EV Battery: ಈ ಇವಿ ಬ್ಯಾಟರಿ 3 ನಿಮಿಷ ಚಾರ್ಜ್ ಮಾಡಿದ್ರೆ ಸಾಕು; 20 ವರ್ಷ ಟೆನ್ಶನ್ನೇ ಇಲ್ಲ

ರ್ವರ್ಡ್‌ ಮತ್ತೆ ಸ್ಟಾರ್ಟ್‌ ಅಪ್‌ ಒಂದನ್ನು ಆರಂಭಿಸಿದೆ. ಎಲೆಕ್ಟ್ರಿಕ್‌ ಕಾರುಗಳಿಗೆ ಬಳಸಲಾಗುವ ಬ್ಯಾಟರಿಗಳು ಸುದೀರ್ಘ ಅವಧಿಗೆ ಬಾಳಿಕೆ ಬರುವುದು ಹೇಗೆ ಅನ್ನೋದನ್ನು ಸಂಶೋಧಿಸಿದೆ. ಕೇವಲ ಮೂರು ನಿಮಿಷ ಚಾರ್ಜ್‌ ಮಾಡಿದರೆ ಸಾಕು, ಪ್ರಸ್ತುತ ಬಳಕೆಯಲ್ಲಿರುವ ಇವಿ ಬ್ಯಾಟರಿಗಳ ದುಪ್ಪಟ್ಟು ಅಂದರೆ ಬರೋಬ್ಬರಿ 20 ವರ್ಷಗಳ ಕಾಲ ಬಾಳಿಕೆ ಬರುವಂತ ಬ್ಯಾಟರಿಯನ್ನು ಸಂಶೋಧಿಸಿದೆ.

ಇವಿ ಬ್ಯಾಟರಿ

ಇವಿ ಬ್ಯಾಟರಿ

  • Share this:
ಅಮೆರಿಕದ ಹಾರ್ವರ್ಡ್‌ ವಿಶ್ವವಿದ್ಯಾಲಯ (Harvard University) ಸಾಕಷ್ಟು ಸಂಶೋಧನೆಗಳು ಮಾಡುತ್ತಿರುತ್ತೆ. ಅತ್ಯಂತ ವಿಶಿಷ್ಟವಾದ, ಹಾಗೂ ಜಗತ್ತಿನ ಜನರಿಗೆ ಉಪಯೋಗವಾಗುವಂತಹ ಪ್ರಯೋಗಗಳನ್ನು ಮಾಡಿ ಹೆಸರಾಗಿದೆ ಈ ಯುನಿವರ್ಸಿಟಿ. ಇದೀಗ ಹಾರ್ವರ್ಡ್‌ ಅಂಥದ್ದೇ ಮತ್ತೊಂದು ಹೊಸ ಸಂಶೋಧನೆ (Research) ಮಾಡಿ ಸುದ್ದಿಯಾಗಿದೆ. ಎಲೆಕ್ಟ್ರಿಕ್‌ ಕಾರುಗಳಿಗೆ ಸುದೀರ್ಘಕಾಲ ಬಾಳಿಕೆ ಬರುವಂಥ ಬ್ಯಾಟರಿ ಹೇಗೆ ತಯಾರಿಸುವುದು ಅನ್ನೋದ್ರ ಬಗ್ಗೆ ರಿಸರ್ಚ್‌ ಮಾಡಿದೆ. ಇತ್ತೀಚಿಗೆ ಭಾರತವೂ ಸೇರಿದಂತೆ ಇಡೀ ಜಗತ್ತಿನ ಎಲೆಕ್ಟಿಕ್‌ ವಾಹನಗಳ (Electric Vehicle) ಬಳಕೆ ಹೆಚ್ಚು ಮಾಡಲು ಸಾಕಷ್ಟು ಪ್ರಯತ್ನಗಳು ನಡೆಯುತ್ತಿವೆ. ಅದಕ್ಕೆ ಕಾರಣ ಜಾಗತಿಕ ಹವಾಮಾನ ಬದಲಾವಣೆ ತಡೆಗೆ ಪ್ರಯತ್ನ ಹಾಗೂ ಪರಿಸರ ಸ್ನೇಹಿ ವಾಹನ (Eco Friendly Vehicle) ಎನ್ನುವುದು. ಇದಕ್ಕೆ ಕೊಡುಗೆ ಎಂಬಂತೆ ಹಾರ್ವರ್ಡ್‌ ಇವಿ ಬ್ಯಾಟರಿಯೊಂದನ್ನು ಸಂಶೋಧಿಸಿದೆ.

ಮೂರು ನಿಮಿಷ ಚಾರ್ಜ್‌ ಮಾಡಿರೆ 20 ವರ್ಷ ಬಾಳಿಕೆ ಬರುತ್ತೆ 
ಹೌದು, ಹಾರ್ವರ್ಡ್‌ ಮತ್ತೆ ಸ್ಟಾರ್ಟ್‌ ಅಪ್‌ ಒಂದನ್ನು ಆರಂಭಿಸಿದೆ. ಎಲೆಕ್ಟ್ರಿಕ್‌ ಕಾರುಗಳಿಗೆ ಬಳಸಲಾಗುವ ಬ್ಯಾಟರಿಗಳು ಸುದೀರ್ಘ ಅವಧಿಗೆ ಬಾಳಿಕೆ ಬರುವುದು ಹೇಗೆ ಅನ್ನೋದನ್ನು ಸಂಶೋಧಿಸಿದೆ. ಕೇವಲ ಮೂರು ನಿಮಿಷ ಚಾರ್ಜ್‌ ಮಾಡಿದರೆ ಸಾಕು, ಪ್ರಸ್ತುತ ಬಳಕೆಯಲ್ಲಿರುವ ಇವಿ ಬ್ಯಾಟರಿಗಳ ದುಪ್ಪಟ್ಟು ಅಂದರೆ ಬರೋಬ್ಬರಿ 20 ವರ್ಷಗಳ ಕಾಲ ಬಾಳಿಕೆ ಬರುವಂತ ಬ್ಯಾಟರಿಯನ್ನು ಸಂಶೋಧಿಸಿದೆ.

ಹೌದು, ಇದು ಹಾರ್ವರ್ಡ್‌ ಬೆಂಬಲಿತ ಸ್ಟಾರ್ಟ್‌ ಅಪ್‌ ಆಗಿದ್ದು, ಅಡೆನ್‌ ಎನರ್ಜಿ ಎಲೆಕ್ಟ್ರಿಕ್ ಕಾರುಗಳಿಗಾಗಿ ಹೊಸ ರೀತಿಯ ಬ್ಯಾಟರಿಗಳನ್ನು ಅಭಿವೃದ್ಧಿ ಪಡಿಸಿದೆ. ಅದು ಮೂರು ನಿಮಿಷದಲ್ಲಿ ಸಂಪೂರ್ಣವಾಗಿ ಚಾರ್ಜ್‌ ಆಗುವ ಸಾಮರ್ಥ್ಯ ಹೊಂದಿದೆ ಎನ್ನುವುದು ವಿಶೇಷ. ಅಂದಹಾಗೆ ಈ ಬ್ಯಾಟರಿ ತಯಾರಿಕೆಗಾಗಿ 5.15 ಮಿಲಿಯನ್‌ ಯುಸ್‌ ಡಾಲರ್‌ ಫಂಡ್‌ ನೀಡಲಾಗಿದೆ. ಅಲ್ಲದೇ ಈ ತಂತ್ರಜ್ಞಾನವು ಹಾರ್ವರ್ಡ್‌ ಅಭಿವೃದ್ಧಿ ಕಚೇರಿಯಿಂದ ವಿಶೇಷ ಪರವಾನಗಿಯನ್ನು ಪಡೆದುಕೊಂಡಿದೆ. ಪ್ರಿಮಾವೆರಾ ಗ್ರೂಪ್‌, ರಾಪ್ಸೋಡಿ ವೆಂಚರ್‌ ಹಾಗೂ ಮಾಸ್‌ ವೆಂಚರ್ಸ್‌ ಈ ತಂತ್ರಜ್ಞಾನಕ್ಕೆ ನಿಧಿ ನೀಡಲು ಸಹಕರಿಸಿದ್ದಾರೆ.

ಸ್ಟಾರ್ಟ್‌ ಅಪ್‌ ಸೈಕಲ್‌ಗಳ ಮೇಲೆ ಮೊದಲ ಪ್ರಯೋಗ  
ಈ ಮೊದಲು, ಈ ಸ್ಟಾರ್ಟ್‌ ಅಪ್‌ ಸೈಕಲ್‌ ಗಳಿಗೆ ಅತ್ಯಾಧುನಿಕ ಬ್ಯಾಟರಿಗಳನ್ನು ತಯಾರಿಸಿ ಯಶಸ್ವಿಯಾಗಿತ್ತು. 5 ಸಾವಿರದಿಂದ 10 ಸಾವಿರ ಸೈಕಲ್‌ ಗಳಿಗೆ ಮೂಲ ಮಾದರಿಯನ್ನು ಪ್ರದರ್ಶಿಸಿ 2 ಸಾವಿರದಿಂದ ಮೂರು ಸಾವಿರ ಚಾರ್ಜಿಂಗ್‌ ಸೈಕಲ್‌ ಗಳನ್ನು ತಯಾರಿಸಿ ಭೇಷ್‌ ಎನಿಸಿಕೊಂಡಿತ್ತು. ಈ ಅತ್ಯಾಧುನಿಕ ತಂತ್ರಜ್ಞಾನದ ಬ್ಯಾಟರಿ ತಯಾರಿಸಿದ ಅಡೆನ್‌ ಎನರ್ಜಿಯ ಸಿಇಒ ವಿಲಿಯಂ ಫಿಟ್ಜುಗ್‌, ಮನೆಯಲ್ಲಿಯೇ ಗ್ಯಾರೇಜ್‌ ಗಳಿಲ್ಲದ 37 ಪ್ರತಿಶತ ಅಮೆರಿಕನ್ನರಿಗೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ:  Tata Motors: ಅತಿ ಕಡಿಮೆ ಬೆಲೆಯ ಎಲೆಕ್ಟ್ರಿಕ್​ ಕಾರನ್ನು ಪರಿಚಯಿಸಲಿರುವ ಟಾಟಾ ಮೋಟಾರ್ಸ್​!

ಇವಿ ವಾಹನ ಫ್ಲೀಟ್‌ ನ ಸಂಪೂರ್ಣ ವಿದ್ಯುದೀಕರಣವು ಹವಾಮಾನ ಬದಲಾವಣೆಯ ವಿರುದ್ಧ ಹೋರಾಡಲು ನಾವು ತೆಗೆದುಕೊಳ್ಳಬಹುದಾದ ಅತ್ಯಂತ ಅರ್ಥಪೂರ್ಣ ಹಂತಗಳಲ್ಲಿ ಒಂದಾಗಿದೆ ಅಂತ ಫಿಟ್ಜುಗ್‌ ಅಭಿಪ್ರಾಯ ಪಟ್ಟಿದ್ದಾರೆ.

ಎಲೆಕ್ಟ್ರಿಕ್‌ ವಾಹನ ಬಳಕೆಯ ಪರಿಣಾಮ 
ಎಲೆಕ್ಟ್ರಿಕ್‌ ವೆಹಿಕಲ್‌ ಗಳ ಹೆಚ್ಚು ಹೆಚ್ಚು ಬಳಕೆಯಿಂದ ಜಾಗತಿಕ ಹಸಿರುಮನೆ ಅನಿಲ ಹೊಸ ಸೂಸುವಿಕೆಯನ್ನು 16 ಪ್ರತಿಶತದಷ್ಟು ಕಡಿಮೆ ಮಾಡುತ್ತದೆ ಅಂತ ಸಾಕಷ್ಟು ಸಂಶೋಧನೆಗಳು ಹೇಳಿವೆ. ಅಷ್ಟಕ್ಕೂ ಎಲೆಕ್ಟ್ರಿಕ್‌ ವಾಹನಗಳು ಐಷಾರಾಮಿ ಫ್ಯಾಷನ್‌ ಆಗಿ ಉಳಿಯಲು ಸಾಧ್ಯವಿಲ್ಲ.

ಇದನ್ನೂ ಓದಿ: Cheapest EV: ಅಧಿಕ ಮೈಲೇಜ್​ ಮತ್ತು ಕಡಿಮೆ ಬೆಲೆಗೆ ಖರೀದಿಗೆ ಸಿಗುವ ಬೆಸ್ಟ್ ಎಲೆಕ್ಟ್ರಿಕ್​ ಸ್ಕೂಟರ್​ಗಳಿವು

ಆದರೆ ಭವಿಷ್ಯದತ್ತ ನಾವು ದೃಷ್ಟಿ ಹರಿಸಿದರೆ ಇವಿ ಬ್ಯಾಟರಿಗಳ ಮಾತ್ರ ಉಳಿದಿದ್ದರೆ ಅಮೆರಿಕದಲ್ಲಿ ಮುಂದೆ ಮೂರರಿಂದ 5 ವರ್ಷಗಳಲ್ಲಿ ಬಳಸಿದ ಕಾರ್‌ ಗಳ ಮಾರುಕಟ್ಟೆಯೇ ಇರುವುದಿಲ್ಲ. ಅಲ್ಲದೇ ತಂತ್ರಜ್ಞಾನ ಎಲ್ಲರಿಗೂ ಲಭ್ಯವಾಗಬೇಕು ಅಂತ ಹಾರ್ವರ್ಡ್‌ ನ ಸಹಾಯಕ ಪ್ರಾಧ್ಯಾಪಕ ಹಾಗೂ ಅಡೆನ್‌ ಎನರ್ಜಿಯ ವೈಜ್ಞಾನಿಕ ಸಲಹೆಗಾರ ಕ್ಸಿನ್‌ ಲಿ ಹೇಳಿದರು.
Published by:Ashwini Prabhu
First published: