ಟಿಕ್​​ಟಾಕ್​, ಹೆಲೋ ಆ್ಯಪ್ ಬ್ಯಾನ್ ಆಗುತ್ತಾ?; ಕೇಂದ್ರ ಸರ್ಕಾರದಿಂದ ನೋಟಿಸ್ ಜಾರಿ

ಇತ್ತೀಚೆಗೆ ಟಿಕ್​ಟಾಕ್​​ ಮತ್ತು ಹೆಲೋ ಆ್ಯಪ್​​ ಕುರಿತು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಂಗ ಸಂಸ್ಥೆಯಾಗಿರುವ ಸ್ವದೇಶಿ ಜಾಗರಣ ಮಂಚ್​ ದೂರು ನೀಡಿತ್ತು. ಇದರ ಬೆನ್ನಲ್ಲೇ ಎಲೆಕ್ಟ್ರಾನಿಕ್ಸ್​ ಮತ್ತು ಮಾಹಿತಿ ತಂತ್ರಜ್ನಾನ ಸಚಿವಾಲಯ ನೋಟೀಸ್​ ಜಾರಿ ಮಾಡಿದೆ. ಜೊತೆಗೆ ದತ್ತಾಂಶ, ವರ್ಗಾವಣೆ, ಸುಳ್ಳು ಸುದ್ದಿ ಸೇರಿದಂತೆ 22 ಪ್ರಶ್ನೆಗಳನ್ನು ಕೇಳಿದೆ.

news18
Updated:July 19, 2019, 6:18 PM IST
ಟಿಕ್​​ಟಾಕ್​, ಹೆಲೋ ಆ್ಯಪ್ ಬ್ಯಾನ್ ಆಗುತ್ತಾ?; ಕೇಂದ್ರ ಸರ್ಕಾರದಿಂದ ನೋಟಿಸ್ ಜಾರಿ
ಟಿಕ್​​ಟಾಕ್
  • News18
  • Last Updated: July 19, 2019, 6:18 PM IST
  • Share this:
ಚೀನಾದ ಜನಪ್ರಿಯ ಆ್ಯಪ್​​ಗಳಾದ ಟಿಕ್​ಟಾಕ್​ ಮತ್ತು ಹೆಲೋ ಆ್ಯಪ್​ಗೆ ಕೇಂದ್ರ ಸರ್ಕಾರ ನೋಟಿಸ್​ ನೀಡಿದೆ. ದೇಶ ವಿರೋಧಿ ಚಟುವಟಿಕೆಗಳಿಗೆ ಈ ಆ್ಯಪ್​ಗಳು ಬಳಕೆಯಾಗುತ್ತಿದೆ ಎಂದು ಆರೋಪಿಸಿದ ದೂರಿನ ಅನ್ವಯ  ಎರಡು ಸಂಸ್ಥೆಗಳಿಗೆ ಮಾಹಿತಿ ತಂತ್ರಜ್ನಾನ ಸಂಸ್ಥೆ ಕೂಡ ನೋಟಿಸ್​​​ ನೀಡಿದೆ.

ಇತ್ತೀಚೆಗೆ ಟಿಕ್​ಟಾಕ್​​ ಮತ್ತು ಹೆಲೋ ಆ್ಯಪ್​​ ಕುರಿತು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಂಗ ಸಂಸ್ಥೆಯಾಗಿರುವ ಸ್ವದೇಶಿ ಜಾಗರಣ ಮಂಚ್​ ದೂರು ನೀಡಿತ್ತು. ಇದರ ಬೆನ್ನಲ್ಲೇ ಎಲೆಕ್ಟ್ರಾನಿಕ್ಸ್​ ಮತ್ತು ಮಾಹಿತಿ ತಂತ್ರಜ್ನಾನ ಸಚಿವಾಲಯ ನೋಟೀಸ್​ ಜಾರಿ ಮಾಡಿದೆ. ಜೊತೆಗೆ ದತ್ತಾಂಶ, ವರ್ಗಾವಣೆ, ಸುಳ್ಳು ಸುದ್ದಿ ಸೇರಿದಂತೆ 22 ಪ್ರಶ್ನೆಗಳನ್ನು ಕೇಳಿದೆ.

ಇವೆರಡು ಸಂಸ್ಥೆಗಳಿಗೆ ಜುಲೈ 22 ರ ವರೆಗೆ ಗಡುವು ನೀಡಿದ್ದು, ಅದರೊಳಗೆ ಪ್ರತಿಕ್ರಿಯೆ ನೀಡದಿದ್ದರೆ ಈ ಆ್ಯಪ್​ಗಳ ಮೇಲೆ ನಿಷೇಧ ಹೇರುವ ಎಚ್ಚರಿಕೆಯನ್ನು ನೀಡಿದೆ. ಜೊತೆಗೆ ಭಾರತೀಯ ಗ್ರಾಹಕರ ಡೇಟಾ ವಿದೇಶಕ್ಕೆ ವರ್ಗಾವಣೆ ಮಾಡದಿರುವಂತೆಯೂ ಸರ್ಕಾರ ಸೂಚಿಸಿದೆ.

ಇದನ್ನೂ ಓದಿ: ಮಾಜಿ ಸಿಎಂ ಜಯಲಲಿತಾಗಾಗಿ ದೇವಾಲಯ ಕಟ್ಟಿದ ಎಐಎಡಿಎಂಕೆ ಕಾರ್ಯಕರ್ತರು

ಕೇಂದ್ರ ಸರ್ಕಾರ ನೀಡಿದ ನೋಟಿಸ್​ ಆಧಾರದಲ್ಲಿ ಟಿಕ್​ಟಾಕ್​ ಮತ್ತು ಹೆಲೋ ಆ್ಯಪ್​ ಪ್ರತಿಕ್ರಿಯೆ ನೀಡಿದ್ದು, ಕೇಂದ್ರ ಸರ್ಕಾರ ನೀಡಿದ ದೂರಿಗೆ ಸ್ಪಂದಿಸುತ್ತೇವೆ ಎಂದು ಹೇಳಿಕೆ ನೀಡಿದೆ.

ಕಳೆದ ಎಪ್ರಿಲ್​ ತಿಂಗಳಿನಲ್ಲಿ ಟಿಕ್​ಟಾಕ್​ ಆ್ಯಪ್​ ಕುರಿತು ಮದ್ರಾಸ್​ ಹೈಕೋರ್ಟ್​ ನಿಷೇಧ ಹೇರಿತ್ತು. ಬಳಿಕ ನಿಷೇಧವನ್ನು ಹಿಂಪಡೆದಿತ್ತು. ಇದೀಗ ಮತ್ತೊಮ್ಮೆ ನಿಷೇಧದ ಸುಳಿಯಲ್ಲಿ ಟಿಕ್​ಟಾಕ್​ ಆ್ಯಪ್​ ಸಿಳುಕಿದ್ದು, ಹೆಲೋ ಆ್ಯಪ್​ ಹೊಸದಾಗಿ ಸೇರಿಕೊಂಡಿದೆ.

First published:July 19, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ