• Home
  • »
  • News
  • »
  • tech
  • »
  • Fortuner Car: ಫಾರ್ಚುನರ್ ಮಾರಾಟದಲ್ಲಿ ಕಂಪೆನಿಗೆ ಬರೀ 45,000 ಲಾಭ, ಆದ್ರೆ ಸರ್ಕಾರದ ಬೊಕ್ಕಸ ಸೇರುವುದು ರೂ 18 ಲಕ್ಷ! ಇದ್ಯಾವ ಲೆಕ್ಕ?

Fortuner Car: ಫಾರ್ಚುನರ್ ಮಾರಾಟದಲ್ಲಿ ಕಂಪೆನಿಗೆ ಬರೀ 45,000 ಲಾಭ, ಆದ್ರೆ ಸರ್ಕಾರದ ಬೊಕ್ಕಸ ಸೇರುವುದು ರೂ 18 ಲಕ್ಷ! ಇದ್ಯಾವ ಲೆಕ್ಕ?

ಫಾರ್ಚುನರ್  ಕಾರು

ಫಾರ್ಚುನರ್ ಕಾರು

ಕೆಲವು ವರ್ಷಗಳ ಹಿಂದಿನ ಮಾಲೀಕತ್ವ ವೆಚ್ಚಗಳಿಗೆ ಹೋಲಿಸಿದಾಗ ಇಂದಿನ ದಿನಗಳಲ್ಲಿ ಕಾರು ಖರೀದಿಸುವುದು ಸಾಕಷ್ಟು ದುಬಾರಿಯಾಗಿದೆ. ಕಾರುಗಳು ಹೆಚ್ಚು ಬೆಲೆಯಲ್ಲಿ ಮಾರಾಟವಾಗುತ್ತಿರುವುದರಿಂದ ತಯಾರಕರಿಗೆ ಹೆಚ್ಚಿನ ಲಾಭವುಂಟಾಗುತ್ತಿದೆ ಎಂಬುದಾಗಿ ಊಹಿಸಿದ್ದರೆ ಅದು ತಪ್ಪು ಎಂದೇ ಮಾರುಕಟ್ಟೆ ತಿಳಿಸುತ್ತದೆ.

ಮುಂದೆ ಓದಿ ...
  • Share this:

ಕಚ್ಚಾ ವಸ್ತುಗಳ ಹೆಚ್ಚಿದ ಬೆಲೆ, ಮಾನವಶಕ್ತಿ ಮತ್ತು ಹೆಚ್ಚುವರಿ ತೆರಿಗೆಗಳ (Tax) ಕಾರಣ ಮಾರುಕಟ್ಟೆಯಲ್ಲಿ ಇದೀಗ ಹೊಸ ಕಾರುಗಳ (New Cars) ಬೆಲೆ ಗಗನಕ್ಕೇರಿದೆ. ಕೆಲವು ವರ್ಷಗಳ ಹಿಂದಿನ ಮಾಲೀಕತ್ವ ವೆಚ್ಚಗಳಿಗೆ ಹೋಲಿಸಿದಾಗ ಇಂದಿನ ದಿನಗಳಲ್ಲಿ ಕಾರು ಖರೀದಿಸುವುದು ಸಾಕಷ್ಟು ದುಬಾರಿಯಾಗಿದೆ. ಕಾರುಗಳು ಹೆಚ್ಚು ಬೆಲೆಯಲ್ಲಿ ಮಾರಾಟವಾಗುತ್ತಿರುವುದರಿಂದ ತಯಾರಕರಿಗೆ ಹೆಚ್ಚಿನ ಲಾಭವುಂಟಾಗುತ್ತಿದೆ ಎಂಬುದಾಗಿ ಊಹಿಸಿದ್ದರೆ ಅದು ತಪ್ಪು ಎಂದೇ ಮಾರುಕಟ್ಟೆ ತಿಳಿಸುತ್ತದೆ. ಭಾರತದಲ್ಲಿ (India) ಮಾರಾಟವಾಗುವ ಪ್ರತಿ ಟೊಯೊಟೊ ಫಾರ್ಚುನರ್‌ನಲ್ಲಿ (Toyota Fortuner) ಭಾರತ ಸರಕಾರವು 18 ಲಕ್ಷ ರೂಪಾಯಿಗಳನ್ನು ಹೇಗೆ ಗಳಿಸುತ್ತಿದೆ ಎಂಬುದಕ್ಕೆ ಈ ಲೇಖನ ಉದಾಹರಣೆಯಾಗಿದೆ.


ಸರಕಾರಕ್ಕೆ ಹೆಚ್ಚಿನ ಲಾಭ ಹೇಗೆ?
ಹೌದು, ಸರಕಾರಕ್ಕೆ ಪ್ರತಿ ಕಾರಿನ ತಯಾರಕರು ತೆರಿಗೆ ನೀಡಬೇಕು ಎಂಬುದು ಇದರ ಹಿಂದಿರುವ ಸತ್ಯವಾಗಿದೆ. ಫಾರ್ಚುನರ್ ವಿಷಯದಲ್ಲಿ ಸರಕಾರ 18 ಲಕ್ಷ ಗಳಿಸಿದರೆ ತಯಾರಕರಿಗೆ ಸಿಗುವುದು ಬರೀ ರೂ 45,000 ವಾಗಿದೆ. ಸಿ.ಎ ಸಾಹಿಲ್ ಜೈನ್ ಮಾಡಿರುವ ವಿಡಿಯೋವು ಈ ಬಗ್ಗೆ ವಿವರವಾದ ಮಾಹಿತಿಯನ್ನು ನೀಡುತ್ತದೆ.


ಹೊಸ ಕಾರಿಗೆ ಯಾರು ಎಷ್ಟು ಗಳಿಸುತ್ತಾರೆ?
ವಾಹನದ ಗ್ರಾಹಕರು ಪಾವತಿಸುವ ವೆಚ್ಚವನ್ನು ಮೂರು ವಿಭಿನ್ನ ವಿಭಾಗಗಳಾಗಿ ವಿಂಗಡಿಸಲಾಗಿದೆ ಎಂಬುದನ್ನು ವಿಡಿಯೋ ತಿಳಿಸಿದೆ. ಭಾರತದಲ್ಲಿ ಮಾರಾಟವಾಗುವ ಪ್ರತಿಯೊಂದು ಕಾರಿನಲ್ಲೂ ಲಾಭ ಗಳಿಸುವ ತಯಾರಕರು, ಮತ್ತು ಸರ್ಕಾರ ಒಪ್ಪಂದವನ್ನು ಮಾಡಿಕೊಳ್ಳುತ್ತದೆ. ಸರಕಾರದ ಬೊಕ್ಕಸ ಸೇರುವ ಹಣವನ್ನು ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರ ಹಂಚಿಕೆ ಮಾಡಿಕೊಳ್ಳುತ್ತದೆ. ಉದಾಹರಣೆಗೆ ವಿಮೆ ಮತ್ತು ರಸ್ತೆ ತೆರಿಗೆ ಒಳಗೊಂಡಂತೆ 47.35 ಲಕ್ಷ ರೂ.ಗಳ ಬೆಲೆಯ ಟೊಯೊಟಾ ಫಾರ್ಚುನರ್‌ನಲ್ಲಿ ಫಾರ್ಚುನರ್‌ನ ತಯಾರಕರಾದ ಟೊಯೊಟಾ ಪ್ರತಿ ಯೂನಿಟ್‌ಗೆ ಕೇವಲ ರೂ 45,000 ಗಳಿಸುತ್ತದೆ.


ಇದನ್ನೂ ಓದಿ:  Ola Scooter: ಓಲಾದಿಂದ ಹೊಸ ಎಲೆಕ್ಟ್ರಿಕ್‌ ಸ್ಕೂಟರ್‌ ಲಾಂಚ್, ರಿಲೀಸ್‌ಗೂ ಮುಂಚೆನೇ ಸಾವಿರಾರು ಬುಕ್ಕಿಂಗ್ಸ್!


ಕಾರಿನ ಪ್ರತಿ ಘಟಕದಲ್ಲಿ ಡೀಲರ್‌ಶಿಪ್ 2 ರಿಂದ 2.5% ವರೆಗೆ ಮಾರ್ಜಿನ್ ಗಳಿಸಬಹುದು. ಫಾರ್ಚೂನರ್‌ನ ವಿಷಯದಲ್ಲಿ, ಶೋರೂಮ್‌ ಕಾರಿಗೆ ಯಾವುದೇ ರಿಯಾಯಿತಿಯನ್ನು ನೀಡದಿದ್ದರೆ, ಡೀಲರ್‌ಶಿಪ್ ರೂ 1 ಲಕ್ಷದವರೆಗೆ ಮಾರ್ಜಿನ್ ಗಳಿಸಬಹುದು.


ಸರಕಾರ ಹೆಚ್ಚು ಹಣ ಗಳಿಸುವುದು ಹೇಗೆ?
ಹಣದ ಪ್ರಮುಖ ಭಾಗವು ಸರಕಾರದ ಬೊಕ್ಕಸಕ್ಕೆ ಹೋಗುತ್ತದೆ. ಭಾರತದಲ್ಲಿ ಮಾರಾಟವಾಗುವ ಟೊಯೊಟಾ ಫಾರ್ಚುನರ್‌ನ ಪ್ರತಿ ಯುನಿಟ್‌ನಲ್ಲಿ ಸರಕಾರವು ರೂ 18 ಲಕ್ಷ ರೂಪಾಯಿಗಳನ್ನು ಹೇಗೆ ಗಳಿಸುತ್ತದೆ ಎಂಬುದನ್ನು ವಿಡಿಯೋ ವಿವರಿಸಿದೆ. ಈ ಮೊತ್ತವನ್ನು ಜಿಎಸ್‌ಟಿಯಿಂದ ಗಳಿಸಲಾಗಿದೆ ಎಂಬುದು ಇಲ್ಲಿ ನಿಖರವಾಗಿದೆ.


ಜಿಎಸ್‌ಟಿಯು ಎರಡು ಅಂಶಗಳನ್ನು ಹೊಂದಿದೆ. ಜಿಎಸ್‌ಟಿ 28% ವಾಗಿದ್ದರೆ ಜಿಎಸ್‌ಟಿ ಪರಿಹಾರ 22% ವಾಗಿದೆ ಅಂತೆಯೇ ಕಾರು ಬ್ರ್ಯಾಂಡ್ ನ್ಯೂ ಫಾರ್ಚುನರ್‌ ಆಗಿದ್ದರೆ ಬೆಲೆ ರೂ 5.27 ಹಾಗೂ ರೂ 7.28 ಲಕ್ಷವಾಗಿದ್ದು, ಸರಕಾರಕ್ಕೆ ಹಣ ಗಳಿಸುವ ಇತರ ಮಾರ್ಗಗಳಾಗಿ ರಸ್ತೆ ನೋಂದಣಿ, ಫಾಸ್ಟ್ ಟ್ಯಾಗ್, ರಸ್ತೆ ತೆರಿಗೆ ಮೊದಲಾದ ವೆಚ್ಚಗಳು ಇದರಲ್ಲಿ ಪರಿಗಣನೆಗೆ ಬರುತ್ತದೆ. ಎಲ್ಲಾ ತೆರಿಗೆ ಸೇರಿ ಭಾರತದಲ್ಲಿ ಮಾರಾಟವಾಗುವ ಟೊಯೊಟಾ ಫಾರ್ಚುನರ್‌ನ ಪ್ರತಿ ಯೂನಿಟ್‌ನಲ್ಲಿ ಸರ್ಕಾರವು ಸುಮಾರು 18 ಲಕ್ಷ ಗಳಿಸುತ್ತದೆ.


ಕೇಂದ್ರ ಸರಕಾರವು ಹೆಚ್ಚು ಹಣ ಗಳಿಸುತ್ತದೆ
ಇದೀಗ ಈ ಮೊತ್ತವನ್ನು ರಾಜ್ಯ ಮತ್ತು ಕೇಂದ್ರ ಸರಕಾರದ ನಡುವೆ ಹಂಚಿಕೆ ಮಾಡಲಾಗಿದೆ. ವಿಭಜನೆಯ ಬಗ್ಗೆ ನಮಗೆ ಖಚಿತತೆ ಇಲ್ಲದಿದ್ದರೂ, ಮಾರುಕಟ್ಟೆಯಲ್ಲಿ ಹೊಸ ಕಾರು ಮಾರಾಟವಾದಾಗಲೆಲ್ಲಾ ಕೇಂದ್ರ ಸರಕಾರವು ಹೆಚ್ಚು ಗಳಿಸುತ್ತದೆ ಎಂದು ತೋರುತ್ತಿದೆ.


ಇದನ್ನೂ ಓದಿ:  Car Theft: ನಾಳೆ ನಿಮ್ಮ ಕಾರ್ ಬೈಕ್​​ಗಳು ಕಳುವಾಗಬಹುದು, ಇರಲಿ ಎಚ್ಚರ!


ಸಾಂಕ್ರಾಮಿಕ ರೋಗ ಆರಂಭವಾಗುವುದರೊಂದಿಗೆ ಮಾರುಕಟ್ಟೆಯಲ್ಲಿ ಕಾರು ಮಾರಾಟವು ವೇಗವನ್ನು ಪಡೆದುಕೊಂಡಿದೆ. ಮೆಟ್ರೋ, ರೈಲು, ಬಸ್‌ಗಳಂತಹ ಸಾರಿಗೆಯ ಬದಲಿಗೆ ಜನರು ತಮ್ಮದೇ ಆದ ವಾಹನಗಳಲ್ಲಿ ಪ್ರಯಾಣಿಸುವುದಕ್ಕೆ ಆದ್ಯತೆಯನ್ನು ನೀಡುತ್ತಿದ್ದಾರೆ. ಹೀಗಾಗಿ ಕಾರುಗಳ ಮಾರಾಟವು ನಿಧಾನವಾಗಿ ಏರಿಕೆಯಾಗುತ್ತಿದೆ

Published by:Ashwini Prabhu
First published: