• ಹೋಂ
  • »
  • ನ್ಯೂಸ್
  • »
  • ಮೊಬೈಲ್- ಟೆಕ್
  • »
  • Oneplus Nord Smartwatch: ಒನ್​​ಪ್ಲಸ್​ ಕಂಪೆನಿಯ ಈ ಸ್ಮಾರ್ಟ್​​ವಾಚ್ ಮೇಲೆ ಭರ್ಜರಿ ರಿಯಾಯಿತಿ! ಏನೆಲ್ಲಾ ಆಫರ್ಸ್​ ಲಭ್ಯವಿದೆ?

Oneplus Nord Smartwatch: ಒನ್​​ಪ್ಲಸ್​ ಕಂಪೆನಿಯ ಈ ಸ್ಮಾರ್ಟ್​​ವಾಚ್ ಮೇಲೆ ಭರ್ಜರಿ ರಿಯಾಯಿತಿ! ಏನೆಲ್ಲಾ ಆಫರ್ಸ್​ ಲಭ್ಯವಿದೆ?

ಒನ್​ಪ್ಲಸ್​ ನಾರ್ಡ್​ ಸ್ಮಾರ್ಟ್​ವಾಚ್​

ಒನ್​ಪ್ಲಸ್​ ನಾರ್ಡ್​ ಸ್ಮಾರ್ಟ್​ವಾಚ್​

ಒನ್​ಪ್ಲಸ್​ ಕಂಪೆನಿಯಿಂದ ಇತ್ತೀಚೆಗೆ ಬಿಡುಗಡೆಯಾದ ಒನ್​ಪ್ಲಸ್​ ನಾರ್ಡ್​ ಸ್ಮಾರ್ಟ್​ವಾಚ್​ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಲ್ಲಿತ್ತು. ಈ ಮಧ್ಯೆ ಗ್ರಾಹಕರಿಗೆ ಇನ್ನಷ್ಟು ಅನುಕೂಲವಾಗುವಂತೆ ಈ ಸ್ಮಾರ್ಟ್​​ವಾಚ್​ನ ಬೆಲೆಯನ್ನು ಕಡಿಮೆ ಮಾಡಿದೆ ಹಾಗೂ ಇತರೆ ರಿಯಾಯಿತಿಗಳು ಸಹ ಲಭ್ಯವಿದೆ.

ಮುಂದೆ ಓದಿ ...
  • Share this:

    ಸ್ಮಾರ್ಟ್​​ಫೋನ್​ಗಳು (Smartphone) ಎಂದಾಗ ಜನಪ್ರಿಯಕಂಪೆನಿಗಳಲ್ಲಿ ಮೊದಲು ನೆನಪಾಗೋದೇ ಒನ್​​ಪ್ಲಸ್​ ಎಂಬ ಹೆಸರು. ಒನ್​​ಪ್ಲಸ್​ ಕಂಪೆನಿ (Oneplus Company) ಸ್ಮಾರ್ಟ್​​ಫೋನ್​ ವಲಯದಲ್ಲಿ ಪ್ರೀಮಿಯಂ ಸ್ಮಾರ್ಟ್​​ಫೋನ್​ಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಮೂಲಕ ಭಾರೀ ಮುಂಚೂಣಿಯಲ್ಲಿತ್ತು. ಅದೇ ರೀತಿ ಈ ಕಂಪೆನಿ ಕೆಲವು ಸಮಯಗಳ ನಂತರ ತನ್ನ ಬ್ರಾಂಡ್​ನ ಅಡಿಯಲ್ಲಿ ಸ್ಮಾರ್ಟ್​​ವಾಚ್​​ಗಳನ್ನು ಸಹ ಮಾರಾಟ ಮಾಡಲು ಆರಂಭಿಸಿದೆ. ಒನ್​ಪ್ಲಸ್​ ಕಂಪೆನಿಯ ಸಾಧನಗಳ ಬೆಲೆ ದುಬಾರಿಯಾದರೂ ಇದರ ಕಾರ್ಯವೈಖರಿ, ವಿನ್ಯಾಸ, ಬ್ಯಾಟರಿ ಬ್ಯಾಕಪ್ ಇವೆಲ್ಲವೂ ಉತ್ತಮ ಗುಣಮಟ್ಟದ್ದಾಗಿರುತ್ತದೆ. ಇದೀಗ ಮಾರುಕಟ್ಟೆಯಲ್ಲಿ ದುಬಾರಿ ಬೆಲೆಯಲ್ಲಿದ್ದ ಒನ್​ಪ್ಲಸ್​ ಸ್ಮಾರ್ಟ್​​ವಾಚ್ (Oneplus Smartwatch)​ ಅನ್ನು ಭಾರೀ ಅಗ್ಗದಲ್ಲಿ ಮಾರಾಟ ಮಾಡುತ್ತಿದೆ.


    ಒನ್​ಪ್ಲಸ್​ ಕಂಪೆನಿಯಿಂದ ಇತ್ತೀಚೆಗೆ ಬಿಡುಗಡೆಯಾದ ಒನ್​ಪ್ಲಸ್​ ನಾರ್ಡ್​ ಸ್ಮಾರ್ಟ್​ವಾಚ್​ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಲ್ಲಿತ್ತು. ಈ ಮಧ್ಯೆ ಗ್ರಾಹಕರಿಗೆ ಇನ್ನಷ್ಟು ಅನುಕೂಲವಾಗುವಂತೆ ಈ ಸ್ಮಾರ್ಟ್​​ವಾಚ್​ನ ಬೆಲೆಯನ್ನು ಕಡಿಮೆ ಮಾಡಿದೆ ಹಾಗೂ ಇತರೆ ರಿಯಾಯಿತಿಗಳು ಸಹ ಲಭ್ಯವಿದೆ.


    ಒನ್​​ಪ್ಲಸ್​ ನಾರ್ಡ್​ ಸ್ಮಾರ್ಟ್​​ವಾಚ್ ಬೆಲೆ ಇಳಿಕೆ


    ಒನ್​​ಪ್ಲಸ್​ ನಾರ್ಡ್​ ಸ್ಮಾರ್ಟ್​​ವಾಚ್​​ ಅನ್ನು ಕಳೆದ 2022 ರ ಅಕ್ಟೋಬರ್​ನಲ್ಲಿ ಮಾರುಕಟ್ಟೆಗೆ ಅನಾವರಣ ಮಾಡಲಾಗಿದೆ. ಆ ಸಂದರ್ಭದಲ್ಲಿ ಈ ಸ್ಮಾರ್ಟ್​​ವಾಚ್​ನ ಆರಂಭಿಕ ಬೆಲೆ 4,999 ರೂಪಾಯಿ ನಿಗದಿ ಮಾಡಲಾಗಿತ್ತು. ಇಷ್ಟು ಬೆಲೆಯಿದ್ದರೂ ಈ ಸ್ಮಾರ್ಟ್​ವಾಚ್​ಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಿತ್ತು.




    ಇದರ ನಡುವೆ ಈಗ ಕಂಪೆನಿ 4,999 ರೂಪಾಯಿಗಳ ಸ್ಮಾರ್ಟ್​​ವಾಚ್​ ಅನ್ನು 4,499 ರೂಪಾಯಿಗಳ ಬೆಲೆಯೊಂದಿಗೆ ಮಾರಾಟ ಮಾಡುತ್ತಿದೆ. ಅಂದರೆ ಒನ್​ಪ್ಲಸ್​ನ ಈ ಸ್ಮಾರ್ಟ್​​ವಾಚ್​ ಮೇಲೆ 500 ರೂಪಾಯಿಗಳಷ್ಟು ದರವನ್ನು ಇಳಿಕೆ ಮಾಡಿದೆ.


    ಬ್ಯಾಂಕ್​ ಆಫರ್ಸ್​ ಸಹ ಲಭ್ಯವಿದೆ


    ಇನ್ನು ಈ ಒನ್​ಪ್ಲಸ್​ ನಾರ್ಡ್​ ಸ್ಮಾರ್ಟ್​​ವಾಚ್​ ಅನ್ನು ಬ್ಯಾಂಕ್​ ಆಫರ್​ ಮೂಲಕ ಇನ್ನಷ್ಟು ರಿಯಾಯಿತಿ ದರದಲ್ಲಿ ಖರೀದಿ ಮಾಡಬಹುದು. ನೀವು ಒಂದು ವೇಳೆ ಐಸಿಐಸಿಐ ಬ್ಯಾಂಕ್​ ಕ್ರೆಡಿಟ್​ ಕಾರ್ಡ್​ ಮೂಲಕ ಖರೀದಿ ಮಾಡುವುದಾದರೆ ಈ ಸ್ಮಾರ್ಟ್​​ವಾಚ್​​ ಮೇಲೆ 500 ರೂಪಾಯಿಗಳಷ್ಟು ಆಫರ್ಸ್​ ಲಭ್ಯವಿದೆ. ಹಾಗೆಯೇ ಮೊಬಿಕ್ವಿಕ್​ ವ್ಯಾಲೆಟ್​ ಮೂಲಕ ಖರೀದಿ ಮಾಡುವ ಪ್ಲ್ಯಾನ್​ನಲ್ಲಿದ್ದವರಿಗೆ  ಸಹ 500 ರೂಪಾಯಿಗಳಷ್ಟು ರಿಯಾಯಿತಿಯನ್ನು ಪಡೆಯಬಹುದು. ಈ ಎಲ್ಲಾ ಆಫರ್ಸ್​ ಮೂಲಕ ಈ ಒನ್​​ಪ್ಲಸ್​ ನಾರ್ಡ್​ ಸ್ಮಾರ್ಟ್​​ವಾಚ್ ಅನ್ನು ಕೇವಲ 3,999 ರೂಪಾಯಿಗೆ ಖರೀದಿ ಮಾಡಬಹುದಾಗಿದೆ.


    ಒನ್​​ಪ್ಲಸ್​ ನಾರ್ಡ್​ ಸ್ಮಾರ್ಟ್​​ವಾಚ್​ ಫೀಚರ್ಸ್​


    ಇನ್ನು ಒನ್‌ಪ್ಲಸ್‌ ನಾರ್ಡ್‌ ಸ್ಮಾರ್ಟ್‌ವಾಚ್‌ 1.78 ಇಂಚಿನ ಅಮೋಲ್ಡ್​ ಡಿಸ್‌ಪ್ಲೇ ಹೊಂದಿದ್ದು, ಈ ಡಿಸ್‌ಪ್ಲೇ 60Hz ರಿಫ್ರೆಶ್ ರೇಟ್ ನೀಡಲಿದೆ. ಜೊತೆಗೆ ಈ ಡಿಸ್​ಪ್ಲೇಯು 500 ನಿಟ್ಸ್​ ಬ್ರೈಟ್‌ನೆಸ್‌ ಆಯ್ಕೆಯನ್ನು ಹೊಂದಿದೆ. ಇದರಿಂದ ಬಳಕೆದಾರರು ಯಾವುದೇ ಸಮಯದಲ್ಲೂ ಇದನ್ನು ಬಳಕೆ ಮಾಡಬಹುದಾಗಿದೆ.


    ಒನ್​ಪ್ಲಸ್​ ನಾರ್ಡ್​ ಸ್ಮಾರ್ಟ್​ವಾಚ್​


    ಸ್ಫೋರ್ಟ್ಸ್​​ ಮೋಡ್​ ಫೀಚರ್​


    ಈ ಸ್ಮಾರ್ಟ್​ಫೋನ್ ವಿಶೆಷವಾಗಿ 105 ಫಿಟ್‌ನೆಸ್ ಮೋಡ್‌ ಆಯ್ಕೆಯನ್ನು ಪಡೆದುಕೊಂಡಿದೆ. ಜೊತೆಗೆ ಹೃದಯ ಬಡಿತ, ಬಿಪಿ, ರಕ್ತದ ಆಮ್ಲಜನಕದ ಮಟ್ಟ ಮತ್ತು ಇನ್ನೂ ಹೆಚ್ಚಿನ ಆರೋಗ್ಯ ಸಂಬಂಧಿ ವಿಷಯಗಳನ್ನು ಟ್ರಾಕ್​ ಮಾಡುವ ಮೂಲಕ ಬಳಕೆದಾರರಿಗೆ ಮಾನಿಟರ್ ಮಾಡುತ್ತದೆ. ಬ್ಲೂಟೂತ್ ಆವೃತ್ತಿ 5.2 ಹೊಂದಿರುವ ಈ ವಾಚ್‌, ಆಂಡ್ರಾಯ್ಡ್‌ 6.0 ಹಾಗೂ ಐಓಎಸ್ 11 ಮತ್ತು ಇನ್ನೂ ಹೆಚ್ಚಿನ ಓಎಸ್‌ ಡಿವೈಸ್‌ಗಳಿಗೆ ಹೊಂದಿಕೆಯಾಗುತ್ತದೆ.


    ಇದನ್ನೂ ಓದಿ: ತಂತ್ರಜ್ಞಾನದ ಅಭಿವೃದ್ಧಿಗೆ ಬಂದಿದೆ ಚಾಟ್​​ಜಿಪಿಟಿ! ಹೀಗಂದ್ರೆ ಏನು ಗೊತ್ತಾ?


    ಬ್ಯಾಟರಿ ಫೀಚರ್ಸ್​


    ಇನ್ನು ಒನ್​ಪ್ಲಸ್​ ನಾರ್ಡ್​ ಸ್ಮಾರ್ಟ್​​ವಾಚ್​ನ ಫೀಚರ್ಸ್​​ ಬಗ್ಗೆ ಹೇಳುವುದಾರೆ, ಇನ್ನು ಈ ಸ್ಮಾರ್ಟ್​​ವಾಚ್ ಅನ್ನು ಒಮ್ಮೆ ಫುಲ್​ ಚಾರ್ಜ್​ ಮಾಡಿದ್ರೆ 10 ದಿನಗಳ ಕಾಲ ನಿರಂತರವಾಗಿ ಬಳಕೆ ಮಾಡಬಹುದಾಗಿದೆ. ಹಾಗೆಯೇ 30 ದಿನಗಳ ಸ್ಟ್ಯಾಂಡ್‌ಬೈ ಮೋಡ್​ ಅನ್ನು ಸಹ ಹೊಂದಿದೆ. ಇದರೊಂದಿಗೆ ಈ ಡಿವೈಸ್‌ ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP68 ನಿಂದ ವಿನ್ಯಾಸಗೊಳಿಸಲಾಗಿದೆ.

    Published by:Prajwal B
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು