• ಹೋಂ
  • »
  • ನ್ಯೂಸ್
  • »
  • ಮೊಬೈಲ್- ಟೆಕ್
  • »
  • Valentine's Day 2023: ವ್ಯಾಲೆಂಟೈನ್ಸ್​ ಡೇ ಪ್ರಯುಕ್ತ ಟೆಲಿಕಾಂ ಗ್ರಾಹಕರಿಗೆ ಭರ್ಜರಿ ಆಫರ್​! 5000 ಮೌಲ್ಯ ಗಿಫ್ಟ್ ವೋಚರ್ ಲಭ್ಯ

Valentine's Day 2023: ವ್ಯಾಲೆಂಟೈನ್ಸ್​ ಡೇ ಪ್ರಯುಕ್ತ ಟೆಲಿಕಾಂ ಗ್ರಾಹಕರಿಗೆ ಭರ್ಜರಿ ಆಫರ್​! 5000 ಮೌಲ್ಯ ಗಿಫ್ಟ್ ವೋಚರ್ ಲಭ್ಯ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

Gift Voucher: ವ್ಯಾಲೆಂಟೈನ್ಸ್‌ ಡೇ ಪ್ರಯುಕ್ತ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ 5ಜಿಬಿ ಡೇಟಾ ನೀಡುವುದಾಗಿ ಹೇಳಿದೆ. ಇದಲ್ಲದೆ ಪ್ಲೇ ದಿ ವಿ ಲವ್‌ ಟ್ಯೂನ್ಸ್‌ ಕಾಂಟೆಸ್ಟ್‌ ಅನ್ನು ಕೂಡ ಘೋಷಣೆ ಮಾಡಿದ್ದು, ಇದರಲ್ಲಿ ಗ್ರಾಹಕರು 5,000ರೂಪಾಯಿ ಮೌಲ್ಯದ ಗಿಫ್ಟ್‌ ವೋಚರ್‌ಗಳನ್ನು ಗೆಲ್ಲಬಹುದು ಎಂದು ಕಂಪೆನಿ ಹೇಳಿದೆ.

ಮುಂದೆ ಓದಿ ...
  • News18 Kannada
  • 2-MIN READ
  • Last Updated :
  • New Delhi, India
  • Share this:

    ಫೆಬ್ರವರಿ ಬಂತೆಂದರೆ ಸಾಕು ಪ್ರೇಮಿಗಳಿಗೆ ಸಂತಸದ ದಿನ. ಏಕೆಂದರೆ ಫೆಬ್ರವರಿಯ ಆರಂಭದಲ್ಲಿ ವ್ಯಾಲೆಂಟೈನ್ಸ್ ವಾರಗಳು (Valentine's Day Week) ಪ್ರಾರಂಭವಾಗುತ್ತಿದ್ದಂತೆ ಕೆಲವರು ಏನಪ್ಪಾ ಗಿಫ್ಟ್​ ನೀಡೋದು ಅಂತ ಯೋಚಿಸ್ತಾ ಇದ್ರೆ, ಇನ್ನೂ ಕೆಲವರು ಗಿಫ್ಟ್​ಗಳನ್ನು ಮೊದಲೇ ತಯಾರಿ ಮಾಡಿರುತ್ತಾರೆ. ಇನ್ನು ಈ ಸಂದರ್ಭದಲ್ಲಿ ಇಕಾಮರ್ಸ್​ ವೆಬ್​ಸೈಟ್​ಗಳು (E-Commerse Websites), ಟೆಲಿಕಾಂ ಕಂಪೆನಿಗಳು ತನ್ನ ಗ್ರಾಹಕರಿಗಾಗಿ ವಿಶೇಷ ರಿಯಾಯಿತಿಯನ್ನು ನೀಡುತ್ತವೆ. ಅದೇ ರೀತಿ ಜನಪ್ರಿಯ ಟೆಲಿಕಾಂ ಕಂಪೆನಿಯಾಗಿರುವ ವೊಡಫೋನ್ ಐಡಿಯಾ (Vodafone Idea) ಕಂಪೆನಿ ಪ್ರೇಮಿಗಳ ದಿನದ ಪ್ರಯುಕ್ತ ತನ್ನ ಗ್ರಾಹಕರಿಗಾಗಿ ಬಂಪರ್ ಆಫರ್​ ಅನ್ನು ಘೋಷಿಸಿದೆ. ಈ ಮೂಲಕ ಗ್ರಾಹಕರು ಯಾವುದೇ ವೆಚ್ಚವಿಲ್ಲದೆ 5 ಜಿಬಿ ಡೇಟಾವನ್ನು ಪಡೆಯಬಹುದು ಮತ್ತು 5000 ರೂಪಾಯಿ ಮೌಲ್ಯದ ಗಿಫ್ಟ್​ ವೋಚರ್ ಸಹ ಸಿಗುತ್ತದೆ.


    ವ್ಯಾಲೆಂಟೈನ್ಸ್‌ ಡೇ ಪ್ರಯುಕ್ತ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ 5ಜಿಬಿ ಡೇಟಾ ನೀಡುವುದಾಗಿ ಹೇಳಿದೆ. ಇದಲ್ಲದೆ ಪ್ಲೇ ದಿ ವಿ ಲವ್‌ ಟ್ಯೂನ್ಸ್‌ ಕಾಂಟೆಸ್ಟ್‌ ಅನ್ನು ಕೂಡ ಘೋಷಣೆ ಮಾಡಿದ್ದು, ಇದರಲ್ಲಿ ಗ್ರಾಹಕರು 5,000ರೂಪಾಯಿ ಮೌಲ್ಯದ ಗಿಫ್ಟ್‌ ವೋಚರ್‌ಗಳನ್ನು ಗೆಲ್ಲಬಹುದು ಎಂದು ಕಂಪೆನಿ ಹೇಳಿದೆ.


    ಏನೆಲ್ಲಾ ಆಫರ್ಸ್​​ಗಳಿವೆ?


    ವೊಡಫೋನ್ ಐಡಿಯಾ ಟೆಲಿಕಾಂ ತನ್ನ ಗ್ರಾಹಕರಿಗೆ ಪ್ರೇಮಿಗಳ ದಿನವನ್ನು ಇನ್ನಷ್ಟು ಸಂಭ್ರಮಿಸುವಂತೆ ಮಾಡಿದೆ. ಅಧಿಕ ಡೇಟಾ ಬಯಸುವ ಗ್ರಾಹಕರಿಗೆ ಈ ಸಮಯದಲ್ಲಿ ಹೆಚ್ಚುವರಿ ವೆಚ್ಚವಿಲ್ಲದೆ 5ಜಿಬಿ ಡೇಟಾ ಸೌಲಭ್ಯ ದೊರೆಯಲಿದೆ. ಇದಕ್ಕಾಗಿ ಗ್ರಾಹಕರು 299 ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ರೀಚಾರ್ಜ್‌ ಪ್ಲ್ಯಾನ್​ ಹೊಂದಿರಬೇಕಾಗುತ್ತದೆ. ಅಂತಹ ಬಳಕೆದಾರರಿಗೆ ಹೆಚ್ಚುವರಿ ವೆಚ್ಚವಿಲ್ಲದೆ 28 ದಿನಗಳ ವ್ಯಾಲಿಡಿಟಿ ಅವಧಿಯೊಂದಿಗೆ 5ಜಿಬಿ ಹೆಚ್ಚುವರಿ ಡೇಟಾವನ್ನು ನೀಡಲಾಗುವುದು ಎಂದು ವೊಡಫೋನ್ ಐಡಿಯಾ ಕಂಪೆನಿ ತಿಳಿಸಿದೆ.


    ಇದನ್ನೂ ಓದಿ: ಕೊನೆಗೂ ಭಾರತದಲ್ಲಿ ರಿಲೀಸ್ ಆಯ್ತು ಕೋಕಾ ಕೋಲಾ ಸ್ಮಾರ್ಟ್​ಫೋನ್! ಬೆಲೆ ಎಷ್ಟು ಗೊತ್ತಾ?


    199 ರೂಪಾಯಿ ರೀಚಾರ್ಜ್​ ಹೊಂದಿರುವವರಿಗೂ ಲಭ್ಯ


    ಇನ್ನು ವೊಡಫೋನ್ ಐಡಿಯಾದ 199ರೂಪಾಯಿ ಮತ್ತು 299 ರೂಪಾಯಿ ಒಳಗಿನ ರೀಚಾರ್ಜ್‌ ಪ್ಲ್ಯಾನ್​​ ಹೊಂದಿರುವ ಬಳಕೆದಾರರು ಸಹ ಹೆಚ್ಚುವರಿಯಾಗಿ 2ಜಿಬಿ ಡೇಟಾ ಸೌಲಭ್ಯವನ್ನು ಪಡೆಯಬಹುದಾಗಿದೆ. ಇನ್ನು ಈ ಪ್ರಯೋಜನಗಳು ಕೇವಲ 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿರಲಿದೆ ಎಂದು ಹೇಳಲಾಗಿದೆ.


    ಸಾಂಕೇತಿಕ ಚಿತ್ರ


    ವ್ಯಾಲೆಂಟೈನ್ಸ್‌ ಡೇ ಪ್ರಯೋಜನಗಳು ಪಡೆಯಲು ಬಯಸುವ ಗ್ರಾಹಕರು ಫೆಬ್ರವರಿ 14, 2023 ರೊಳಗೆ ವಿಐ ಆ್ಯಪ್​ನಲ್ಲಿ ರೀಚಾರ್ಜ್ ಮಾಡಿಕೊಂಡರೆ ಮಾತ್ರ ಈ ಸೌಲಭ್ಯಗಳು ದೊರೆಯುತ್ತದೆ.


    5000 ರೂ. ಮೌಲ್ಯದ ಗಿಫ್ಟ್​ ವೋಚರ್


    ಇನ್ನು ವೊಡಫೋನ್ ಐಡಿಯಾ ಟೆಲಿಕಾಂ 5000 ರೂಪಾಯಿ ಮೌಲ್ಯದ ಗಿಫ್ಟ್‌ ವೋಚರ್‌ ನೀಡುವುದಾಗಿ ಹೇಳಿ ಗ್ರಾಹಕರನ್ನು ಇನ್ನಷ್ಟು ಸಂತೋಷ ಪಡುವಂತೆ ಮಾಡಿದೆ. ಆದರೆ ಈ ಗಿಫ್ಟ್‌ ವೋಚರ್‌ ಪಡೆಯಲು ವೊಡಫೋನ್ ಐಡಿಯಾದ ಗ್ರಾಹಕರು ವಿಐ ಆ್ಯಪ್‌ನಲ್ಲಿ ಹಂಗಾಮಾ ಮ್ಯೂಸಿಕ್‌ನಲ್ಲಿನ ವ್ಯಾಲೆಂಟೈನ್ ಪ್ಲೇ ಲೀಸ್ಟ್‌ ಹಾಡಿನಲ್ಲಿ ಜಂಬಲ್ ಸಾಹಿತ್ಯದಿಂದ ಸರಿಯಾದ ಹಾಡನ್ನು ಊಹಿಸುವ ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ. ಇನ್ನು ಈ ಗೇಮ್‌ನಲ್ಲಿ ಭಾಗವಹಿಸುವವರು #ViLoveTunes ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಸರಿಯಾದ ಉತ್ತರವನ್ನು ಕಮೆಂಟ್ ಮಾಡಬೇಕಾಗುತ್ತದೆ. ಈ ಮೂಲಕ ಗಿಫ್ಟ್​ ವೋಚರ್ ಅನ್ನು ಪಡೆಯಲು ಸಾಧ್ಯವಾಗುತ್ತದೆ.




    ಸೋಶಿಯಲ್​ ಮೀಡಿಯಾದಲ್ಲಿ ಕಾಂಟೆಸ್ಟ್


    ಇನ್ನು ದಿ ವಿಐ ಲವ್‌ ಟ್ಯೂನ್ಸ್‌ ಕಾಂಟೆಸ್ಟ್‌ನಲ್ಲಿ ಭಾಗವಹಿಸಿ ಪ್ರತಿ ದಿನ ಪ್ರತಿ ಪ್ರಶ್ನೆಗೆ ಉತ್ತರಿಸುವಂತಹ ಒಬ್ಬ ಅದೃಷ್ಟಶಾಲಿ ವಿಜೇತರಿಗೆ 5,000 ರೂಪಾಯಿ ಮೌಲ್ಯದ ಗಿಫ್ಟ್‌ ವೋಚರ್‌ ಅನ್ನು ಪಡೆಯಬಹುದು. ಹಾಗೆಯೇ ಇನ್‌ಸ್ಟಾಗ್ರಾಮ್, ಟ್ವಿಟರ್ ಮತ್ತು ಫೇಸ್‌ಬುಕ್‌ನಲ್ಲಿ ವಿಐ ಟೆಲಿಕಾಂ ವೆರಿಫೈ ಮಾಡಿದ ಸೊಶೀಯಲ್‌ ಮೀಡಿಯಾ ಹ್ಯಾಂಡಲ್‌ಗಳಲ್ಲಿ ಈ ದಿ ವಿಐ ಲವ್‌ ಟ್ಯೂನ್ಸ್‌ ಕಾಂಟೆಸ್ಟ್‌ ಅನ್ನು ಸ್ಟಾರ್ಟ್​ ಮಾಡಲಾಗಿದೆ. ಇನ್ನು ಈ ಸ್ಪರ್ಧೆಯಲ್ಲಿ ಭಾಗವಹಿಸಲು ವೊಡಫೋನ್ ಐಡಿಯಾದ ಸೋಶಿಯಲ್ ಮೀಡಿಯಾಗಳನ್ನು ಫಾಲೋ ಮಾಡ್ಬೇಕು.

    Published by:Prajwal B
    First published: