#TikTok ಬ್ಯಾನ್ ಹಾಸ್ಯ ಚಟಾಕಿಯೊಂದಿಗೆ Twitter ನಲ್ಲಿ ಟ್ರೆಂಡ್..!

ಹಲವು ದಿನಗಳಿಂದ ದೇಶಾದ್ಯಂತ ಆಂದೋಲನದ ರೂಪದಲ್ಲಿ ಚೀನೀ ಆ್ಯಪ್​ಗಳನ್ನ ನಿಷೇಧಿಸಬೇಕೆಂದು ಕೇಳಿಬರುತ್ತಿದ್ದ ಒತ್ತಾಯಕ್ಕೆ ಕೇಂದ್ರ ಸರ್ಕಾರ ಕೊನೆಗೂ ಸಮ್ಮತಿ ವ್ಯಕ್ತಪಡಿಸಿದೆ. ಭಾರತದಲ್ಲಿ ಅತ್ಯಂತ ಜನಪ್ರಿಯವಾಗಿರುವ ಟಿಕ್ ಟಾಕ್ ಸೇರಿದಂತೆ ಚೀನೀ ನಿರ್ಮಿತ 59 ಆ್ಯಪ್​​ಗಳನ್ನ ನಿಷೇಧಿಸಿದೆ. ಕೇಂದ್ರ ಎಲೆಕ್ಟ್ರಾನಿಕ್ ಮತ್ತು ಐಟಿ ಇಲಾಖೆ ಈ ಆದೇಶ ಹೊರಡಿಸಿದೆ.

news18-kannada
Updated:June 29, 2020, 11:10 PM IST
#TikTok ಬ್ಯಾನ್ ಹಾಸ್ಯ ಚಟಾಕಿಯೊಂದಿಗೆ Twitter ನಲ್ಲಿ ಟ್ರೆಂಡ್..!
tiktok
  • Share this:
ಚೀನಾ ಮೂಲದ 59 ಮೊಬೈಲ್​ ಆ್ಯಪ್​ಗಳ ಮೇಲೆ ಭಾರತ ಸರ್ಕಾರ ನಿಷೇಧ ಹೇರಿದೆ. ಅದರಲ್ಲೂ ವ್ಯಾಪಕ ಟೀಕೆಗೆ ಒಳಗಾಗುತ್ತಿದ್ದ ಟಿಕ್ ಟಾಕ್ ಬ್ಯಾನ್ ಆಗಿರುವುದಕ್ಕೆ ಅನೇಕರು ಸಂತಸ ವ್ಯಕ್ತಪಡಿಸಿದರೆ, ಈ ಆ್ಯಪ್​ನ ಬಳಕೆದಾರರು ಮತ್ತೊಂದು ಆ್ಯಪ್​ನ ಹುಡುಕಾಟಕ್ಕೆ ಇಳಿದಿದ್ದಾರೆ.

ಐಟಿ ಕಾಯ್ದೆ ಮತ್ತು ನಿಯಮಗಳ ಸೆಕ್ಷನ್ 69 ಎ ಅಡಿಯಲ್ಲಿ ಐಟಿ ಸಚಿವಾಲಯ 59 ಅಪ್ಲಿಕೇಶನ್‌ಗಳನ್ನು ನಿರ್ಬಂಧಿಸಲು ನಿರ್ಧರಿಸಿದೆ. ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆಗೆ ಧಕ್ಕೆ ತರುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ಕಠಿಣ ಕ್ರಮ ಕೈಗೊಂಡಿದೆ ಎಂದು ಹೇಳಿದೆ. ಇನ್ನು ಆ್ಯಪ್ ಜನಪ್ರಿಯ ಟಿಕ್ ಟಾಕ್ ಬ್ಯಾನ್ ಬೆನ್ನಲ್ಲೇ ಹಲವು ಜೋಕ್​ಗಳು ಕೂಡ ಹರಿದಾಡುತ್ತಿದ್ದು, ಇಂತಹ ಮೀಮ್ಸ್​ಗಳು ಟಿಟ್ಟರ್​ನಲ್ಲಿ ಟ್ರೆಂಡ್ ಆಗಿದೆ.












First published:June 29, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading