ವಾಟ್ಸಪ್​ ಅಪ್​ಡೇಟ್​ನಲ್ಲಿದೆ ನಕಲಿ ಸುದ್ದಿಗೆ ಸೂಕ್ತ ಪರಿಹಾರ


Updated:July 11, 2018, 5:12 PM IST
ವಾಟ್ಸಪ್​ ಅಪ್​ಡೇಟ್​ನಲ್ಲಿದೆ ನಕಲಿ ಸುದ್ದಿಗೆ ಸೂಕ್ತ ಪರಿಹಾರ

Updated: July 11, 2018, 5:12 PM IST
ನವದೆಹಲಿ: ಫೇಸ್​ಬುಕ್​ ಒಡೆತನದ ವಾಟ್ಸಪ್​ನಲ್ಲಿ ಹರಿದಾಡಿದ ಮಕ್ಕಳ ಕಳ್ಳರು ಎಂಬ ನಕಲಿ ಸುದ್ದಿಯಿಂದ ಕನಿಷ್ಟ 30 ಮಂದಿ ಮೃತಪಟ್ಟ ಬೆನ್ನಲ್ಲೇ ವಾಟ್ಸಪ್​ ಇಂತಹ ಸುದ್ದಿಗಳಿಗೆ ಬ್ರೇಕ್​ ಹಾಕಲು ನಿರ್ದರಿಸಿದ್ದು, ಫಾರ್ವರ್ಡೆಡ್ ಸುದ್ದಿಗಳನ್ನು ಕಂಡು ಹಿಡಿಯುವ ಹೊಸ ಫೀಚರ್ ಅನ್ನು ವಾಟ್ಸಪ್ ಬಿಡುಗಡೆ ಮಾಡಿದೆ.

ಕೆಲ ದಿನಗಳ ಹಿಂದೆ ವಾಟ್ಸಪ್​ ಈ ಫೀಚರ್​ನ್ನು ಬಿಟಾ ವರ್ಷನ್​ನಲ್ಲಿ ಬಿಡುಗಡೆ ಮಾಡಿತ್ತು, ಇದೀಗ ಎಲ್ಲಾ ವಾಟ್ಸಪ್​ ಬಳಕೇದಾರರಿಗೆ ನೀಡಿದೆ. ಈ ಹೊಸ ಫೀಚರ್ ಮೂಲಕ ವಾಟ್ಸಪ್ ನಲ್ಲಿ ಫಾರ್ವರ್ಡ್ ಆಗುವ ಎಲ್ಲ ಫೋಟೋಗಳ ಮೇಲೆ ಫಾರ್ವರ್ಡ್ ಲೇಬಲ್ ಗೋಚರಿಸುತ್ತದೆ. ಆ ಮೂಲಕ ಇದು ಸುಳ್ಳು ಸುದ್ದಿಯೇ ಅಥವಾ ನಿಜವಾದ ಸುದ್ದಿಯೇ ಎಂಬುದು ಬಳಕೇದಾರನಿಗೆ ತಿಳಿಯಲು ನೆರವಾಗುತ್ತದೆ.

ಹೆಚ್ಚುತ್ತಿರುವ ನಕಲಿ ಸುದ್ದಿಯಿಂದ ಕಳೆದ ವಾರ ಮಾಹಿತಿ ತಂತ್ರಜ್ಞಾನ ಸಚಿವ ವಾಟ್ಸಾಪ್​ ವಿರುದ್ಧ ಕಿಡಿಕಾರಿದ್ದರು, ಇದಕ್ಕೆ ಉತ್ತರಿಸಿದ್ದ ಸಂಸ್ಥೆ ಹೊಸ ಅಪ್​ಡೇಟ್​ ತರುವುದಾಗಿ ಹೇಳಿತ್ತು. ಇದೀಗ ವಾಟ್ಸಪ್ ನಲ್ಲಿ ಫಾರ್ವರ್ಡ್ ಆಗುವ ಪ್ರತೀಯೊಂದು ಇಮೇಜ್ ಗಳ ಮೇಲೂ ಫಾರ್ವರ್ಡ್ ಲೇಬಲ್ ಕಂಡುಬರಲಿದೆ ಎಂದು ಹೇಳಿದೆ. ಇದಕ್ಕಾಗಿ ಬಳಕೇದಾರರು ವಾಟ್ಸಪ್​ನ್ನು ಅಪ್ಡೇಟ್​ ಮಾಡಿಕೊಳ್ಳಬೇಕು ಎಂದು ಸಂಸ್ಥೆ ನುಡಿದಿದೆ.

ಈವರೆಗಿನ ಮಾಧ್ಯಮ ವರದಿ ಪ್ರಕಾರ ವಾಟ್ಸಪ್​ನಲ್ಲಿ ಹರಡುವ ಸುದ್ದಿಯಿಂದ ದೇಶಾಧ್ಯಂತ ಒಟ್ಟಾರೆ 30ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರು. ಈ ಎಲ್ಲಾ ಬೆಳವಣಿಗೆಯಿಂದ ವಾಟ್ಸಪ್​ ಹಾಗೂ ಫೇಸ್​ಬುಕ್​ ಹಲವಾರು ಬಗೆಯ ಎಚ್ಚರಿಕಾ ಕ್ರಮಗಳನ್ನೂ ಸಹ ನೀಡಿತ್ತು.

ನಕಲಿ ಸುದ್ದಿಗಳನ್ನು ಶೇರ್​ ಮಾಡುವ ಮುನ್ನ ಮರುಪರಿಶೀಲಿಸುವಂತೆ ಮನವಿ ಕೂಡಾ ಮಾಡಿತ್ತು. ಒಂದು ವೇಳೆ ಸಂದೇಶಗಳು ಸುಳ್ಳು ಎಂದು ಎನಿಸಿದರೆ ಇದನ್ನು ರಿಪೋರ್ಟ್​ ಮಾಡುವ ಅವಕಾಶ ಕೂಡಾ ಫೇಸ್​ಬುಕ್​ ಕಲ್ಪಿಸಿದೆ.
First published:July 11, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ