Diwali Offers: OnePlus ಫೋನ್‌ಗಳು, ಸ್ಮಾರ್ಟ್‌ವಾಚ್‌, ಇಯರ್‌ಬಡ್ಸ್ ಮೇಲೆ ಭರ್ಜರಿ ಡಿಸ್ಕೌಂಟ್‌!

OnePlus: Great Indian Festival ಅವಧಿಯಲ್ಲಿ, 3 ಸಾವಿರ ರೂ ಡಿಸ್ಕೌಂಟ್‌ನ ಜೊತೆಯಲ್ಲಿ, Amazonನಲ್ಲಿ HDFCಯು 2 ಸಾವಿರ ಮತ್ತು 7ಸಾವಿರ ರೂ  ರಿಯಾಯಿತಿ ನೀಡುತ್ತಿದೆ. iOS ಡಿವೈಸ್ ಎಕ್ಸ್‌ಚೇಂಜ್ ಮಾಡಿದರೆ ಹೆಚ್ಚುವರಿಯಾಗಿ 3 ರೂ ಡಿಸ್ಕೌಂಟ್  ಸಿಗಲಿದೆ.

OnePlus phones

OnePlus phones

 • Share this:
  ದೀಪಾವಳಿ (Diwali 2021) ಎಂಬುದು ಬೆಳಕಿನ ಹಬ್ಬ, ಆದರೆ ಈ ಸಂದರ್ಭದಲ್ಲಿ ಬೆಲೆ ಇಳಿಕೆ, ರಿಯಾಯಿತಿ, ಕ್ಯಾಶ್​‌ಬ್ಯಾಕ್‌ಗಳನ್ನು (Cashback) ಒಳಗೊಂಡ ಸಾಕಷ್ಟು ಸೇಲ್‌ಗಳು ಹಾಗೂ ಡೀಲ್‌ಗಳು ಇರುತ್ತವೆಯಾದ್ದರಿಂದ ಹಲವರಿಗೆ ತಮ್ಮ ಹಳೆಯ ಹಾರ್ಡ್‌ವೇರ್‌ಗಳನ್ನು ಅಪ್‌ಗ್ರೇಡ್ ಮಾಡಿಕೊಳ್ಳಲು ಅಥವಾ ಹೊಸತವನ್ನು ಪ್ರಯತ್ನಿಸಲು ಇದು ಅದ್ಭುತ ಸಮಯವಾಗಿದೆ. ಸ್ನೇಹಿತರಿಗಾಗಲಿ ಅಥವಾ ಕುಟುಂಬಕ್ಕೆ ಆಗಲಿ, ಅಥವಾ ನಿಮ್ಮದೇ ಆದ ವಿಶ್‌-ಲಿಸ್ಟ್‌ಗೆ ಇನ್ನೇನನ್ನೋ ಸೇರಿಸುವುದೇ ಆಗಿರಲಿ, ನಿಮ್ಮ ಶಾಪಿಂಗ್ ಕಾರ್ಟ್‌ಗೆ ಶಿಫಾರಸು ಮಾಡಲಾದ ಗ್ಯಾಜೆಟ್‌ಗಳ ಇಣುಕು ನೋಟ ಇಲ್ಲಿದೆ.

  ಹೊಸ ಸ್ಮಾರ್ಟ್​ಫೋನ್​ ಖರೀದಿಸಿ!

  ಒಂದು ವೇಳೆ ನೀವು, ವಿಶೇಷವಾಗಿ ಇತ್ತೀಚಿನ ಫೀಚರ್‌ಗಳು ಮತ್ತು ಶಕ್ತಿಶಾಲಿ ಕ್ಯಾಮರಾ ಹೊಂದಿರುವ ಮೊಬೈಲ್ ಫೋನ್‌ಗಾಗಿ ಹುಡುಕುತ್ತಿದ್ದರೆ, ನಿಮಗೆಂದೇ ಹೇಳಿ ಮಾಡಿಸಿದ ಸ್ಮಾರ್ಟ್​ಫೋನ್​ ಎಂದರೆ OnePlus 9 ಸೀರೀಸ್‌ನ ಫೋನ್‌ಗಳು. ನಿಮ್ಮ ಬಜೆಟ್‌ಗೆ ಅನುಸಾರವಾಗಿ, 120 Hz AMOLED ಡಿಸ್‌ಪ್ಲೇಗಳು ಹಾಗೂ ಅದ್ಭುತ ಕ್ಯಾಮರಾಗಳಿರುವ ಫ್ಲ್ಯಾಗ್‌ಶಿಪ್ 9 ಸೀರೀಸ್‌ ಅನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು. ನಿರ್ದಿಷ್ಟವಾಗಿ, 9 Pro ಬಗ್ಗೆ ಹೇಳುವುದಾದರೆ ತನ್ನ 10-ಬಿಟ್ LTPO ಪ್ಯಾನೆಲ್, 1-ಬಿಲಿಯನ್ ಬಣ್ಣಗಳು ಮತ್ತು 1,300-ನಿಟ್ ಸ್ಕ್ರೀನ್‌ನಿಂದಾಗಿ ತನ್ನ ವಿಶೇಷತೆಯನ್ನು ಬಿಂಬಿಸುತ್ತದೆ. 9 ಮತ್ತು 9R ಒಂದೇ ರೀತಿಯ ಸಾಮರ್ಥ್ಯವಿರುವ ಡಿಸ್‌ಪ್ಲೇಗಳು ಅಲ್ಪ ವ್ಯತ್ಯಾಸಗಳನ್ನು ಹೊಂದಿವೆ ಎನಿಸಿದರೂ, FHD+ ರೆಸಲೂಷನ್ ಅನ್ನು ಒಳಗೊಂಡಿವೆ. ನಿಮ್ಮ ಬಜೆಟ್ ಮತ್ತು ಬಳಕೆಯನ್ನು ಆಧರಿಸಿ, 8/128 ಮತ್ತು 8/256 GB ವೇರಿಯಂಟ್‌ಗಳೊಂದಿಗೆ ಎಲ್ಲಾ ಫೋನ್‌ಗಳು ಸಹ ಸಾಕಷ್ಟು RAM ಮತ್ತು ಸಂಗ್ರಹಣೆಯನ್ನು ನೀಡುತ್ತವೆ.

  ಅಲ್ಲದೆ, Pro ಮತ್ತು R ಮಾದರಿಗಳು ವಿಶಿಷ್ಟ XPan ಎಮ್ಯುಲೇಷನ್‌ ಮೋಡ್ ಹೊಂದಿರುವ Hasselblad-ನಿರ್ಮಿತ ಕ್ಯಾಮರಾಗಳನ್ನು ಹೊಂದಿವೆ. ಮೂಲ ಮಾದರಿ 9Rಗೆ 37 ಸಾವಿರ ರೂ.ವಿದ್ದರೆ, 66 ಸಾವಿರಕ್ಕೆ Pro ಮಾರಾಟವಾಗುತ್ತಿದೆ. ಒಂದು ವೇಳೆ ನಿಮಗೆ ಫ್ಯಾನ್ಸಿ ರೀತಿಯದ್ದು ಬೇಡ ಎಂದಾದರೆ, Nord 2 5G ಮತ್ತು CE ಫೋನ್‌ಗಳು ಲಭ್ಯ ಇವೆ. ಈ ಎಲ್ಲಾ ಫೋನ್‌ಗಳು ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಮಾರಾಟಕ್ಕಿವೆ, ಇನ್ನೊಂದು ಮುಖ್ಯ ಸಂಗತಿ ಎಂದರೆ ನೀವು ಇವುಗಳನ್ನು ಖರೀದಿಸುವಾಗ ಪೂರ್ಣ ಮೊತ್ತವನ್ನು ಪಾವತಿಸುವ ಅಗತ್ಯ ಇರುವುದಿಲ್ಲ. ನಿಮ್ಮ ಬ್ಯಾಂಕ್ ಹಾಗೂ ನೀವು ಆಯ್ಕೆ ಮಾಡುವ ಸೇವೆಯನ್ನು ಆಧರಿಸಿ, ಲಭ್ಯವಿರುವ ಹಲವಾರು ಸುಲಭವಾದ ಫೈನಾನ್ಸ್ ಆಯ್ಕೆಗಳನ್ನು ಸಹ ನೀವು ಕಾಣಬಹುದು.

  ಇದಿಷ್ಟೇ ಅಲ್ಲದೆ, ಆಯ್ದ ಆಫ್‌ಲೈನ್ ಸ್ಟೋರ್‌ಗಳಲ್ಲಿ 9 Pro ಮೇಲೆ 4,000 ರೂ.ಗಳ ಫ್ಲಾಟ್ ರಿಯಾಯಿತಿ ಮತ್ತು 9 ಹಾಗೂ 9R ಮೇಲೆ 3 ಸಾವಿರ ರೂ  ರಿಯಾಯಿತಿ ದೊರೆಯುತ್ತದೆ. iOS ಡಿವೈಸ್ ಎಕ್ಸ್‌ಚೇಂಜ್ ಮಾಡಿದರೆ ನೀವು 4,000 ರೂ.ಗಳವರೆಗಿನ ರಿಯಾಯಿತಿಯನ್ನು ನಿರೀಕ್ಷಿಸಬಹುದು.

  Great Indian Festival ಅವಧಿಯಲ್ಲಿ, 3 ಸಾವಿರ ರೂ ಡಿಸ್ಕೌಂಟ್‌ನ ಜೊತೆಯಲ್ಲಿ, Amazonನಲ್ಲಿ HDFCಯು 2 ಸಾವಿರ ಮತ್ತು 7ಸಾವಿರ ರೂ  ರಿಯಾಯಿತಿ ನೀಡುತ್ತಿದೆ. iOS ಡಿವೈಸ್ ಎಕ್ಸ್‌ಚೇಂಜ್ ಮಾಡಿದರೆ ಹೆಚ್ಚುವರಿಯಾಗಿ 3 ರೂ ಡಿಸ್ಕೌಂಟ್  ಸಿಗಲಿದೆ.

  ವಿವಿಧ ಬ್ಯಾಂಕ್ ಕಾರ್ಡ್‌ಗಳು ಮತ್ತು ಆಫರ್‌ಗಳೊಂದಿಗೆ, Nord 2 5G ಮತ್ತು CE 5G ಫೋನ್‌ಗಳು ಆಫ್‌ಲೈನ್ ಮತ್ತು ಆನ್‌ಲೈನ್‌ಗಳೆರಡರಲ್ಲಿಯೂ ಸಹ 1,500ರವರೆಗೆ ಇಂತಹುದೇ ಡಿಸ್ಕೌಂಟ್‌ಗಳನ್ನು ಹೊಂದಿವೆ.  ಬೃಹತ್ TV ಖರೀದಿಸಲು ಇದೇ ಸರಿಯಾದ ಸಮಯ

  ನೀವು ಒಂದು ವೇಳೆ ಪ್ರೀಮಿಯರ್ ಟಿವಿ ಖರೀದಿಸಲು ಬಯಸಿದ್ದರೆ, 50 ಇಂಚುಗಳಿಂದ 65 ಇಂಚುಗಳವರೆಗಿನ ಗಾತ್ರದ ಶ್ರೇಣಿಯ 4K UHD ಸ್ಕ್ರೀನ್‌ಗಳನ್ನು ಹೊಂದಿರುವ U1S ಅನ್ನು OnePlus ನಿಮಗಾಗಿ ತಂದಿದೆ. ಅಂದ ಹಾಗೆಯೇ ಇವೆಲ್ಲವೂ ಸಹ HDR10 ಪ್ರಮಾಣಿತ ಟಿವಿಗಳಾಗಿವೆ. ನೀವು ಅತ್ಯುತ್ತಮ ಪಿಕ್ಚರ್ ಗುಣಮಟ್ಟ ಮತ್ತು ಅದ್ಭುತ ವಿನ್ಯಾಸದ ಜೊತೆಗೆ OxygenPlay 2 ಬೆಂಬಲವನ್ನೂ ಪಡೆದುಕೊಳ್ಳುವಿರಿ. ಈ ಟಿವಿಗಳ ದರವು 44 ಸಾವಿರದಿಂದ ಇಂದ 67 ಸಾವಿರದವರೆಗೆ ಇದೆ.

  93% DCI-P3 ಡಿಸ್‌ಪ್ಲೇಗಳು, 64-ಬಿಟ್ ಪ್ರೊಸೆಸರ್‌ಗಳು, Android TV, OnePlus Connectಗೆ ಬೆಂಬಲ ಮತ್ತು ಇನ್ನಷ್ಟು ವೈಶಿಷ್ಟ್ಯಗಳನ್ನು ಹೊಂದಿರುವ Y ಸೀರೀಸ್ ಲೈನ್-ಅಪ್ ಹೆಚ್ಚು ಬಜೆಟ್-ಫ್ರೆಂಡ್ಲಿ ಆಯ್ಕೆ ಆಗಿದೆ.

  ನೀವು ಎಲ್ಲಿ ಖರೀದಿಸುವಿರಿ ಎಂಬುದನ್ನು ಆಧರಿಸಿ, ಆಯ್ದ ಸ್ಟೋರ್‌ಗಳಲ್ಲಿ ನೀವು 4,000 ರೂ.ಗಳವರೆಗೂ ರಿಯಾಯಿತಿ, 2,000 ರೂ.ಗಳ ತ್ವರಿತ ಬ್ಯಾಂಕ್ ಡಿಸ್ಕೌಂಟ್ ಮತ್ತು U1S ಖರೀದಿಯ ಮೇಲೆ 5k ವರೆಗಿನ ರಿಯಾಯಿತಿಯನ್ನು ಪಡೆಯಬಹುದು. Flipkart ಅಥವಾ OnePlus app ಮೂಲಕ ಮಾಡುವ ಖರೀದಿಗಳಿಗೂ ಸಹ ಬ್ಯಾಂಕ್‌ಗಳು ದೊಡ್ಡ ಡಿಸ್ಕೌಂಟ್‌ಗಳನ್ನು ನೀಡುತ್ತವೆ. ಸರಳ ಫೈನಾನ್ಸ್ ಮತ್ತು ನೋ-ಕಾಸ್ಟ್ EMI ಆಯ್ಕೆಗಳೂ ಸಹ ಲಭ್ಯ ಇವೆ.  ಆಡಿಯೊ ಉತ್ಪನ್ನಗಳ ಮೇಲೆ ಭರ್ಜರಿ ಆಫರ್

  ಇಲ್ಲಿರುವ ಸ್ಪಷ್ಟವಾದ ಆಯ್ಕೆ ಎಂದರೆ OnePlus Buds Pro. ಇದು 10k ದರದಲ್ಲಿ ದೊರೆಯುತ್ತಿರುವ ಪ್ರೀಮಿಯಂ ಸೆಟ್ ಆಗಿದ್ದು, ಉತ್ತಮ ಗುಣಮಟ್ಟದ ಶಬ್ದ, ಹೆವಿ ಬ್ಯಾಸ್, ANC ಮತ್ತು ಅತ್ಯುತ್ತಮ ಬ್ಯಾಟರಿ ಬಾಳಿಕೆಯನ್ನು ನೀಡುತ್ತದೆ. ಇದರ ಸೊಗಸಾದ ವಿನ್ಯಾಸದಿಂದಾಗಿ ಇದು ತನ್ನ ದರಕ್ಕಿಂತಲೂ ಹೆಚ್ಚಿನ ದರವನ್ನು ಹೊಂದಿರುವಂತೆ ಕಾಣುತ್ತದೆ. ಹೆಚ್ಚು ಬಜೆಟ್-ಫ್ರೆಂಡ್ಲಿ ಆಯ್ಕೆಗಳು OnePlus Buds ಮತ್ತು Buds Z ಅನ್ನು ಒಳಗೊಂಡಿವೆ.

  ಇದನ್ನು ಓದಿ: Whatsapp: ವಾಟ್ಸ್​ಆ್ಯಪ್​ನಲ್ಲಿ ಅಶ್ಲೀಲ ವಿಡಿಯೋ ಕಳುಹಿಸುತ್ತೀರಾ?: ಹಾಗಿದ್ರೆ ತಪ್ಪದೇ ಈ ಸ್ಟೋರಿ ಓದಿ

  ICICI ಮತ್ತು Kotak ಬ್ಯಾಂಕ್‌ಗಳ ಮೂಲಕ 1000 ರೂ.ಗಳ ಡಿಸ್ಕೌಂಟ್‌ಗಳು ಲಭ್ಯವಿದ್ದು, Amazonನಲ್ಲಿ HDFC ಮೂಲಕ 10% ಡಿಸ್ಕೌಂಟ್ ಇದೆ. Buds ಖರೀದಿಗೆ 991 ರೂ. ಮತ್ತು Bullets Wireless Z ಖರೀದಿಯ ಮೇಲೆ 200 ರೂ.ಗಳ ರಿಯಾಯಿತಿಯನ್ನೂ ಸಹ ನೀವು ಪಡೆಯುವಿರಿ. ಈ ಡೀಲ್‌ಗಳಲ್ಲಿ ಬಹುತೇಕ ಡೀಲ್‌ಗಳು ನವೆಂಬರ್‌ವರೆಗೂ ಚಾಲ್ತಿಯಲ್ಲಿರುತ್ತವೆ, ಹಾಗಾಗಿ ಖರೀದಿಸುವ ನಿರ್ಧಾರ ಕೈಗೊಳ್ಳಲು ಸಾಕಷ್ಟು ಸಮಯವಿದ್ದು, ಖರೀದಿಸಿದಾಗ ಈ ಆಫರ್‌ಗಳನ್ನು ಆನಂದಿಸಿ.

  ಸಂಗ್ರಹವನ್ನು ಪೂರ್ಣಗೊಳಿಸಲು ಜೊತೆಗಿರಲಿ ಒಂದು ಸ್ಮಾರ್ಟ್ ವಾಚ್ ಅಥವಾ ಬ್ಯಾಂಡ್

  ಉತ್ತಮವಾದ ಫೋನ್ ಅನ್ನು ಅದ್ಭುತ ವಾಚ್‌ನೊಂದಿಗೆ ಜೋಡಣೆ ಮಾಡುವುದು ನಿಮ್ಮ ಇಕೊಸಿಸ್ಟಂ ಅನ್ನು ಪೂರ್ಣಗೊಳಿಸಲು ಸಹಾಯ ಮಾಡುತ್ತದೆ ಹಾಗೂ ನಿಮಗೆ ಅತ್ಯುತ್ತಮವಾದ ಅನುಭವವನ್ನು ನೀಡುತ್ತದೆ. ಥೀಮ್‌ ಅನ್ನು ಗಮನದಲ್ಲಿರಿಸಿಕೊಂಡು, ಅದೇ ರೀತಿಯ ಥೀಮ್‌ನೊಂದಿಗೆ OnePlus Watch ಮತ್ತು Bandನೊಂದಿಗೆ ನಾವು ಪ್ರಾರಂಭಿಸಿದ್ದು, ಅವುಗಳ ಬೆಲೆ ಕ್ರಮವಾಗಿ 15k ಮತ್ತು 2k ಗಿಂತ ಕಡಿಮೆ ಇದೆ.
  ಈ ವಾಚ್, 326 ppi ಹೊಂದಿರುವ 1.39-ಇಂಚಿನ AMOLED, 100+ ಫಿಟ್‌ನೆಸ್ ಮೋಡ್‌ಗಳು ಮತ್ತು IP68 ವಾಟರ್-ರೆಸಿಸ್ಟನ್ಸ್ ಸಾಮರ್ಥ್ಯ ಹೊಂದಿದೆ. ಅದ್ಭುತವಾಗಿ ವಿನ್ಯಾಸಗೊಳಿಸಲಾಗಿದ್ದು, ಬ್ಯುಸಿನೆಸ್ ಮೀಟಿಂಗ್ ಆಗಿರಲಿ ಅಥವಾ ಈಜು ಕೊಳವಾಗಿರಲಿ, ಇದು ಅನಗತ್ಯವಾದದ್ದು ಎಂದು ಭಾವಿಸಲು ಸಾಧ್ಯವಾಗುವುದಿಲ್ಲ.

  ಇದನ್ನು ಓದಿ: SBI SMS scam: ಆನ್​ಲೈನ್ ವಂಚನೆಯಿಂದ ರಕ್ಷಿಸಿಕೊಳ್ಳಲು ಈ ಕ್ರಮಗಳನ್ನು ಅನುಸರಿಸಿ

  ಬ್ಯಾಂಡ್, ಕಡಿಮೆ ದರವನ್ನು ಹೊಂದಿದೆ ಮತ್ತು ಫಿಟ್‌ನೆಸ್ ಉತ್ಸಾಹಿಗಳಿಗೆ ಎಂದು ಅದನ್ನು ವಿನ್ಯಾಸಗೊಳಿಸಲಾಗಿದೆ. ಎಕ್ಸರ್ಸೈಸ್ ಮೋಡ್‌ಗಳ ಜೊತೆಜೊತೆಗೆ ಅಂತರ್ಗತಗೊಳಿಸಲಾದ SpO2 ಮೀಟರ್ ಮತ್ತು ಹಾರ್ಟ್-ರೇಟ್ ಮೀಟರ್ ಅನ್ನು ಇದು ಒಳಗೊಂಡಿದೆ. Kotak ಮತ್ತು ICICI ಬ್ಯಾಂಕ್ Watch ಮೇಲೆ 1k ರಿಯಾಯಿತಿಯನ್ನೂ ಮತ್ತು Amazonನಲ್ಲಿ 10% ಡಿಸ್ಕೌಂಟ್ ಅನ್ನು ನೀಡುತ್ತಿವೆ. ನೀವು ಎಲ್ಲಿ ಖರೀದಿಸುವಿರಿ ಎಂಬುದನ್ನು ಆಧರಿಸಿ ಬ್ಯಾಂಡ್‌ಗೆ 600 ರೂ.ಗಳ ರಿಯಾಯಿತಿ ದೊರೆಯಲಿದೆ.

  ಮೇಲೆ ತಿಳಿಸಲಾದ ಬಹುತೇಕ ಸೇಲ್‌ಗಳು ಮತ್ತು ಆಫರ್‌ಗಳು ನವೆಂಬರ್‌ವರೆಗೂ ಮಾನ್ಯವಾಗಿರುತ್ತವೆ, ಆದರೆ ಇನ್ನಷ್ಟು ಆಕರ್ಷಕ ಡೀಲ್‌ಗಳು ಮತ್ತು ಅಪ್‌-ಟು-ಡೇಟ್ ಮಾಹಿತಿಗಾಗಿ ಇ-ಕಾಮರ್ಸ್ ಸೈಟ್‌ಗಳಾದ Flipkart ಮತ್ತು Amazon, ಜೊತೆಗೆ OnePlus.in ಹಾಗೂ app ಅನ್ನು ಗಮನಿಸುತ್ತಿರಿ.
  Published by:Harshith AS
  First published: