ಮಾರುಕಟ್ಟೆಗೆ ಲಗ್ಗೆಯಿಟ್ಟ ‘ಒನ್ ವಿಶನ್‘ ಸ್ಮಾರ್ಟ್​ಫೋನ್​: ಇದು ಮೋಟೋರೋಲಾದ ಹೊಸ ವಿಶನ್​

Motorola One Vision: ನೂತನ ಸ್ಮಾರ್ಟ್​ಫೋನ್ 6.3 ಇಂಚಿನ ಎಚ್​​ಡಿ ಡಿಸ್​​ಪ್ಲೇ 21:9 ರೇಶಿಯೋ ಹೊಂದಿದ್ದು, ವಿಡಿಯೋ ವೀಕ್ಷಣೆಗೆ ಹೆಚ್ಚು ಸೂಕ್ತವಾಗಿದೆ.​ ಒನ್​​​ ವಿಶನ್​ ಸ್ಮಾರ್ಟ್​ಪೋನ್​ Exynos 9609 ಪ್ರೊಸೆಸರ್​ ಮೂಲಕ ಕಾರ್ಯ ನಿರ್ವಹಿಸುತ್ತಿದ್ದು, 4GB RAM ಮತ್ತು 128GB ಸ್ಟೊರೇಜ್​​​​ ನೀಡಲಾಗಿದೆ.

news18
Updated:May 18, 2019, 5:57 PM IST
ಮಾರುಕಟ್ಟೆಗೆ ಲಗ್ಗೆಯಿಟ್ಟ ‘ಒನ್ ವಿಶನ್‘ ಸ್ಮಾರ್ಟ್​ಫೋನ್​: ಇದು ಮೋಟೋರೋಲಾದ ಹೊಸ ವಿಶನ್​
ಮೋಟೋರೋಲಾ ‘ಒನ್​​ ವಿಶನ್‘​​ ಸ್ಮಾರ್ಟ್​ಫೋನ್​​
  • News18
  • Last Updated: May 18, 2019, 5:57 PM IST
  • Share this:
ಪ್ರತಿಷ್ಠಿತ ಮೋಟೋರೋಲಾ ಕಂಪೆನಿ ಗ್ರಾಹಕರಿಗಾಗಿ ನೂತನ ಸ್ಮಾರ್ಟ್​ಫೋನ್​ವೊಂದನ್ನು ಪರಿಚಯಿಸಿದೆ. ಈ ಬಾರಿ ‘ಒನ್​​ ವಿಶನ್‘​ ಹೆಸರಿನ  ಸ್ಮಾರ್ಟ್​ಫೋನ್​ವೊಂದನ್ನು ಮಾರುಕಟ್ಟೆಗೆ ತಂದಿದೆ.

ಬ್ರೆಜಿಲ್​​ನಲ್ಲಿ ಬುಧವಾರ ಮೋಟೋರೋಲಾ ‘ಒನ್​​ ವಿಶನ್‘​​ ಸ್ಮಾರ್ಟ್​ಫೋನ್​​ ಅನ್ನು ಬಿಡುಗಡೆ ಮಾಡಲಾಗಿದೆ. ನೂತನ ಸ್ಮಾರ್ಟ್​ಫೋನ್ 6.3 ಇಂಚಿನ ಎಚ್​​ಡಿ ಡಿಸ್​​ಪ್ಲೇ 21:9 ರೇಶಿಯೋ ಹೊಂದಿದ್ದು, ವಿಡಿಯೋ ವೀಕ್ಷಣೆಗೆ ಹೆಚ್ಚು ಸೂಕ್ತವಾಗಿದೆ.​ ಒನ್​​​ ವಿಶನ್​ ಸ್ಮಾರ್ಟ್​ಪೋನ್​ Exynos 9609 ಪ್ರೊಸೆಸರ್​ ಮೂಲಕ ಕಾರ್ಯ ನಿರ್ವಹಿಸುತ್ತಿದ್ದು, 4GB RAM ಮತ್ತು 128GB ಸ್ಟೊರೇಜ್​​​​ ನೀಡಲಾಗಿದೆ. ಅಂತೆಯೇ, 512GB  ತನಕ ಮೆಮೊರಿಯನ್ನು ಹಿಗ್ಗಿಸುವ ಅವಕಾಶ ಕಲ್ಪಿಸಲಾಗಿದೆ.

ಇದನ್ನೂ ಓದಿ: WhatsApp Update: ಬದಲಾವಣೆಗೆ ಮುಂದಾದ ವಾಟ್ಸ್​ಆ್ಯಪ್​​: ಇನ್ಮೇಲೆ ಇನ್ನೊಬ್ಬರ ಫೋಟೋ ಕದಿಯುವಂತಿಲ್ಲ

ಇನ್ನು ಸೆಲ್ಫಿಗಾಗಿ 25 ಮೆಗಾಫಿಕ್ಸೆಲ್​ ಕ್ಯಾಮೆರಾವನ್ನು ನೀಡಲಾಗಿದೆ. ಅಂತೆಯೇ, ಹಿಂಭಾಗದಲ್ಲಿ 48 ಕ್ವಾಡ್​​​ ಫಿಕ್ಸೆಲ್​​ ತಂತ್ರಜ್ಞಾನವನ್ನು ಅಳವಡಿಸಲಾದ ಕ್ಯಾಮೆರಾವನ್ನು ಮತ್ತು 12 ಮೆಗಾಫಿಕ್ಸೆಲ್​​ ಕ್ಯಾಮೆರಾ ಆಳವಡಿಸಲಾಗಿದೆ.

ಸ್ಮಾರ್ಟ್​ಫೋನ್​ ದೀರ್ಘಕಾಲದ ಬಾಳ್ವಿಕೆಗಾಗಿ 3,5000 mAh ಬ್ಯಾಟರಿಯನ್ನು ನೀಡಲಾಗಿದೆ. ಮೋಟೋರೋಲಾ ಈ ಸ್ಮಾರ್ಟ್​ಪೋನ್​ ಬೆಲೆ 23,500 ರೂ. ಎಂದು ಅಂದಾಜಿಸಲಾಗಿದೆ.

ಒನ್​​ ವಿಶನ್​ ಸ್ಮಾರ್ಟ್​ಫೋನ್​ ವಿಶೇಷತೆಗಳು:

ಡಿಸ್​​ಪ್ಲೇ: 6.3 ಇಂಚಿನ ಎಚ್​​ಡಿ ಡಿಸ್​​ಪ್ಲೇರ್ಯಾಮ್​: 4GB RAM ​​​​

ಪ್ರೊಸೆಸರ್​: Exynos 9609 ಪ್ರೊಸೆಸರ್

ಕ್ಯಾಮೆರಾ: 25 ಮೆಗಾಫಿಕ್ಸೆಲ್​ ಸೆಲ್ಫಿ ಕ್ಯಾಮೆರಾ+ 48 ಮೆಗಾಫಿಕ್ಸೆಲ್​+ 12 ಮೆಗಾಫಿಕ್ಸೆಲ್​

ಸ್ಟೊರೇಜ್​: 128GB ಸ್ಟೊರೇಜ್

ಬ್ಯಾಟರಿ:3,5000 mAh

ಬೆಲೆ: 23,500 ರೂ. ಅಂದಾಜಿಸಲಾಗಿದೆ.

First published:May 18, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading