• Home
  • »
  • News
  • »
  • tech
  • »
  • Media Player: ಭಾರತದಲ್ಲಿ VLC ಪ್ಲೇಯರ್ ಬ್ಯಾನ್ ನಿಯಮವನ್ನು ವಾಪಸ್ ಪಡೆದ ಸರ್ಕಾರ!

Media Player: ಭಾರತದಲ್ಲಿ VLC ಪ್ಲೇಯರ್ ಬ್ಯಾನ್ ನಿಯಮವನ್ನು ವಾಪಸ್ ಪಡೆದ ಸರ್ಕಾರ!

ವಿಎಲ್​ಸಿ ಬ್ಯಾನ್

ವಿಎಲ್​ಸಿ ಬ್ಯಾನ್

ಇತ್ತೀಚೆಗೆ ವಿಎಲ್​ಸಿ ಎಂಬ ಮಿಡಿಯಾ ಪ್ಲೇಯರ್ ಎಂಬ ಆ್ಯಪ್ ಅನ್ನು ಭಾರತದಲ್ಲಿ ನಿಷೇಧಮಾಡಿತ್ತು. ಆದರೆ ಈಗ ಭಾರತೀಯ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯವು ವಿಎಲ್‌ಸಿ ಮೀಡಿಯಾ ಪ್ಲೇಯರ್‌ನ ವೆಬ್‌ಸೈಟ್ ಮೇಲಿನ ನಿಷೇಧವನ್ನು ತೆಗೆದುಹಾಕಿದೆ.

  • Share this:

    ವಿಡಿಯೋಗಳನ್ನು (Video) ವೀಕ್ಷಿಸುವ ಉದ್ದೇಶದಿಂದ ಬಳಕೆದಾರರು ಹಲವಾರು ಆ್ಯಪ್​ಗಳನ್ನು (App) ಅನುಸರಿಸುತ್ತಾರೆ. ಈ ವಿಡಿಯೋ ಸ್ಟ್ರೀಮ್ (Video Stream)  ಮಾಡುವ ಆ್ಯಪ್​ಗಳಲ್ಲಿ ವಿಎಲ್​​ಸಿ ಕೂಡ ಒಂದು. ಈ ಹಿಂದೆ ಸ್ಮಾರ್ಟ್‌ಫೋನ್‌, ಸ್ಮಾರ್ಟ್‌ಟಿವಿ  (Smart Tv)ಅಥವಾ ಇನ್ನಿತರೆ ಡಿವೈಸ್‌ಗಳಲ್ಲಿ ಬಹುಪಾಲು ವಿಎಲ್‌ಸಿ (VLC media player) ಮೂಲಕ ವಿಡಿಯೋಗಳನ್ನು ವೀಕ್ಷಣೆ ಮಾಡಲಾಗುತ್ತಿತ್ತು. ಕಾರಣ ಇದರಲ್ಲಿನ ಹಲವು ಆಯ್ಕೆಗಳು ಹಾಗೂ ವಿಡಿಯೋ ವೀಕ್ಷಿಸಲು ಇದ್ದ ಹಲವು ವಿಶೇಷ ಫೀಚರ್ಸ್‌. ಆದರೆ, ಕೆಲವು ಕಾರಣಾಂತರಗಳಿಂದ ಭಾರತ ಸರ್ಕಾರ (Indian Government) ಈ ಆಪ್‌ಗೆ ನಿರ್ಬಂಧ ವಿಧಿಸಿತ್ತು. ಪ್ರಮುಖ ವಿಷಯ ಏನೆಂದರೆ ಈಗ ಸರ್ಕಾರ ವಿಎಲ್‌ಸಿಗೆ ವಿಧಿಸಿದ್ದ ನಿಷೇಧವನ್ನು ತೆಗದುಹಾಕಿದೆ.


    ಇತ್ತೀಚೆಗೆ ವಿಎಲ್​ಸಿ ಎಂಬ ಮಿಡಿಯಾ ಪ್ಲೇಯರ್ ಎಂಬ ಆ್ಯಪ್ ಅನ್ನು ಭಾರತದಲ್ಲಿ ನಿಷೇಧಮಾಡಿತ್ತು. ಆದರೆ ಈಗ ಭಾರತೀಯ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯವು ವಿಎಲ್‌ಸಿ ಮೀಡಿಯಾ ಪ್ಲೇಯರ್‌ನ ವೆಬ್‌ಸೈಟ್ ಮೇಲಿನ ನಿಷೇಧವನ್ನು ತೆಗೆದುಹಾಕಿದೆ.


    ಈ ಮೂಲಕ ಭಾರತದಲ್ಲಿನ ಜನರು ಇನ್ಮುಂದೆ ಈ ವಿಎಲ್​ಸಿಯನ್ನು ವಿಶೇಷ ಫೀಚರ್ಸ್​​ನೊಂದಿಗೆ ಬಳಕೆ ಮಾಡಬಹುದಾಗಿದೆ. ಇನ್ನು ಈ ಆ್ಯಪ್ ವಿಡಿಯೋವನ್ನಷ್ಟೇ ಪ್ಲೇ ಮಾಡದೆ, ಆಡಿಯೋ, ಪೋಟೋ ಇದಕ್ಕೆಲ್ಲದಕ್ಕೂ ಅನುಮತಿಯನ್ನು ನೀಡುತ್ತದೆ.


    ಇದನ್ನೂ ಓದಿ: ವಾಟ್ಸಪ್​ನಲ್ಲಿ ಇನ್ಮುಂದೆ ಡು ನಾಟ್​ ಡಿಸ್ಟರ್ಬ್ ಮೋಡ್ ಆನ್​ ಮಾಡ್ಬಹುದು!


    ವಿಎಲ್​ಸಿಯ ಬಳಕೆದಾರರು ಎಷ್ಟು?


    ಇಲ್ಲಿಯವರೆಗೆ ಸುಮಾರು 73 ಮಿಲಿಯನ್ ಜನರು ಈ ವಿಎಲ್‌ಸಿ ಪ್ಲೇಯರ್ ಅನ್ನು ಡೌನ್‌ಲೋಡ್ ಮಾಡಿದ್ದಾರೆ ಎಂದು ತಿಳಿದುಬಂದಿದ್ದು, ಈ ಬಗ್ಗೆ ವಿಎಲ್‌ಸಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಮಾಹಿತಿ ಪ್ರಕಟಿಸಲಾಗಿದೆ. ಇನ್ನು ಭಾರತವು ನಿಷೇಧದ ಹಿಂದಿನ ಕಾರಣವನ್ನು ಬಹಿರಂಗಪಡಿಸುವ ಮುನ್ನವೇ ತನ್ನ ಆದೇಶವನ್ನು ವಾಪಸ್‌ ಪಡೆದುಕೊಂಡಿದೆ.


    Government withdraws VLC player ban in India
    ವಿಎಲ್​ಸಿ ಅಪ್ಲಿಕೇಶನ್


    ವಿಎಲ್​ಸಿ ಡೌಲ್‌ಲೋಡ್‌ಗಾಗಿ 'ವಿಡಿಯೋಲ್ಯಾನ್‌' ಗೆ ಭೇಟಿ ಕೊಡಿ


    ಇನ್ನು ನಿಮಗೇನಾದರೂ ಈ ವಿಎಲ್‌ಸಿ ಮೀಡಿಯಾ ಪ್ಲೇಯರ್ ಆ್ಯಪ್‌ ಡೌನ್​ಲೋಡ್ ಮಾಡಬೇಕೆಂದಾದರೆ ವಿಡಿಯೋಲ್ಯಾನ್‌ನ ವೆಬ್‌ಸೈಟ್‌ಗೆ ಭೇಟಿ ನೀಡಿ ನಿಮಗೆ ಸರಳವಾಗಿ ವಿಎಲ್​ಸಿಯನ್ನು ಡೌನ್​ಲೋಡ್ ಮಾಡಬಹುದು. ಅದರಂತೆ 73 ಮಿಲಿಯನ್ ಜನರನ್ನು ಹೊರತು ಪಡಿಸಿ ಈ ಕ್ಷಣದ ವರೆಗೂ ಜನರು ಈ ಆ್ಯಪ್‌ ಅನ್ನು ಡೌನ್‌ಲೋಡ್‌ ಮಾಡಿಕೊಳ್ಳುತ್ತಿದ್ದಾರೆ ಎಂದು ಆಪ್‌ ತನ್ನ ವೆಬ್‌ಸೈಟ್‌ ಮೂಲಕ ತಿಳಿಸಿದೆ.


    ನಿಷೇಧ ತಡೆಯುವ ವಿಚಾರದಲ್ಲಿ ವಿಎಲ್​ಸಿಯಿಂದ ಭಾರತ ಸರ್ಕಾರಕ್ಕೆ ಮನವಿ


    ಈ ವರ್ಷದ ಅಕ್ಟೋಬರ್‌ನಲ್ಲಿ ವಿಎಲ್‌ಸಿ ಮಾಲೀಕರು ಭಾರತ ಸರ್ಕಾರಕ್ಕೆ ಒಂದು ಮನವಿ ಸಲ್ಲಿಸಿದ್ದರು. ಅದರಂತೆ ಭಾರತದಲ್ಲಿ ನಮ್ಮ ಸೇವೆಯನ್ನು ಏಕೆ ನಿಷೇಧಿಸಲಾಗಿದೆ?, ಈ ಬಗ್ಗೆ ವರ್ಚುವಲ್ ವಿಚಾರಣೆಯ ಮೂಲಕ ತನ್ನ ಪ್ರಕರಣವನ್ನು ಸಮರ್ಥಿಸಿಕೊಳ್ಳಲು ಅವಕಾಶ ನೀಡಿ ಎಂದು ಕೇಳಿಕೊಂಡಿದ್ದರು.


    Government withdraws VLC player ban in India
    ಸಾಂಕೇತಿಕ ಚಿತ್ರ


    ವಿಎಲ್​ಸಿಯಿಂದ ಭಾರತ ಸರ್ಕಾರಕ್ಕೆ ಎಚ್ಚರಿಕೆ‘


    ವಿಎಲ್​​ಸಿ ಭಾರತ ಸರ್ಕಾರಕ್ಕೆ ತನ್ನ ಸಂಸ್ಥೆಯನ್ನು ಉಲ್ಲಂಘನೆ ಮಾಡಿದ ಕುರಿತು ಪತ್ರವನ್ನು ಬರೆದಿದ್ದು ಈ ಪತ್ರದಲ್ಲಿ  ಅಂತರಾಷ್ಟ್ರೀಯ ಕಾನೂನಿನಡಿಯಲ್ಲಿ ನಿಮ್ಮ ಜವಾಬ್ದಾರಿಗಳ ಉಲ್ಲಂಘನೆ ಮಾಡುವುದರ ಜೊತೆಗೆ ನಿಮ್ಮ ಸ್ವಂತ ನಿಯಮಗಳನ್ನು ನೀವು ಈ ಮೂಲಕ ಉಲ್ಲಂಘನೆ ಮಾಡುತ್ತಿದ್ದೀರ ಎಂದು ಹೇಳಿದ್ದು, ಈ ಮೂಲಕ ಭಾರತ ಸರ್ಕಾರಕ್ಕೆ ಒಂದು ರೀತಿಯ ಬೆದರಿಕೆ ಹಾಕಿತ್ತು.


    ವಿಎಲ್​ಸಿ ಯ ಭಾರತ ಸರ್ಕಾರದ ವಿರುದ್ಧ ಗೆಲುವು:


    ಈ ನಿಯಮಕ್ಕೆ ವಿಎಲ್​ಸಿ ಮೀಡಿಯಾ ಪ್ಲೇಯರ್ ಪತ್ರ ಬರೆದು ತನ್ನ  ಸ್ಥಾನವನ್ನು ಮೊಬೈಲ್​ಗಳಲ್ಲಿ ಗಿಟ್ಟಿಸಿಕೊಂಡಿದೆ. ಭಾರತಕ್ಕೆ ತನ್ನ ಸೇವೆಯನ್ನು ಮರಳಿ ತರುವಲ್ಲಿ ಯಶಸ್ವಿಯನ್ನು ಹೊಂದಿದೆ. ಈ ವಿಎಲ್​ಸಿ ಅಪ್ಲಿಕೇಶನ್​ ಬ್ಯಾನ್ ಆಗುವ ಮೊದಲು ಭಾರತದಲ್ಲಿ ಪ್ರತೀವರ್ಷ ಸರಿಸುಮಾರು 25 ಮಿಲಿಯನ್ ಡೌನ್​ಲೋಡ್​ ಅನ್ನು ನಿರಂತರವಾಗಿ ಪಡೆಯುತ್ತಿತ್ತು ಎಂದು ಕಂಪನಿ ತನ್ನ ವರದಿಯಲ್ಲಿ ಹೇಳಿಕೊಂಡಿದೆ. ಆದರೆ ಈ ವರ್ಷದ ಫೆಬ್ರವರಿಯಿಂದ ಈ ಆ್ಯಪ್ ಅನ್ನು ಬಳಕೆದಾರರು ಬಳಸದಂತೆ ನಿಷೇಧ ಮಾಡಿತ್ತು. ಇದೀ ಗ ಮತ್ತೆ ಭಾರತದಲ್ಲಿ ಬಿಡುಗಡೆಯಾಗುತ್ತಿದೆ.

    Published by:Gowtham K
    First published: