ಜೂಮ್​ ಆ್ಯಪ್​ಗೆ​ ಪರ್ಯಾಯವಾಗಿ ಸರ್ಕಾರ ಅಭಿವೃದ್ಧಿ ಪಡಿಸಿದ ಸ್ವದೇಶಿ ಆ್ಯಪ್​​ ಇದೇನಾ?

Fake: ಜೂಮ್​  ಆ್ಯಪ್​ ಬದಲಿಗೆ ಸ್ವದೇಶಿ ನಿರ್ಮಿತ ನಮಸ್ತೆ ಆ್ಯಪ್​​​​ ಸಿದ್ಧಪಡಿಸಿದ್ದು,  ಸದ್ಯದಲ್ಲೇ ಐಒಎಸ್​​​ ಹಾಗೂ ಆ್ಯಂಡ್ರಾಯ್ಡ್​​​​ ಬಳಕೆದಾರರಿಗೆ ಸಿಗಲಿದೆ ಎಂಬ ಸುಳ್ಳು ಮಾಹಿತಿ ಹರಡುತ್ತಿದೆ.

‘ನಮಸ್ತೆ‘

‘ನಮಸ್ತೆ‘

 • Share this:
  ಕೊರೋನಾ ಲಾಕ್​ಡೌನ್ ಸಮಯದಲ್ಲಿ ಚೀನಾ ಮೂಲದ ವಿಡಿಯೋ ಕಾನ್ಫರೆನ್ಸ್​ ಆ್ಯಪ್​​ ಜೂಮ್​​ ಹೆಚ್ಚು ಜನಪ್ರಿಯ ಕಂಡಿತ್ತು. ಸಾಕಷ್ಟು  ಜನರು ಈ ಆ್ಯಪ್​ ಅನ್ನು ಡೌನ್​ಲೋಡ್​ ಮಾಡಿಕೊಂಡು ಬಳಸುತ್ತಿದ್ದರು. ಈ ಬೆನ್ನಲೆ ಕೆಲವು ಟೆಕ್​ ಸಂಶೋಧಕರು ಜೂಮ್​ ಆ್ಯಪ್​​ನಲ್ಲಿ ನ್ಯೂನತೆಗಳಿದ್ದು, ಬಳಕೆಗೆ ಯೋಗ್ಯವಲ್ಲ ಎಂದುದನ್ನು ಹೇಳಿತ್ತು. ಕೇಂದ್ರ ಗೃಹ ಇಲಾಖೆ ಕೂಡ ಜೂಮ್ ಆ್ಯಪ್​​​ ಬಳಸಬೇಡಿ ಎಂದು ಆದೇಶ ಹೊರಡಿಸಿತ್ತು.

  ಕೇಂದ್ರ ಸರ್ಕಾರ ಜೂಮ್​ ಆ್ಯಪ್​ಗೆ ಪರ್ಯಾಯವಾಗಿ  ದೇಶಿ ಆ್ಯಪ್​​ ಅಭಿವೃದ್ಧಿಪಡಿಸಿದವರಿಗೆ ಬಹುಮಾನ ನೀಡುವುದಾಗಿ ಘೋಷನೆ ಹೊರಡಿಸಿತ್ತು. ಆ್ಯಪ್​​ ಡೆವಲಪರ್​ ಯಾವುದೇ ನ್ಯೂನತೆಗಳಲಿಲ್ಲದ ವಿಡಿಯೋ ಕಾನ್ಫರೆನ್ಸ್​ ಆ್ಯಪ್​ ಸಿದ್ಧಪಡಿಸಿದವರಿಗೆ ದೊಡ್ಡ ಮೊತ್ತದ ಬಹುಮಾನ  ನೀಡುವುದಾಗಿ ಹೇಳಿತ್ತು. ಇದೀಗ ಸರ್ಕಾರ ಘೋಷನಣೆಯ ಬೆನ್ನಲ್ಲೇ ‘ಸೇ ನಮಸ್ತೆ‘ ಹೆಸರಿನ ಅಪ್ಲಿಕೇಷನ್​ ಬಿಡುಗಡೆ ಮಾಡಿದೆ ಎಂಬ ಸುಳ್ಳು ಸುದ್ದಿ ಹರಿದಾಡುತ್ತಿದೆ.

  ಜೂಮ್​  ಆ್ಯಪ್​ ಬದಲಿಗೆ ಸ್ವದೇಶಿ ನಿರ್ಮಿತ ನಮಸ್ತೆ ಆ್ಯಪ್​​​​ ಸಿದ್ಧಪಡಿಸಿದ್ದು,  ಸದ್ಯದಲ್ಲೇ ಐಒಎಸ್​​​ ಹಾಗೂ ಆ್ಯಂಡ್ರಾಯ್ಡ್​​​​ ಬಳಕೆದಾರರಿಗೆ ಸಿಗಲಿದೆ ಎಂಬ ಸುಳ್ಳು ಮಾಹಿತಿ ಹರಡುತ್ತಿದೆ.

        ಹಾಗಿದ್ದರೆ ಸತ್ಯಾ ಸತ್ಯತೆ ಏನು?

  ಕೇಂದ್ರ ಸರ್ಕಾರ ಕೆಲ ದಿನಗಳ ಹಿಂದೆ ವಿಡಿಯೋ ಕಾನ್ಫರೆನ್ಸ್​ ಆ್ಯಪ್​ ಅನ್ನು ಅಭಿವೃದ್ಧಿ ಪಡಿಸುವ ಆದೇಶ ಹೊರಡಿಸಿತ್ತು. ಆ್ಯಪ್​ ಡೆವಲಪರ್ಸ್​​ ಸರಿಯಾದ ವಿಡಿಯೋ ಕಾನ್ಫರೆನ್ಸ್​ ಡೆವಲಪ್​ ಮಾಡಿದರೆ ಬಹುಮಾನ ನೀಡುವುದಾಗಿ ಘೋಷಿಸಿತ್ತು. ಆದರೆ ಅಪ್ಲಿಕೇಷನ್ ಇನ್ನು​ ರೆಡಿಯಾಗಿಲ್ಲ. ಇನ್ನು ಸರ್ಕಾರ ಕೂಡ ವಿಡಿಯೋ ಕಾನ್ಫರೆನ್ಸ್​​​​​ ಆ್ಯಪ್​ ಎಂದು ಯಾವುದಕ್ಕೂ ಮಾನ್ಯತೆ ನೀಡಿಲ್ಲ ಎಂದು ಪಿಐಬಿ ಚೆಕ್​​ ಟ್ವೀಟ್​ ಮಾಡಿದೆ.

  2ನೇ ವಿವಾಹದ ಬಗ್ಗೆ ಸ್ಪಷ್ಟತೆ ನೀಡಿದ ಅಮಲಾ ಪೌಲ್!

   
  First published: