ್ದಾಣ ಪ್ರಾಧಿಕಾರದಲ್ಲಿ ಕೆಲಸ ಮಾಡಬೇಕಾ; ಇಲ್ಲಿದೆ ಉತ್ತಮ ಅವಕಾಶ

    ಟೆಸ್ಟ್‌ಬುಕ್.ಕಾಮ್ (TextBook.Com ):

    ಸರಕಾರಿ ಉದ್ಯೋಗಗಳು ಹಾಗೂ ಪರೀಕ್ಷೆಗಳಿಗಾಗಿ ಭಾರತದ ಅತಿದೊಡ್ಡ ಅಧಿಸೂಚನೆ ಪೋರ್ಟಲ್ ಆಗಿ ಟೆಸ್ಟ್‌ಬುಕ್‌.ಕಾಮ್ ಕಾರ್ಯನಿರ್ವಹಿಸುತ್ತದೆ. ನೇಮಕಾತಿ ಪರೀಕ್ಷೆಗಳು, ಉದ್ಯೋಗ ಪೋಸ್ಟಿಂಗ್‌ಗಳು ಹೀಗೆ ಎಲ್ಲಾ ರೀತಿಯ ಮಾಹಿತಿಗಳು ಟೆಸ್ಟ್‌ಬುಕ್‌.ಕಾಮ್‌ನಲ್ಲಿ ಲಭ್ಯವಿದೆ. ಈ ವೆಬ್‌ಸೈಟ್ ಆ್ಯಪ್ ಅನ್ನೂ ಹೊಂದಿದ್ದು, ವಿಷಯದ ಕುರಿತು ನೀವು ಹೆಚ್ಚು ತಿಳಿದುಕೊಳ್ಳಬಹುದು. ಈ ಆ್ಯಪ್ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದೆ.
    First published: