• Home
  • »
  • News
  • »
  • tech
  • »
  • 4G services: ಸಂಪರ್ಕರಹಿತ ಹಳ್ಳಿಗಳಿಗೂ ಬರಲಿದೆ 4G ನೆಟ್ವರ್ಕ್; 3,683 ಕೋಟಿ ರೂ. ವೆಚ್ಚದಲ್ಲಿ ಜಿಯೋ, ಏರ್‌ಟೆಲ್‌ಗೆ ಜವಾಬ್ದಾರಿ

4G services: ಸಂಪರ್ಕರಹಿತ ಹಳ್ಳಿಗಳಿಗೂ ಬರಲಿದೆ 4G ನೆಟ್ವರ್ಕ್; 3,683 ಕೋಟಿ ರೂ. ವೆಚ್ಚದಲ್ಲಿ ಜಿಯೋ, ಏರ್‌ಟೆಲ್‌ಗೆ ಜವಾಬ್ದಾರಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

5G ಯುಗ ಪ್ರಾರಂಭವಾಗುತ್ತಾ ಬಂದಿದ್ದರೂ ದೇಶದ ಅನೇಕ ಹಳ್ಳಿಗಳಿಗೆ 4G ಸಂಪರ್ಕವೇ ಸಾಧ್ಯವಾಗಿಲ್ಲ. ಈ ಕಾರಣದಿಂದ ಸರ್ಕಾರ ಸಂಪರ್ಕರಹಿತ ಹಳ್ಳಿಗಳಲ್ಲಿ 4G ಸೇವೆ ನೀಡಲು ಮುಂದಾಗಿದ್ದು, ಇದರ ಜವಾಬ್ದಾರಿಯನ್ನು ಟೆಲಿಕಾಂ ಆಪರೇಟರ್‌ಗಳಾದ ಭಾರ್ತಿ ಏರಟೆಲ್‌ ಮತ್ತು ರಿಲಾಯನ್ಸ್‌ ಜಿಯೋ ಸಂಸ್ಥೆಗಳಿಗೆ ವಹಿಸಿದೆ.

ಮುಂದೆ ಓದಿ ...
  • Share this:

ಹೊಸದಿಲ್ಲಿ: ಕೆಲ ದಿನಗಳ ಹಿಂದಷ್ಟೇ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಭಾರತದಲ್ಲಿ (India) 5G ಆರಂಭಕ್ಕಾಗಿ ಟೆಸ್ಟ್‌ಬೆಡ್‌ಗೆ (Test bed) ಚಾಲನೆ ನೀಡಿದ್ದರು. ಅದಲ್ಲದೇ, 2030ರ ವೇಳೆಗೆ ದೇಶದಲ್ಲಿ 6G ಕೂಡ ತರುತ್ತೇವೆ ಎಂದು ಹೇಳಿದ್ದರು. ಆದರೆ, 5G ಯುಗ ಪ್ರಾರಂಭವಾಗುತ್ತಾ ಬಂದಿದ್ದರೂ ದೇಶದ ಅನೇಕ ಹಳ್ಳಿಗಳಿಗೆ (Village) 4G ಸಂಪರ್ಕವೇ ಸಾಧ್ಯವಾಗಿಲ್ಲ. ಈ ಕಾರಣದಿಂದ ಸರ್ಕಾರ (Government) ಸಂಪರ್ಕರಹಿತ ಹಳ್ಳಿಗಳಲ್ಲಿ (Uncovered villages) 4G ಸೇವೆ ನೀಡಲು ಮುಂದಾಗಿದ್ದು, ಇದರ ಜವಾಬ್ದಾರಿಯನ್ನು ಟೆಲಿಕಾಂ ಆಪರೇಟರ್‌ಗಳಾದ (Telecom operator) ಭಾರ್ತಿ ಏರಟೆಲ್‌ (Airtel) ಮತ್ತು ರಿಲಾಯನ್ಸ್‌ ಜಿಯೋ (Reliance Jio) ಸಂಸ್ಥೆಗಳಿಗೆ ವಹಿಸಿದೆ.


4G ಸೇವೆ ನೀಡುವುದಕ್ಕಾಗಿ 3,683 ಕೋಟಿ ರೂ. ಮಂಜೂರು
ನಿಗದಿತ ಜಿಲ್ಲೆಗಳ ಸಂಪರ್ಕರಹಿತ ಹಳ್ಳಿಗಳಲ್ಲಿ 4G ಸೇವೆ ನೀಡುವುದಕ್ಕಾಗಿ ಕೇಂದ್ರ ಸರ್ಕಾರ 3,683 ಕೋಟಿ ರೂ.ಗಳನ್ನು ವ್ಯಯಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಈ ಮಹತ್ವಾಕಾಂಕ್ಷಿ ಯೋಜನೆಯ ಅಡಿಯಲ್ಲಿ ಭಾರ್ತಿ ಏರ್‌ಟೆಲ್‌ ಜಾರ್ಖಂಡ್‌ ಮತ್ತು ಮಹಾರಾಷ್ಟ್ರದಲ್ಲಿ 847.95 ಕೋಟಿ ರೂ. ಖರ್ಚು ಮಾಡಿ 1,083 ಮೊಬೈಲ್‌ ಟವರ್‌ಗಳನ್ನು ನಿರ್ಮಿಸಲಿದ್ದರೆ, ರಿಲಾಯನ್ಸ್‌ ಜಿಯೋ 2,836 ಕೋಟಿ ರೂ. ವ್ಯಯಿಸಿ 3,696 ಟವರ್‌ಗಳನ್ನು ನಿರ್ಮಿಸಲಿದೆ ಎಂದು ತಿಳಿದುಬಂದಿದೆ.


ಮೇ ತಿಂಗಳಲ್ಲಿಯೇ ಈ ಯೋಜನೆಯನ್ನು ಎರಡು ಸಂಸ್ಥೆಗಳಿಗೆ ವಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಐದು ರಾಜ್ಯಗಳಲ್ಲಿ ಆಯ್ದ ಜಿಲ್ಲೆಗಳ ಸಂಪರ್ಕ ರಹಿತ ಹಳ್ಳಿಗಳಲ್ಲಿ 4G ಸೇವೆ ನೀಡುವ ಈ ಯೋಜನೆಗೆ ಕಳೆದ ವರ್ಷವೇ ಕೇಂದ್ರ ಸರ್ಕಾರದ ಕ್ಯಾಬಿನೆಟ್‌ನಲ್ಲಿ ಅನುಮತಿ ದೊರೆತಿತ್ತು. ಅದಾದ ಬಳಿಕ ಏರ್‌ಟೆಲ್‌ ಮತ್ತು ಜಿಯೋ ಕಂಪನಿಗಳಿಗೆ ಯೋಜನೆಯನ್ನು ವಹಿಸಿ ಆಯ್ದ ಹಳ್ಳಿಗಳಿಗೆ 4G ಸೇವೆ ನೀಡಲು 18 ತಿಂಗಳ ಕಾಲಾವಕಾಶ ನೀಡಲಾಗಿದೆ ಎಂದು ಹೇಳಲಾಗಿದೆ.


44 ಜಿಲ್ಲೆಗಳ 7,287 ಗ್ರಾಮಗಳಿಗೆ ಸಂಪರ್ಕ
ಕೇಂದ್ರ ಸರ್ಕಾರ ಈ ಯೋಜನೆಯಡಿಯಲ್ಲಿ 4G ಸೇವೆ ನೀಡಲು 7,287 ಸಂಪರ್ಕ ರಹಿತ ಹಳ್ಳಿಗಳನ್ನು ಆಯ್ಕೆ ಮಾಡಿಕೊಂಡಿದೆ. ಆಂಧ್ರ ಪ್ರದೇಶ, ಛತ್ತೀಸ್‌ಗಢ, ಜಾರ್ಖಂಡ್‌, ಮಹಾರಾಷ್ಟ್ರ ಮತ್ತು ಓಡಿಶಾದ 44 ಜಿಲ್ಲೆಗಳಲ್ಲಿ ಈ ಹಳ್ಳಿಗಳನ್ನು ಗುರುತಿಸಲಾಗಿದೆ. ಐದು ವರ್ಷಗಳ ಕಾರ್ಯನಿರ್ವಹಣೆ ವೆಚ್ಚ ಸೇರಿ ಈ ಯೋಜನೆಗೆ 6,466 ಕೋಟಿ ರೂ. ಖರ್ಚಾಗಲಿದೆ.


ಇದನ್ನೂ ಓದಿ: Apple Phone: ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಆ್ಯಪಲ್ ಕಂಪನಿಗೆ ಎರಡನೇ ಸ್ಥಾನ; ಹಾಗಾದ್ರೆ ಮೊದಲನೇ ಸ್ಥಾನದಲ್ಲಿರುವುದು ಯಾವುದು?


ಈ ಯೋಜನೆಗೆ ಯುನಿವರ್ಸಲ್‌ ಸರ್ವಿಸ್‌ ಒಬ್ಲಿಗೇಷನ್‌ ಫಂಡ್‌ (USOF) ಸಂಸ್ಥೆಯು ಹೂಡಿಕೆ ಮಾಡಿದ್ದು, ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಯೋಜನೆಯನ್ನು ಸಾಕಾರಗೊಳಿಸಲಿದೆ. ನವೆಂಬರ್‌ 2023ಕ್ಕೆ ಸಂಪರ್ಕ ರಹಿತ ಹಳ್ಳಿಗಳಿಗೆ 4G ಸೇವೆ ನೀಡುವ ಮಹತ್ವಾಕಾಂಕ್ಷೆ ಯೋಜನೆ ಸಂಪೂರ್ಣವಾಗಲಿದ್ದು, ಕೇಂದ್ರ ಸರ್ಕಾರ 3,683 ಕೋಟಿ ರೂ. ಕಾಯ್ದಿರಿಸಿದ್ದರೆ, ಉಳಿದ ಹಣವನ್ನು ಯುಎಸ್‌ಒಎಫ್‌ ಸಂಸ್ಥೆ ನೀಡುವ ಸಾಧ್ಯತೆ ಇದೆ.


2030ರ ವೇಳೆಗೆ ದೇಶದಲ್ಲಿ 6G
ದೇಶದ ಅನೇಕ ಹಳ್ಳಿಗಳು ಈಗ 4G ಸಂಪರ್ಕ ಪಡೆಯುತ್ತಿವೆ. ಆದರೆ, ಈ ದಶಕದ ಅಂತ್ಯದ ವೇಳೆಗೆ ದೇಶದಲ್ಲಿ ಅತಿವೇಗ ಇಂಟರ್‌ನೆಟ್‌ ಸಂಪರ್ಕ ಒದಗಿಸುವ 6G ಟೆಲಿಕಾಂ ನೆಟ್‌ವರ್ಕ್‌ ಅನ್ನು ಆರಂಭಿಸುವ ಗುರಿಯನ್ನು ಇಟ್ಟುಕೊಂಡಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಘೋಷಿಸಿದ್ದರು.


ಇದನ್ನೂ ಓದಿ:  Sim Card Rule: ಸರ್ಕಾರ ಜಾರಿಗೆ ತಂದಿದೆ ಹೊಸ ಸಿಮ್ ಕಾರ್ಡ್ ರೂಲ್ಸ್! ಹೊಸ ಸಿಮ್ ಖರೀದಿ ಮಾಡಲು ಏನು ಮಾಡಬೇಕು ಗೊತ್ತಾ?


ಭಾರತದಲ್ಲಿ ಪ್ರಸ್ತುತ 3G ಮತ್ತು 4G ಟೆಲಿಕಾಂ ನೆಟ್‌ವರ್ಕ್‌ಗಳನ್ನು ಹೊಂದಿದ್ದು, ಟೆಲಿಕಾಂ ಕಂಪನಿಗಳು ಮುಂದಿನ ಕೆಲವು ತಿಂಗಳುಗಳಲ್ಲಿ 5G ಸೇವೆಯನ್ನು ನೀಡಲು ಸಜ್ಜಾಗುತ್ತಿವೆ. ಈ ಹಿನ್ನೆಲೆ ಈಗಾಗಲೇ 5G ಟೆಸ್ಟ್‌ಬೆಡ್‌ಗೆ ಪ್ರಧಾನಿ ಮೋದಿ ಚಾಲನೆ ನೀಡಿದ್ದು, ಪ್ರಯೋಗಾರ್ಥ ಪರೀಕ್ಷೆ ಆರಂಭವಾಗಿದೆ. ಟೆಲಿಕಾಂ ವಲಯದ ನಿಯಂತ್ರಕ ಸಂಸ್ಥೆಯಾಗಿರುವ ಟ್ರಾಯ್‌ ಬೆಳ್ಳಿ ಮಹೋತ್ಸವ ಸಮಾರಂಭದಲ್ಲಿ ಮಾತನಾಡಿದ್ದ ಮೋದಿ, 5G ನೆಟ್‌ವರ್ಕ್ ಪ್ರಾರಂಭದಿಂದ ಭಾರತದ ಆರ್ಥಿಕತೆಗೆ 450 ಶತಕೋಟಿ ಡಾಲರ್‌ ತಂದು ಕೊಡಲಿದೆ ಎಂದು ಅಂದಾಜಿಸಲಾಗಿದೆ.

Published by:Ashwini Prabhu
First published: