• Home
 • »
 • News
 • »
 • tech
 • »
 • ಗುಣವತ್ತಾ ಸೇ ಆತ್ಮನಿರ್ಭರತಾ: ಭಾರತದ ಭವಿಷ್ಯದ ಯಶಸ್ವಿಗೆ ಕೀಲಿಯಾಗಲಿದೆ ಕ್ವಾಲಿಟಿ ಆಫ್ ಇಂಡಿಯಾದ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮ

ಗುಣವತ್ತಾ ಸೇ ಆತ್ಮನಿರ್ಭರತಾ: ಭಾರತದ ಭವಿಷ್ಯದ ಯಶಸ್ವಿಗೆ ಕೀಲಿಯಾಗಲಿದೆ ಕ್ವಾಲಿಟಿ ಆಫ್ ಇಂಡಿಯಾದ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮ

ನಮ್ಮ ಜನಸಂಖ್ಯೆಯನ್ನು ಸಮರ್ಥವಾಗಿ ಬಳಸಿದರೆ ಅದು ನಮ್ಮ ಅತಿದೊಡ್ಡ ಆಸ್ತಿಯಾಗುವ ಸಾಮರ್ಥ್ಯ ಹೊಂದಿದೆ.

ನಮ್ಮ ಜನಸಂಖ್ಯೆಯನ್ನು ಸಮರ್ಥವಾಗಿ ಬಳಸಿದರೆ ಅದು ನಮ್ಮ ಅತಿದೊಡ್ಡ ಆಸ್ತಿಯಾಗುವ ಸಾಮರ್ಥ್ಯ ಹೊಂದಿದೆ.

ನಮ್ಮ ಜನಸಂಖ್ಯೆಯನ್ನು ಸಮರ್ಥವಾಗಿ ಬಳಸಿದರೆ ಅದು ನಮ್ಮ ಅತಿದೊಡ್ಡ ಆಸ್ತಿಯಾಗುವ ಸಾಮರ್ಥ್ಯ ಹೊಂದಿದೆ.

 • Share this:

  ಸ್ವಾತಂತ್ರ್ಯ ಗಳಿಸಿ 75 ವರ್ಷಗಳಾಗಿರುವ ಮತ್ತು ಜನಸಂಖ್ಯೆಯ ಸರಾಸರಿ ವಯಸ್ಸು 26 ಇರುವ ನಮ್ಮ ದೇಶವು ಎಲ್ಲಾ ರೀತಿಯಲ್ಲೂ ಯುವ ದೇಶವಾಗಿದೆ. ಅಷ್ಟೇ ಅಲ್ಲ, ಸರಾಸರಿ 1% ಬೆಳವಣಿಗೆ ದರದೊಂದಿಗೆ ನಮ್ಮ ಜನಸಂಖ್ಯೆಯು ವರ್ಷದಿಂದ ವರ್ಷಕ್ಕೆ ಯೌವ್ವನ ಪಡೆಯುತ್ತಿದೆ. 15- 59 ವರ್ಷಗಳ ವಯೋಮಿತಿಯಲ್ಲಿ 63% ಮಂದಿಯಿದ್ದು, ಅತಿಹೆಚ್ಚು ದುಡಿಯುವ ವಯಸ್ಸಿನ ಜನಸಂಖ್ಯೆಯನ್ನು ನಾವು ಹೊಂದಿದ್ದೇವೆ, ಆರ್ಥಿಕ ಶಕ್ತಿಗಳಾದ ಚೀನಾ ಮತ್ತು ಜಪಾನ್‌ನಲ್ಲಿ ಮುಪ್ಪಿನ ಪ್ರಮಾಣ ಹೆಚ್ಚುತ್ತಿರುವ ಮಧ್ಯೆ ನಮ್ಮ ಈ ಜನಸಂಖ್ಯಾ ಸಾಮರ್ಥ್ಯವು ಅನುಕೂವಾಗಿದೆ.


  ನಮ್ಮ ಯುವ ಜನರು ನಮ್ಮ ಅತಿದೊಡ್ಡ ಆಸ್ತಿಯಾಗಿದ್ದಾರೆ ಮತ್ತು ಆರ್ಥಿಕ ಪ್ರಗತಿಯ ಚಾಲನಾ ಶಕ್ತಿಯಾಗಿದ್ದಾರೆ. ಯುವ ಸಮೂಹವು ನಮ್ಮ ಕ್ಷಿಪ್ರಗತಿಯ ಕೈಗಾರಿಕೀಕರಣದ ಆರ್ಥಿಕತೆಗೆ ಸಿದ್ಧಸ್ವರೂಪದ ಕಾರ್ಯಪಡೆಯನ್ನು ನೀಡುತ್ತದೆ, ಇದರಿಂದಾಗಿ ವರ್ಷಗಳ ಕಾಲ ಉಳಿತಾಯ ಮತ್ತು ದೇಶೀಯ ಬಳಕೆ ಹೆಚ್ಚುತ್ತದೆ. ಖಂಡಿತವಾಗಿಯೂ ಈ ಕೊಡುಗೆ ನೀಡಲು ಜನಸಮೂಹಕ್ಕೆ ಅಗತ್ಯ ಕೌಶಲ್ಯ ಹೊಂದಿದೆ ಎಂದು ಭಾವಿಸಿಕೊಳ್ಳಬೇಕು.


  ನಮ್ಮ ಮಾನವ ಬಂಡವಾಳದ ಗರಿಷ್ಠ ಸದುಪಯೋಗ ಪಡೆಯಲು, 2022ರ ವೇಳೆಗೆ ಭಾರತದಲ್ಲಿ ವಿವಿಧ ಕೌಶಲ್ಯಗಳಲ್ಲಿ 30 ಕೋಟಿ ಜನರಿಗೆ ತರಬೇತಿ ನೀಡುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರು 15 ಜುಲೈ 2015 ರಂದು ಸ್ಕಿಲ್ ಇಂಡಿಯಾ ಅಭಿಯಾನಕ್ಕೆ ಚಾಲನೆ ನೀಡಿದರು. ಈ ಅಭಿಯಾನವು ಬಹು ಆಯಾಮದ್ದಾಗಿದೆ ಮತ್ತು ಅನೇಕ ಉಪಕ್ರಮಗಳನ್ನು ಒಳಗೊಂಡಿದೆ: ನ್ಯಾಶನಲ್ ಸ್ಕಿಲ್ ಡೆವಲಪ್‌ಮೆಂಟ್ ಮಿಶನ್, ನ್ಯಾಶನಲ್ ಪಾಲಿಸಿ ಫಾರ್ ಸ್ಕಿಲ್ ಡೆವಲಪ್‌ಮೆಂಟ್ ಆಂಡ್ ಎಂಟರ್‌ಪ್ರೀನರ್‌ಶಿಪ್, 2015, ಪ್ರಧಾನ್ ಮಂತ್ರಿ ಕೌಶಲ್ ವಿಕಾಸ್ ಯೋಜನಾ (PMKVY), ಸ್ಕಿಲ್ ಲೋನ್ ಸ್ಕೀಮ್ ಮತ್ತು ರೂರಲ್ ಇಂಡಿಯಾ ಸ್ಕಿಲ್ ಇನಿಶಿಯೇಟಿವ್. ಈ ಪ್ರತಿಯೊಂದು ಉಪಕ್ರಮಗಳು ಭಿನ್ನ ವಿಭಾಗವನ್ನು ಉದ್ದೇಶಿಸಿವೆ ಮತ್ತು ಭಾರತೀಯ ಯುವಕರಿಗೆ ಉದ್ಯೋಗಾವಕಾಶವನ್ನು ಹೆಚ್ಚಿಸುವ ಗುರಿ ಹೊಂದಿದೆ.


  ಉದ್ಯಮ-ಶಿಕ್ಷಣಸಂಸ್ಥೆ ಅಂತರ ಬೆಸೆಯುವಿಕೆ.
  ದುರದೃಷ್ಟವಶಾತ್, ಭಾರತವು ಉದ್ಯಮ-ಶಿಕ್ಷಣಸಂಸ್ಥೆ ನಡುವಿನ ಅಂತರಕ್ಕೆ ಹೆಸರಾಗಿದೆ. 10+2 ಪೂರೈಸುವ 100 ವಿದ್ಯಾರ್ಥಿಗಳಲ್ಲಿ only 26 ಮಂದಿ ಮಾತ್ರ ಉದ್ಯೋಗ ಪಡೆಯುತ್ತಾರೆ, ಯಾಕೆಂದರೆ ಅವರು ಸ್ವೀಕರಿಸುವ ಶಿಕ್ಷಣವು ಉದ್ಯೋಗದಾತರಿಗೆ ಬೇಕಾದ ಕೌಶಲ್ಯಗಳಿಗೆ ತಾಳೆಯಾಗುವುದಿಲ್ಲ. ಅಂದರೆ, ನಮ್ಮ ಸಾಕ್ಷರತೆಯ ಸಂಖ್ಯೆ ಸ್ಥಿರವಾಗಿ ಏರುತ್ತಿದ್ದರೂ, ಕೌಶಲ್ಯದ ಅಂತರ ಇನ್ನೂ ಹಾಗೆಯೇ ಇದೆ.


  ಈ ನಿರ್ದಿಷ್ಟ ಸಮಸ್ಯೆಯನ್ನು ಪರಿಹರಿಸಲು, ಸರ್ಕಾರವು ನ್ಯಾಶನಲ್ ಸ್ಕಿಲ್ಸ್ ಕ್ವಾಲಿಫಿಕೇಶನ್ಸ್ ಫ್ರೇಮ್‌ವರ್ಕ್ (NSQF) ನಲ್ಲಿ ಒಳಗೊಂಡಿರುವ ಪ್ರಮಾಣಕವನ್ನು ಜಾರಿಗೊಳಿಸುವ ಅಗತ್ಯವಿದೆ. NSQF ಎಂಬುದು ಸ್ಪರ್ಧಾತ್ಮಕತೆ ಆಧಾರಿತ ಚೌಕಟ್ಟಾಗಿದ್ದು, ಇದು ಜ್ಞಾನ, ಕೌಶಲ್ಯಗಳು ಮತ್ತು ಯೋಗ್ಯತೆಯ ಸರಣಿಯ ಪ್ರಕಾರ ಅರ್ಹತೆಗಳನ್ನು ನಿರ್ಣಯಿಸುತ್ತದೆ. ಕಲಿಕೆದಾರರು ಸಾಧಿಸಿದ ವಿಧಾನವು ಔಪಚಾರಿಕವೋ ಅಥವಾ ಅನೌಪಚಾರಿಕ ಕಲಿಕೆಯ ಮೂಲಕವೋ ಎಂಬುದನ್ನು ಪರಿಗಣಿಸದೆ, ಕಲಿಕೆಯ ಪ್ರತಿ ಹಂತದಲ್ಲಿ ಅವರು ಹೊಂದಿರಬೇಕಾದ ಕಲಿಕಾ ಫಲಿತಾಂಶಗಳನ್ನು ಇದು ಸ್ಪಷ್ಟವಾಗಿ ವ್ಯಾಖ್ಯಾನಿಸುತ್ತದೆ.


  ನ್ಯಾಶನಲ್ ಆಕ್ಯುಪೇಶನಲ್ ಸ್ಟಾಂಡರ್ಡ್ಸ್ (NOS), ಇನ್ನೊಂದೆಡೆ ಉದ್ಯೋಗದಲ್ಲಿ ಪರಿಣಾಮಕಾರಿ ಕಾರ್ಯನಿರ್ವಹಣೆಗೆ ಅಗತ್ಯವಾಗಿರುವ ಕೌಶಲ್ಯಗಳು, ಜ್ಞಾನ ಮತ್ತು ಅರ್ಥೈಸುವಿಕೆಯ ವ್ಯಾಖ್ಯಾನ ನೀಡುತ್ತವೆ: ಅವುಗಳು ಕಾರ್ಯವೊಂದನ್ನು ಮಾಡಲು ವ್ಯಕ್ತಿಯು ಏನನ್ನು ತಿಳಿದುಕೊಂಡಿರಬೇಕು ಮತ್ತು ಏನ್ನು ಮಾಡಲು ಸಾಧ್ಯವಾಗಬೇಕು ಎಂಬುದನ್ನು ಹೇಳುತ್ತವೆ. ಈ ಪ್ರಮಾಣಕಗಳು ವಿವಿಧ ಶಿಕ್ಷಣ ಮತ್ತು ತರಬೇತಿ ಕಾರ್ಯಕ್ರಮಗಳಿಗೆ ಮಾನದಂಡಗಳನ್ನು ರೂಪಿಸಬಲ್ಲವು. NOS ಮತ್ತು NSQF ನಡುವಿನ ಸರಿಹೊಂದಿಕೆಯು ಅನೇಕ ಲಾಭಗಳನ್ನು ಸೃಷ್ಟಿಸುತ್ತದೆ.


  ಆರಂಭಿಕರಿಗೆ, ದೇಶಾದ್ಯಂತ ತರಬೇತಿಯ ಪ್ರಮಾಣಿತ, ಸ್ಥಿರ, ರಾಷ್ಟ್ರೀಯವಾಗಿ ಸ್ವೀಕಾರಾರ್ಹ ಫಲಿತಾಂಶವಾಗಿ ಕ್ವಾಲಿಟಿ ಅಶ್ಯುರೆನ್ಸ್ ಫ್ರೇಮ್‌ವರ್ಕ್ ರೂಪಿಸಲಾಗುತ್ತದೆ. ನಮ್ಮ ತರಬೇತಿ ಪಡೆದ ಕಾರ್ಯಪಡೆಯು NSQFನ ಅಂತಾರಾಷ್ಟ್ರೀಯ ಸಮಾನತೆಯ ಮೂಲಕ ಜಾಗತಿಕ ಚಲನಶೀಲತೆಯನ್ನು ಹೊಂದಿರುತ್ತದೆ. ಭವಿಷ್ಯದ ಉದ್ಯೋಗಿಗಳಿಗೆ ಮತ್ತು ಉದ್ಯೋಗದಾತರಿಗೆ ಸಮಾನವಾಗಿ, ಇದು ಕ್ಷೇತ್ರದೊಳಗೂ, ಕ್ಷೇತ್ರಗಳ ನಡುವೆಯೂ ಅಭಿವೃದ್ಧಿಯ ಹಾದಿಯ ಮ್ಯಾಪಿಂಗ್ ಅನ್ನು ರಚಿಸುತ್ತದೆ. ಆದ್ದರಿಂದ ಉದ್ಯೋಗಿಗಳು ತಮ್ಮ ಕನಸಿನ ಉದ್ಯೋಗವನ್ನು ಅನುಸರಿಸಬೇಕಾದ ಕಲಿಕೆಗಳ ಹಾದಿಯ ಬಗ್ಗೆ ತಿಳಿದುಕೊಂಡಿದ್ದಾರೆ ಮತ್ತು ಉದ್ಯೋಗದಾತರಿಗೆ ಮುಂದಿನ ಹಂತಕ್ಕೆ ಹೋಗಲು ಅತ್ಯುತ್ತಮ ಮತ್ತು ಉಜ್ವಲವಾಗುವುದಕ್ಕೆ ಅಗತ್ಯವಿರುವ ಸೂಕ್ತ ತರಬೇತಿಗೆ ಹೂಡಿಕೆ ಮಾಡಲು ಸಾಧ್ಯವಾಗುತ್ತದೆ. ಅಲ್ಲದೇ, ಅವರ ಕೌಶಲ್ಯವು ಅನೌಪಚಾರಿಕ ರಚನೆಯಿಂದ ಬಂದಿದ್ದರೂ ನಾವು ಯಾರನ್ನೂ ಬಿಡುವುದಿಲ್ಲ ಎಂದು ರೆಕಾಗ್ನಿಶನ್ ಆಫ್ ಪ್ರಿಯರ್ ಲರ್ನಿಂಗ್ (RPL) ಖಾತ್ರಿಪಡಿಸುತ್ತದೆ.


  ಭದ್ರ ಬುನಾದಿಯನ್ನು ಸ್ಥಾಪಿಸುವುದು
  ಕಾರ್ಯಕ್ರಮವನ್ನು ಇಷ್ಟು ದೊಡ್ಡ ಪ್ರಮಾಣದಲ್ಲಿ ನಡೆಸಲು, ಗುಣಮಟ್ಟದ ಬುನಾದಿಯು ಅಸ್ತಿತ್ವದಲ್ಲಿರಬೇಕು. ನಮಗೆ ಪ್ರಮಾಣಕಗಳು ಮತ್ತು ಪ್ರಮಾಣೀಕರಣಗಳು, ಆ ಪ್ರಮಾಣಕಗಳನ್ನು ಸ್ಥಳದಲ್ಲಿ ಇರಿಸಿಕೊಳ್ಳಲು ನೆರವಾಗುವ ಆಡಿಟರ್‌ಗಳು ಮತ್ತು ಇನ್ಸ್‌ಪೆಕ್ಟರ್‌ಗಳು, ಈ ಆಡಿಟರ್‌ಗಳು ಮತ್ತು ಇನ್ಸ್‌ಪೆಕ್ಟರ್‌ಗಳು ಅರ್ಹರಾಗಿದ್ದಾರೆ ಎಂದು ಖಚಿತಪಡಿಸುವ ಸಂಸ್ಥೆಗಳ ಅಗತ್ಯವಿದೆ. ಇಲ್ಲಿ ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾ (QCI) ಬರುತ್ತದೆ.


  ಈಗ 25 ವರ್ಷಗಳಿಂದ, QCI ಭಾರತದ ಗುಣಮಟ್ಟದ ಪರಿಸರ ವ್ಯವಸ್ಥೆಯನ್ನು ರಚಿಸುವಲ್ಲಿ ಆಳವಾದ ಹೂಡಿಕೆಗಳನ್ನು ಮಾಡುತ್ತಿದೆ.  QCI ಅನೇಕ ಘಟಕ ಮಂಡಳಿಗಳಿಂದ ಮಾಡಲ್ಪಟ್ಟಿದೆ, ಇದರಲ್ಲಿ ನ್ಯಾಷನಲ್ ಅಕ್ರೆಡಿಟೇಶನ್ ಬೋರ್ಡ್ ಫಾರ್ ಎಜುಕೇನ್ ಅಂಡ್ ಟ್ರೈನಿಂಗ್ (NABET) ಅನ್ನು ಭಾರತದ ಕೌಶ್ಯಲ್ಯ ಕಾರ್ಯಕ್ರಮಗಳು ಮತ್ತು ಉಪಕ್ರಮಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.


  NABET ಶೈಕ್ಷಣಿಕ ಸಂಸ್ಥೆಗಳಿಗೆ, ವೃತ್ತಿಪರ ತರಬೇತಿ ಸಂಸ್ಥೆಗಳಿಗೆ ಮತ್ತು ವಿವಿಧ ಕೌಶಲ್ಯ ಪ್ರಮಾಣೀಕರಣ ಸಂಸ್ಥೆಗಳಿಗೆ ಮಾನ್ಯತೆ ಮತ್ತು ಪ್ರಮಾಣೀಕರಣಕ್ಕಾಗಿ ಸ್ಥಾಪಿತ ಕಾರ್ಯತಂತ್ರವನ್ನು ಹೊಂದಿದೆ. NABET ಇದನ್ನು ಮೂರು ಸ್ಪಷ್ಟ ವಿಷಯಗಳಲ್ಲಿ ಮಾಡುತ್ತದೆ:


  1. FEED(ಫಾರ್ಮಲ್ ಎಜುಕೇಶನ್ ಎಕ್ಸಲೆನ್ಸ್ ಡಿವಿಜನ್) : ಇದು ಶಾಲೆಗಳ ಮಾನ್ಯತೆಯನ್ನು ನೋಡಿಕೊಳ್ಳುತ್ತದೆ ಮತ್ತು ರಾಜ್ಯ ಮತ್ತು ಸರ್ಕಾರಿ ಇಲಾಖೆಗಳ ಅಗತ್ಯಕ್ಕೆ ತಕ್ಕಂತೆ ಹಲವು ಗುಣಮಟ್ಟ ಪರಿಶೀಲನಾ ಯೋಜನೆಗಳನ್ನು ಕೈಗೊಳ್ಳುತ್ತದೆ, ಇದರೊಂದಿಗೆ ಶಾಲಾ ಮಾನ್ಯತೆಗಳ ಪ್ರಮಾಣಕಗಳ ಬಗ್ಗೆ ಜಾಗೃತಿ ಮೂಡಿಸುತ್ತದೆ.

  2. ಸರ್ಕಾರಿ ಯೋಜನೆಗಳ ವಿಭಾಗ: ಇದು MSME ಸಚಿವಾಲಯಕ್ಕೆ ರಾಷ್ಟ್ರೀಯ ಪರಿಶೀಲನಾ ಮತ್ತು ಅನುಷ್ಠಾನ ಘಟಕವಾಗಿ, ಅಲ್ಲದೇ ಅಕ್ರೆಡಿಟೇಶನ್ ಆಫ್ ಎನ್ವಿರಾನ್ಮೆಂಟ್ ಇಂಪ್ಯಾಕ್ಟ್ ಅಸೆಸ್ಮೆಂಟ್ (EIA) ಸಹಾಯಕ ಸಂಸ್ಥೆಗಳಾಗಿ ಕಾರ್ಯನಿರ್ವಹಿಸುತ್ತದೆ.

  3. ಕೌಶಲ್ಯ ತರಬೇತಿ ಮತ್ತು ಸೇವೆಗಳ ವಿಭಾಗ: ಇದು ತರಬೇತಿ ಕೋರ್ಸ್‌ಗಳು ಮತ್ತು ಸಹಾಯಕ ಸಂಸ್ಥೆಗಳನ್ನು ನೋಡಿಕೊಳ್ಳುತ್ತದೆ.


  ಈ ಬುನಾದಿಯೊಂದಿಗೆ, ಸ್ಕಿಲ್ಇಂಡಿಯಾದ  ಲೈಫ್ ಸೈಕಲ್ ಆಫ್ ಟ್ರೈನಿಂಗ್ ಪಾರ್ಟ್ನರ್ ಆಂಡ್ ಟ್ರೈನಿಂಗ್ ಸೆಂಟರ್ ಮುಂತಾದ ಉಪಕ್ರಮಗಳನ್ನು ಕೈಗೊಳ್ಳಬಹುದು. ಈ ಉಪಕ್ರಮವು ತರಬೇತಿ ಪಾಲುದಾರರು ಮತ್ತು ತರಬೇತಿ ಕೇಂದ್ರಗಳು ಪೂರೈಸಬೇಕಾದ ಗುಣಮಟ್ಟ ಖಾತ್ರಿಪಡಿಸಿದ ಪ್ರಕ್ರಿಯೆಯನ್ನು ಸುಗಮಗೊಳಿಸುತ್ತದೆ, ಇದು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಮತ್ತು ತರಬೇತಿಯನ್ನು ಆಯ್ಕೆ ಮಾಡಲು ಸುಲಭವಾಗಿಸುತ್ತದೆ.


  ಸಂಸ್ಥೆಗಳು ಸಾಮಾನ್ಯವಾಗಿ ತಮ್ಮ ಕಾರ್ಯಪಡೆಯ ಸಾಮರ್ಥ್ಯವನ್ನು ತರಬೇತಿಯ ಮೂಲಕ ಸುಧಾರಿಸಲು ಪ್ರಯತ್ನಿಸುತ್ತವೆ. ತಮ್ಮ ಜನರ ಕೌಶಲ್ಯವೃದ್ಧಿಗಾಗಿ ಹೂಡಿಕೆ ಮಾಡಬಯಸುವ ಸಂಸ್ಥೆಗಳ ಅವಶ್ಯಕತೆ ಪೂರೈಸಲು, QCI ಯ ಟ್ರೈನಿಂಗ್ ಆಂಡ್ ಕೆಪೆಸಿಟಿ ಬಿಲ್ಡಿಂಗ್ ಪ್ರೋಗ್ರಾಂ (TCB) ಅನೇಕ ಕೊಡುಗೆಗಳನ್ನು ಹೊಂದಿದೆ. ಇದು ತರಬೇತಿ, ಜಾಗೃತಿ ಕಾರ್ಯಾಗಾರಗಳು, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಮರ್ಥ್ಯ ನಿರ್ಮಾಣ ಚಟುವಟಿಕೆಗಳನ್ನು ಸಮಷ್ಟಿಗೊಳಿಸುತ್ತದೆ ಮತ್ತು ಅಂತಹ ಚಟುವಟಿಕೆಗಳನ್ನು ಕೇಂದ್ರೀಯವಾಗಿ ಮತ್ತು ರಚನಾತ್ಮಕವಾಗಿ ಸಂಘಟಿಸಲು ಸಾಧ್ಯವಾಗಿಸುತ್ತದೆ. ಇದು ಗುಣಮಟ್ಟ ನಿರ್ವಹಣೆ, ಆರೋಗ್ಯ ಸೇವೆ, ಉತ್ಪಾದನೆ, ಪರಿಸರ, ಆಹಾರ ಸುರಕ್ಷತೆ, ಶಿಕ್ಷಣ, ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ ಮುಂತಾದ ಹಲವು ಡೊಮೇನ್‌ಗಳ ಅಗತ್ಯಗಳನ್ನು ಪೂರೈಸುತ್ತದೆ.


  ಅಲ್ಲದೇ, ಇದು ಕ್ಲಾಸ್‌ರೂಂ ತರಬೇತಿ, ವರ್ಚುವಲ್ ತರಬೇತಿ, ವೆಬಿನಾರ್‌ಗಳು ಮತ್ತು ಇಲರ್ನಿಂಗ್ ಮುಂತಾದ ವಿಧಾನಗಳ ಮೂಲಕ ತರಬೇತಿ ನೀಡುತ್ತದೆ- ಇದು ವಿಭಿನ್ನ ಕಲಿಕಾ ಶೈಲಿಗಳು, ಪ್ರವೇಶ ಮತ್ತು ಅವಶ್ಯಕತೆಗಳ ಮಟ್ಟವನ್ನು ಹೊಂದಿದಂತಹ ಕಲಿಕಾದಾರರಿಗೆ ತಮಗೆ ಹೊಂದುವಂತಹ ಕೋರ್ಸ್‌ಗಳನ್ನು ಕಂಡುಕೊಳ್ಳಲು ಸಾಧ್ಯವಾಗಿಸುತ್ತದೆ. ಅಲ್ಲದೇ ಇದು ನಿರ್ದಿಷ್ಟ ತರಬೇತಿ ಅವಶ್ಯಕತೆಗಳಿಗಾಗಿ  ಸಂಸ್ಥೆಗಳೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತದೆ.


  ಭಾರತದಲ್ಲಿನ ಹೆಚ್ಚಿದ ಮೊಬೈಲ್ ಮತ್ತು ಇಂಟರ್‌ನೆಟ್ ಪ್ರವೇಶದೊಂದಿಗೆ, ಆನ್‌ಲೈನ್‌ ಕಲಿಕಾ ಪೊರ್ಟಲ್‌ಗಳ ಮೂಲಕ ಉನ್ನತ ಗುಣಮಟ್ಟದ ತರಬೇತಿ ಮತ್ತು ಶಿಕ್ಷಣವನ್ನು ನೀಡುವುದರಿಂದ ಮೆಟ್ರೋಗಳಿಂದ ದೂರವಿರುವ ಜನರು ಮತ್ತು ಉದ್ಯಮಗಳಿಗೆ ದೊಡ್ಡ ಮಾರ್ಗಗಳನ್ನು ತೆರೆದಿಡುತ್ತದೆ. ಇಲ್ಲಿಯೂ, QCI ಭಾರತೀಯ ವೃತ್ತಿಪರರಿಗೆ ತಮ್ಮ ಕೌಶಲ್ಯಗಳು ಮತ್ತು ಜ್ಞಾನ ವರ್ಧನೆಗೆ ನೆರವಾಗಲು ವಿನ್ಯಾಸಗೊಳಿಸಿದ  eQuest ಎಂಬ ಆನ್‌ಲೈನ್‌ ಪೋರ್ಟಲ್‌ನೊಂದಿಗೆ ಕಾರ್ಯನಿರ್ವಹಿಸಲು ತನ್ನ ಮೊದಲ ಹೆಜ್ಜೆಯಿರಿಸಿದೆ ಮತ್ತು ಇದು ವೃತ್ತಿಜೀವನದಲ್ಲಿ ಮುನ್ನಡೆಯುವ ಅವರ ಅವಕಾಶಗಳನ್ನು ಸುಧಾರಿಸಿದೆ. ಈ ಕೋರ್ಸ್‌ಗಳು ಅಮೂಲಾಗ್ರವಾಗಿ ಕೃಷಿ, ಶಿಕ್ಷಣ, ಪರಿಸರ, ಆರೋಗ್ಯ ಸೇವೆ, ಪ್ರಯೋಗಾಲಯ, ಗುಣಮಟ್ಟ, ತಂತ್ರಜ್ಞಾನ ಮತ್ತು ಸಾಮಾನ್ಯ ಕೋರ್ಸ್ ಅನ್ನು ನಡೆಸುತ್ತದೆ.


  ಇನ್ನಷ್ಟು ಎಂದರೆ, ಕೆಲವು ಕೋರ್ಸ್‌ಗಳು ನಿರ್ದಿಷ್ಟವಾಗಿ MSME ಕ್ಷೇತ್ರದ ಅವಶ್ಯಕತೆಗಳನ್ನು ಪೂರೈಸುತ್ತದೆ, ಇದು ತಮ್ಮದೇ ಆದ ತರಬೇತಿ ಕಾರ್ಯಕ್ರಮಗಳು ಮತ್ತು ತರಬೇತಿ ವಿತರಣೆ ಕಾರ್ಯಾಗಾರಗಳನ್ನು ನಡೆಸುವ MSME ಮೇಲಿನ ಹೊರೆಯನ್ನು ಕಡಿಮೆ ಮಾಡುತ್ತದೆ. ಇದು ಕೇವಲ ವೆಚ್ಚ ಪರಿಣಾಮಕಾರಿ ಮಾತ್ರವಲ್ಲದೇ, ತಮ್ಮ ಕಾರ್ಯಪಡೆಯ ಗುಣಮಟ್ಟವನ್ನು ಮತ್ತು ಇದರಿಂದಾಗಿ ಫಲಿತಾಂಶದ ಗುಣಮಟ್ಟವನ್ನು ಸುಧಾರಿಸಲು ನೆರವಾಗುತ್ತದೆ.


  ನಿರ್ಣಯ
  ಮುಂದಿನ ಕೆಲವು ವರ್ಷಗಳು ಭಾರತದ ಆರ್ಥಿಕ ಭವಿಷ್ಯಕ್ಕೆ ನಿರ್ಣಾಯಕವಾಗಲಿದೆ. $5 ಟ್ರಿಲಿಯನ್ ಡಾಲರ್‌ಗಳು ಮತ್ತು ಅದಕ್ಕೂ ಹೆಚ್ಚಿನ ನಮ್ಮ ಗುರಿಯನ್ನು ತಲುಪಲು, ಮೇಕ್ ಇನ್ ಇಂಡಿಯಾವನ್ನು ಯಶಸ್ವಿಗೊಳಿಸಲು ಮತ್ತು ಭಾರತವು ಆರ್ಥಿಕ ಆತ್ಮನಿರ್ಭರತೆಯನ್ನು ಪಡೆಯಲು, ನಮ್ಮ ಮಾನವ ಹೂಡಿಕೆಯ ಗುಣಮಟ್ಟವು ಸಾಮಾನ್ಯ ಲಕ್ಷಣವಾಗಿದೆ. ಉದ್ಯಮದ ಅಗತ್ಯಕ್ಕೆ ತಕ್ಕಂತೆ ನಮ್ಮ ಜನರಿಗೆ ನಾವು ಶಿಕ್ಷಣ ಮತ್ತು ತರಬೇತಿಯನ್ನು ನೀಡದಿದ್ದರೆ, ನಾವು ಸೋಲುತ್ತೇವೆ.  ಸಮಸ್ಯೆಗೆ ಹಲವಾರು ಪರಿಹಾರಗಳಿದ್ದರೂ ಅನಗತ್ಯವಾದುದನ್ನು ನೀಡಿದಂತಾಗುತ್ತದೆ.


  ಹೆಸರಿಗೆ ನೈಜವಾಗಿರುವಂತೆ QCI, ಗುಣಮಟ್ಟ, ನಂಬಿಕೆ ಮತ್ತು ವಿಶ್ವಾಸಾರ್ಹತೆಯ ಅಡಿಪಾಯವನ್ನು ರಚಿಸುತ್ತದೆ, ಇದು ನಂತರ ಸ್ಕಿಲ್ ಇಂಡಿಯಾದಂತಹ ಮಹತ್ವಾಕಾಂಕ್ಷೆಯ ಕಾರ್ಯಕ್ರಮಗಳು ಯಶಸ್ವಿಯಾಗುವಂತೆ ಮಾಡುತ್ತದೆ. ಇದೇ ಪರಿಸರವನ್ನು ಕಾರ್ಪೋರೇಟ್ ಮತ್ತು ಶಿಕ್ಷಣ ಕ್ಷೇತ್ರಗಳು  ಮುಂದಿನ ಪೀಳಿಗೆಗೆ ಹೆಚ್ಚಿನ ಕೌಶಲ್ಯ, ಉನ್ನತ ಮಾಲೀಕತ್ವದ ಉದ್ಯೋಗಿಗಳು ಮತ್ತು ಉದ್ಯಮಿಗಳಿಗೆ ತರಬೇತಿ ನೀಡಲು ಬಳಸಲಾಗುತ್ತದೆ, ಅವರು ಹೊಸತನ, ಬೆಳವಣಿಗೆ ಮತ್ತು ಉದ್ಯಮಶೀಲತೆಯ ಉತ್ಕೃಷ್ಟತೆಯ ಅಲೆಯನ್ನು ತರುತ್ತಾರೆ.


  ಈ ರೀತಿಯಾಗಿ ನಾವು ರಾಷ್ಟ್ರವನ್ನು ಕಟ್ಟುತ್ತೇವೆ: ಅಡಿಪಾಯದಿಂದ ಮೇಲಕ್ಕೇರುವ ವೇಳೆ ಗುಣವತ್ತಾ ಸೆ ಆತ್ಮನಿರ್ಭರತಾ ಕೇವಲ ಘೋಷಣೆಯಲ್ಲ, ಭರವಸೆ.  ನಮ್ಮ ಹೆಚ್ಚಿನ ಸಂಖ್ಯೆಯ ಯುವಜನತೆಗೆ ಉನ್ನತ ಗುಣಮಟ್ಟದ ಶಿಕ್ಷಣ ಮತ್ತು ತರಬೇತಿ ಲಭ್ಯವಾಗಿಸುವ ಮೂಲಕ ಭಾರತವು ಜಗತ್ತಿನ ಮುಂದಿನ ಆರ್ಥಿಕ ಶಕ್ತಿಕೇಂದ್ರವಾಗಿ ಹೊರಹೊಮ್ಮಲು ಅನಿವಾರ್ಯವಾಗುವಂತೆ ನಾವು ಮಾಡುತ್ತೇವೆ.

  First published: