BSNL ಹಾಗೂ BBNL ವಿಲೀನ ಗ್ರಾಮೀಣ ಭಾರತಕ್ಕೆ ವರವಾಗಬಹುದೇ?

Bharat Sanchar Nigam Limited: ಈಗಾಗಲೇ ಈ ಪ್ರಸ್ತಾವಿತ ವಿಲೀನದ ಬಗ್ಗೆ ಬಿಬಿಎನ್‍ಎಲ್ ಇಲಾಖೆಯ ಆಂತರಿಕ ಸಿಬ್ಬಂದಿಗಳಿಂದ ವಿರೋಧದ ಕೂಗು ಎದ್ದು ಬಂದಿದೆ ಎಂದು ವರದಿಯಾಗಿವೆ. ಈ ಮುಂಚೆ ಬಿಎಸ್‍ಎನ್‍ಎಲ್ ಸಂಸ್ಥೆಯ ಭಾರತ್‍ನೆಟ್ ಯೋಜನೆಯ ಕಳಪೆ ಪ್ರದರ್ಶನ ಹಾಗೂ ಈ ಯೋಜನೆಯಲ್ಲಿ ಗುತ್ತಿಗೆದಾರರಿಗೆ ಇನ್ನೂ ಪಾವತಿಸಬೇಕಾಗಿರುವ ಹಣದಿಂದಾಗಿ ಇದಕ್ಕೆ ವಿರೋಧದ ಅಲೆ ಎದ್ದಿದೆ ಎಂದು ಹೇಳಲಾಗುತ್ತಿದೆ.

BSNL / ಬಿಎಸ್‍ಎನ್‍ಎಲ್

BSNL / ಬಿಎಸ್‍ಎನ್‍ಎಲ್

 • Share this:
  ಈಗಾಗಲೇ ದೂರವಣಿ ಸಂಪರ್ಕಕ್ಕೆ ಸಂಭಂಧಿಸಿದಂತೆ ದೇಶವು ಬಿಎಸ್‍ಎನ್‍ಎಲ್ (BSNL) ಅನ್ನು ಹೇಗೆ ಹೊಂದಿದೆಯೋ ಅದೇ ರೀತಿಯಾಗಿ ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ಸೇವೆಗಾಗಿ ಭಾರತ್ ಬ್ರಾಡ್‌ಬ್ಯಾಂಡ್ ನಿಗಮ್ ಲಿಮಿಟೆಡ್ (BBNL) ಅನ್ನು ಹೊಂದಿದೆ. ಮಾರ್ಚ್‌ನಲ್ಲಿ ಸದ್ಯ ಕೇಂದ್ರವು ಈ ಎರಡೂ ಸಂಸ್ಥೆಗಳನ್ನು ವಿಲೀನಗೊಳಿಸಿ (Merge) ಒಂದೇ ಸಂಸ್ಥೆಯಡಿ ಕೆಲಸ ನಿರ್ವಹಿಸುವುದಾಗಿ ಹೇಳಿತ್ತು. ಇತ್ತೀಚಿಗಷ್ಟೇ ನಡೆದ ಕಾರ್ಯಕ್ರಮವೊಂದರಲ್ಲಿ (Programe) ಈ ವಿಷಯ ಬೆಳಕಿಗೆ ಬಂದಿತ್ತು.

  ಅಖಿಲ ಭಾರತ ಗ್ರ್ಯಾಜುಯೇಟ್ ಎಂಜಿನಿಯರ್ಸ್ ಮತ್ತು ಟೆಲಿಕಾಂ ಅಧಿಕಾರಿಗಳ ಸಭೆಯು ಇತ್ತೀಚೆಗೆ ನಡೆದಿತ್ತು. ಅದರಲ್ಲಿ ಭಾಗವಹಿಸಿದ್ದ ಬಿಎಸ್‍ಎನ್‍ಎಲ್ ಸಂಸ್ಥೆಯ ಮುಖ್ಯಸ್ಥ, ವ್ಯವಸ್ಥಾಪಕ ನಿರ್ದೇಶಕರಾದ ಪಿ.ಕೆ ಪುರ್ವಾರ್ ಅವರು ಕೇಂದ್ರ ಸರ್ಕಾರವು ಸಂಸ್ಥೆ ಮತ್ತೆ ಪುಟಿದೇಳಲು ಮತ್ತೊಂದು ಅವಕಾಶ ನೀಡಲು ನಿರ್ಧರಿಸಿದೆ. ಈಗ ಕಾರ್ಯಕ್ಷಮತೆಯ ದಕ್ಷತೆಯನ್ನು ಹಾಗೂ ನಿರ್ವಹಣೆಯನ್ನು ಮತ್ತಷ್ಟು ಸುಧಾರಿಸುವ ನಿಟ್ಟಿನಲ್ಲಿ BSNL ಮತ್ತು BBNL ಎರಡೂ ಸಂಸ್ಥೆಗಳನ್ನು ವಿಲೀನ ಮಾಡಲು ನಿರ್ಧರಿಸಿರುವುದಾಗಿ ಹೇಳಿದ್ದರು.

  ಈ ಮೂಲಕ ಬಿಬಿಎನ್‍ಎಲ್ ಅವರ ಎಲ್ಲ ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ಸೇವೆ ಈಗ ಬಿಎಸ್‍ಎನ್‍ಎಲ್ ವ್ಯಾಪ್ತಿಯಲ್ಲೇ ಬರಲಿದೆ. ಬಿಎಸ್‍ಎನ್‍ಎಲ್ ಈಗಾಗಲೇ ತನ್ನ ವ್ಯಾಪ್ತಿಗೆ ಬರುವ ಆಪ್ಟಿಕಲ್ ಫೈಬರ್ ಕೇಬಲ್ (OFC) ಅನ್ನು ಹೊಂದಿದ್ದು ಇದರ ಒಟ್ಟು ಉದ್ದ 6.8 ಲಕ್ಷ ಕಿ.ಮೀ ಗಳಾಗಿದೆ. ಇದೀಗ ಬಿಬಿಎನ್‍ಎಲ್ ಜೊತೆ ವಿಲೀನ ಮಾಡುವ ಯೋಜನೆಯಿಂದಾಗಿ ಮತ್ತೆ ಬಿಎಸ್‍ಎನ್‍ಎಲ್ ಹೆಚ್ಚುವರಿಯಾಗಿ 5.67 ಮಿಲಿಯನ್ ಕಿ.ಮೀ ಗಳಷ್ಟು ಬೃಹತ್ ಉದ್ದದ ಆಪ್ಟಿಕಲ್ ಜಾಲದ ಸಂಪರ್ಕಗಳಿಸಲಿದೆ. ಈ ಜಾಲವನ್ನು ಯುನಿವರ್ಸಲ್ ಸರ್ವೀಸ್ ಆಬ್ಲಿಗೇಶನ್ ಫಂಡ್ (USOF) ಅಡಿಯಲ್ಲಿ ಅನುಷ್ಠಾನಗೊಳಿಸಲಾಗಿದ್ದು ಇದು 1.85 ಮಿಲಿಯನ್‌ ಗ್ರಾಮಗಳನ್ನು ತನ್ನ ಸಂಪರ್ಕ ವ್ಯಪ್ತಿಗೆ ಒಳಪಡಿಸಿದೆ.

  ಈ ಹಿಂದೆ ಅಂದರೆ ಫೆಬ್ರವರಿ 2012 ರಲ್ಲಿ ವಿಶೇಷ ಉದ್ದೇಶಕ್ಕಾಗಿ ಬಿಬಿಎನ್‍ಎಲ್ ಅನ್ನು ಸ್ಥಾಪಿಸಿ ಆ ಮೂಲಕ ದೇಶದ ಎಲ್ಲ 2.5 ಲಕ್ಷ ಗ್ರಾ.ಪಂಗಳಲ್ಲಿ ಯುನಿವರ್ಸಲ್ ಸರ್ವೀಸ್ ಆಬ್ಲಿಗೇಶನ್ ಫಂಡ್ (USOF) ಅಡಿಯಲ್ಲಿ ಆಪ್ಟಿಕಲ್ ಫೈಬರ್ ಕೇಬಲ್ ಅನ್ನು ಅಳವಡಿಸಲಾಗಿತ್ತು. ಈ ಮೂಲಕ ಟೆಲಿಕಾಂ ಕೇಂದ್ರಗಳು ದೇಶದೆಲ್ಲೆಡೆ ಯಾವುದೇ ಅಡೆ-ತಡೆಗಳಿಲ್ಲದೆ ಸೇವೆ ಒದಗಿಸುವ ಉದ್ದೇಶ ಹೊಂದಲಾಗಿತ್ತು. ಇದರಡಿಯಲ್ಲಿ ಟೆಲಿಕಾಂ ಸೇವೆ ಒದಗಿಸುವ ಎಲ್ಲ ಸೇವಾದಾರರು ತಾವು ಗಳಿಸುವ ಆದಾಯದಲ್ಲಿ 8% ಪರವಾನಗಿ ಶುಲ್ಕ ಭರಿಸಬೇಕಾಗಿದ್ದು ಅದರಲ್ಲಿ 5% ಶುಲ್ಕವು USOF ಗೆ ಹೋಗುತ್ತಿತ್ತು.

  ಬಜೆಟ್‌ನಲ್ಲಿ 45,000 ಕೋಟಿ

  ಈಗಾಗಲೇ ಈ ಪ್ರಸ್ತಾವಿತ ವಿಲೀನದ ಬಗ್ಗೆ ಬಿಬಿಎನ್‍ಎಲ್ ಇಲಾಖೆಯ ಆಂತರಿಕ ಸಿಬ್ಬಂದಿಗಳಿಂದ ವಿರೋಧದ ಕೂಗು ಎದ್ದು ಬಂದಿದೆ ಎಂದು ವರದಿಯಾಗಿವೆ. ಈ ಮುಂಚೆ ಬಿಎಸ್‍ಎನ್‍ಎಲ್ ಸಂಸ್ಥೆಯ ಭಾರತ್‍ನೆಟ್ ಯೋಜನೆಯ ಕಳಪೆ ಪ್ರದರ್ಶನ ಹಾಗೂ ಈ ಯೋಜನೆಯಲ್ಲಿ ಗುತ್ತಿಗೆದಾರರಿಗೆ ಇನ್ನೂ ಪಾವತಿಸಬೇಕಾಗಿರುವ ಹಣದಿಂದಾಗಿ ಇದಕ್ಕೆ ವಿರೋಧದ ಅಲೆ ಎದ್ದಿದೆ ಎಂದು ಹೇಳಲಾಗುತ್ತಿದೆ.

  ಇದನ್ನೂ ಓದಿ: ಭಾರತದಲ್ಲಿಂದು Samsung Galaxy A-series ಈವೆಂಟ್! Galaxy A73 ಮತ್ತು Galaxy A33 ಬಿಡುಗಡೆಗೆ ಕಾದು ಕುಳಿತ ಜನರು!

  ಇದೇ ಸಂದರ್ಭದಲ್ಲಿ USOF ನಲ್ಲಿ ಖಾಸಗಿ ಸೇವಾದಾರರ ಕೊಡುಗೆಯಿದ್ದು ಇದು ಈ ಮೊದಲೇ ಉದ್ದೇಶಿಸಲಾಗಿದ್ದ ಗ್ರಾಮೀಣ ಭಾಗಗಳಿಗೂ ಅಡೆತಡೆಗಳಿಲ್ಲದ ಸಂಪರ್ಕ ಸೌಲಭ್ಯದ ಉದ್ದೇಶಕ್ಕೆ ಪೆಟ್ಟು ಕೊಡಲಿದೆ ಎಂದು ಬಿಬಿಎನ್‍ಎಲ್ ಅಧಿಕಾರಿಗಳು ಒಪ್ಪಿಕೊಂಡಿರುವುದಾಗಿ ತಿಳಿದುಬಂದಿದೆ.

  ಆದರೆ, ಕೆಲವು ಕೈಗಾರಿಕಾ ಪರಿಣಿತರು ಹೇಳುವಂತೆ ಈ ಪ್ರಸ್ತಾವಿತ ವಿಲೀನ ಯೋಜನೆಯು ಗ್ರಾಮೀಣ ಭಾಗಗಳಲ್ಲಿ ಉತ್ತಮ ಸಂಪರ್ಕವನ್ನು ಒದಗಿಸಲಿದೆ. ಏಕೆಂದರೆ ಈಗಾಗಲೇ ಗ್ರಾಮೀಣ ಭಾಗಗಳಲ್ಲಿ ಬಿಎಸ್‍ಎನ್‍ಎಲ್ ಉತ್ತಮ ಜಾಲವನ್ನು ಹೊಂದಿದ್ದಲ್ಲದೆ ಉತ್ತಮ ಮಾರುಕಟ್ಟೆ ಉಪಸ್ಥಿತಿಯನ್ನೂ ಸಹ ಹೊಂದಿರುವುದೇ ಇದಕ್ಕೆ ಕಾರಣ ಎಂದು ಅಭಿಪ್ರಾಯಪಟ್ಟಿದ್ದಾರೆನ್ನಲಾಗಿದೆ.

  ಇದನ್ನೂ ಓದಿ: WhatsApp: ಮಾರ್ಚ್​ 31ರಿಂದ ಈ ಸ್ಮಾರ್ಟ್​ಫೋನ್​ಗಳಲ್ಲಿ ವಾಟ್ಸ್​ಆ್ಯಪ್​ ಕಾರ್ಯನಿರ್ವಹಿಸಲ್ಲ!

  ಈ ಕುರಿತು ಸಭೆಯಲ್ಲಿ ಮಾತನಾಡಿರುವ ಪುರ್ವಾರ್ ಅವರು ತಮ್ಮ ಸಿಬ್ಬಂದಿಗಳನ್ನು ಉದ್ದೇಶಿಸಿ ಪ್ರಸ್ತುತ ಸಂದರ್ಭವನ್ನು ಅತ್ಯುತ್ತಮವಾಗಿ ಬಳಸಿಕೊಳ್ಳುವಂತೆ ಸಿದ್ಧರಾಗಲು ಕರೆ ನೀಡಿದ್ದಾರೆ. ಪ್ರಸ್ತುತ ಬಜೆಟ್‌ನಲ್ಲಿ ಕೇಂದ್ರವು ಬಿಎಸ್‍ಎನ್‍ಎಲ್‌ಗಾಗಿ 45,000 ಕೋಟಿ ಅನುದಾನವನ್ನು ಮೀಸಲಿಟ್ಟಿದೆ. ಇದು ಮುಂದಿನ ಕನಿಷ್ಠ 2 ವರ್ಷಗಳ ಕಾಲ ಸಂಸ್ಥೆಗೆ ಗಂಭೀರ ಅರ್ಥಿಕ ಹಿನ್ನಡೆ ಉಂಟಾಗದಂತೆ ಕಾಪಾಡುವಲ್ಲಿ ಸಕ್ಷಮವಾಗಿದ್ದು ಈ ಮೂಲಕ ಸಂಸ್ಥೆಯನ್ನು ಮತ್ತೆ ಸ್ಪರ್ಧೆಯಲ್ಲಿ ಬರುವಂತೆ ಮಾಡಬೇಕಾಗಿದೆ ಎಂದು ಹೇಳಿದ್ದಾರೆ.

  ಇದಲ್ಲದೆ ಅವರು, ಈಗಾಗಲೇ ಸಂಸ್ಥೆಯು ತನ್ನ 4ಜಿ ಪರೀಕ್ಷೆಯ ಅಂತಿಮ ಹಂತಕ್ಕೆ ತಲುಪಿದ್ದು ಸದ್ಯದಲ್ಲೇ ಆಡಳಿತ ಮಂಡಳಿಯ ಮುಂದೆ ಸೇವೆ ಸರಬರಾಜು ಮಾಡುವ ಚಿಕ್ಕ ಆರ್ಡರ್ ಒಂದನ್ನು ಇಡಲಿದ್ದು ಎಲ್ಲವೂ ಸರಿ ಹೋದ ಸಂದರ್ಭದಲ್ಲಿ ಮೇ ಅಥವಾ ಜೂನ್ ತಿಂಗಳಿನಲ್ಲಿ ಸೇವೆಯು ಕಾರ್ಯಗತವಾಗುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
  Published by:Harshith AS
  First published: