ದೇಶದಲ್ಲಿ ಹಲವಾರು ಟೆಲಿಕಾಂ ಕಂಪೆನಿಗಳಿವೆ (Telecom Comapnies). ಮಾರುಕಟ್ಟೆಯಲ್ಲಿ ಅಗ್ರಸ್ಥಾನವನ್ನು ಪಡೆಯುವ ನಿಟ್ಟಿನಲ್ಲಿ ಗ್ರಾಹಕರನ್ನು ಸೆಳೆಯಲು ಒಂದಕ್ಕೊಂದು ಕಂಪೆನಿಗಳು ವಿಶೇಷ ರೀಚಾರ್ಜ್ ಪ್ಲ್ಯಾನ್ಗಳನ್ನು (Recharge Plans) ಪರಿಚಯಿಸುತ್ತಲೇ ಇರುತ್ತದೆ. ಅದೇ ರೀತಿ ಟೆಲಿಕಾಂ ಕಂಪೆನಿಗಳಲ್ಲಿ ಜಿಯೋ ಮುಂಚೂಣಿಯಲ್ಲಿದ್ದು, ಏರ್ಟೆಲ್ ಎರಡನೇ ಸ್ಥಾನದಲ್ಲಿದೆ. ಹಾಗೆಯೇ ಮೂರನೇ ಸ್ಥಾನವನ್ನು ವೊಡಫೋನ್ ಐಡಿಯಾ ಪಡೆದುಕೊಂಡಿದೆ. ಈ ಕಂಪೆನಿ ಇದೀಗ ತನ್ನ ಗ್ರಾಹಕರಿಗಾಗಿ ಅಗ್ಗದ ರೀಚಾರ್ಜ್ ಪ್ಲ್ಯಾನ್ ಅನ್ನು ಪರಿಚಯಿಸಿದೆ. ಜಿಯೋ ತನ್ನ ಅಗ್ಗದ ಬೆಲೆಯಲ್ಲಿ ರೀಚಾರ್ಜ್ ಪ್ಲ್ಯಾನ್ಗಳನ್ನು ಬಿಡುಗಡೆ ಮಾಡುವ ಮೂಲಕ ಈ ಅಗ್ರಸ್ಥಾನವನ್ನು ಪಡೆಯಲು ಕಾರಣವಾಗಿದೆ. ಈ ಮಧ್ಯೆ ವೋಡಫೋನ್ ಐಡಿಯಾ (Vodafone Idea) ಹೊಸ ಯೋಜನೆಗಳನ್ನು ಬಿಡುಗಡೆ ಮಾಡಿದೆ.
ವೊಡಫೋನ್ ಐಡಿಯಾ ಪರಿಚಯಿಸಿರುವ ರೀಚಾರ್ಜ್ ಯೋಜನೆಯಲ್ಲಿ ಹೆಚ್ಚುವರಿ ಡೇಟಾ ಸೌಲಭ್ಯವೂ ಇದೆ. ಈ ಮೂಲಕ ಕಡಿಮೆ ಬೆಲೆಯಲ್ಲಿ ಹೆಚ್ಚು ಡೇಟಾ ಬಳಸುವವರಿಗೆ ಇದು ಉತ್ತಮ ಆಯ್ಕೆಯಾಗಿವೆ. ಹಾಗಿದ್ರೆ ಈ ಆಫರ್ನಲ್ಲಿ ಯಾವೆಲ್ಲಾ ಪ್ಲ್ಯಾನ್ಗಳು ಲಭ್ಯವಿದೆ ಎಂದು ಈ ಲೇಖನದಲ್ಲಿ ತಿಳಿಯೋಣ.
ವಿಐ ನ 199 ರೂಪಾಯಿ ರೀಚಾರ್ಜ್ ಪ್ಲ್ಯಾನ್
ವಿಐ ಟೆಲಿಕಾಂನ 199 ರೂಪಾಯಿ ಪ್ರೀಪೇಯ್ಡ್ ಯೋಜನೆಯು ಒಟ್ಟು 18 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿರುತ್ತದೆ. ಹಾಗೆಯೇ ಈ ಯೋಜನೆಯಲ್ಲಿ ಗ್ರಾಹಕರು ಪ್ರತಿದಿನ 1ಜಿಬಿ ಡೇಟಾ ಸೌಲಭ್ಯವನ್ನು ಪಡೆಯುತ್ತಾರೆ. ಇನ್ನು ಈ ರೀಚಾರ್ಜ್ ಪ್ಲ್ಯಾನ್ನಲ್ಲಿ ಅನ್ಲಿಮಿಟೆಡ್ ವಾಯ್ಸ್ ಕಾಲ್ ಸೌಲಭ್ಯ ಮತ್ತು ಪ್ರತೀದಿನ ಉಚಿತವಾಗಿ 100 ಎಸ್‌ಎಮ್‌ಎಸ್ ಅನ್ನು ಮಾಡಬಹುದು.
ವಿಐ ನ 209 ರೂಪಾಯಿ ರೀಚಾರ್ಜ್ ಪ್ಲ್ಯಾನ್
ವೊಡಫೋನ್ ಐಡಿಯಾ ಕಂಪೆನಿ ಪರಿಚಯಿಸಿದ ಈ 209 ರೂ. ಪ್ರೀಪೇಯ್ಡ್ ಯೋಜನೆ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಹಾಗೆಯೇ ಈ ಯೋಜನೆಯಲ್ಲಿ ಒಟ್ಟಾಗಿ ಗ್ರಾಹಕರಿಗೆ 4ಜಿಬಿ ಡೇಟಾ ಸೌಲಭ್ಯ ಸಿಗಲಿದೆ. ಜೊತೆಗೆ ಈ ರೀಚಾರ್ಜ್ನ ಆಫರ್ನಲ್ಲಿ ಹೆಚ್ಚುವರಿಯಾಗಿ 2ಜಿಬಿ ಡೇಟಾ ಲಭ್ಯವಾಗಲಿದೆ. ಇದರೊಂದಿಗೆ ವಾಯ್ಸ್ ಕಾಲ್ ಪ್ರಯೋಜನ ಹಾಗೂ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್ ಅನ್ನು ಮಾಡಬಹುದಾಗಿದೆ.
ವೊಡಫೋನ್ ಐಡಿಯಾದ 269 ರೂಪಾಯಿ ರೀಚಾರ್ಜ್ ಪ್ಲ್ಯಾನ್
ವೊಡಫೋನ್ ಐಡಿಯಾ ಟೆಲಿಕಾಂನ 269 ರೂ. ಪ್ರೀಪೇಯ್ಡ್ ಯೋಜನೆಯು ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಹಾಗೆಯೇ ಈ ಯೋಜನೆಯಲ್ಲಿ ಪ್ರತಿದಿನ ಗ್ರಾಹಕರು 1ಜಿಬಿ ಡೇಟಾ ಸೌಲಭ್ಯವನ್ನು ಪಡೆಯಬಹುದಾಗಿದೆ.
ಜೊತೆಗೆ ಈ ರೀಚಾರ್ಜ್ನ ಕೊಡುಗೆಯಲ್ಲಿ 2ಜಿಬಿ ಡೇಟಾವನ್ನು ಹೆಚ್ಚುವರಿಯಾಗಿ ಪಡೆಯಬಹುದಾಗಿದೆ. ಇನ್ನು ಈ ಯೋಜನೆ ಮೂಲಕ ಅನ್ಲಿಮಿಟೆಡ್ ವಾಯ್ಸ್ ಕಾಲ್ ಪ್ರಯೋಜನ ಹಾಗೂ ಪ್ರತಿದಿನ 100 ಎಸ್‌ಎಮ್‌ಎಸ್ ಸೌಲಭ್ಯಗಳು ದೊರೆಯಲಿವೆ.
ಇದನ್ನೂ ಓದಿ: ಲಗ್ಗೆಯಿಟ್ಟಿದೆ ಇನ್ಫಿನಿಕ್ಸ್ ಕಂಪೆನಿಯ ಹೊಸ ಮೊಬೈಲ್! ಫೀಚರ್ಸ್ ನೋಡಿದ್ರೆ ಗ್ಯಾರಂಟಿ ಖರೀದಿಸ್ತೀರಾ
ವೊಡಫೋನ್ ಐಡಿಯಾದ 299 ರೂಪಾಯಿ ರೀಚಾರ್ಜ್ ಪ್ಲ್ಯಾನ್
ವೊಡಫೋನ್ ಐಡಿಯಾ ಟೆಲಿಕಾಂನ 299 ರೂ. ಪ್ರೀಪೇಯ್ಡ್ ಯೋಜನೆಯು ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿರುತ್ತದೆ. ಹಾಗೆಯೇ ಈ ಯೋಜನೆಯಲ್ಲಿ ಪ್ರತಿದಿನ ಗ್ರಾಹಕರಿಗೆ 1.5 ಜಿಬಿ ಡೇಟಾ ಸೌಲಭ್ಯವನ್ನು ಪಡೆಯಬಹುದು. ಜೊತೆಗೆ ಈ ರೀಚಾರ್ಜ್ನ ಆಫರ್ ಮೂಲಕ 2ಜಿಬಿ ಡೇಟಾವನ್ನು ಹೆಚ್ಚುವರಿಯಾಗಿ ಪಡೆಯಬಹುದಾಗಿದೆ. ಇದರೊಂದಿಗೆ ಈ ಯೋಜನೆ ಮೂಲಕ ಅನ್ಲಿಮಿಟೆಡ್ ವಾಯ್ಸ್ ಕಾಲ್ ಮತ್ತು ಪ್ರತಿದಿನ 100 ಎಸ್‌ಎಮ್‌ಎಸ್ ಅನ್ನು ಉಚಿತವಾಗಿ ಮಾಡಬಹುದಾಗಿದೆ.
ಇದು ವೊಡಫೋನ್ ಐಡಿಯಾ ತನ್ನ ಗ್ರಾಹಕರಿಗಾಗಿ ಪರಿಚಯಿಸಿರುವ ಹೊಸ ರೀಚಾರ್ಜ್ ಪ್ಲ್ಯಾನ್ಗಳಾಗಿವೆ. ಈ ಯೋಜನೆಯ ಮೂಲಕ ವೊಡಫೋನ್ ಐಡಿಯಾದ ಗ್ರಾಹಕರು 2ಜಿಬಿ ವರೆಗೆ ಉಚಿತ ಡೇಟಾ ಯೋಜನೆಗಳನ್ನು ಪಡೆಯಬಹುದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ