• Home
  • »
  • News
  • »
  • tech
  • »
  • IPhone 14 Series: ಐಫೋನ್ ಸ್ಮಾರ್ಟ್​ಫೋನ್​ಗಳ ಭರ್ಜರಿ ಬೆಲೆ ಇಳಿಕೆ! ಫ್ಲಿಪ್‌ಕಾರ್ಟ್ ಆಫರ್ಸ್ ಇಲ್ಲಿದೆ ನೋಡಿ

IPhone 14 Series: ಐಫೋನ್ ಸ್ಮಾರ್ಟ್​ಫೋನ್​ಗಳ ಭರ್ಜರಿ ಬೆಲೆ ಇಳಿಕೆ! ಫ್ಲಿಪ್‌ಕಾರ್ಟ್ ಆಫರ್ಸ್ ಇಲ್ಲಿದೆ ನೋಡಿ

ಐಫೋನ್ 14 ಮತ್ತು ಐಫೋನ್ 14 ಪ್ಲಸ್​

ಐಫೋನ್ 14 ಮತ್ತು ಐಫೋನ್ 14 ಪ್ಲಸ್​

ಐಫೋನ್​ 14 ಸೀರಿಸ್​​ನ ಸ್ಮಾರ್ಟ್​ಫೋನ್​ಗಳು 2022ರಲ್ಲಿ ಮಾರುಕಟ್ಟೆಗೆ ಕಾಲಿಟ್ಟಿದೆ. ಇದೀಗ ಫ್ಲಿಪ್​ಕಾರ್ಟ್​​ ಆ್ಯಪಲ್​ ಕಂಪನಿಯ ಎರಡು ಫೋನ್​ಗಳಿಗೆ ಭರ್ಜರಿ ಆಫರ್ಸ್​ ಅನ್ನು ಘೋಷಿಸಿದೆ. ಹಾಗಿದ್ರೆ ಆಫರ್ಸ್​ ಹೇಗಿದೆ ಎಂಬದನ್ನು ಈ ಲೇಖನದ ಮೂಲಕ ನೋಡಿ.

  • Share this:

    ಆ್ಯಪಲ್ ಡಿವೈಸ್‌ಗಳೆಂದರೆ (Apple Device) ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಇತರ ಎಲ್ಲಾ ಡಿವೈಸ್‌ಗಳಿಗಿಂತ ಡಿಫರೆಂಟ್ ಆಗಿರುವ ಐಫೋನ್‌ಗಳನ್ನು ಜೀವನದಲ್ಲಿ ಒಮ್ಮೆಯಾದರೂ ಖರೀದಿಸಬೇಕೆಂದೇ ಹೆಚ್ಚಿನ ಫೋನ್ ಪ್ರಿಯರ ಹಂಬಲವಾಗಿರುತ್ತದೆ. ಹಾಗಿದ್ದರೆ ಫ್ಲಿಪ್‌ಕಾರ್ಟ್‌ನಲ್ಲಿ (Flipkart) ಐಫೋನ್ 14 ಸೀರೀಸ್‌ನ (IPhone 14 Series) ಯಾವುದೇ ಡಿವೈಸ್ ಅನ್ನು ನಿಮ್ಮದಾಗಿಸಿಕೊಳ್ಳಬಹುದಾದ ಅದ್ಭುತ ಆಫರ್ ಅನ್ನು ನೀವು ತ್ವರೆ ಮಾಡಲೇಬೇಕು. ಮಾರುಕಟ್ಟೆಯಲ್ಲಿ ದುಬಾರಿ ಸ್ಮಾರ್ಟ್​​ಫೋನ್​ಗಳೆಂದರೆ ಅದು ಆ್ಯಪಲ್​ ಕಂಪನಿಯ ಐಫೋನ್​ಗಳು ಇದು ಉತ್ತಮ ಗುಣಮಟ್ಟದ್ದಾಗಿದ್ದು ವಿಶೇಷ ಫೀಚರ್ಸ್​ಗಳನ್ನು ಇದು ಹೊಂದಿರುತ್ತದೆ.


    ಐಫೋನ್​ 14 ಸೀರಿಸ್​​ನ ಸ್ಮಾರ್ಟ್​ಫೋನ್​ಗಳು 2022ರಲ್ಲಿ ಮಾರುಕಟ್ಟೆಗೆ ಕಾಲಿಟ್ಟಿದೆ. ಇದೀಗ ಫ್ಲಿಪ್​ಕಾರ್ಟ್​​ ಆ್ಯಪಲ್​ ಕಂಪನಿಯ ಎರಡು ಫೋನ್​ಗಳಿಗೆ ಭರ್ಜರಿ ಆಫರ್ಸ್​ ಅನ್ನು ಘೋಷಿಸಿದೆ. ಹಾಗಿದ್ರೆ ಆಫರ್ಸ್​ ಹೇಗಿದೆ ಎಂಬದನ್ನು ಈ ಲೇಖನದ ಮೂಲಕ ನೋಡಿ.


    ಫ್ಲಿಪ್‌ಕಾರ್ಟ್‌ನಲ್ಲಿ ಐಫೋನ್ 14 ಸೀರೀಸ್ ಬೆಲೆ ಇಳಿಕೆ


    ಆ್ಯಪಲ್ ಐಫೋನ್ 14 ಸೀರೀಸ್ ಅನ್ನು ಸಪ್ಟೆಂಬರ್ 2022 ರಲ್ಲಿ ಲಾಂಚ್ ಮಾಡಿತ್ತು ಹಾಗೂ ಇದೀಗ ಐಫೋನ್ 14 ಹಾಗೂ ಐಫೋನ್ 14 ಪ್ಲಸ್‌ನ ಬೆಲೆ ಫ್ಲಿಪ್‌ಕಾರ್ಟ್‌ನಲ್ಲಿ ಇಳಿಕೆಗೊಂಡಿದೆ. ಇ-ಕಾಮರ್ಸ್ ತಾಣವು ಈ ಎರಡೂ ಡಿವೈಸ್‌ಗಳಿಗೆ ವಿನಾಯಿತಿಯನ್ನು ಘೋಷಿಸಿದ್ದು ಎಕ್ಸ್‌ಚೇಂಜ್ ಹಾಗೂ ಬ್ಯಾಂಕ್ ಆಫರ್‌ಗಳ ಮೂಲಕ ಈ ಡಿಸ್ಕೌಂಟ್ ಅನ್ನು ನಿಮ್ಮದಾಗಿಸಿಕೊಳ್ಳಬಹುದಾಗಿದೆ.


    ಇದನ್ನೂ ಓದಿ: ಸೋಶಿಯಲ್ ಮೀಡಿಯಾಗಳನ್ನು ಆ್ಯಪ್‌ನಲ್ಲಿ ಬಳಸಬೇಕಾ? ವೆಬ್‌ನಲ್ಲಿ ಬಳಸಬೇಕಾ?


    ನಿಮ್ಮ ಡಿವೈಸ್‌ಗೆ ಎಕ್ಸ್‌ಚೇಂಜ್ ಆಫರ್ ಇದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಿ. ಎಕ್ಸ್‌ಚೇಂಜ್ ಆಫರ್ ಪರಿಶೀಲಿಸುವ ಸೌಲಭ್ಯ ಎಲ್ಲಾ ಇ ಕಾಮರ್ಸ್ ತಾಣಗಳಲ್ಲಿ ಲಭ್ಯವಿದೆ. ಆ್ಯಪಲ್ ಐಫೋನ್ 14 ಹಾಗೂ 14 ಪ್ಲಸ್ ಎಕ್ಸ್‌ಚೇಂಜ್ ಹಾಗೂ ಬ್ಯಾಂಕ್ ಆಫರ್‌ಗಳನ್ನು ಅನ್ವಯಿಸಿದ ನಂತರ ರೂ 60,990 ಗಳಲ್ಲಿ ಲಭ್ಯವಿರುತ್ತದೆ. ಇಲ್ಲಿದೆ ದರಕಡಿತ ವಿವರಗಳು


    ಐಫೋನ್ 14 ಮತ್ತು ಐಫೋನ್ 14 ಪ್ಲಸ್​


    ಫ್ಲಿಪ್‌ಕಾರ್ಟ್‌ನಲ್ಲಿ ಆ್ಯಪಲ್ ಐಫೋನ್ 14 ದರಇಳಿಕೆ


    ಬೇರೆ ಬೇರೆ ಸ್ಟೋರೇಜ್ ಆಯ್ಕೆಗಳಲ್ಲಿ ಲಭ್ಯವಿರುವ ಐಫೋನ್ 14 ಬೇರೆ ಬೇರೆ ಬಣ್ಣಗಳಲ್ಲಿ ಕೂಡ ಲಭ್ಯವಿದೆ. ಬಣ್ಣ ಹಾಗೂ ಸ್ಟೋರೇಜ್ ಆಧರಿಸಿ ಐಫೋನ್ 14 ಬೆಲೆ ವ್ಯತ್ಯಾಸಗೊಳ್ಳಬಹುದು ಎಂಬುದನ್ನು ನೆನಪಿನಲ್ಲಿಡಿ. ಕೆಂಪು ಬಣ್ಣದ 256 ಜಿಬಿ ಸ್ಟೋರೇಜ್ ಐಫೋನ್ 14 ಮೂಲ ಬೆಲೆ ರೂ 89,900 ಆಗಿದ್ದು 6% ಡಿಸ್ಕೌಂಟ್ ನಂತರ ಡಿವೈಸ್ ಬೆಲೆ ರೂ 83,990 ಆಗಿದೆ.


    ಇನ್ನು ಎಕ್ಸ್‌ಚೇಂಜ್ ಆಫರ್ ಅನ್ನು ಬಳಸಿಕೊಂಡು ಫೋನ್‌ನ ಬೆಲೆಯನ್ನು ಇನ್ನಷ್ಟು ಕಡಿಮೆಮಾಡಬಹುದು. ಎಕ್ಸ್‌ಚೇಂಜ್‌ನಲ್ಲಿ ರೂ 23,000 ಕಡಿತವನ್ನು ಪಡೆದುಕೊಳ್ಳಬಹುದು. ಡಿಸ್ಕೌಂಟ್ ಹಾಗೂ ಎಕ್ಸ್‌ಚೇಂಜ್ ಆಫರ್ ಪಡೆದುಕೊಂಡ ನಂತರ ಐಫೋನ್ 14 ನಿಮಗೆ ರೂ 60,990 ಕ್ಕೆ ಲಭ್ಯವಿದೆ.


    ಫ್ಲಿಪ್‌ಕಾರ್ಟ್‌ನಲ್ಲಿ ಆ್ಯಪಲ್ ಐಫೋನ್ 14 ಪ್ಲಸ್ ದರಇಳಿಕೆ


    128 ಜಿಬಿ ಸ್ಟೋರೇಜ್ ನೇರಳೆ ಬಣ್ಣದ ಐಫೋನ್ 14 ಪ್ಲಸ್ ರೂ 89,9000 ಕ್ಕೆ ದೊರೆಯುತ್ತದೆ. ಈ ಡಿವೈಸ್ 6% ವಿನಾಯಿತಿಯ ನಂತರ ರೂ 83,990 ಕ್ಕೆ ಲಭ್ಯವಿದೆ. ಎಕ್ಸ್‌ಚೇಂಜ್ ಆಫರ್ ಅನ್ನು ಪಡೆದಲ್ಲಿ ನೀವು ರೂ 23,000 ದವರೆಗೆ ವಿನಾಯಿತಿಯನ್ನು ಡಿವೈಸ್ ಮೇಲೆ ಪಡೆಯಬಹುದು. ಡಿಸ್ಕೌಂಟ್ ಹಾಗೂ ಎಕ್ಸ್‌ಚೇಂಜ್ ಆಫರ್ ಅನ್ನು ಪಡೆದುಕೊಂಡ ನಂತರ ಐಫೋನ್ 14 ಪ್ಲಸ್ ರೂ 60,990 ಕ್ಕೆ ದೊರೆಯಲಿದೆ.


    ಐಫೋನ್ 14 ಮತ್ತು ಐಫೋನ್ 14 ಪ್ಲಸ್​


    ಫ್ಲಿಪ್‌ಕಾರ್ಟ್‌ನಲ್ಲಿ ಐಫೋನ್ 14 ಹಾಗೂ 14 ಪ್ಲಸ್ ಡಿಸ್ಕೌಂಟ್ ಬೆಲೆಯಲ್ಲಿ ಪಡೆದುಕೊಳ್ಳುವುದು ಹೇಗೆ?


    ಹಂತ 1: ಐಫೋನ್ 14 ಹಾಗೂ ಐಫೋನ್ 14 ಪ್ಲಸ್ ಇವೆರಡರಲ್ಲಿ ಒಂದು ಡಿವೈಸ್ ಅನ್ನು ನಿಮ್ಮದಾಗಿಸಿಕೊಳ್ಳಬೇಕು ಎಂಬ ಯೋಜನೆ ನಿಮ್ಮದಾಗಿದ್ದರೆ ಫ್ಲಿಪ್‌ಕಾರ್ಟ್ ವೆಬ್‌ಸೈಟ್ ಅಥವಾ ಮೊಬೈಲ್ ಅಪ್ಲಿಕೇಶನ್‌ಗೆ ಭೇಟಿ ನೀಡಬೇಕು


    ಹಂತ 2: ಐಫೋನ್ 14 ಅಥವಾ ಐಫೋನ್ 14 ಪ್ಲಸ್ ಹುಡುಕಿ


    ಹಂತ 3: ಡಿವೈಸ್ ಬಣ್ಣ ಹಾಗೂ ಸ್ಟೋರೇಜ್ ಆಯ್ಕೆಮಾಡಿ


    ಹಂತ 4: ಎಕ್ಸ್‌ಚೇಂಜ್ ಆಫರ್ ಬಳಸಿ ಖರೀದಿಸಬೇಕಿದ್ದರೆ ಎಕ್ಸ್‌ಚೇಂಜ್ ಮೇಲೆ ಕ್ಲಿಕ್ ಮಾಡಿ


    ಹಂತ 5: ಕೊನೆಯಲ್ಲಿ ಇದೀಗ ಖರೀದಿಸಿ ಹಾಗೂ ಪಾವತಿಸಲು ಮುಂದುವರಿಯಿರಿ ಕ್ಲಿಕ್ ಮಾಡಿ. ಪೇಮೆಂಟ್‌ಗಳನ್ನು ಮಾಡುವಾಗ ಬ್ಯಾಂಕ್ ಆಫರ್‌ಗಳನ್ನು ನೀವು ಆರಿಸಬಹುದು.

    Published by:Prajwal B
    First published: