ಪ್ರೇಮಿಗಳ ದಿನ (Valentine's Day) ಬಂದರೆ ಸಾಕು ಇಕಾಮರ್ಸ್ ವೆಬ್ಸೈಟ್ಗಳು ಆಫರ್ಸ್ಗಳನ್ನು ನೀಡಲು ಆರಂಭ ಮಾಡುತ್ತದೆ. ಅದರಲ್ಲೂ ಫ್ಲಿಪ್‌ಕಾರ್ಟ್ (Flipkart), ಅಮೆಜಾನ್ ಈ ಆಫರ್ ಸೇಲ್ನಲ್ಲಿ (Offer Sale) ಮುಂಚೂಣಿಯಲ್ಲಿದೆ. ಸದ್ಯ ಜನಪ್ರಿಯ ಇಕಾಮರ್ಸ್ ಕಂಪೆನಿಯಾಗಿರುವ ಫ್ಲಿಪ್‌ಕಾರ್ಟ್ ಪ್ರೇಮಿಗಳ ದಿನದ ಪ್ರಯುಕ್ತ ಪ್ರೇಮಿಗಳಿಗಾಗಿ ಉತ್ತಮ ಆಫರ್ ನೀಡುತ್ತಿದೆ. ಫ್ಲಿಪ್‌ಕಾರ್ಟ್ ವ್ಯಾಲೆಂಟೈನ್ಸ್ ಡೇ ಆಫರ್ ಸೇಲ್ ಅನ್ನು ಆರಂಭಿಸಿದ್ದು ಈ ಮೂಲಕ ಗ್ರಾಹಕರು 2 ಉಚಿತ ಸಿನಿಮಾ ಟಿಕೆಟ್ (Free Cinema Ticket) ಅನ್ನು ಪಡೆಯಬಹುದಾಗಿದೆ. ಫ್ಲಿಪ್‌ಕಾರ್ಟ್ ಈ ಆಫರ್ ಅನ್ನು ಕೆಲವೇ ದಿನಗಳವರೆಗೆ ಮಾತ್ರ ಲಭ್ಯವಿರುತ್ತದೆ.
ಪ್ರತೀ ವರ್ಷ ಫೆಬ್ರವರಿ ತಿಂಗಳು ಬಂತೆಂದರೆ ಸಾಕು ಪ್ರೇಮಿಗಳಿಗೆ ಸಂತಸದ ಸುದ್ದಿ. ಹೀಗಿರುವಾಗು ಇಕಾಮರ್ಸ್ ಕಂಪೆನಿಗಳು ಸಹ ಈ ಪ್ರಯುಕ್ತ ವಿಶೇಷ ಆಫರ್ ಸೇಲ್ ಅನ್ನು ಆರಂಭಿಸುತ್ತದೆ. ಇದೀಗ ಫ್ಲಿಪ್‌ಕಾರ್ಟ್ 2 ಸಿನಿಮಾ ಟಿಕೆಟ್ ಅನ್ನು ಉಚಿತವಾಗಿ ನೀಡುತ್ತಿದೆ.
ಫ್ಲಿಪ್‌ಕಾರ್ಟ್ ವ್ಯಾಲೆಂಟೈನ್ಸ್ ಡೇ ಆಫರ್
ಫ್ಲಿಪ್‌ಕಾರ್ಟ್ ನೀಡುತ್ತಿರುವ ಎರಡು ಉಚಿತ ಸಿನಿಮಾ ಟಿಕೆಟ್‌ಗಳನ್ನು ಪಡೆಯಲು ಗ್ರಾಹಕರು 800 ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯದ ಸೌಂದರ್ಯ ಉತ್ಪನ್ನಗಳು ಅಥವಾ ಚಾಕಲೇಟ್‌ಗಳನ್ನು ಖರೀದಿಸಬೇಕಾಗುತ್ತದೆ. ಇನ್ನು ಲಭ್ಯವಿರುವ ಟಿಕೆಟ್‌ಗಳು ಸೋಮವಾರದಿಂದ ಗುರುವಾರದವರೆಗೆ ಎಲ್ಲಾ ಆಟಗಳು/ ಪ್ರದರ್ಶನಗಳು ಮತ್ತು ವಾರಾಂತ್ಯದ ದಿನಗಳಾದ ಶುಕ್ರವಾರ, ಶನಿವಾರ ಮತ್ತು ಭಾನುವಾರದ ದಿನಗಳಲ್ಲಿ ಬೆಳಗ್ಗೆಯ ಪ್ರದರ್ಶನ ಒಳಗೊಂಡಿರುತ್ತವೆ ಎಂದು ವರದಿಯಲ್ಲಿ ತಿಳಿಸಿದೆ.
ಇದನ್ನೂ ಓದಿ: ಮಾರುಕಟ್ಟೆಗೆ ಸದ್ಯದಲ್ಲೇ ಲಗ್ಗೆಯಿಡಲಿದೆ ವಿವೋ ವಿ27 ಸೀರಿಸ್ ಸ್ಮಾರ್ಟ್ಫೋನ್! ಹೇಗಿದೆ ಫೀಚರ್ಸ್?
ಎಷ್ಟು ದಿನ ಲಭ್ಯ ಇರುತ್ತೆ?
ಫ್ಲಿಪ್‌ಕಾರ್ಟ್ ನೀಡುತ್ತಿರುವ ಈ ಕೊಡುಗೆ ಕೆಲವೇ ದಿನಗಳವರೆಗೆ ಮಾತ್ರ ಲಭ್ಯವಿರುತ್ತದೆ. ಇದೀಗ ಈ ಆಫರ್ ಫ್ಲಿಪ್‌ಕಾರ್ಟ್‌ನಲ್ಲಿ ಪ್ರಾರಂಭವಾಗಿದೆ. ಈ ಉಚಿತ ಟಿಕೆಟ್ ಆಫರ್ ಅನ್ನು ಪಡೆಯಲು ಗ್ರಾಹಕರು ಫೆಬ್ರವರಿ 14, ರಾತ್ರಿ 11.59 ರ ಒಳಗೆ ಖರೀದಿಯನ್ನು ಮಾಡಬೇಕು. ವಿಶೇಷವಾಗಿ ಇದರಲ್ಲಿ ನೀಡುವಂತಹ ಕೂಪನ್ ಅನ್ನು ಇದೇ ಏಪ್ರಿಲ್ 30ರವರೆಗೆ ಬಳಕೆ ಮಾಡಬಹುದಾಗಿದೆ.
ಫ್ಲಿಪ್‌ಕಾರ್ಟ್‌ನಲ್ಲಿ ಉಚಿತ ಟಿಕೆಟ್ ಪಡೆಯುವುದು ಹೇಗೆ?
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ