• Home
  • »
  • News
  • »
  • tech
  • »
  • Amazon Offer: ಅಮೆಜಾನ್​ನಲ್ಲಿ ಗ್ರಾಹಕರಿಗೆ ಭರ್ಜರಿ ಆಫರ್ಸ್​! ಕೆಲವೇ ದಿನಗಳವರೆಗೆ ಮಾತ್ರ ಇರಲಿವೆಯಂತೆ ಈ ಕೊಡುಗೆ.

Amazon Offer: ಅಮೆಜಾನ್​ನಲ್ಲಿ ಗ್ರಾಹಕರಿಗೆ ಭರ್ಜರಿ ಆಫರ್ಸ್​! ಕೆಲವೇ ದಿನಗಳವರೆಗೆ ಮಾತ್ರ ಇರಲಿವೆಯಂತೆ ಈ ಕೊಡುಗೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಅಮೆಜಾನ್​ ಇದೀಗ ತನ್ನ ಗ್ರಾಹಕರಿಗಾಗಿ ವಿಶೇಷ ಆಫರ್​ ಅನ್ನು ನೀಡಿದ್ದು ಕೆಲವೇ ದಿನಗಳವರೆಗೆ ಮಾತ್ರ ಈ ಕೊಡುಗೆ ಲಭ್ಯವಿರಲಿದೆ. ಹಾಗಿದ್ರೆ ಯಾವೆಲ್ಲಾ ವಸ್ತುಗಳ ಮೇಲೆ ಆಫರ್ಸ್​ಗಳಿವೆ ಎಂಬುದನ್ನು ಈ ಕೆಳಗೆ ನೋಡೋಣ.

  • Share this:

    ಇತ್ತೀಚೆಗೆ ಹೆಚ್ಚಿನ ಜನರು ಮಾರುಕಟ್ಟೆಯಲ್ಲಿ ತಮಗೆ ಬೇಕಾದ ವಸ್ತುಗಳನ್ನು  ಖರೀದಿ ಮಾಡುವುದು ಕಡಿಮೆ ಮಾಡಿದ್ದಾರೆ. ಇದರ ಬದಲಿಗೆ ಎಲ್ಲವೂ ಈಗ ಆನ್​ಲೈನ್​ನಲ್ಲೇ (Online) ಸಿಗುವುದರಿಂದ ಹೆ್ಚ್ಚಿನ ಜನರು ಇಕಾಮರ್ಸ್​ ವೆಬ್​​ಸೈಟ್​ (E-Commerce)ಗಳನ್ನೇ ಅವಲಂಬಿಸಿದ್ದಾರೆ. ಅಮೆಜಾನ್ (Amazon)​, ಫ್ಲಿಪ್​ಕಾರ್ಟ್​​ (Flipkart) ಇತ್ತೀಚೆಗೆ ಬಹಳಷ್ಟು ದೊಡ್ಡಮಟ್ಟದ ವ್ಯಾಪಾರದ ವೆಬ್​ಸೈಟ್​ಗಳಾಗಿವೆ. ಇದು ತನ್ನ ವ್ಯವಹಾರದಲ್ಲಿ ಏನಾದರೊಂದು ಆಫರ್ (Offer)​​ ಅನ್ನು ನೀಡುವ ಮೂಲಕ ಗ್ರಾಹಕರನ್ನು ತನ್ನತ್ತ ಆಕರ್ಷಿಸಿದೆ. ಇದೀಗ ಇ-ಕಾಮರ್ಸ್​ನ ದೊಡ್ಡ ಮಾರಕಟ್ಟೆಯಾಗಿರುವ ಅಮೆಜಾನ್ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳು, ಉತ್ಪನ್ನಗಳು ಮತ್ತು ಪರಿಕರಗಳ ಮೇಲೆ ಭಾರಿ ಕೊಡುಗೆಗಳನ್ನು ನೀಡುತ್ತಿದೆ. ಕಂಪನಿಯು ಮತ್ತೊಂದು ಆಫರ್ ಸೇಲ್ ಆರಂಭಿಸಿದೆ. 'ಬ್ಲಾಕ್ ಫ್ರೈಡೇ ಸೇಲ್' (Black Friday Sale) ಹೆಸರಿನಲ್ಲಿ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳ ಮೇಲೆ ಭಾರೀ ರಿಯಾಯಿತಿಗಳನ್ನು ಘೋಷಿಸಿದೆ. 


    ಇತ್ತೀಚಿನ ಆಫರ್‌ಗಳಲ್ಲಿ ಇಯರ್‌ಫೋನ್‌ಗಳು, ಬ್ಲೂಟೂತ್ ಸ್ಪೀಕರ್‌ಗಳು, ಕ್ಯಾಮೆರಾ ಪರಿಕರಗಳು ಮತ್ತು ಮನೆಯ ಮನರಂಜನಾ ಸಾಧನಗಳು ಅತ್ಯಂತ ಕಡಿಮೆ ಬೆಲೆಯಲ್ಲಿ ಸೇರಿವೆ. ಇದೀಗ ಈ ಆಫರ್​​ನಲ್ಲಿ ಅಮೆಜಾನ್​ ಏನೆಲ್ಲಾ ಆಫರ್​ ಅನ್ನು ನೀಡಿದೆ ಎಂಬುದರ ಮಾಹಿತಿ ಇಲ್ಲಿದೆ.


    ಸ್ಪಿಜೆನ್ ಎಸೆನ್ಷಿಯಲ್ PF2104 ವೈರ್‌ಲೆಸ್ ಚಾರ್ಜರ್


    ಅಮೆಜಾನ್​​ನ ಈ  ಆಫರ್​​ ಮಾರಾಟದಲ್ಲಿ ಸ್ಪಿಜೆನ್ ಕಂಪನಿಯ ಈ ವೈರ್‌ಲೆಸ್ ಚಾರ್ಜರ್‌ನಲ್ಲಿಅಮೆಜಾನ್ ಬಹಳಷ್ಟು ಡಿಸ್ಕೌಂಟ್ ಘೋಷಿಸಿದೆ. ಹಾಗಾಗಿ ಈ ವೈರ್​​ಲೆಸ್​ ಚಾರ್ಜರ್ ಅನ್ನು ಅಮೆಜಾನ್ ನಲ್ಲಿ ಕೇವಲ 999 ರೂಪಾಯಿಗೆ ಖರೀದಿಸಬಹುದು. ಈ ವೈರ್‌ಲೆಸ್ ಚಾರ್ಜರ್ ಗರಿಷ್ಠ 15W ವೇಗದ ಚಾರ್ಜರ್​ ಸಾಮರ್ಥ್ಯವನ್ನು ಹೊಂದಿದೆ. iOS ಮತ್ತು ಆಂಡ್ರಾಯ್ಡ್ ಸಾಧನಗಳನ್ನು ಚಾರ್ಜ್ ಮಾಡಲು ಇದನ್ನು ಬಳಸಬಹುದು.


    ಇದನ್ನೂ ಓದಿ: ಒಪ್ಪೊದಿಂದ ಹೊಸ ಇಯರ್​ಬಡ್ಸ್​ ಬಿಡುಗಡೆ, ಫೀಚರ್ಸ್​ ನೋಡಿದ್ರೆ ಗ್ಯಾರಂಟಿ ತಗೊಳ್ತೀರ!


    ಬೋಟ್ ಸ್ಟೋನ್ 200 3W ಬ್ಲೂಟೂತ್ ಸ್ಪೀಕರ್


    ಈ ಬ್ಲೂಟೂತ್ ಸ್ಪೀಕರ್ ಅದ್ಭುತ ಫೀಚರ್ಸ್​ ಅನ್ನು ಹೊಂದಿದೆ. ಇದರ ವೈಶಿಷ್ಟ್ಯಗಳು IPX8 ರೇಟಿಂಗ್ ವಾಟರ್ ರೆಸಿಸ್ಟೆಂಟ್, ಪೋರ್ಟ್‌ನಲ್ಲಿ AUX ವೈಶಿಷ್ಟ್ಯವನ್ನು ಒಳಗೊಂಡಿದೆ. ಈ ಬ್ಲೂಟೂತ್ ಸ್ಪೀಕರ್ ಅನ್ನು ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು, ಟ್ಯಾಬ್ಲೆಟ್‌ಗಳಿಗೆ ಕನೆಕ್ಟ್​ ಮಾಡಬಹುದು. ಈ ಬ್ಲೂಟೂತ್ ಸ್ಪೀಕರ್‌ನಲ್ಲಿ ಅಮೆಜಾನ್​ನಲ್ಲಿ  1299 ರೂಪಾಯಿ ರಿಯಾಯಿತಿಯಲ್ಲಿ ಮಾರಾಟ ಮಾಡುತ್ತಿದ್ದಾರೆ.


    ಸಾಂಕೇತಿಕ ಚಿತ್ರ


    JBL C100SI ವೈರ್ಡ್ ಇನ್-ಇಯರ್ ಹೆಡ್‌ಫೋನ್


    ಈ ಹೆಡ್‌ಫೋನ್ ಪ್ರಸ್ತುತ ಮಾರುಕಟ್ಟೆಯಲ್ಲಿ 1000 ರೂಪಾಯಿಗೆ ಲಭ್ಯವಿದ್ದರೆ, ಅಮೆಜಾನ್ ಇದನ್ನು 599 ರೂಪಾಯಿಯ ರಿಯಾಯಿತಿ ದರದಲ್ಲಿ ನೀಡುತ್ತಿದೆ. ಇದು 3.5mm ಹೆಡ್‌ಫೋನ್ ಜ್ಯಾಕ್‌ನೊಂದಿಗೆ ಬರುತ್ತದೆ. ಈ ಹೆಡ್‌ಫೋನ್ ಅನ್ನು ಟ್ಯಾಬ್​​ಗಳು, ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳಿಗೆ ಬಳಸಬಹುದು. ಹಗುರವಾದ  ಇನ್-ಇಯರ್​​ನ ವಿನ್ಯಾಸವು ಈ ಹೆಡ್‌ಫೋನ್ ಅನ್ನು ಹೆಚ್ಚು ಜನಪ್ರಿಯಗೊಳಿಸಿದೆ.


    ಪೋರ್ಟೋನಿಕ್ಸ್​ ವೈರ್‌ಲೆಸ್ ಬ್ಲೂಟೂತ್ ಸೌಂಡ್‌ಬಾರ್


    ಅಮೆಜಾನ್ ಪೋರ್ಟೋನಿಕ್ಸ್​ ಪ್ಯೂರ್ ಸೌಂಡ್ ಪ್ರೊ IV ವೈರ್‌ಲೆಸ್ ಬ್ಲೂಟೂತ್ ಸೌಂಡ್‌ಬಾರ್‌ನಲ್ಲಿ ವಿಶೇಷ ಆಫರ್​ ಅನ್ನು ಬಿಡುಗಡೆ ಮಾಡಿದೆ. ಅಮೆಜಾನ್​ನ ಆಫರ್​ನ ಮಾರಾಟದ ಸಂದರ್ಭದಲ್ಲಿ ಶೇಕಡಾ 80% ಪ್ರತಿಶತ ರಿಯಾಯಿತಿಯನ್ನು ನೀಡಲಾಗುತ್ತಿದೆ. ಪ್ರಸ್ತುತ, ಈ ಸೌಂಡ್ ಬಾರ್ ಅನ್ನು 19,999 ರೂಪಾಯಿಯ  ರಿಯಾಯಿತಿ ದರದಲ್ಲಿ ಪಡೆಯಬಹುದು.


    ಹಿಸೆನ್ಸ್ 4K ಸ್ಮಾರ್ಟ್ ಟಿವಿ


    ಅಮೆಜಾನ್ ಬ್ಲಾಕ್ ಫ್ರೈಡೇ ಸೇಲ್‌ನಲ್ಲಿ ಹಿಸೆನ್ಸ್ 43 ಇಂಚಿನ 4K ಸ್ಮಾರ್ಟ್ ಟಿವಿಯನ್ನು 20,900 ರೂ.ಗೆ ಪಡೆಯಬಹುದು. ಇದು ಆಂಡ್ರಾಯ್ಡ್​ ಟಿವಿ ಒಎಸ್​ ನಲ್ಲಿ ರನ್ ಆಗುತ್ತದೆ. ಈ ಸ್ಮಾರ್ಟ್ ಟಿವಿ Dolby Vision ಮತ್ತು Dolby Atmos ನಂತಹ ವೈಶಿಷ್ಟ್ಯಗಳನ್ನು ಬೆಂಬಲಿಸುತ್ತದೆ.

    Published by:Prajwal B
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು