ತಂತ್ರಜ್ಞಾನದ (Technology) ಪ್ರಗತಿ ಹೆಚ್ಚಾದಂತೆ ಸ್ಮಾರ್ಟ್ಫೋನ್ಗಳ (Smartphone) ಬಳಕೆ ಕೂಡ ಹೆಚ್ಚಾಗ್ತಾ ಇದೆ. ಅದೇ ರೀತಿ ಹೊಸ ವರ್ಷ ಇನ್ನೇನು ಕೆಲವೇ ದಿನಗಳಲ್ಲಿ ಬರ್ತಾಇದೆ. ಹೊಸ ವರ್ಷ ಬರ್ಬೇಕಾದ್ರೆ ನಮ್ಮಲ್ಲೂ ಏನಾದ್ರೂ ಬದಲಾವಣೆ ಆಗ್ಬೇಕು ಎಂದು ಜನರು ಬಯಸುತ್ತಾರೆ. ಅದೇ ರೀತಿ ಇತ್ತೀಚೆಗೆ ಟೆಕ್ನಾಲಜಿಯಲ್ಲಿ ಹ್ಯಾಕರ್ಸ್ಗಳ (Hackers) ಸಂಖ್ಯೆ ಹೆಚ್ಚಾಗಿದೆ. ಇದರಿಂದ ಹೆಚ್ಚಿನ ಜನರು ಈಗ ಮೋಸ ಹೋಗ್ತಾ, ತಮ್ಮಲ್ಲಿದ್ದ ಹಣವನ್ನು ಕಳೆದುಕೊಳ್ತಾ ಇದ್ದಾರೆ. ಇದನ್ನೆಲ್ಲಾ ಕಡಿಮೆ ಮಾಡ್ಬೇಕಾದ್ರೆ ಟೆಕ್ನಾಲಜಿ ಕಂಪನಿಗಳು ಸ್ಮಾರ್ಟ್ಫೋನ್ಗಳಲ್ಲಿ ಪಾಲಿಸಬೇಕಾದ ಕೆಲವೊಂದು ನಿಯಮಗಳನ್ನು ಹೇಳಿವೆ. ಈ ನಿಯಮಗಳನ್ನು ಸರಿಯಾಗಿ ಪಾಲಿಸಿದ್ರೆ ಹ್ಯಾಕರ್ಸ್ ಬಗ್ಗೆ ಯಾವುದೇ ಭಯಪಡಬೇಕಾಗಿಲ್ಲ.
ಹೌದು, ಇತ್ತೀಚೆಗೆ ದಿನಕಳೆದಂತೆ ಹ್ಯಾಕ್ ಹ್ಯಾಕ್ ಎಂಬ ಸುದ್ದಿಯೇ ಕೇಳುತ್ತಿದೆ. ಇದಕ್ಕೆ ಮೂಲ ಕಾರಣ ತಂತ್ರಜ್ಞಾನದ ಬೆಳವಣಿಗೆ ಅಂತಾನು ಹೇಳ್ಬಹುದ. ಯಾಕೆಂದರೆ ಇದರಿಂದ ಹ್ಯಾಕರ್ಸ್ಗಳಿಗೂ ಬಳಕೆದಾರರಿಗೆ ಗೊತ್ತಾಗದ ಹಾಗೆ ನುಸುಳಲು ಅನುವು ಮಾಡಿಕೊಡುತ್ತೆ. ಆದರೆ ಇದನ್ನು ತಪ್ಪಿಸಲು ಕೆಲವೊಂದು ಮಾರ್ಗಗಳಿವೆ. ಇದನ್ನು ಸರಿಯಾಗಿ ಪಾಲಿಸಿದ್ರೆ ನಿಮ್ಮ ಸ್ಮಾರ್ಟ್ಫೋನ್ ಅನ್ನು ಸೇಫ್ ಆಗಿ ಇಟ್ಟುಕೊಳ್ಳಬಹುದಾಗಿದೆ.
ಇ-ಕಾಮರ್ಸ್ ವೆಬ್ಸೈಟ್ಗಳಿಂದ ಲಾಗೌಟ್ ಆಗಿ
ಇತ್ತೀಚಿನ ದಿನಗಳಲ್ಲಿ ಜನರು ಯಾವುದೇ ವಸ್ತುವನ್ನು ಖರೀದಿ ಮಾಡಬೇಕೆಂದರೂ ಇಕಾಮರ್ಸ್ ವೆಬ್ಸೈಟ್ಗಳಲ್ಲಿ ಸರ್ಚ್ ಮಾಡ್ತಾರೆ. ಅದಕ್ಕಾಗಿ ಬಳಕೆದಾರರು ಬೇರೆ ಬೇರೆ ಇಕಾಮರ್ಸ್ ವೆಬ್ ಸೈಟ್ಗಳಿಗೆ ಲಾಗಿನ್ ಆಗಿರುತ್ತಾರೆ. ಹಾಗೆ ತಮಗೆ ಬೇಕಾದ ಪ್ರೊಡಕ್ಟ್ ಅನ್ನು ಕೂಡ ಖರೀದಿ ಮಾಡ್ತಾರೆ. ಆದರೆ ಇದನ್ನು ಬಳಸಿದ ನಂತರ ಅದರಿಂದ ಲಾಗೌಟ್ ಆಗಲು ಮರೆತುಬಿಡುತ್ತಾರೆ. ಇನ್ನೂ ಕೆಲವರು ಲಾಗೌಟ್ ಮಾಡಲು ಬಯಸುವುದಿಲ್ಲ.
ಇದನ್ನೂ ಓದಿ: ಬಿಡುಗಡೆಗೆ ಮೊದಲೇ ಸದ್ದು ಮಾಡುತ್ತಿದೆ ಈ ಮೊಬೈಲ್ ಗೇಮ್ಗಳು! 2023 ರಲ್ಲಿ ಲಾಂಚ್
ಈ ವೆಬ್ಸೈಟ್ಗಳು ಹೆಚ್ಚಾಗಿ ವೈಫೈ ನೆಟ್ವರ್ಕ್ ಮೂಲಕ ನಡೆಯುವುದರಿಂದ ನಿಮ್ಮ ಸ್ಮಾರ್ಟ್ಫೋನ್ ಅನ್ನು ಹ್ಯಾಕರ್ಸ್ಗಳಿಗೆ ಹ್ಯಾಕ್ ಮಾಡಲು ತುಂಬಾ ಸಹಕಾರಿಯಾಗುತ್ತದೆ. ಆದರೆ ನಿಮ್ಮ ಮೊಬೈಲ್ ಸೆಕ್ಯುರಿಟಿ ಸಮಸ್ಯೆಯನ್ನು ಎದುರಿಸುವ ಚಾನ್ಸಸ್ ಹೆಚ್ಚಿರುತ್ತದೆಆದರೆ, ಈ ರೀತಿ ಮಾಡುವುದರಿಂದ ಅದರಲ್ಲೂ ವೈ-ಫೈ ನೆಟ್ವರ್ಕ್ ಮೂಲಕ ಈ ಪ್ರಕ್ರಿಯೆ ನಡೆಸುವುದರಿಂದ ನಿಮ್ಮ ಸ್ಮಾರ್ಟ್ಫೋನ್ ಹ್ಯಾಕರ್ಗಳಿಗೆ ತುತ್ತಾಗಬಹುದು ಅಥವಾ ನಿಮ್ಮ ಮೊಬೈಲ್ನಲ್ಲಿ ಭದ್ರತಾ ಸಮಸ್ಯೆ ಎದುರಾಗಬಹುದು.
ಚಾರ್ಜಿಂಗ್ ಸ್ಟೇಷನ್ನಲ್ಲಿ ಚಾರ್ಜ್ ಮಾಡುವಾಗ ಎಚ್ಚರಿಕೆ ವಹಿಸಿ
ಸಾಮಾನ್ಯವಾಗಿ ಈ ರೀತಿಯ ಸಂದರ್ಭಗಳಲ್ಲಿ ಜ್ಯೂಸ್ ಜಾಕಿಂಗ್ ಎಂಬುದು ಹ್ಯಾಕರ್ಸ್ಗಳು ಬಳಸುವಂತಹ ಮಾರ್ಗವಾಗಿದೆ. ಆದ್ದರಿಂದ ಯಾವುದೇ ಸಂದರ್ಭದಲ್ಲಿ ನೀವು ಚಾರ್ಜಿಂಗ್ ಸ್ಟೇಷನ್ನಲ್ಲಿ ಮೊಬೈಲ್ ಅನ್ನು ಪ್ಲಗ್ ಮಾಡುವ ಮುನ್ನ ಎಚ್ಚರಿಕೆ ವಹಿಸಿ. ಇಲ್ಲವಾದರೆ ಅವರು ನಿಮ್ಮ ಎಲ್ಲಾ ಡೇಟಾವನ್ನು ಸುಲಭವಾಗಿ ಕದಿಯುವ ಪ್ರಯತ್ನ ಮಾಡುತ್ತಾರೆ. ಹಾಗೆಯೇ ನಿಮ್ಮ ಮೊಬೈಲ್ಗೆ ಮಾಲ್ವೇರ್ ಇನ್ಸ್ಟಾಲ್ ಮಾಡುತ್ತಾರೆ. ಇದರಿಂದ ನಿಮ್ಮ ವ್ಯವಹಾರಗಳು, ಮೊಬೈಲ್ನಲ್ಲಿರುವಂತಹ ಡೇಟಾಗಳನ್ನು ಅವರು ಬಳಸುವ ಸಾದ್ಯತೆಗಳಿರುತ್ತದೆ.
ಸ್ಮಾರ್ಟ್ಫೋನ್ಗಳನ್ನು ಅಪ್ಡೇಟ್ ಮಾಡ್ತಾ ಇರಿ
ಈ ನಿಯಮವನ್ನು ಅಂತೂ ನೀವು ಕಡ್ಡಾಯವಾಗಿ ಪಾಲಿಸಲೇ ಬೇಕು. ಇದರಿಂದ ನಿಮ್ಮ ಸ್ಮಾರ್ಟ್ಫೋನ್ ಸೇಫ್ ಅಗುವುದರ ಜೊತೆಗ ನಿಮ್ಮ ಸ್ಮಾರ್ಟ್ಫೋನ್ನ ಗುಣಮಟ್ಟ ಕೂಡ ಉತ್ತಮವಾಗಿರುತ್ತದೆ. ಈ ಅಪ್ಡೇಟ್ ಮಾಡುವುದರಿಂದ ಮುಖ್ಯವಾಗಿ ಸೆಕ್ಯುರಿಟಿ ಸಿಸ್ಟಮ್ಗಳು ಇನ್ನೂ ಹೆಚ್ಚು ಗುಣಮಟ್ಟವಾಗಿ ರೂಪುಗೊಳ್ಳುತ್ತದೆ. ಅದ್ರಲ್ಲೂ ಓಎಸ್ ಅಪ್ಡೇಟ್ನಿಂದ ಸೆಕ್ಯುರಿಟಿ ಸಮಸ್ಯೆಗಳು ಹೆಚ್ಚು ಪರಿಹಾರವಾಗುತ್ತದೆ. ಈ ಮೂಲಕ ವಂಚಕರು ನಿಮ್ಮ ಮೊಬೈಲ್ ಅನ್ನು ಪ್ರವೇಶಿಸದಂತೆ ನೋಡಿಕೊಳ್ಳಬಹುದು.
ಸ್ಟ್ರಾಂಗ್ ಪಾಸ್ವರ್ಡ್ ಹಾಕಿ
ಈಗಿನ ಟೆಕ್ನಾಲಜಿ ಬೆಳವಣಿಗೆಯಿಂದ ಹಿಡಿದು ಈಗ ಎಲ್ಲಾ ವ್ಯವಹಾರಗಳನ್ನು ಮೊಬೈಲ್ನಲ್ಲೇ ಮಾಡುತ್ತಾರೆ. ಬ್ಯಾಂಕ್ ವ್ಯವಹಾರದಿಂದ ಹಿಡಿದು ಆಧಾರ್ ಕಾರ್ಡ್ಗಳನ್ನು ಕೂಡ ಈಗ ಮೊಬೈಲ್ನಲ್ಲಿಯೇ ಪಡೆಯಬಹುದಾಗಿದೆ. ಆದ್ದರಿಂದ ಪಾಸ್ವರ್ಡ್ಗಳನ್ನು ಹಾಕುವಾಗ ಸ್ಟ್ರಾಂಗ್ ಆಗಿರುವಂತದ್ದನ್ನೇ ಹಾಕಬೇಕು. ಯಾರೂ ಊಹೆಯೂ ಮಾಡದಂತಹ ಪಾಸ್ವರ್ಡ್ಗಳನ್ನು ನಿಮ್ಮ ಖಾತೆಗಳಿಗೆ ಹಾಕಿದ್ರೆ ಒಳ್ಳೆಯದು. ಮತ್ತೊಂದು ಮುಖ್ಯ ವಿಷಯವೇನೆಂದರೆ ಬೇರೆ ಬೇರೆ ಅಕೌಂಟ್ಗಳಿಗೆ ಒಂದೇ ಪಾಸ್ವರ್ಡ್ಗಳನ್ನು ಹಾಕಬೇಡಿ.
ಅಗತ್ಯವಿಲ್ಲದಾಗ ಬ್ಲೂಟೂತ್, ವೈ-ಫೈ ಆಫ್ ಮಾಡಿ
ಇತ್ತೀಚೆಗೆ ಹ್ಯಾಕರ್ಸ್ಗಳು ಎಷ್ಟು ಮುಂದುವರೆದಿದ್ದಾರೆ ಎಂದರೆ ಕೇವಲ ಬ್ಲೂಟೂತ್, ವೈಫೈ ಮೂಲಕವೂ ಹ್ಯಾಕ್ ಮಾಡಲು ಆರಂಭಿಸಿದ್ದಾರೆ. ಒಂದು ವೇಳೆ ನಿಮ್ಮ ಸ್ಮಾರ್ಟ್ಫೋನ್ನಲ್ಲಿ ಬ್ಲೂಟೂತ್, ವೈಫೈ ಆನ್ ಆಗಿದ್ದರೆ ನಿಮ್ಮ ಮೊಬೈಲ್ಗೆ ಹ್ಯಾಕರ್ಗಳು ಮಾಲ್ವೇರ್ಗಳನ್ನು ರವಾನಿಸಿ ನಿಮ್ಮ ಡೇಟಾಗಳನ್ನು ಕದಿಯಲು ಪ್ರಯತ್ನಿಸುತ್ತಾರೆ. ಆದ್ದರಿಂದ ಅಗತ್ಯವಿಲ್ಲದಾಗ ನಿಮ್ಮ ಮೊಬೈಲ್ನಲ್ಲಿ ಇವೆರಡನ್ನು ಆಫ್ ಮಾಡಿ.
ಇನ್ನು ಮುಖ್ಯವಾಗಿ ನಿಮ್ಮ ಮೊಬೈಲ್ನಲ್ಲಿ ವೈಫೈ, ಬ್ಲೂಟೂತ್ ಆನ್ ಆಗಿದ್ರೆ ಚಾರ್ಜ್ ಕೂಡ ಬೇಗನೆ ಖಾಲಿಯಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ