Mobile OS: ಭಾರತೀಯ ಓಎಸ್ ರಚಿಸಲು ಮೋದಿ ಸರ್ಕಾರ ಪ್ಲಾನ್​; Google, Apple iOSಗೆ ಪೈಪೋಟಿ ನೀಡುತ್ತಾ?

ಭಾರತದಲ್ಲಿ ವಿದೇಶಿ ಬ್ಯಾಂಕುಗಳ ಸಂಖ್ಯೆಗಳ ಹೆಚ್ಚುತ್ತಿದೆ. ಇದೇ ಮೊದಲ ಬಾರಿಗೆ ಷೇರು ಮಾರುಕಟ್ಟೆ ಹಾಗೂ ಸಾರ್ವಜನಿಕ ಮಾರುಕಟ್ಟೆಗಳು ತಂತ್ರಜ್ಞಾನ ಸ್ಟಾರ್ಟಪ್‌ಗಳು ಹಾಗೂ ಕಂಪನಿಗಳ ಮೇಲೆ ಹೂಡಿಕೆ ಮಾಡುತ್ತಿವೆ.

ಸಾಂದರ್ಭೀಕ ಚಿತ್ರ

ಸಾಂದರ್ಭೀಕ ಚಿತ್ರ

  • Share this:
ಗೂಗಲ್‌ನ ಆ್ಯಂಡ್ರಾಯ್ಡ್ (Google's Android) ಹಾಗೂ ಆ್ಯಪಲ್‌ನ ಐಓಎಸ್‌ಗೆ ಪರ್ಯಾಯ ವಿಧಾನವಾಗಿ ಉದ್ಯಮ ವ್ಯವಸ್ಥೆಗೆ ಅನುಕೂಲಕರವಾಗಿರುವ ರೀತಿಯಲ್ಲಿ ಸ್ಥಳೀಯ ಆಪರೇಟಿಂಗ್ ಸಿಸ್ಟಮ್ ರಚಿಸಲು ಸರಕಾರ ಯೋಜಿಸುತ್ತಿದೆ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ (Union Minister of State for Electronics and IT) ಮತ್ತು ಐಟಿ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ (Rajeev Chandrasekhar) ತಿಳಿಸಿದ್ದಾರೆ. ಪ್ರಸ್ತುತ ಎರಡು ಓಎಸ್‌ಗಳಾದ ಗೂಗಲ್‌ನ ಆ್ಯಂಡ್ರಾಯ್ಡ್ ಹಾಗೂ ಆ್ಯಪಲ್‌ನ ಐಓಎಸ್‌ ಮೊಬೈಲ್ ಫೋನ್‌ಗಳ ಮೇಲೆ ಹೆಚ್ಚಿನ ಪ್ರಾಬಲ್ಯ ಹೊಂದಿದ್ದು, ಹಾರ್ಡ್‌ವೇರ್ (Hardware Network) ಜಾಲವನ್ನು ಚಾಲನೆ ಮಾಡುತ್ತಿವೆ ಎಂಬುದಾಗಿ ಸಚಿವರು PTI ಗೆ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಸ್ಥಳೀಯ ಓಎಸ್ ನಿರ್ಮಾಣ:

ಇದಕ್ಕೆ ಸ್ಪರ್ಧೆಯನ್ನೊಡ್ಡುವ ಮೂರನೆಯ ಪ್ರಬಲ ಓಎಸ್ ಇಲ್ಲ. ಹಾಗಾಗಿ ಹೊಸ ಹ್ಯಾಂಡ್‌ಸೆಟ್ ಆಪರೇಟಿಂಗ್ ಸಿಸ್ಟಮ್ ಅನ್ನು ರಚಿಸಲು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ಹಾಗೂ ಭಾರತ ಸರಕಾರ ಅಪಾರ ಆಸಕ್ತಿಯನ್ನಿಟ್ಟುಕೊಂಡಿದೆ. ಈ ಕುರಿತಾಗಿ ನಾವು ಸಂಬಂಧಪಟ್ಟವರೊಂದಿಗೆ ಸಂವಹನ ನಡೆಸುತ್ತಿದ್ದು ಅದಕ್ಕಾಗಿ ನೀತಿ, ನಿಯಮವನ್ನು ನಿರ್ಮಿಸುವಲ್ಲಿ ಕಾರ್ಯತತ್ಪರರಾಗಿದ್ದೇವೆ ಎಂದು ಚಂದ್ರಶೇಖರ್ ತಿಳಿಸಿದ್ದಾರೆ.

ಆಪರೇಟಿಂಗ್ ಸಿಸ್ಟಮ್ ಹೇಗೆ ಕೆಲಸ ಮಾಡುತ್ತದೆ?

ಆಪರೇಟಿಂಗ್ ಸಿಸ್ಟಮ್ ಎಂಬುದು ಯಾವುದೇ ಕಂಪ್ಯೂಟರ್ ಹಾಗೂ ಮೊಬೈಲ್ ಡಿವೈಸ್‌ನ ಮುಖ್ಯ ಸಾಫ್ಟ್‌ವೇರ್ ಎಂದೆನಿಸಿದ್ದು ಅದು ಓಎಸ್‌ನ ಪರಿಣಾಮಕಾರಿ ಕಾರ್ಯನಿರ್ವಹಣೆಗಾಗಿ ಸಂಪೂರ್ಣ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಸಿಸ್ಟಮ್‌ ಅನ್ನು ನಿರ್ಮಿಸುತ್ತದೆ.

 ಇದನ್ನೂ ಓದಿ: Meta, Googleಗೆ ತರಾಟೆ ತೆಗೆದುಕೊಂಡ ಆಸ್ಟ್ರೇಲಿಯಾ ಸರ್ಕಾರ; ಯಾವ ಕಾರಣಕ್ಕೆ ಗೊತ್ತಾ?

ಐಓಎಸ್ ಹಾಗೂ ಆ್ಯಂಡ್ರಾಯ್ಡ್‌ಗೆ ಪರ್ಯಾಯ ವಿಧಾನವನ್ನು ನಿರ್ಮಿಸುವ ಕೌಶಲ್ಯಕ್ಕೆ ಹೆಚ್ಚಿನ ಮನ್ನಣೆ ನೀಡಲು ಆಸಕ್ತಿ ಹೊಂದಿದ್ದು ಇದರಿಂದ ಭಾರತೀಯ ಬ್ರ್ಯಾಂಡ್ ಅನ್ನು ನಿರ್ಮಿಸಲು ಸಾಧ್ಯವಾಗುತ್ತದೆ ಎಂಬುದು ಚಂದ್ರಶೇಖರ್ ಅಭಿಪ್ರಾಯವಾಗಿದೆ. ಗುರಿಗಳು ಮತ್ತು ಮಹತ್ವಾಕಾಂಕ್ಷೆಗಳನ್ನು ಮರುಹೊಂದಿಸುವ ಸಂದರ್ಭದಲ್ಲಿ ಹೆಚ್ಚಿನ ನೀತಿಗಳು ಮತ್ತು ನೀತಿ ಪರಿಕರಗಳನ್ನು ಮರುಪರಿಶೀಲಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.

ವಿಷನ್ ಡಾಕ್ಯುಮೆಂಟ್‌

ಈ ನಿಟ್ಟಿನಲ್ಲಿ ಸ್ಪಷ್ಟ ಗುರಿಗಳನ್ನು ಹೊಂದಿರುವುದು ಅಗತ್ಯವಾಗಿದ್ದು ನಾವು ಏನನ್ನು ಸಾಧಿಸಬೇಕು ಎನ್ನುವುದರ ಮೇಲೆ ನಿಗಾವಹಿಸಬೇಕು ಆಗ ಮಾತ್ರವೇ ಎಲ್ಲಾ ನೀತಿ ಹಾಗೂ ಕ್ರಮ ಅದಕ್ಕೆ ಹೊಂದಿಕೆಯಾಗುತ್ತದೆ ಎಂಬುದು ಸಚಿವರ ಮಾತಾಗಿದೆ. ಸಂವಹನ ಹಾಗೂ ಐಟಿ ಸಚಿವರಾದ ಅಶ್ವಿನಿ ವೈಷ್ಣವ್ ಅವರೊಂದಿಗೆ ಆ್ಯಪಲ್, ಲಾವಾ, ಫಾಕ್ಸ್‌ಕಾನ್, ಡಿಕ್ಸನ್ ಇತ್ಯಾದಿ ಸಂಸ್ಥೆಗಳನ್ನು ಒಳಗೊಂಡಿರುವ ಉದ್ಯಮ ಸಂಸ್ಥೆ ಐಸಿಇಎ (ICEA) ಸಿದ್ಧಪಡಿಸಿದ ಎಲೆಕ್ಟ್ರಾನಿಕ್ಸ್ ಮ್ಯಾನುಫ್ಯಾಕ್ಚರಿಂಗ್ ಕುರಿತ ವಿಷನ್ ಡಾಕ್ಯುಮೆಂಟ್‌ನ ಎರಡನೇ ಸಂಪುಟವನ್ನು ಬಿಡುಗಡೆ ಮಾಡಿದರು.

ಎಲೆಕ್ಟ್ರಾನಿಕ್ಸ್ ಉತ್ಪಾದನೆ

ಪ್ರಸ್ತುತ USD 75 ಬಿಲಿಯನ್‌ನಿಂದ 2026ರ ವೇಳೆಗೆ ದೇಶದಲ್ಲಿ USD 300 ಬಿಲಿಯನ್ ಎಲೆಕ್ಟ್ರಾನಿಕ್ಸ್ ಉತ್ಪಾದನೆಯನ್ನು ಸಾಧಿಸುವ ಮಾರ್ಗಸೂಚಿಯನ್ನು ಡಾಕ್ಯುಮೆಂಟ್ ವಿವರಿಸುತ್ತದೆ. USD 300 ಬಿಲಿಯನ್ ಹೇಗೆ ಬರುತ್ತದೆ ಕೈಗಾರಿಕೆ ಇದನ್ನು ಹೇಗೆ ಬಳಸಿಕೊಳ್ಳುತ್ತದೆ ಸರಕಾರ ಏನು ಮಾಡಬೇಕು ಮೊದಲಾದ ವಿವರಗಳನ್ನು ವರದಿಯು ಒಳಗೊಂಡಿದೆ.

ಈ ಡಾಕ್ಯುಮೆಂಟ್ ಉದ್ಯಮ ಮತ್ತು ಸರ್ಕಾರವು ದೇಶಕ್ಕೆ ಹೇಗೆ ಗುರಿಗಳನ್ನು ನಿಗದಿಪಡಿಸಬೇಕು ಎಂಬುದಕ್ಕೆ ಉದಾಹರಣೆಯಾಗಿದೆ. ತಯಾರಿಕೆಯು USD 300ಬಿಲಿಯನ್ ಆಗಿದ್ದು ರಫ್ತು ಮೌಲ್ಯ USD 120 ಬಿಲಿಯನ್ ಆಗಿದೆ. ಪ್ರಸ್ತುತ ಭಾರತ ಸರಕಾರದ ಉದ್ದೇಶ ಇದಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ಪ್ರಸ್ತುತ ಭಾರತದ ಇಲೆಕ್ಟ್ರಾನಿಕ್ಸ್ ರಫ್ತು ವಹಿವಾಟು ಸರಿಸುಮಾರು USD 15 ಬಿಲಿಯನ್ ಆಗಿದೆ.

ಇದನ್ನೂ ಓದಿ: Google Search: ಗೂಗಲ್ ನಲ್ಲಿ ಇದನ್ನೆಲ್ಲಾ ಹುಡುಕಬೇಡಿ.. ಕೊನೆಗೆ ತೊಂದರೆಗೆ ಸಿಲುಕೋದು ನೀವೇ!

ಪ್ರಧಾನಿಯವರ ಗುರಿ ಏನು?

ಪ್ರತಿಯೊಂದು ಪ್ರಮುಖ ಉತ್ಪನ್ನ ವಿಭಾಗಗಳಲ್ಲಿ ದೇಶೀಯ ವ್ಯವಸ್ಥೆಗಳನ್ನು ರಚಿಸುವುದು ಪ್ರಧಾನ ಮಂತ್ರಿಯ ಬಯಕೆ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯದ (MeitY) ಗುರಿಯಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ಪ್ರಧಾನಿ ಮೋದಿಯವರು ಆರ್ಥಿಕ ಮಾರುಕಟ್ಟೆಯನ್ನು ಬಲಪಡಿಸಿದ್ದು ಭಾರತವು ವಿದೇಶಿ ನೇರ ಹೂಡಿಕೆ ಮತ್ತು ಈಕ್ವಿಟಿಯನ್ನು ಅತಿ ಹೆಚ್ಚು ಸ್ವೀಕರಿಸುವ ದೇಶಗಳಲ್ಲಿ ಒಂದಾಗಿದೆ ಎಂದು ಅವರು ಹೇಳಿದರು.

ತಂತ್ರಜ್ಞಾನ ಸ್ಟಾರ್ಟಪ್‌ಗಳು ಹಾಗೂ ಕಂಪನಿಗಳ ಮೇಲೆ ಹೂಡಿಕೆ:

ಭಾರತದಲ್ಲಿ ವಿದೇಶಿ ಬ್ಯಾಂಕುಗಳ ಸಂಖ್ಯೆಗಳ ಹೆಚ್ಚುತ್ತಿದೆ. ಇದೇ ಮೊದಲ ಬಾರಿಗೆ ಷೇರು ಮಾರುಕಟ್ಟೆ ಹಾಗೂ ಸಾರ್ವಜನಿಕ ಮಾರುಕಟ್ಟೆಗಳು ತಂತ್ರಜ್ಞಾನ ಸ್ಟಾರ್ಟಪ್‌ಗಳು ಹಾಗೂ ಕಂಪನಿಗಳ ಮೇಲೆ ಹೂಡಿಕೆ ಮಾಡುತ್ತಿವೆ. ಇಂದು ಲಾವಾ, ಡಿಕ್ಸನ್ ಇಲ್ಲವೇ ಬೋಟ್ ಮೊದಲಾದ ಕಂಪನಿಗಳು 6 ವರ್ಷಗಳ ಹಿಂದೆ ಹೊಂದಿರದ ಬಂಡವಾಳ, ಈಕ್ವಿಟಿಯನ್ನು ಸಂಗ್ರಹಿಸುವ ಸಾಮರ್ಥ್ಯವನ್ನು ಪಡೆದುಕೊಂಡಿವೆ ಎಂಬುದಾಗಿ ಸಚಿವರು ಉಲ್ಲೇಖಿಸಿದ್ದಾರೆ.

ಉತ್ಪನ್ನ ಸಂಬಂಧಿತ ಪ್ರೋತ್ಸಾಹಕ ಪರಿಕರಗಳು ಹಲವಾರು ಉತ್ಪಾದನಾ ವಿಭಾಗಗಳನ್ನು ಪ್ರೋತ್ಸಾಹಿಸುವ ಕಾರ್ಯವನ್ನು ಮುಂದುವರಿಸುತ್ತದೆ ಹಾಗೂ ಇದು ತಂತ್ರಜ್ಞಾನ ಉತ್ಪನ್ನದ ಸ್ಪಷ್ಟ ರೂಪವನ್ನು ಮತ್ತು ಯಾವ ಸಚಿವಾಲಯವು ಅದನ್ನು ನಿಯಂತ್ರಿಸಬೇಕು ಎಂಬುದನ್ನು ಅವಲಂಬಿಸಿರುತ್ತದೆ ಎಂದು ಸಚಿವರು ತಿಳಿಸಿದರು.
Published by:vanithasanjevani vanithasanjevani
First published: