ಸೌದಿ ಅರೇಬಿಯಾ (Saudi Arabia) ಅಧ್ಯಕ್ಷತೆಯ ಜಿಸಿಸಿ (GCC) ಸಮಿತಿಯು ಇಸ್ಲಾಮಿಕ್ ಮೌಲ್ಯಗಳನ್ನು (Islamic values) ಉಲ್ಲಂಘಿಸುವ ವಿಷಯವನ್ನು ತೆಗೆದು ಹಾಕುವಂತೆ ನೆಟ್ ಫ್ಲಿಕ್ಸ್ ಗೆ ಕೇಳಿಕೊಂಡಿದೆ. ಸೌದಿ ಅರೇಬಿಯಾ ಅಧ್ಯಕ್ಷತೆಯ ಗಲ್ಫ್ ಸಹಕಾರ ಮಂಡಳಿ (ಜಿಸಿಸಿ) (Gulf Cooperation Council) ರಾಜ್ಯಗಳ ಎಲೆಕ್ಟ್ರಾನಿಕ್ ಮೀಡಿಯಾ ಅಧಿಕಾರಿಗಳ ಸಮಿತಿಯು ನೆಟ್‌ಫ್ಲಿಕ್ಸ್ ಪ್ರಸಾರ ಮಾಡಿದ ವಿಷಯದ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದ್ದು, ನೆಟ್‌ಫ್ಲಿಕ್ಸ್ (Netflix) ಇಸ್ಲಾಮಿಕ್ ಸಾಮಾಜಿಕ ಮೌಲ್ಯಗಳು ಮತ್ತು ತತ್ವಗಳನ್ನು (Principles) ಸ್ಪಷ್ಟವಾಗಿ ಉಲ್ಲಂಘಿಸುವ ವಿಚಾರಗಳನ್ನು ಪ್ರಸಾರ ಮಾಡುತ್ತಿದೆ ಎಂದು ಮನಿಸಿದ ನಂತರ ಈ ನಿರ್ಧಾರಕ್ಕೆ ಮುಂದಾಗಿದೆ.
ಮಕ್ಕಳ ಮೇಲೆ ಪರಿಣಾಮ ಬೀರುವ ದೃಶ್ಯಗಳು, ಹಸಿ ಬಿಸಿ ದೃಶ್ಯಗಳಿರುವ ಕಾರ್ಯಕ್ರಮಗಳ ಮೇಲೆ ನಿಗಾವಹಿಸುವಂತೆ ಆರು ಗಲ್ಫ್ ರಾಜ್ಯಗಳನ್ನು ಒಳಗೊಂಡಿರುವ ಸಮಿತಿ ಕೇಳಿಕೊಂಡಿದೆ. ಗಲ್ಫ್ ಸಹಕಾರ ಮಂಡಳಿಯು ಬಹ್ರೇನ್, ಕುವೈತ್, ಓಮನ್, ಕತಾರ್, ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಅನ್ನು ಒಳಗೊಂಡಿದೆ.
ನಿಯಮ ಉಲ್ಲಂಘನೆಯಾದರೆ ನೆಟ್‌ಫ್ಲಿಕ್ಸ್ ವಿರುದ್ಧ ಕ್ರಮ
ಸೌದಿಯ ರಾಜಧಾನಿ ರಿಯಾದ್‌ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಸೌದಿ ಮಾಧ್ಯಮ ನಿಯಂತ್ರಕ ಮತ್ತು ಆರು ಸದಸ್ಯರ ಗಲ್ಫ್ ಸಹಕಾರ ಮಂಡಳಿ (ಜಿಸಿಸಿ) ಮಂಗಳವಾರ ಹೊರಡಿಸಿದ ಜಂಟಿ ಹೇಳಿಕೆಯಲ್ಲಿ, ಸಮಿತಿ ಮತ್ತು ಸೌದಿ ಅರೇಬಿಯಾದ ಜನರಲ್ ಕಮಿಷನ್ ಫಾರ್ ಆಡಿಯೊವಿಶುವಲ್ ಮೀಡಿಯಾ (GCAM), ಉಲ್ಲಂಘಿಸುವ ವಿಷಯಗಳನ್ನು ತೆಗೆದುಹಾಕಲು ನೆಟ್‌ಫ್ಲಿಕ್ಸ್‌ಗೆ ಒತ್ತಾಯಿಸಿದೆ.
ಇದನ್ನೂ ಓದಿ: Money Transfer: ಆನ್‌ಲೈನ್‌ನಲ್ಲಿ ಹಣ ವರ್ಗಾಹಿಸುವವರೇ ಎಚ್ಚರ!
ಅಷ್ಟೇ ಅಲ್ಲ ನಿಯಮಗಳಿಗೆ ಬದ್ಧವಾಗಿರದೇ ಉಲ್ಲಂಘನೆ ಮುಂದುವರೆದರೆ ನೆಟ್‌ಫ್ಲಿಕ್ಸ್ ವಿರುದ್ಧ ಎಲ್ಲಾ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಖಡಕ್ ವಾರ್ನಿಂಗ್ ನೀಡಿದೆ. ನೆಟ್‌ಫ್ಲಿಕ್ಸ್‌ನಿಂದ ಪ್ರಸಾರವಾದ ವಸ್ತು ವಿಷಯವು ಇಸ್ಲಾಮಿಕ್ ಮತ್ತು ಸಾಮಾಜಿಕ ಮೌಲ್ಯಗಳು ಮತ್ತು ತತ್ವಗಳಿಗೆ ವಿರುದ್ಧವಾಗಿವೆ ಎಂದು ಸಮಿತಿಯು ಪುನರುಚ್ಛರಿಸಿದೆ.
ಜಿಸಿಸಿ ದೇಶಗಳಲ್ಲಿ ಜಾರಿಯಲ್ಲಿರುವ ಮಾಧ್ಯಮ ವಿಷಯ ಮತ್ತು ದೃಶ್ಯ ವಸ್ತುಗಳ ನಿಯಮಾವಳಿಗಳನ್ನು ಉಲ್ಲಂಘಿಸಿ ನೆಟ್ ಫ್ಲಿಕ್ಸ್ ವರದಿ ಪ್ರಸಾರ ಮಾಡುತ್ತಿದೆ ಎಂದು ಸಮಿತಿ ಆರೋಪ ಮಾಡಿದೆ. ಹೀಗಾಗಿ ನೆಟ್ ಫ್ಲಿಕ್ಸ್ ಉಲ್ಲಂಘಿಸುವ ವಿಷಯವನ್ನು ಪ್ರಸಾರ ಮಾಡದಂತೆ ತೆಗೆದುಹಾಕಲು ಈ ಸಮಿತಿ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಅನ್ನು ಸಂಪರ್ಕಿಸಿದ್ದಾರೆ.
ಮಕ್ಕಳಿಗೆ ಸಂಬಂಧಪಟ್ಟ ವಿಷಯಗಳು ನಿಯಮಾವಳಿಗೆ ವಿರುದ್ಧವಾಗಿದೆ ಎಂದು ಆರೋಪ
ವಿಶೇಷವಾಗಿ ಮಕ್ಕಳಿಗೆ ಸಂಬಂಧಪಟ್ಟ ವಿಷಯಗಳು ನಿಯಮಾವಳಿಗೆ ವಿರುದ್ಧವಾಗಿದ್ದು, ಅಂತಹ ವಸ್ತು ವಿಷಯ ಒಳಗೊಂಡಿರುವ ಕಾರ್ಯಕ್ರಮಗಳನ್ನು ತೆಗೆದುಹಾಕಲು ಸಮಿತಿ ನೆಟ್ ಫ್ಲಿಕ್ಸ್ ಗೆ ಒತ್ತಾಯಿಸಿದೆ. ಉಲ್ಲಂಘನೆಯ ವಿಷಯವನ್ನು ಪ್ರಸಾರ ಮಾಡುವುದನ್ನು ಮುಂದುವರಿಸಿದರೆ, ಅಗತ್ಯ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುವುದಾಗಿಯೂ ಸಹ ಎಚ್ಚರಿಸಿದೆ. ಜಿಸಿಸಿಯು ಆಕ್ಷೇಪಾರ್ಹವೆಂದು ಪರಿಗಣಿಸಲಾದ ವಿಷಯವನ್ನು ನಿರ್ದಿಷ್ಟವಾಗಿ ಗುರುತಿಸದಿದ್ದರೂ, ಸೌದಿಯ ಸರ್ಕಾರಿ ಅಲ್-ಎಖ್ಬರಿಯಾ ಸುದ್ದಿ ಚಾನೆಲ್‌ನ ಒಂದು ವಿಭಾಗವು "ನೆಟ್‌ಫ್ಲಿಕ್ಸ್ ಮೂಲಕ ಸಲಿಂಗಕಾಮವನ್ನು ಉತ್ತೇಜಿಸುವ ದೃಶ್ಯಗಳನ್ನು ಹೊಂದಿರುವ ಕಾರ್ಯಕ್ರಮಗಳ ಸರಣಿಗಳ ಬಗ್ಗೆ ಖಂಡನೆ ವ್ಯಕ್ತಪಡಿಸಿದೆ.
ಇದನ್ನೂ ಓದಿ: Facebook: ಫೇಸ್ಬುಕ್ ಅಕ್ಟೋಬರ್ 1 ರಿಂದ ಈ ಸೇವೆಯನ್ನು ಸ್ಥಗಿತಗೊಳಿಸುತ್ತಿದೆ
"ನಮ್ಮ ಮಕ್ಕಳು, ಮೊಮ್ಮಕ್ಕಳು ಮತ್ತು ಮುಂದಿನ ಪೀಳಿಗೆಗೆ ಇದು ಅತ್ಯಂತ ದುರದೃಷ್ಟಕರ ಮತ್ತು ಕೆಟ್ಟ ಪರಿಣಾಮ ಬೀರುವ ಸರಣಿಗಳು" ಎಂದು ವಕೀಲರೊಬ್ಬರು ಸಂದರ್ಶನದಲ್ಲಿ ಹೇಳಿದರು. ಆಕ್ರಮಣಕಾರಿ ವಿಷಯಗಳು ಮಕ್ಕಳ ಮೇಲೆ ಪರಿಣಾಮ ಬೀರುತ್ತವೆ ಮತ್ತು ದೇಶವು "ಸೆನ್ಸಾರ್ಶಿಪ್ ಬಿಕ್ಕಟ್ಟನ್ನು" ಎದುರಿಸುತ್ತಿದೆ ಎಂದು ಹೇಳಿದರು.
ಹಸಿಬಿಸಿ ದೃಶ್ಯಗಳಿರುವ ಕಾರ್ಯಕ್ರಮಗಳನ್ನು ನಿಷೇಧಿಸಿದ್ದ ಯುಎಇ
ಯುನೈಟೆಡ್ ಅರಬ್ ಎಮಿರೇಟ್ಸ್ ಜೂನ್‌ನಲ್ಲಿ ಲೆಸ್ಬಿಯನ್ ಕಿಸ್ ಅನ್ನು ಒಳಗೊಂಡಿರುವ ಡಿಸ್ನಿ ಅನಿಮೇಟೆಡ್ ಚಲನಚಿತ್ರ ಲೈಟ್‌ಇಯರ್ ಅನ್ನು ನಿಷೇಧಿಸಿತ್ತು. ಇಲ್ಲಿ ಲೈಂಗಿಕ ಅಲ್ಪಸಂಖ್ಯಾತರಿಗೆ, ವಿಶೇಷವಾಗಿ ಚಲನಚಿತ್ರಗಳಿಗೆ ಸಂಬಂಧಿಸಿದ ವಿಷಯದ ಕುರಿತು ಗಲ್ಫ್ ರಾಷ್ಟ್ರಗಳು ಯುಸ್ ಚಲನಚಿತ್ರ ವಿತರಕರೊಂದಿಗೆ ಪದೇ ಪದೇ ಘರ್ಷಣೆ ನಡೆಸುತ್ತಲೇ ಇರುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ