Google: ಗೂಗಲ್​ ಪರಿಚಯಿಸಲಿದೆ ಕಡಿಮೆ ಬೆಲೆಯ ಹೈ-ಕ್ವಾಲಿಟಿ ಸ್ಮಾರ್ಟ್​ಫೋನ್​!

Google: ವರ್ಚುವಲ್​​​ ಗೂಗಲ್​​ ಫಾರ್​ ಇಂಡಿಯಾ 2020 ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸೀಸರ್​​​ ಸೆನ್​​ಗುಪ್ತಾ ಕಡಿಮೆ ಬೆಲೆ ಆ್ಯಂಡ್ರಾಯ್ಡ್​ ಸ್ಮಾರ್ಟ್​ಫೋನ್​​​ ಅನ್ನು ಭಾರತೀಯರಿಗೆ ಪರಿಚಯಿಸಲಿದ್ದೇವೆ. ಹೀಗಾಗಿ ಹಲವಾರು ಹಾರ್ಡ್​ವೇರ್​​ ತಯಾರಿಕ ಕಂಪೆನಿಯೊಂದಿಗೆ ಒಪ್ಪಂಪ ಮಾಡಿಕೊಂಡಿದ್ದೇವೆ ಎಂದು ಹೇಳಿದರು.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  ತಂತ್ರಜ್ಞಾನ ದೈತ ಗೂಗಲ್ ಕಂಪೆನಿ​​ ನೂತನ ಸ್ಮಾರ್ಟ್​ಫೋನ್​ವೊಂದನ್ನು ಬಿಡುಗಡೆ ಮಾಡಲಿದೆ. ಜೊತೆಗೆ ಗೂಗಲ್​ ಸಿದ್ಧಪಡಿಸುತ್ತಿರುವ ಸ್ಮಾರ್ಟ್​ಫೋನ್​​ ಹೈ-ಕ್ವಾಲಿಟಿಯದ್ದಾಗಿದ್ದು, ಕಡಿಮೆ ಬಜೆಟ್​ನಲ್ಲಿ ಗ್ರಾಹಕರ ಕೈಸೇರುವಂತೆ ಯೋಜನೆ ಹಾಕಿಕೊಂಡಿದ್ದೇವೆ ಎಂದು ಗೂಗಲ್​ ಕಂಪನಿಯ ಪ್ರಮುಖ ಉದ್ಯೋಗಿ ಸೀಸರ್​ ಸೆನ್​ಗುಪ್ತಾ ಹೇಳಿದರು.

  ವರ್ಚುವಲ್​​​ ಗೂಗಲ್​​ ಫಾರ್​ ಇಂಡಿಯಾ 2020 ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸೀಸರ್​​​ ಸೆನ್​​ಗುಪ್ತಾ ಕಡಿಮೆ ಬೆಲೆ ಆ್ಯಂಡ್ರಾಯ್ಡ್​ ಸ್ಮಾರ್ಟ್​ಫೋನ್​​​ ಅನ್ನು ಭಾರತೀಯರಿಗೆ ಪರಿಚಯಿಸಲಿದ್ದೇವೆ. ಹೀಗಾಗಿ ಹಲವಾರು ಹಾರ್ಡ್​ವೇರ್​​ ತಯಾರಿಕ ಕಂಪೆನಿಯೊಂದಿಗೆ ಒಪ್ಪಂಪ ಮಾಡಿಕೊಂಡಿದ್ದೇವೆ ಎಂದು ಹೇಳಿದರು.

  ನಂತರ ಮಾತು ಮುಂದುವರಿಸಿದ ಅವರು, ಕಂಪನಿ ಉತ್ತಮ ಗುಣಮಟ್ಟದ ಆ್ಯಂಡ್ರಾಯ್ಡ್​ ಫೋನ್​​​ಗಳನ್ನು ಸಮಂಜಸವಾದ ಬೆಲೆಯಲ್ಲಿ ಬಿಡುಗಡೆ ಮಾಡುವುದರಿಂದ ಹೆಚ್ಚಿನ ಜನರು ಇಂಟರ್​ನೆಟ್​ ಪ್ರವೇಶ ಪಡೆಯಬಹುದು ಎಂದು ಹೇಳಿದರು.

  ವರ್ಚುವಲ್​ ಗೂಗಲ್​ ಇಂಡಿಯಾ ಫಾರ್​ ಕಾರ್ಯಕ್ರಮದಲ್ಲಿ ಗೂಗಲ್ ಕಂಪೆನಿ ಹಾಕಿಕೊಂಡ ಹಲವಾರು ಯೋಜನೆಗಳನ್ನು ತೆರೆದಿಟ್ಟಿದೆ. ಮುಂದಿನ ದಿನಗಳಲ್ಲಿ ಗೂಗಲ್​ ಸಿಬಿಎಸ್​ಇ, ಕೌಶಲ್ಯ ಶಿಕ್ಷಣ ಮತ್ತು ತರಬೇತಿಯೊಂದಿಗೆ ಹೊಸ ಸಹಭಾಗಿತ್ವವನ್ನು ರೂಪಿಸಿದೆ.

  2020ರ ಅಂತ್ಯದ ವೇಳೆಗೆ ಜಿ ಸೂಟ್​ ಫಾರ್​ ಎಜುಕೇಶನ್​​, ಗೂಗಲ್​ ಕ್ಲಾಸ್​ರೂಮ್​​, ಯೂಟ್ಯೂಬ್​​ ಮತ್ತು ಹೆಚ್ಚಿನ ಪರಿಕರಗಳನ್ನು ಬಳಸಿಕೊಂಡು ಆನ್​ಲೈನ್​ ಕಲಿಕೆಗೆ ಹೆಚ್ಚಿನ ಒತ್ತು ನೀಡಲಿದ್ದೇವೆ. ಹಾಗಾಗಿ ಭಾರತದಾದ್ಯಂತ 22,000 ಶಾಲೆಗಳಗಲ್ಲಿ 1 ಮಿಲಿಯನ್​ ಶಿಕ್ಷಕರನ್ನು ನಾವು ಶಕ್ತಗೊಳಿಸುತ್ತೇವೆ ಎಂದು ಗೂಗಲ್​ ತಿಳಿಸಿದೆ.

  ಮುಂದಿನ   5 ರಿಂದ7 ವರ್ಷದ ಒಳಗೆ ಗೂಗಲ್​​ ಕಂಪನಿ 75,00 ಕೋಟಿ ರೂಪಾಯಿ ಅಥವಾ ಸರಿಸುಮಾರು 10 ಬಿಲಿಯನ್​​ ಹಣವನ್ನು ಭಾರತಕ್ಕೆ ಹೂಡಿಕೆ ಮಾಡಲಿದ್ದೇವೆ ಎಂದು ಗೂಗಲ್​ ಸಿಇಒ ಸುಂದರ್​​ ಪಿಚೈ ಹೇಳಿದ್ದಾರೆ

  ಸ್ಯಾಂಡಲ್​ವುಡ್​ ಖ್ಯಾತ ನಟನ ತಾಯಿಗೆ ಕೊರೋನಾ ಪಾಸಿಟಿವ್​!

  John Cena: ಅಮಿತಾಭ್​, ಅಭಿಷೇಕ್​ ಬಚ್ಚನ್​ ಫೋಟೋ ಹಂಚಿಕೊಂಡ WWE ಚಾಂಪಿಯನ್ ಜಾನ್ ಸೀನಾ​

  D Boss Darshan: ದರ್ಶನ್​ ಮೇಕಪ್​ ಮ್ಯಾನ್​ ಸಾವು; ಟ್ವೀಟ್​ ಮೂಲಕ ಸ್ಮರಿಸಿಕೊಂಡ ಡಿ ಬಾಸ್​
  Published by:Harshith AS
  First published: