ವಾಟ್ಸ್​ಆ್ಯಪ್​ ಮೂಲಕ Navratri 2021 ಸ್ಟಿಕ್ಕರ್ ರಚಿಸಿ​ ಕಳುಹಿಸುವುದು ಹೇಗೆ?; ಇಲ್ಲಿದೆ ಮಾಹಿತಿ

Happy Navratri 2021: ವಾಟ್ಸ್​ಆ್ಯಪ್​ ಮೂಲಕವೂ ನವರಾತ್ರಿ ಹಬ್ಬದ ವಿಶೇಷ ಸ್ಟಿಕರ್​ ರಚಿಸಿ, ಡೌನ್​ಲೋಡ್​​ ಮಾಡಿ ಸ್ನೇಹಿತರಿಗೆ ಕಳುಹಿಸಿ ಶುಭಾಶಯ ಹೇಳಬಹುದಾಗಿದೆ.  ಹಾಗಿದ್ದರೆ ವಾಟ್ಸ್​ಆ್ಯಪ್ ಮೂಲಕ ಸ್ಟಿಕ್ಕರ್​ ರಚಿಸುವುದು ಹೇಗೆ? ಈ ಬಗ್ಗೆ ಮಾಹಿತಿ ಇಲ್ಲಿದೆ..

ನವರಾತ್ರಿ 2021

ನವರಾತ್ರಿ 2021

 • Share this:
  ದೇಶದಾದ್ಯಂತ ನವರಾತ್ರಿ ಹಬ್ಬದ ಸಡಗರ ಪ್ರಾರಂಭವಾಗಿದೆ. ಇದು ವಿವಿಧ ಹಿಂದೂ ದೇವತೆಗಳಿಗೆ ಅರ್ಪಿತವಾದ ಒಂಬತ್ತು ದಿನಗಳ ಹಬ್ಬವಾಗಿದೆ. ಅಕ್ಟೋಬರ್ 6 ರಿಂದ ಪ್ರಾರಂಭವಾಗಿ ಅಕ್ಟೋಬರ್​ 15ರ ದಸರಾ ಹಬ್ಬದೊಂದಿಗೆ ಮುಕ್ತಾಯವಾಗುತ್ತದೆ. ಹಬ್ಬದ ಸಮಯದಲ್ಲಿ ಜನರು ತಮ್ಮ ಹತ್ತಿರದ ಮತ್ತು ಆತ್ಮೀಯರಿಗೆ  ಶುಭಾಶಯ ತಿಳಿಸಲು ಪ್ರಾರಂಭಿಸಿದ್ದಾರೆ. ವಾಟ್ಸ್​ಆ್ಯಪ್​ ಮೂಲಕವೂ ನವರಾತ್ರಿ ಹಬ್ಬದ ವಿಶೇಷ ಸ್ಟಿಕರ್​ ರಚಿಸಿ, ಡೌನ್​ಲೋಡ್​​ ಮಾಡಿ ಸ್ನೇಹಿತರಿಗೆ ಕಳುಹಿಸಿ ಶುಭಾಶಯ ಹೇಳಬಹುದಾಗಿದೆ.  ಹಾಗಿದ್ದರೆ ವಾಟ್ಸ್​ಆ್ಯಪ್ ಮೂಲಕ ಸ್ಟಿಕ್ಕರ್​ ರಚಿಸುವುದು ಹೇಗೆ? ಈ ಬಗ್ಗೆ ಮಾಹಿತಿ ಇಲ್ಲಿದೆ.

  WhatsApp ಮೂಲಕ ನವರಾತ್ರಿ 2021 ಸ್ಟಿಕ್ಕರ್ ರಚಿಸುವುದು  ಹೇಗೆ?:

  ಹಂತ 1: ಮೊದಲನೆಯದಾಗಿ, ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಗೂಗಲ್ ಪ್ಲೇ ಸ್ಟೋರ್ ತೆರೆಯಿರಿ ಮತ್ತು ಮುಂಬರುವ ಹಬ್ಬದ ಸೀಸನ್‌ಗಾಗಿ ವಾಟ್ಸಾಪ್ ಸ್ಟಿಕ್ಕರ್‌ಗಳನ್ನು ಆಮದು ಮಾಡಲು ಸರ್ಚ್ ಬಾರ್‌ನಲ್ಲಿ 'ನವರಾತ್ರಿ 2021 ವಾಟ್ಸಾಪ್ ಸ್ಟಿಕ್ಕರ್' ಎಂದು ಟೈಪ್ ಮಾಡಿ. ನೀವು ಐಫೋನ್ ಬಳಸುತ್ತಿದ್ದರೆ, ನೀವು Apple ನ ಸ್ಟೋರ್‌ನಿಂದ Sticker.ly ಅನ್ನು ಡೌನ್‌ಲೋಡ್ ಮಾಡಬಹುದು.

  ಹಂತ 2: ಸರ್ಚ್​ ಬಾರ್​ನಲ್ಲಿ ಕಾಣಿಸಿಕೊಂಡ ಸ್ಟಿಕ್ಕರ್ ಪ್ಯಾಕ್ ಆಪ್‌ಗಳನ್ನು ಆಯ್ಕೆ ಮಾಡಿ. ಇಮೇಜ್‌ಟ್ಯಾಗ್‌ನಿಂದ ನವರಾತ್ರಿ ಸ್ಟಿಕ್ಕರ್‌ಗಳನ್ನು ಪ್ರಯತ್ನಿಸಬಹುದು ಮತ್ತು ವೀಡಿಯೋ ಮತ್ತು ಸ್ಟಿಕ್ಕರ್ ಹಬ್‌ನಿಂದ WAStickerApps ಸ್ಟಿಕ್ಕರ್‌ಗಳನ್ನು ಡೌನ್​ಲೋಡ್​ ಮಾಡಬಹುದು.

  ಹಂತ 3: ಸ್ಟಿಕರ್ ಆ್ಯಪ್ ಅನ್ನು ಇನ್‌ಸ್ಟಾಲ್ ಮಾಡಿದ ನಂತರ, ಅದನ್ನು ತೆರೆಯಿರಿ ಮತ್ತು 'ಓಪನ್ ಸ್ಟಿಕ್ಕರ್ಸ್ ಪ್ಯಾಕ್' ಆಯ್ಕೆಯನ್ನು ಟ್ಯಾಪ್ ಮಾಡಿ.

  ಹಂತ 4: ಇಲ್ಲಿ ನೀವು ನವರಾತ್ರಿ 2021 ಸ್ಟಿಕರ್ ಪ್ಯಾಕ್‌ಗಳ ಪಟ್ಟಿಯನ್ನು ನೋಡುತ್ತೀರಿ. ನೀವು ಬಳಸಲು ಬಯಸುವದನ್ನು ಆರಿಸಿ ಮತ್ತು ನಿಮ್ಮ ಸಂಗ್ರಹಕ್ಕೆ ಸೇರಿಸಲು ಪ್ರತಿ ಸ್ಟಿಕರ್ ಪ್ಯಾಕ್‌ನ ಬಲಭಾಗದಲ್ಲಿರುವ ‘ಪ್ಲಸ್’ ಐಕಾನ್ ಮೇಲೆ ಟ್ಯಾಪ್ ಮಾಡಿ.

  ಹಂತ 5: ಈಗ, ಈ ಸ್ಟಿಕ್ಕರ್ ಪ್ಯಾಕ್‌ಗಳನ್ನು ಸೇರಿಸಬಹುದಾದ ವಾಟ್ಸ್​ಆ್ಯಪ್ ಮತ್ತು ಟೆಲಿಗ್ರಾಮ್ ಸೇರಿದಂತೆ ವಿವಿಧ ಆಯ್ಕೆಗಳನ್ನು ಆ್ಯಪ್ ತೋರಿಸುತ್ತದೆ. ಈ ಸ್ಟಿಕ್ಕರ್ ಪ್ಯಾಕ್‌ಗಳನ್ನು ಮೆಸೇಜಿಂಗ್ ಆ್ಯಪ್‌ಗೆ ಸೇರಿಸಲು WhatsApp ನಲ್ಲಿ ಟ್ಯಾಪ್ ಮಾಡಿ.

  ಹಂತ 6: ' Add' ಆಯ್ಕೆಯನ್ನು ಟ್ಯಾಪ್ ಮಾಡುವ ಮೂಲಕ ದೃಢೀಕರಿಸಿ. ಈಗ ನೀವು ಈ ಎಲ್ಲಾ ಸ್ಟಿಕ್ಕರ್ ಪ್ಯಾಕ್‌ಗಳನ್ನು ವಾಟ್ಸ್ಆ್ಯಪ್‌ನಲ್ಲಿರುವ ಸ್ಟಿಕರ್ ವಿಭಾಗದಲ್ಲಿ ಕಾಣಬಹುದು.

  ನವರಾತ್ರಿ ಹಬ್ಬದ ಶುಭಾಶಯಗಳ GIF ಗಳನ್ನು ಕಳುಹಿಸುವುದು ಹೇಗೆ?

  ಸ್ಟಿಕ್ಕರ್‌ಗಳನ್ನು ಮಾತ್ರವಲ್ಲದೆ GIF ಫೈಲ್ ರಚಿಸಬಹುದಾಗಿದೆ ಮಾತ್ರವಲ್ಲದೆ ಈಗಾಗಲೇ ಇಂಟರ್​ನೆಟ್​ನಲ್ಲಿ ಸಿಗುವ ಫೈಲ್​ಗಳನ್ನು ಶೇರ್​ ಮಾಡಬಹುದಾಗಿದೆ. ಈ ಬಗ್ಗೆ ಮಾಹಿತಿ ಇಲ್ಲಿದೆ…

  ಹಂತ 1: ವಾಟ್ಸ್​ಆ್ಯಪ್​ನಲ್ಲಿ GIF ಅನ್ನು ಹಂಚಿಕೊಳ್ಳಲು ಬಯಸುವಿರಾದರೆ ಚಾಟ್ ಆಯ್ಕೆ ತೆರೆಯಿರಿ.

  ಹಂತ 2: ಚಾಟ್ ಬಾರ್‌ನ ಬಲಭಾಗದಲ್ಲಿರುವ ಸ್ಟಿಕರ್ ಐಕಾನ್ ಮೇಲೆ ಟ್ಯಾಪ್ ಮಾಡಿ.

  ಹಂತ 3: ಈಗ GIF ಆಯ್ಕೆಯನ್ನು ಟ್ಯಾಪ್ ಮಾಡಿ.

  ಹಂತ 4: ಮುಂದೆ, GIF ಬಟನ್‌ನ ಎಡಬದಿಯಲ್ಲಿ ಇರಿಸಲಾಗಿರುವ Magnifying lens ಆಯ್ಕೆಯನ್ನು ಟ್ಯಾಪ್ ಮಾಡಿ.

  ಹಂತ 4: ಹುಡುಕಾಟ ಪಟ್ಟಿಯಲ್ಲಿ Navratri 2021 ಎಂದು ಟೈಪ್ ಮಾಡಿ.

  ಹಂತ 5: ಇಷ್ಟವಾದ GIF ಅನ್ನು ಟ್ಯಾಪ್ ಮಾಡಿ ಮತ್ತು ನಂತರ ಕಳುಹಿಸು ಐಕಾನ್ ಅನ್ನು ಟ್ಯಾಪ್ ಮಾಡಿ.
  Published by:Harshith AS
  First published: