ಇತ್ತೀಚೆಗೆ ಎಲ್ಲಾ ಟೆಲಿಕಾಂ ಕಂಪನಿಗಳು (Telecom Company) ತನ್ನ ಪ್ರೀಪೇಯ್ಡ್ (Prepaid0 ಮತ್ತು ಪೋಸ್ಟ್ಪೇಯ್ಡ್ ( Postpaid) ರೀಚಾರ್ಜ್ ಪ್ಲಾನ್ ಅನ್ನು ಏರಿಕೆ ಮಾಡುತ್ತಿದ್ದರೆ ಇಲ್ಲೊಂದು ಪ್ರಸಿದ್ಧ ಟೆಲಿಕಾಂ ಕಂಪನಿಯಾದ ಜಿಯೋ ವಿಶೇಷ ಆಫರ್ಸ್ ಅನ್ನು ತನ್ನ ಗ್ರಾಹಕರಿಗಾಗಿ ಬಿಡುಗಡೆ ಮಾಡುತ್ತಿದೆ. ಟೆಲಿಕಾಂ ಕಂಪನಿಗಳಲ್ಲಿ ಅಥಿ ಹೆಚ್ಚು ಗ್ರಾಹಕರನ್ನು ಹೊಂದಿರುವ ರಿಲಯನ್ಸ್ ಜಿಯೋ (Reliance Jio) ಏನಾದರೊಂದು ವಿಶೇಷ ರೀಚಾರ್ಜ್ (Recharge), ಡೇಟಾ ಪ್ಲಾನ್ (Data Plan) ನೀಡುವ ಮೂಲಕ ಗ್ರಾಹಕರನ್ನು ತನ್ನತ್ತ ಆಕರ್ಷಿಸಿದೆ. ಈ ಹಿಂದೆ ಕೂಡ ಜಿಯೋ ಹೊಸ ಪ್ರೀಪೇಯ್ಡ್ ಯೋಜನೆಯನ್ನು ಬಿಡುಗಡೆ ಮಾಡಿತ್ತು. ಇದೀಗ ಮತ್ತೊಂದು ಹೊಸ ಪ್ರೀಪೇಯ್ಡ್ ಡೇಟಾ ಪ್ಲಾನ್ ಅನ್ನು ಜಿಯೋ ಬಿಡುಗಡೆ ಮಾಡಿದೆ.
ಪ್ರತೀವರ್ಷ ಜಿಯೋ ಏನಾದರೊಂದು ವಿಶೇಷ ರೀಚಾರ್ಜ್ ಪ್ಲಾನ್ ಅನ್ನು ನೀಡುವ ಮೂಲಕ ಗ್ರಾಹಕರನ್ನು ತನ್ನತ್ತ ಸೆಳೆಯುವಂತೆ ಮಾಡುತ್ತದೆ. ಅದೇ ರೀತಿ ಈ ಬಾರಿ ಕೂಡ ವರ್ಷಾಂತ್ಯದಲ್ಲಿ ವಿಶೇಷ ಪ್ರೀಪೇಯ್ಡ್ ಡೇಟಾ ಪ್ಲಾನ್ ಅನ್ನು ಬಿಡುಗಡೆ ಮಾಡಿದ್ದು, ಹೆಚ್ಚುವರಿ ಡೇಟಾ ಹಾಕಿಸಿಕೊಳ್ಳುವವರಿಗೆ ಹಬ್ಬ ಎನಿಸಿದೆ.
ಜಿಯೋದಿಂದ 222 ರೂಪಾಯಿಯ ಹೊಸ ಪ್ಲಾನ್
ಜಿಯೋ ಇದೀಗ ಹೊಸ 222 ರೂಪಾಯಿಯ ಡೇಟಾ ಆ್ಯಡ್ ಆನ್ ಪ್ಲಾನ್ ಅನ್ನು ಬಿಡುಗಡೆ ಮಾಡಿದ್ದು ಇದು 30 ದಿನಗಳ ವ್ಯಾಲಿಡಿಟಿಯನ್ನು ಹೊಂದಿರಲಿದೆ. ಇನ್ನು ಈ ರೀಚಾರ್ಜ್ ಪ್ಲಾನ್ ಅನ್ನು 'ಫುಟ್ಬಾಲ್ ವಿಶ್ವಕಪ್ ಡೇಟಾ ಪ್ಯಾಕ್' ಎಮದು ಕಂಪನಿ ಹೆಸರಿಟ್ಟಿದೆ. ಈ ಅವಧಿಯಲ್ಲಿ ಒಟ್ಟು 50GB ಹೈ-ಸ್ಪೀಡ್ ಡೇಟಾ ಪ್ರಯೋಜನ ದೊರೆಯುತ್ತದೆ.
ಇದನ್ನೂ ಓದಿ: ಐಫೋನ್ನಂತೆಯೇ ಫೀಚರ್ಸ್ ಹೊಂದಿದ ಶಿಯೋಮಿ 13 ಸ್ಮಾರ್ಟ್ಫೋನ್ ಬಿಡುಗಡೆ!
ಇನ್ನು ಫಿಫಾ ವಿಶ್ವಕಪ್ ಅಭಿಮಾನಿಗಳಿಗೆ ಇದೊಂದು ಆಕರ್ಷಕ ಪ್ಲಾನ್ ಎನ್ನಬಹುದು. ಏಕೆಂದರೆ ಒಂದು ತಿಂಗಳಲ್ಲಿ 50GB ಡೇಟಾ ವನ್ನು ಈ ರೀಚಾರ್ಜ್ನೊಂದಿಗೆ ಪಡೆಯಬಹುದಾಗಿದೆ. ಇದಲ್ಲದೆ 50GB ಡೇಟಾ ಬಳಕೆಯ ನಂತರ, ಇಂಟರ್ನೆಟ್ ವೇಗವು 64 Kbps ವೇಗದಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ಕಂಪನಿ ಹೇಳಿದೆ.
555 ರೂಪಾಯಿಯ ರೀಚಾರ್ಜ್ ಪ್ಲಾನ್
ಈ ಜಿಯೋದ 555 ರೂಪಾಯಿ ರೀಚಾರ್ಜ್ ಮಾಡಿಕೊಂಡರೆ 55 ಜಿಬಿ ಡೇಟಾವನ್ನು ಪಡೆದುಕೊಳ್ಳಬಹುದು. ಇದಲ್ಲದೆ ಇದು 55 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. 55 ಜಿಬಿ ಡೇಟಾವನ್ನು ಸಂಪೂರ್ಣವಾಗಿ ಬಳಕೆ ಮಾಡಿದ ನಂತರ 64kbps ವೇಗದಲ್ಲಿ ಇಂಟರ್ನೆಟ್ ಬಳಕೆದಾರರ ಮೊಬೈಲ್ಗಳಲ್ಲಿ ಕಾರ್ಯನಿರ್ವಹಿಸುತ್ತದೆ.
ಜಿಯೋ ಬಿಡುಗಡೆ ಮಾಡಿದ 181 ರೂಪಾಯಿಯ ರೀಚಾರ್ಜ್ನ ಲಾಭ
ಇದೂ ಕೂಡ ಡೇಟಾ ಆ್ಯಡ್ ಆನ್ ರೀಚಾರ್ಜ್ ಪ್ಲಾನ್ ಆಗಿದ್ದು ಈ ಪ್ಲಅನ್ ಮೂಲಕ ರೀಚಾರ್ಜ್ ಮಾಡಿಕೊಂಡರೆ 30 ದಿನಗಳವರೆಗೆ 30 ಜಿಬಿ ಡೇಟಾವನ್ನು ಬಳಸಬಹುದಾಗಿದೆ. ಒಂದು ವೇಳೆ ಈ ಪ್ಲಾನ್ನ ಡೇಟಾ ಖಾಲಿಯಾದರೆ ನಂತರ ಇಂಟರ್ನೆಟ್ 64kbps ವೇಗದಲ್ಲಿ ಕಾರ್ಯನಿರ್ವಹಿಸಲಿದೆ.
241 ರೂಪಾಯಿಯ ರೀಚಾರ್ಜ್ ಪ್ಲಾನ್
ಈ 241 ರೂಪಾಯಿಯ ಡೇಟಾ ಆ್ಯಡ್ ಆನ್ ರೀಚಾರ್ಜ್ ಪ್ಲಾನ್ ಆಗಿದ್ದು ಇದೂ ಕೂಡ 30 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಆದರೆ ಗ್ರಾಹಕರು ಈ ಪ್ಲಾನ್ ಮೂಲಕ 40 ಜಿಬಿ ಡೇಟಾವನ್ನು ಪಡೆಯುತ್ತಾರೆ. ಇದು ಹೈಸ್ಪೀಡ್ ಡೇಟಾ ಪ್ಲಾನ್ ಕೂಡ ಆಗಿದೆ.
301 ರೂಪಾಯಿ ರೀಚಾರ್ಜ್ನ ಪ್ರಯೋಜನಗಳು
ರಿಲಯನ್ಸ್ ಜಿಯೋ 301ರೂ. ಡೇಟಾ ಆಡ್ ಆನ್ ಪ್ಲ್ಯಾನ್ ಸಹ ಒಟ್ಟು 30 ದಿನಗಳ ವ್ಯಾಲಿಡಿಟಿಯನ್ನು ಪಡೆದಿದೆ. ಆದರೆ ಈ ಪ್ಲಅನ್ ಮಾತ್ರ ಕೇವಲ 30 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಆದರೆ ಗ್ರಾಹಕರಿಗಾಗಿ 50 ಜಿಬಿ ಡೇಟಾವನ್ನು ಇದು ನೀಡುತ್ತದೆ.
2878 ರೂಪಾಯಿಯ ರೀಚಾರ್ಜ್ ಪ್ಲಾನ್ ಹೇಗಿದೆ?
ಜಿಯೋದಿಂದ ಬಿಡುಗಡೆಯಾದ ಡೇಟಾ ಆ್ಯಡ್ ಆನ್ ಪ್ಲಾನ್ ನಲ್ಲಿ 2878 ರೂಪಾಯಿನ ಪ್ಲಾನ್ ದೊಡ್ಡದಾಗಿದೆ. ಇದು 365 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಇದಲ್ಲದೆ ಇದು 730 ಜಿಬಿ ಡೇಟಾವನ್ನು ತನ್ನ ಗ್ರಾಹಕರಿಗೆ ನೀಡುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ