Video: ನಿಮಗೆ ಸಾಧ್ಯವೇ? ಇವರು 24 ಸೆಕೆಂಡ್​ನಲ್ಲಿ ಬೈಕ್ ಟೈರ್​​​​ ಚೇಂಜ್​ ಮಾಡುತ್ತಾರೆ!

ಬೈಕ್​ ರೇಸ್​

ಬೈಕ್​ ರೇಸ್​

ಸಾಮನ್ಯವಾಗಿ ಬೈಕ್​​​ ಟೈರ್​​ ಬದಲಿಸಲು ಅಬ್ಬಬ್ಬಾ ಅಂದರೆ ಅರ್ಧ ಗಂಟೆ, ಹೆಚ್ಚೆಂದರೆ 1 ಗಂಟೆ ತೆಗೆದುಕೊಳ್ಳಬಹುದು. ಆದರೆ ಕೇವಲ ಸೆಕೆಂಡ್​​​ ಗಳಲ್ಲಿ ಬೈಕ್​ ಟೈರ್​ ಮಾಡುವುದನ್ನು ನೋಡಿದ್ದೀರಾ? ಇಲ್ಲಿದೆ ವಿಡಿಯೋ..

  • Share this:

    ಸಾಮನ್ಯವಾಗಿ ಬೈಕ್​​​ ಟೈರ್​​ ಬದಲಿಸಲು ಅಬ್ಬಬ್ಬಾ ಅಂದರೆ ಅರ್ಧ ಗಂಟೆ, ಹೆಚ್ಚೆಂದರೆ 1 ಗಂಟೆ ತೆಗೆದುಕೊಳ್ಳಬಹುದು. ಆದರೆ ಕೇವಲ ಸೆಕೆಂಡ್​​​ ಗಳಲ್ಲಿ ಬೈಕ್​ ಟೈರ್​ ಮಾಡುವುದನ್ನು ನೋಡಿದ್ದೀರಾ? ಇಲ್ಲಿದೆ ವಿಡಿಯೋ..


    ಕೇವಲ ಒಬ್ಬನಿಂದಲೇ 24 ಸೆಕೆಂಡ್​ಗಳಲ್ಲಿ ಬೈಕ್​ ಟೈರ್​ ಚೇಂಜ್​ ಮಾಡಲು ಸಾಧ್ಯವೇ ಇಲ್ಲ. ಗುಂಪಿನ ಪ್ರರಿಶ್ರಮವಿದ್ದರೆ ಇದು ಖಂಡಿತಾ ಸಾಧ್ಯ. ಅದಕ್ಕೆ ಈ ವಿಡಿಯೋ ಸಾಕ್ಷಿ.


    ಅಂದಹಾಗೆಯೇ, ಅಷ್ಟು ವೇಗವಾಗಿ ಬೈಕ್​ ಟೈರ್​ ಮಾಡುವುದನ್ನು ದೃಶ್ಯ ಕಂಡುಬಂದಿರುವು ಮೊಟೋ ಅಮೆರಿಕ ಬೈಕ್​ ರೇಸ್​ನಲ್ಲಿ. ಬೈಕ್​ ರೇಸ್​ ಎಂದರೆ ಒಂದು ವಿಚಿತ್ರ ಕ್ರೀಡೆ. ಬೈಕ್​ ಚಲಾಯಿಸುವವನಿಂದ ಹಿಡಿದು. ಆತನಿಗೆ ಸಹಾಯ ಮಾಡುವವರೆಲ್ಲ ವೇಗವಾಗಿ ಇಲ್ಲಿ ಕಾರ್ಯನಿರ್ವಹಿಸುತ್ತಾರೆ. ಹಾಗಾಗಿ ಸೆಕೆಂಡ್​ಗಳಲ್ಲಿ ಎಲ್ಲಾ ಕೆಲಸವನ್ನು ಮುಗಿಸಿ ಬಿಡುತ್ತಾರೆ.


    ಈ ದೃಶ್ಯದಲ್ಲಿ ಕಂಡುಬಂದಂತೆ ಮೊಟೋಅಮೆರಿಕ ಬೈಕ್ ರೇಸರ್​ ತನ್ನ ಬೈಕಿನ ಟೈರ್​ ಚೇಂಜ್​ ಮಾಡಲು ತನ್ನ ಘಟಕಕ್ಕೆ ಬರುತ್ತಾನೆ. ಕೇವಲ 24 ಸೆಕೆಂಡ್​​ಗಳಲ್ಲಿ ಆತನ ಸಹಾಯಕರು ಬೈಕಿನ ಟೈರ್​ ಮಾಡುವುದರ ಜೊತೆಗೆ ಪೆಟ್ರೋಲ್​ ತುಂಬಿಸಿ ಕಳುಹಿಸಿಕೊಡುತ್ತಾರೆ. ಆದರೆ ಗೆಲುವಿಗಾಗಿ ಏನೆಲ್ಲಾ ಮಾಡುತ್ತಾರೆ ಅಲ್ವಾ!.




    ಲೈಫ್​​ ಆಫ್​ ಟು ವೀಲ್​ ಎಂಬ ಫೇಸ್​ಬುಕ್​ ಖಾತೆ ಈ ವಿಡಿಯೋವನ್ನು ತನ್ನ ಫೇಸ್​​ಬುಕ್​ ಖಾತೆಯಲ್ಲಿ ಹಂಚಿಕೊಂಡಿದೆ. ಮೋಟೊಅಮೆರಿಕ ಸೂಪರ್​​ಬೈಕ್​ ರೇಸರ್​​​ ಸಂಸ್ಥೆಯ ಮಾಲಿಕ ಕೈಲೆ ವೈಮ್ಯಾನ್​​ ಅವರ ಬೈಕ್​ ರೇಸಿನ ದೃಶ್ಯ ಇದಾಗಿದೆ.

    Published by:Harshith AS
    First published: