ಭಾರತದಲ್ಲಿ ಕಡಿಮೆ ಬಜೆಟ್​ ಮೊಬೈಲ್​ ಬಿಡುಗಡೆಗೆ ಗೂಗಲ್​ ತೀರ್ಮಾನ


Updated:August 30, 2018, 2:31 PM IST
ಭಾರತದಲ್ಲಿ ಕಡಿಮೆ ಬಜೆಟ್​ ಮೊಬೈಲ್​ ಬಿಡುಗಡೆಗೆ ಗೂಗಲ್​ ತೀರ್ಮಾನ
credit: WylsacomRed'

Updated: August 30, 2018, 2:31 PM IST
ಭಾರತದಲ್ಲಿ ಮಧ್ಯಮ ಬಜೆಟ್​ನ ಮೊಬೈಲ್​ಗಳನ್ನು ಮಾರಾಟ ಮಾಡಿ ಅತ್ಯಲ್ಪ ಸಮಯದಲ್ಲೇ ಭಾರೀ ಖ್ಯಾತಿ ಗಳಿಸಿದ ಚೀನೀ ಮೊಬೈಲ್​ಗಳಿಗೆ ಸೆಡ್ಡು ಹೊಡೆಯಲು ತೀರ್ಮಾನಿಸಿರುವ ಗೂಗಲ್ ಸಂಸ್ಥೆ, ಇದೀಗ ಕಡಿಮೆ ಬಜೆಟ್​​ ಅಥವಾ ಮಧ್ಯಮ ಬಜೆಟ್​ನ ಪಿಕ್ಸೆಲ್ ಮೊಬೈಲ್​ ಬಿಡುಗಡೆ ಮಾಡುತ್ತಿದೆ ಎನ್ನಲಾಗಿದೆ.

ಎಕನಾಮಿಕ್ಸ್​ ಟೈಮ್ಸ್ ವರದಿ ಪ್ರಕಾರ, ಪಿಕ್ಸೆಲ್​ ಬ್ರ್ಯಾಂಡ್​ನಡಿ 30,000 ರಿಂದ 50,000ರೂ ಒಳಗಿನ ಬಜೆಟ್​ ಮೊಬೈಲ್​ಗಳನ್ನು ಭಾರತದಲ್ಲಿ ಬಿಡುಗಡೆ ಮಾಡುವ ಸಾಧ್ಯತೆಗಳಿದ್ದು, ಒನ್​ಪ್ಲಸ್​ ಹಾಗೂ ಇದಕ್ಕೆ ಪೂರಕವಾದ ಮೊಬೈಲ್​ಗಳಿಗೆ ನೇರ ಸ್ಪರ್ಧೆ ನೀಡಲು ಗೂಗಲ್​ ತೀರ್ಮಾನಿಸಿದೆ. ಹೀಗಾಗಿ ಕನಿಷ್ಟ ಎಂದರೂ 45,000 ರೂ ಒಳಗೆ ಅತ್ಯುತ್ತಮ ದರ್ಜೆಯ ಪಿಕ್ಸೆಲ್​ ಮೊಬೈಲ್​ಗಳನ್ನು ಮಾರಾಟ ಮಾಡಲು ತೀರ್ಮಾನಿಸಿರುವುದಾಗಿ ವರದಿಯಾಗಿದೆ.

ಇನ್ನು ಬಿಜಿಆರ್​ ವರದಿ ಪ್ರಕಾರ, ಗೂಗಲ್​ ಟೆಕ್​ ಸಂಸ್ಥೆಯ ತಂಜ್ಞರು ಭಾರತಕ್ಕೆ ಭೇಟಿ ನೀಡಿದ್ದು ಮಾರುಕಟ್ಟೆಯ ಅಧ್ಯಯನಕ್ಕೆ ಪೂರಕವಾದ ಸಮೀಕ್ಷೆ ನಡೆಸಿದ್ದಾರೆ. ವಿವೋ, ಒಪ್ಪೋದಂತಹ ಸಂಸ್ಥೆಗೆ ಸೆಡ್ಡು ಹೊಡೆಯಲು ಪೂರಕವಾಗುವಂತಹ ವಿನ್ಯಾಸ ಮಾಡಲು ತೀರ್ಮಾನಿಸಿದೆ ಎನ್ನಲಾಗಿದೆ.

ಈಗಾಗಲೇ ಗೂಗಲ್​ನವರ ಪಿಕ್ಸೆಲ್​ 3 ಮತ್ತು ಪಿಕ್ಸೆಲ್​ 3 XL ಮಾರುಕಟ್ಟೆಗೆ ಬರುವುದು ಖಚಿತವಾಗತೊಡಗಿದೆ, ಈಗಿರುವ ವರದಿಗಳ ಪ್ರಕಾರ ಈ ಮೊಬೈಲ್​ ಗೆಲಾಕ್ಸಿ ಎಸ್​9 ಮತ್ತು ನೋಟ್​ 9ಗೆ ಸೆಡ್ಡು ಹೊಡೆಯುವ ಫೀಚರ್​ಗಳನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ. ಈ ಮೊದಲೇ ಬಹಿರಂಗಗೊಂಡಿರುವ ಮಾಹಿತಿಗಳ ಪ್ರಕಾರ ಪಿಕ್ಸೆಲ್​3 ಮತ್ತು ಪಿಕ್ಸೆಲ್​ 3 XL ಮೊಬೈಲ್​ಗಳು 75,000 ರೂ.ನಿಂದ 85,000 ರೂ. ಬೆಲೆಯಲ್ಲಿ ಬಿಡುಗಡೆಯಾಗಬಹುದು ಎನ್ನಲಾಗಿದೆ.
First published:August 30, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ