ತೆರಿಗೆದಾರರಿಗೆ ಅವರ ಟಿಡಿಎಸ್ (TDS), ಬಡ್ಡಿದರ ಎಲ್ಲವನ್ನೂ ನೋಡಲು ಅನುಕೂಲವಾಗುವಂತೆ ಸರ್ಕಾರ ಉಚಿತ ಅಪ್ಲಿಕೇಶನ್ ಒಂದನ್ನು ಬಿಡುಗಡೆ ಮಾಡಿದೆ. ಆದಾಯ ತೆರಿಗೆ ಇಲಾಖೆಯು ವಾರ್ಷಿಕ ಮಾಹಿತಿ ಹೇಳಿಕೆ (AIS) / ತೆರಿಗೆದಾರರ ಮಾಹಿತಿ ಸಾರಾಂಶದಲ್ಲಿ (TIS) ಲಭ್ಯವಿರುವಂತೆ ತೆರಿಗೆದಾರರಿಗೆ ತಮ್ಮ ಮಾಹಿತಿಯನ್ನು ವೀಕ್ಷಿಸಲು ಅನುಕೂಲವಾಗುವಂತೆ ‘ತೆರಿಗೆದಾರರಿಗೆ AIS’ ಎಂಬ ಮೊಬೈಲ್ ಅಪ್ಲಿಕೇಶನ್ (Mobile Application) ಅನ್ನು ಪ್ರಾರಂಭಿಸಿದೆ.
ತೆರಿಗೆದಾರರು ತಮ್ಮ ಮಾಹಿತಿಯನ್ನು ಪರಿಶೀಲಿಸಲು ಸರ್ಕಾರ ಬಿಡುಗಡೆ ಮಾಡಿರುವ ಈ ಅಪ್ಲಿಕೇಶನ್ ಅನುವು ಮಾಡಿಕೊಡುತ್ತದೆ.
ಏನಿದು ಅಪ್ಲಿಕೇಷನ್?
‘ಎಐಎಸ್ ಫಾರ್ ಟ್ಯಾಕ್ಸ್‌ಪೇಯರ್’ ಎಂದು ಕರೆಯಲಾಗುವ ಈ ಆ್ಯಪ್, ನಿರ್ದಿಷ್ಟ ಹಣಕಾಸು ವರ್ಷಕ್ಕೆ ನಿಮ್ಮ ಎಲ್ಲಾ ಹಣಕಾಸು ವಹಿವಾಟುಗಳನ್ನು ಪಟ್ಟಿ ಮಾಡುವ ವಿವರವಾದ ಹೇಳಿಕೆಯನ್ನು ತೋರಿಸುತ್ತದೆ. ಇದರಿಂದ ತೆರಿಗೆದಾರರು TDS/TCS, ಬಡ್ಡಿ, ಲಾಭಾಂಶಗಳು ಸೇರಿ ಇನ್ನೂ ಹೆಚ್ಚಿನ ಪ್ರಯೋಜನಗಳನ್ನುಪಡೆಯಬಹುದಾಗಿದೆ.
ಅಪ್ಲಿಕೇಶನ್ ಎಲ್ಲೆಲ್ಲಿ ಲಭ್ಯವಿದೆ?
ತೆರಿಗೆದಾರರಿಗೆ ಎಐಎಸ್ ಫಾರ್ ಟ್ಯಾಕ್ಸ್‌ಪೇಯರ್ ಅಪ್ಲಿಕೇಷನ್ ಗೂಗಲ್ ಸ್ಟೋರ್ ಮತ್ತು ಆಪಲ್ ಸ್ಟೋರ್ ಎರಡರಲ್ಲೂ ಉಚಿತವಾಗಿ ಲಭ್ಯವಿದೆ.
ಗ್ರಾಹಕ ಪ್ರಯೋಜನಗಳು
ತೆರಿಗೆದಾರರು TDS/TCS, ಬಡ್ಡಿ, ಲಾಭಾಂಶಗಳು, ಷೇರು ವಹಿವಾಟುಗಳು, ಸ್ಟಾಕ್ ವಹಿವಾಟುಗಳು, ಮ್ಯೂಚುವಲ್ ಫಂಡ್ ಚಟುವಟಿಕೆಗಳು, ತೆರಿಗೆ ಪಾವತಿಗಳು, ಆದಾಯ ತೆರಿಗೆ ಮರುಪಾವತಿಗಳು ಮತ್ತು ಇತರ ಮಾಹಿತಿಯನ್ನು (GST ಡೇಟಾ, ವಿದೇಶಿ ರವಾನೆಗಳು ಮತ್ತು ಹೆಚ್ಚಿನವು) ಗೆ ಸಂಬಂಧಿಸಿದ ಮಾಹಿತಿಯನ್ನು ವೀಕ್ಷಿಸಲು ತೆರಿಗೆದಾರರಿಗೆ ಸಹಕಾರಿಯಾಗಿದೆ.
"ತೆರಿಗೆದಾರರಿಗೆ ಸಂಬಂಧಿಸಿದ ವಿವಿಧ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯನ್ನು ಪ್ರದರ್ಶಿಸುವ ತೆರಿಗೆದಾರರಿಗೆ AIS/TIS ನ ಸಮಗ್ರ ನೋಟವನ್ನು ಒದಗಿಸುವ ಗುರಿಯನ್ನು ಅಪ್ಲಿಕೇಶನ್ ಹೊಂದಿದೆ" ಎಂದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (CBDT) ಈ ಅಪ್ಲಿಕೇಷನ್ ಬಿಡುಗಡೆ ಮಾಡಿದ ಸಂದರ್ಭದಲ್ಲಿ ತಿಳಿಸಿದೆ.
ಇದು ಆದಾಯ ತೆರಿಗೆ ಇಲಾಖೆಯ ಮತ್ತೊಂದು ಉಪಕ್ರಮವಾಗಿದ್ದು, ಸುಗಮವಾಗಿ ಅನುಸರಣೆಗೆ ಅನುಕೂಲವಾಗುವಂತೆ ವರ್ಧಿತ ತೆರಿಗೆ ಪಾವತಿದಾರರ ಸೇವೆಗಳನ್ನು ಒದಗಿಸುವ ಕ್ಷೇತ್ರದಲ್ಲಿ ಪ್ರಮುಖವಾಗಿದೆ ಎಂದು ಐಟಿ ಇಲಾಖೆ ಆ್ಯಪ್‌ನ ಉದ್ದೇಶದ ಬಗ್ಗೆ ತಿಳಿಸಿದೆ.
ಅಪ್ಲಿಕೇಶನ್ ಅನ್ನು ಹೇಗೆ ರಿಜಿಸ್ಟರ್ ಮಾಡುವುದು?
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ